ದೂರಸಂಪರ್ಕ ಇಲಾಖೆಯು ಸಿಮ್ ಕಾರ್ಡ್‌ಗಳನ್ನು (SIM Card) ನಿಯಂತ್ರಿಸುವ ಕಾನೂನುಗಳನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದೆ.
ಒಬ್ಬ ವ್ಯಕ್ತಿಯು ಒಂದು ಐಡಿಯಲ್ಲಿ ಗರಿಷ್ಠ 9 ಸಿಮ್ ಕಾರ್ಡ್ಗಳನ್ನು (SIM Card) ಖರೀದಿಸಬಹುದಿತ್ತು ಆದರೆ ಇದು ಸದ್ಯದಲ್ಲೇ ಬಂದ್ ಆಗಲಿದೆ
ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಷನ್ (DoT) ಈಗ KYC ಪ್ರಕ್ರಿಯೆಯಲ್ಲಿ ಹೊಸ ಬದಲಾವಣೆಯನ್ನು ಘೋಷಿಸಿದೆ.
ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಷನ್ (DoT) ಎಂದೂ ಕರೆಯಲ್ಪಡುವ ದೂರಸಂಪರ್ಕ ಇಲಾಖೆಯು ಸಿಮ್ ಕಾರ್ಡ್‌ಗಳನ್ನು ನಿಯಂತ್ರಿಸುವ ಕಾನೂನುಗಳನ್ನು ಬದಲಾಯಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯದ ವರದಿಯ ಪ್ರಕಾರ ಸರ್ಕಾರ ಪ್ರಸ್ತಾಪಿಸಿರುವ ಹೊಸ ಕಾನೂನುಗಳ ಪರಿಣಾಮವಾಗಿ ಒಂದು ಐಡಿ ಬಳಸಿ ಖರೀದಿಸಿರುವ ಸಿಮ್‌ಗಳ ಸಂಖ್ಯೆಯನ್ನು 9 ರಿಂದ ಕಡಿಮೆ ಮಾಡಲಾಗಿದೆ. ಅಂದ್ರೆ ಈವರೆಗೆ ಒಬ್ಬ ವ್ಯಕ್ತಿಯು ಒಂದು ಐಡಿಯಲ್ಲಿ ಗರಿಷ್ಠ 9 ಸಿಮ್ ಕಾರ್ಡ್ಗಳನ್ನು ಖರೀದಿಸಬಹುದಿತ್ತು ಆದರೆ ಹೊಸ ನಿಯಮದಡಿಯಲ್ಲಿ KYC ಪ್ರಕ್ರಿಯೆಯಲ್ಲಿ ಬದಲಾವಣೆಯನ್ನು ಘೋಷಿಸಿದೆ. ಈ ಹೊಸ ನಿಯಮವನ್ನು ಮುಂದಿನ 6 ತಿಂಗಳಲ್ಲಿ ಕಡ್ಡಾಯಗೊಳಿಸಲಿದೆ.
ಹೊಸ ಸಿಮ್ ಕಾರ್ಡ್ ನಿಯಮಗಳ ವಿವರಗಳು
ಒಂದು ID ಯಲ್ಲಿ 9 ರ ಬದಲಿಗೆ 5 ಸಿಮ್ ಕಾರ್ಡ್‌ಗಳನ್ನು ಮಾತ್ರ ನೀಡಲು ಸೂಚನೆಗಳನ್ನು ನೀಡಬಹುದು. ಹೊಸ ಸಿಮ್ ಕಾರ್ಡ್ ಪಡೆಯಲು ಯಾವುದೇ ದಾಖಲೆಗಳ ಅಗತ್ಯವಿರುವುದಿಲ್ಲ.ಬಳಕೆದಾರರಿಗೆ ಡಿಜಿಟಲ್ ಸಿಮ್ ಕಾರ್ಡ್‌ಗಳನ್ನು ನೀಡಲಾಗುತ್ತದೆ.ಇದರಿಂದ ನಕಲಿ ಸಿಮ್ ಕಾರ್ಡ್‌ಗಳನ್ನು ಗುರುತಿಸಲು ಸಾಧ್ಯವಾಗಿಸುತ್ತದೆ. ಅಲ್ಲದೆ ಹೊಸ ಸಿಮ್ ಕಾರ್ಡ್ ಪಡೆಯಲು ಬಳಕೆದಾರರ ಫೇಸ್ ಐಡಿಯ AI ಬಳಸಿ ಗುರುತಿಸಲಾಗುತ್ತದೆ.
ಸರ್ಕಾರದಿಂದ ಈ ನಿರ್ಧಾರ ಏಕೆ?
ವರದಿಯ ಪ್ರಕಾರ ನಕಲಿ ಸಿಮ್ ಕಾರ್ಡ್‌ಗಳ ಸಮಸ್ಯೆಯನ್ನು ಪರಿಹರಿಸಲು DoT ನಿಯಮಗಳನ್ನು ಬದಲಾಯಿಸುತ್ತದೆ. ಇದಕ್ಕಾಗಿ ಸರ್ಕಾರ ಡಿಜಿಟಲ್ ದಾಖಲೆಗಳ ಪರಿಶೀಲನೆಯನ್ನು ಕಡ್ಡಾಯಗೊಳಿಸಲಿದೆ. ನಕಲಿ ಸಿಮ್ ಕಾರ್ಡ್‌ಗಳನ್ನು ಕಾನೂನುಬಾಹಿರಗೊಳಿಸಲು ಹೊಸ ವ್ಯವಸ್ಥೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನು ಬಳಸಲಾಗುವುದು. ಈ ಯೋಜನೆಯಡಿಯಲ್ಲಿ ಅಸ್ತಿತ್ವದಲ್ಲಿರುವ ಆಕ್ಟಿವ್ ಸಿಮ್ ಅನ್ನು ಮೊಬೈಲ್ ಮೂಲಕ ಬಳಸಲು ಸಾಧ್ಯವಾಗುವುದಿಲ್ಲ. ಸಿಮ್ ಅನ್ನು ಮೊಬೈಲ್‌ಗೆ ಅಳವಡಿಸಿದ ನಂತರವೇ ಅದನ್ನು ಬಳಸಲು ಸಾಧ್ಯವಾಗುತ್ತದೆ. ನೀವು ಈಗಾಗಲೇ ಆಕ್ಟಿವ್ ಆಗಿರುವ ಹೊಸ ಸಿಮ್ ಕಾರ್ಡ್ ಅನ್ನು ಹಾಕಿದರೆ ನಿಮ್ಮ ಫೋನ್ ಲಾಕ್ ಆಗುತ್ತದೆ.
ಹೊಸ ನಿಯಮ ತರಲು ಕಾರಣವೇನು?
ದೇಶದಲ್ಲಿನ ವಂಚಕರು ನಕಲಿ ಕರೆಗಳು ಅಥವಾ ಫಿಶಿಂಗ್ ಮೂಲಕ ಗ್ರಾಹಕರ ಬಗ್ಗೆ ಗೌಪ್ಯ ಮಾಹಿತಿಯನ್ನು ಪಡೆದಾಗ ಸಿಮ್ ಸ್ವಾಪ್ ವಂಚನೆ ಸಂಭವಿಸುತ್ತದೆ. ನಂತರ ಅವರು ಹೊಸ ಸಿಮ್ ಕಾರ್ಡ್‌ಗಾಗಿ ಟೆಲಿಕಾಂ ಸೇವಾ ಪೂರೈಕೆದಾರರನ್ನು ಸಂಪರ್ಕಿಸಲು ಅದೇ ಮಾಹಿತಿಯನ್ನು ಬಳಸುತ್ತಾರೆ. ಸಿಮ್ ಕಾರ್ಡ್ ನೀಡಿದ ನಂತರ ಗ್ರಾಹಕರ ಬಳಿಯಿರುವ ಹಳೆಯ ಸಿಮ್ ನಿಷ್ಕ್ರಿಯಗೊಳ್ಳುತ್ತದೆ. ಸಂಖ್ಯೆಗೆ ಎಲ್ಲಾ ಹೊಸ ಸಂವಹನಗಳನ್ನು ವಂಚಕರಿಂದ ಸ್ವೀಕರಿಸಲಾಗುತ್ತದೆ. ಇದು ವಂಚಕನಿಗೆ ಬ್ಯಾಂಕ್ ಮತ್ತು ಕ್ರೆಡಿಟ್/ಡೆಬಿಟ್ ಕಾರ್ಡ್ ಒನ್-ಟೈಮ್ ಪಾಸ್‌ವರ್ಡ್‌ಗಳ (OTP ಗಳು) ನಂತಹ ಎಲ್ಲಾ ಮಾಹಿತಿಯನ್ನು ಪ್ರವೇಶಿಸಲು ಅನುಮತಿಸುತ್ತದೆ. ಈ ಮೂಲಕ ಜನ ಸಾಮಾನ್ಯರ ಖಾತೆಯಿಂದ ಹಣವನ್ನು ಕದಿಯಲು ಅವರಿಗೆ ನೆರವಾಗುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile