ನೀವೂ Google Pay ಮತ್ತು PhonePe ಬಳಸುತ್ತಿದ್ದರೆ ಈ ತಪ್ಪುಗಳನ್ನು ಮಾಡಬೇಡಿ! ಇಲ್ಲವಾದರೆ ನಷ್ಟ ಖಂಡಿತಾ!

Updated on 02-Aug-2022
HIGHLIGHTS

UPI ಭಾರತದಲ್ಲಿ ಅತ್ಯಂತ ಜನಪ್ರಿಯ ಪಾವತಿ ವಿಧಾನವಾಗಿದೆ.

ಬೇರೆ ಬೇರೆ UPI ಐಡಿಗಳನ್ನು ನೆನಪಿಟ್ಟುಕೊಳ್ಳುವುದು ತುಂಬಾ ಕಷ್ಟ.

ಈ UPI ಐಡಿ ನೆನಪಿಲ್ಲದಿದ್ದರೆ ವ್ಯವಹಾರ ನಡೆಸುವುದು ಕಷ್ಟವಾಗುತ್ತದೆ.

ನೀವೂ UPI ಭಾರತದಲ್ಲಿ ಅತ್ಯಂತ ಜನಪ್ರಿಯ ಪಾವತಿ ವಿಧಾನವಾಗಿದೆ. ಇದನ್ನು 2016 ರಲ್ಲಿ ಪ್ರಾರಂಭಿಸಲಾಯಿತು.  ಅಂದಿನಿಂದ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಈಗ ಒಬ್ಬ ವ್ಯಕ್ತಿಯು ಬಹು UPI ಐಡಿಗಳನ್ನು ರಚಿಸಬಹುದು. ಅಲ್ಲದೆ ಈ UPI ಐಡಿಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಲಿಂಕ್ ಕೂಡಾ ಮಾಡಬಹುದು. Google Pay ಮತ್ತು PhonePe ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಬ್ಯಾಂಕ್ ಖಾತೆಯ ಈ ವಿಭಿನ್ನ UPI ಐಡಿಗಳನ್ನು ಸೇರಿಸಬಹುದು.  UPI ಐಡಿಯನ್ನು ರಚಿಸಿದಾಗ ಅದರ  ಅಡ್ರೆಸ್ ಕೂಡಾ ವಿಭಿನ್ನವಾಗಿರುತ್ತವೆ. 

ಈ ಅಡ್ರೆಸ್ ಗಳು ತುಂಬಾ ಕಷ್ಟಕರವಾಗುತ್ತವೆ. ಏಕೆಂದರೆ ಬೇರೆ ಬೇರೆ UPI ಐಡಿಗಳನ್ನು ನೆನಪಿಟ್ಟುಕೊಳ್ಳುವುದು ತುಂಬಾ ಕಷ್ಟ. ಒಂದೇ UPI ಐಡಿಯಿಂದ ಎಲ್ಲಾ ಕೆಲಸಗಳನ್ನು ಮಾಡಬಹುದು. ಈ ಐಡಿ ನೆನಪಿಲ್ಲದಿದ್ದರೆ ವ್ಯವಹಾರ ನಡೆಸುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಒಂದೇ UPI ಐಡಿಯನ್ನು ಬಳಸಿ ಉಳಿದ ಐಡಿ ಯನ್ನು ಡಿಲೀಟ್ ಮಾಡಬಹುದು. UPI ಐಡಿಗಳನ್ನು ಸುಲಭವಾಗಿ ಡಿಲೀಟ್ ಮಾಡಬಹುದು. 

PhonePe ನಲ್ಲಿ UPI ID ಡಿಲೀಟ್ ಮಾಡುವುದು ಹೇಗೆ?

– ಮೊದಲು PhonePe ಆಪ್ ತೆರೆಯಿರಿ. ಎಡಭಾಗದಲ್ಲಿರುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ

– ನೀವು ಡಿಲೀಟ್ ಮಾಡಲು ಬಯಸುವ ಖಾತೆಯ ಮೇಲೆ ಕ್ಲಿಕ್ ಮಾಡಿ.

– ಇಲ್ಲಿ ಎಲ್ಲಾ UPI ಐಡಿಗಳು ಕಾಣಿಸುತ್ತದೆ. 

– ಬಲಭಾಗದಲ್ಲಿ ಡಿಲೀಟ್ ಬಟನ್ ಕಾಣಿಸುತ್ತದೆ. 

– ಅನಗತ್ಯ ಐಡಿಗಳನ್ನು ಡಿಲೀಟ್ ಮಾಡಿಬಿಡಿ 

– UPI ID ಅನ್ನು ಕ್ಲಿಕ್ ಮಾಡಿದ ನಂತರ  ಆ ID ಡಿಲೀಟ್ ಆಗುತ್ತದೆ. 

Google Pay ನಲ್ಲಿ UPI ID ಡಿಲೀಟ್ ಮಾಡುವುದು ಹೇಗೆ?

– ಮೊದಲಿಗೆ GPay ತೆರೆದು ಮೇಲಿನ ಬಲಭಾಗದಲ್ಲಿರುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ

– ಅದರ ನಂತರ ನೇರವಾಗಿ ಬ್ಯಾಂಕ್ ಖಾತೆಗೆ ಹೋಗಿ

– ಅದರ ನಂತರ ಮ್ಯಾನೇಜ್ UPI ಐಡಿ ಮೇಲೆ ಕ್ಲಿಕ್ ಮಾಡಿ

– ಸೈಟ್ ಬದಿಯಲ್ಲಿ ಡಿಲೀಟ್ ಬಟನ್ ಕಾಣಿಸುತ್ತದೆ. 

– ಇಲ್ಲಿಯೂ ಅನಗತ್ಯ ಐಡಿಗಳನ್ನು ಡಿಲೀಟ್ ಮಾಡಿಬಿಡಿ 

– ಅದೇ ರೀತಿ UPI ID ಅನ್ನು ಕ್ಲಿಕ್ ಮಾಡಿದ ನಂತರ ಆ ID ಡಿಲೀಟ್ ಆಗುತ್ತದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :