ಭಾರತದ ಜನಪ್ರಿಯವಾದ ಬಜಾಜ್ ಕಂಪನಿಯು ಹೊಸ Pulsar 150 twin disc ಬೈಕನ್ನು 78,000 ರೂಪಾಯಿಗಳಿಂದ ಮಾರಾಟಕ್ಕೆ ಬಿಡುಗಡೆಗೊಳಿಸಿದೆ.

Updated on 23-Apr-2018
HIGHLIGHTS

ಭಾರತದಲ್ಲಿನ ಸ್ಪೋರ್ಟ್ಸ್ ಬೈಕ್ ಅಭಿಮಾನಿಗಳಿಗೊಂದು ಸಿಹಿಸುದ್ದಿ ನೀಡಿದ ಆಟೋ ಬಜಾಜ್.

ಈ ವರ್ಷ ಭಾರತದಲ್ಲಿ ಸ್ಪೋರ್ಟ್ಸ್ ಬೈಕ್ಗಳಿಗೆ ಹೆಸರುವಾಸಿಯಾಗಿರುವ ಬಜಾಜ್ ಕಂಪನಿಯು ಹೊಸದಾಗಿ ಡಿಸ್ಕ್ ಬ್ರೇಕ್ಗಳೊಂದಿಗೆ ಪಲ್ಸರ್ 150 ರ ಹೊಸ ಅವತಾರವನ್ನು ಬಜಾಜ್ ಆಟೋ ಮುಖಾಂತರ ಇಂದು ಬಿಡುಗಡೆ ಮಾಡಿದೆ. ಶಾರ್ಪ್ ಮತ್ತು ಸ್ಪೋರ್ಟ್ಸ್ ಶೈಲಿಯನ್ನು ನೀಡುವ ಈ ಹೊಸ ರೂಪಾಂತರವು ಅಸ್ತಿತ್ವದಲ್ಲಿರುವ ಸಿಂಗಲ್ ಡಿಸ್ಕ್ ರೂಪಾಂತರದೊಂದಿಗೆ ಮಾರಲ್ಪಡಲಿದೆ. ಇದರ ಬೆಲೆ 78,016 (ದೆಹಲಿಯ ಎಕ್ಸ್ ಶೋ ರೂಂ) ರೂಪಾಯಿಗಳಲ್ಲಿ ಲಭ್ಯವಿದೆ.

ಕೇವಲ 20,000 ರೂಪಾಯಿಗಳೊಗೆ ಲಭ್ಯವಿರುವಂತಹ ಹೊಚ್ಚ ಹೊಸ ಲ್ಯಾಪ್ಟಾಪ್ಗಳ ಮೇಲೆ ಪೆಟಿಎಂ ಮಾಲ್ ನೀಡುತ್ತಿದೆ ಭರ್ಜರಿ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕ್.

ಇದರಲ್ಲಿನ ಟ್ವಿನ್ ಡಿಸ್ಕ್ ಬ್ರೇಕ್ಗಳ ಹೊರತಾಗಿ ಇತ್ತೀಚಿನ ಪಲ್ಸರ್ನ ಇತರ ಮುಖ್ಯಾಂಶಗಳು ಹೊಸ ಬಣ್ಣ ಮತ್ತು ವಿನ್ಯಾಸದೊಂದಿಗೆ ವೀಲ್ಬೇಸ್ ಮತ್ತು ವಿಶಾಲ ಮತ್ತು ದೊಡ್ಡ ಹಿಂಭಾಗದ ಟೈರ್ಗಳನ್ನು ಇದು ಒಳಗೊಂಡಿವೆ. ಈ ಹೊಸ ಪಲ್ಸರ್ 150 ಟ್ವಿನ್ ಡಿಸ್ಕ್ ಶಬ್ದ, ಕಂಪನದ ಮಟ್ಟದಲ್ಲಿ ಉತ್ತಮ ಸುಧಾರಣೆಗಳನ್ನು ಪಡೆಯುತ್ತದೆ. ಮತ್ತು ಅತ್ಯುತ್ತಮವಾದ ದರ್ಜೆಯ 230mm ಹಿಂಭಾಗದ ಡಿಸ್ಕ್ ಬ್ರೇಕನ್ನು ಸಹ ಇದು  ಹೊಂದಿದೆ.

ಇದರ ಈ ಹೊಸ ರೂಪಾಂತರದ ಪರಿಚಯದ ಕುರಿತು 'ಪಲ್ಸರ್ 150 ವಿಭಾಗದಲ್ಲಿ ಭಾರತದ ಅತಿ ಹೆಚ್ಚು ಮಾರಾಟವಾಗುವ ಸ್ಪೋರ್ಟ್ಸ್  ಮೋಟಾರ್ ಸೈಕಲಾಗಿದೆ. ಇದು ಹೆಚ್ಚು ಸ್ಪೋರ್ಟ್ಸ್ ಮೋಡಿಗೆ ಸಮಾನಾರ್ಥಕವಾಗಿದೆ. ಇದರ ಕೋರ್ ಉಳಿಸಿಕೊಂಡು ಹೊಸ ಡಿಸ್ಕ್ ಪಲ್ಸರ್ 150 ಮೋಟಾರ್ಸೈಕಲ್ ಉತ್ಸಾಹಿಗಳಿಗೆ ಸಮಕಾಲೀನ ಆಯ್ಕೆಯನ್ನು ನೀಡುತ್ತದೆ. 

ಈ ಹೊಸ ಪಲ್ಸರ್ 150 ಅವಳಿ ಡಿಸ್ಕ್ ಅನ್ನು ಆಧುನಿಕ ಯುವಕರಲ್ಲಿ  ಹೆಚ್ಚು ಗುರಿಪಡಿಸಲಾಗಿದೆ. ಅವರು ಇದರ ಪ್ರದರ್ಶನ ಮತ್ತು ಮೈಲೇಜ್ನಲ್ಲಿ ಸೌಕರ್ಯ ಪಡೆಯುತ್ತಾರೆ. ಈ  ಹೊಸ ಪಲ್ಸರ್ ರೂಪಾಂತರವು 149.5 CC DTS -E ಎಂಜಿನ್ನಿಂದ 14PS ಮತ್ತು 13.4NM ಟಾರ್ಕ್ ಅನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುತ್ತದೆ.

ಈ  ಹೊಸ ಪಲ್ಸರ್ 150 ಮೂರು ಹೊಸ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :