ನೋಕಿಯಾ 2 ಮತ್ತು 7 ಇಂದು ಭಾರತದಲ್ಲಿ ಪ್ರಾರಂಭವಾಗುವ ಎರಡು ಸ್ಮಾರ್ಟ್ಫೋನ್ಗಳಾಗಿವೆ. ಈ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗನ್ನು ವೀಕ್ಷಿಸಬವುದು ಮತ್ತು ಇಲ್ಲಿ ಇದರ ಬೆಲೆ ಮತ್ತು ವಿಶೇಷಣಗಳನ್ನು ಪರಿಶೀಲಿಸಬವುದು. ನೋಕಿಯಾ ಬ್ರಾಂಡ್ನ ಅಡಿಯಲ್ಲಿ ಮೊಬೈಲ್ಗಳನ್ನು ತಯಾರಿಸುವ HMD ಗ್ಲೋಬಲ್ ಇಂದು ದೆಹಲಿಯಾ 'ಎನ್ಸಿಆರ್ನಲ್ಲಿ ಈವೆಂಟ್' ಅಲ್ಲಿ ಬಿಡುಗಡೆಗೊಳಿಸಲಿದೆ. ಈ ಎರಡು ನೋಕಿಯಾ ಫೋನ್ಗಳು ಇಂದು 12 PM (ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್) ನಲ್ಲಿ ಬಿಡುಗಡೆಯಾಗಲಿದೆ ಮತ್ತು ಆಸಕ್ತಿ ಖರೀದಿದಾರರು ಕಂಪನಿಯ ಫೇಸ್ಬುಕ್ ಪುಟದಲ್ಲಿ ಪ್ರಕಟಣೆಯ ಲೈವ್ ಸ್ಟ್ರೀಮಿಂಗನ್ನು ಸಹ ವೀಕ್ಷಿಸಬಹುದು. ಲೈವ್ ಸ್ಟ್ರೀಮ್ ವೀಕ್ಷಿಸಲು ನೀವು ನೋಕಿಯಾ ಮೊಬೈಲ್ನ ಫೇಸ್ಬುಕ್ ಪುಟಕ್ಕೆ ಹೋಗಬೇಕಾಗುತ್ತದೆ. ಈ ಕಾರ್ಯಕ್ರಮಕ್ಕಾಗಿ ಮಾಧ್ಯಮ ಆಮಂತ್ರಣಗಳನ್ನು HMD ಗ್ಲೋಬಲ್ ಕಳುಹಿಸಿತ್ತು ಆದರೆ ಪ್ರಾರಂಭದ ನಿಶ್ಚಿತತೆಯ ಬಗ್ಗೆ ಹೆಚ್ಚು ಬಹಿರಂಗಪಡಿಸಲಿಲ್ಲ.ಈ ಆಮಂತ್ರಣವನ್ನು ಯಾವ ಮೊಬೈಲನ್ನು ಪ್ರಾರಂಭಿಸಲಾಗುವುದು ಎಂದು ನಿರ್ದಿಷ್ಟಪಡಿಸದಿದ್ದರೂ 'ನೋಕಿಯಾ ಫೋನ್ಗಳಿಗಾಗಿ ಮುಂದಿನ ಮೈಲಿಗಲ್ಲುಗಳ' ದಿನಾಂಕವನ್ನು ಇದು ಬಹಿರಂಗಪಡಿಸಿದೆ.
ನೋಕಿಯಾ 2:
ಇದು 5 ಇಂಚಿನ HD ಡಿಸ್ಪ್ಲೇಯನ್ನು ಹೊಂದಿರುತ್ತದೆ ಮತ್ತು ಕ್ವಾಲ್ಕಾಮ್ 212 ಪ್ರೊಸೆಸರ್ನಿಂದ ಚಾಲಿತವಾಗಿರುತ್ತದೆ. ಇದರಲ್ಲಿ 12MP ಬ್ಯಾಕ್ ಮತ್ತು 5MP ಯಾ ಸೆಲ್ಫಿ ಕ್ಯಾಮೆರಾ ಹೊಂದಿರುತ್ತದೆ. ಇದರ ಸ್ಟೋರೇಜ್
ದೃಷ್ಟಿಯಿಂದ ನೋಕಿಯಾ 2 ನಲ್ಲಿ 1GB ಯಾ RAM ಮತ್ತು 8GB ಯಾ ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ.
ಇದರ ಬೆಲೆ:
ಇಂದು ಫ್ಲಿಪ್ಕಾರ್ಟ್ನಲ್ಲಿ ಕೇವಲ 8,833/- ರೂಗಳ ಬೆಲೆಗಿಂತ ಕಡಿಮೆ ಬೆಲೆಯಿದೆ ಎಂದು ನಿರೀಕ್ಷಿಸಲಾಗಿದೆ. ಇದರ ವಿಶೇಷಣಗಳು ಪರಿಗಣನೆಗೆ ತೆಗೆದುಕೊಳ್ಳಲ್ಪಟ್ಟರೆ ನೋಕಿಯಾ 2 ಸುಮಾರು 6,000 ರಿಂದ 6,500 ರೂಪಾಯಿಗಳಿಗೆ ಬೆಲೆಯೇರಿಸಬಹುದು. ಅಂದರೆ ಈಗಿರುವ Xiaomi Redmi 4A ನಂತಹ ಸ್ಮಾರ್ಟ್ಫೋನ್ಗಾಳ ವಿರುದ್ಧ ನೇರವಾಗಿ ಸ್ಪರ್ಧಿಸಲಾಗುತ್ತದೆ.
ನೋಕಿಯಾ 7:
ನೋಕಿಯಾ 7 ನಲ್ಲಿ ನೋಕಿಯಾ 8 ಹೋಲುತ್ತದೆ 'ಎರಡೂ' ಕ್ಯಾಮರಾವನ್ನು ಹೊಂದಿದ್ದು, ಮುಂಭಾಗ ಮತ್ತು ಹಿಂಭಾಗದ ಕ್ಯಾಮರಾಗಳಿಂದ ಚಿತ್ರಗಳನ್ನು ಏಕಕಾಲದಲ್ಲಿ ಕ್ಲಿಕ್ ಮಾಡಬಹುದಾಗಿದೆ. ಇದು 5.2-ಇಂಚಿನ ಡಿಸ್ಪ್ಲೇ, ಬೆನ್ನಿನ ಬೆರಳಚ್ಚು ಸ್ಕ್ಯಾನರ್, 3000mAh ಬ್ಯಾಟರಿ ಹೊಂದಿದೆ. ಫೋನ್ ಸ್ನಾಪ್ಡ್ರಾಗನ್ 630 SoC ನಿಂದ ಚಾಲಿತವಾಗಿದೆ. ಶೇಖರಣಾ ದೃಷ್ಟಿಯಿಂದ ನೋಕಿಯಾ 7 ನಲ್ಲಿ 4GB ಮತ್ತು 6GB RAM ಮತ್ತು 64GBಆಂತರಿಕ ಮೆಮೊರಿಯ ಎರಡು ರೂಪಾಂತರಗಳಿವೆ. ಇದು 16MP ಹಿಂಬದಿಯ ಕ್ಯಾಮೆರಾ ಮತ್ತು 5MP ಮುಂಭಾಗ ಕ್ಯಾಮೆರಾವನ್ನು ಹೊಂದಿದೆ.
ಇದರ ಬೆಲೆ:
ನೋಕಿಯಾ 7 ಅನ್ನು ಚೀನಾದಲ್ಲಿ ಪ್ರಾರಂಭಿಸಿದಾಗ ಇದು RMB 2,499 ಮತ್ತು RMB 2,699 ಕ್ಕೆ ಬೆಲೆಯಿತು. ಅಂದರೆ ಇದರರ್ಥ ನೋಕಿಯಾ 7 ರ ದರವು 24,000 ರಿಂದ 26,000 ರ ಒಳಗೆ ಇರುತ್ತದೆ ನಿರೀಕ್ಷೆಯಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile