TRAI Rule: ಮೊಬೈಲ್ ಬಳಕೆದಾರರು ಶೀಘ್ರದಲ್ಲೇ ಅಪರಿಚಿತ ಕರೆಗಳು ಮತ್ತು SMS ನಿಂದ ಮುಕ್ತರಾಗುತ್ತಾರೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಎಲ್ಲಾ ಟೆಲಿಕಾಂ ಕಂಪನಿಗಳಿಗೆ ತಮ್ಮ ಫೋನ್ ಕರೆಗಳು ಮತ್ತು SMS ಸೇವೆಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸ್ಪ್ಯಾಮ್ ಫಿಲ್ಟರ್‌ಗಳನ್ನು ಸ್ಥಾಪಿಸುಲು ಕಡ್ಡಾಯಗೊಳಿಸಿದೆ. ಈ ಹೊಸ ನಿಯಮಗಳಿಗೆ ಅನುಸಾರವಾಗಿ ಇಂದಿನಿಂದ ಕರೆ ಮತ್ತು SMS ಸೇವೆಗಳಲ್ಲಿ ಫಿಲ್ಟರ್‌ಗಳನ್ನು ಜಾರಿಗೆ ತರಲು TRAI ಒತ್ತಾಯಿಸಿದ್ದು ಅಪರಿಚಿತ ಕರೆಗಳು ಮತ್ತು SMS ಗಳನ್ನು ಈ ಫಿಲ್ಟರ್‌ನ ಸಹಾಯದಿಂದ ತಪ್ಪಿಸುವ ಮೂಲಕ ಳಕೆದಾರರು ಪ್ರಯೋಜನವನ್ನು ಪಡೆಯುತ್ತಾರೆ.
ಇದನ್ನೂ ಓದಿ: Jio-Airtel-Vi: ಸುಮಾರು 300 ರೂಗಳಲ್ಲಿ ಅನ್ಲಿಮಿಟೆಡ್ ಕರೆಗಳು ಮತ್ತು 5G ಡೇಟಾ ನೀಡುವ ಅತ್ಯುತ್ತಮ ಪ್ಲಾನ್ ಯಾವುದು?
ಮೊಬೈಲ್ ಫೋನ್ ಬಳಕೆದಾರರಿಗೆ ಮೋಸದ ಕರೆಗಳಿಂದ ತೊಂದರೆಯಾಗದಂತೆ ಟೆಲಿಮಾರ್ಕೆಟಿಂಗ್ ಕಂಪನಿಗಳಿಗೆ TRAI ಸೂಚನೆಗಳನ್ನು ನೀಡಿದೆ. ಇಂದಿನಿಂದ ಈ ನಿಯಮಗಳನ್ನು ಜಾರಿಗೆ ತರುವುದು ಕಡ್ಡಾಯವಾಗಿದೆ. ಇದಕ್ಕೆ ಸಹಾಯ ಮಾಡಲು TRAI ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನು ಬಳಸುತ್ತಿದೆ. ಟೆಲಿಕಾಂ ಕಂಪನಿಗಳು ತಮ್ಮ ಸಿಸ್ಟಮ್‌ಗೆ AI ಫಿಲ್ಟರ್ ಅನ್ನು ಸೇರಿಸಲು TRAI ಒತ್ತಾಯಿಸಿದ್ದು ಸಾಮಾನ್ಯ 10 ಅಂಕಿಯ ಸಂಖ್ಯೆಗಳಿಂದ ಎಲ್ಲಾ ಒಳಬರುವ ಟೆಲಿಮಾರ್ಕೆಟಿಂಗ್ ಕರೆಗಳನ್ನು ಈ ಫಿಲ್ಟರ್ ಮೂಲಕ ನಿರ್ಬಂಧಿಸಲಾಗುತ್ತದೆ.
ಇಂದಿನಿಂದ ಅಂದ್ರೆ 1ನೇ ಮೇ 2023 ರಿಂದ ಈಗಾಗಾಲೇರ್ ತಿಳಿಸಿದಂತೆ ಅನ್‌ವೆರಿಫೈಡ್ 10 ಅಂಕಿಯ ಅಪರಿಚಿತ ಮೊಬೈಲ್ ಸಂಖ್ಯೆಯನ್ನು ನಿರ್ಬಂಧಿಸಲಾಗುತ್ತದೆ. ಈ ಸಂಖ್ಯೆಗಳನ್ನು ಸಾಮಾನ್ಯ ಬಳಕೆಗಾಗಿ ಮತ್ತು ಪ್ರಚಾರದ ಕರೆಗಳಿಗಾಗಿ ಟೆಲಿಮಾರ್ಕೆಟಿಂಗ್ ಕಂಪನಿಗಳಿಂದ ಬಳಸಲಾಗುತ್ತಿವೆ. ಇಂದಿನಿಂದ ಗ್ರಾಹಕರು ಪಡೆಯುವ ಫೋನ್ ಕರೆಗಳು ಮತ್ತು ಮಾರ್ಕೆಟಿಂಗ್ SMS ಪ್ರಮಾಣವು ಕಡಿಮೆ ಆಗಲಿದೆ. ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ ಏರ್‌ಟೆಲ್ ಮೊದಲು AI ಫಿಲ್ಟರ್‌ಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
ಇದನ್ನೂ ಓದಿ: ನಿಮ್ಮ PAN Card ಬಳಸಿ ಬೇರೆ ಯಾರಾದರೂ ಸಾಲ ಪಡೆದಿದ್ದಾರೆಯೇ? ಆನ್ಲೈನ್ನಲ್ಲಿ ಹೀಗೆ ಪರಿಶೀಲಿಸಬಹುದು
ಈ ಫಿಲ್ಟರ್‌ಗಳನ್ನು ರಿಲಯನ್ಸ್ ಜಿಯೋ ಬಳಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಆದರೆ ಇಂದಿನಿಂದ ಏರ್‌ಟೆಲ್ AI ಫಿಲ್ಟರ್‌ಗಳನ್ನು ಸ್ಥಾಪಿಸಲು ಪ್ರಾರಂಭಿಸಬಹುದು. TRAI ನಿಂದ ಕರೆ ಮಾಡುವವರ ಗುರುತು ಮತ್ತು ಫೋಟೋವನ್ನು ಒದಗಿಸುವ ಕಾಲರ್ ಐಡಿ ಫೀಚರ್ ಒಂದು ಅಭಿವೃದ್ಧಿಯಲ್ಲಿದೆ. ಆದರೆ ಇದು ಗ್ರಾಹಕರ ಗೌಪ್ಯತೆ ಕಾಳಜಿಗಳಿಂದಾಗಿ ಕಂಪನಿಗಳು ಕಾಲರ್ ಐಡಿ ಫೀಚರ್ ಯೋಜನೆಯ ಅನುಷ್ಠಾನವನ್ನು ವಿಳಂಬಗೊಳಿಸುತ್ತಿವೆ.