ನೆಟ್‌ಫ್ಲಿಕ್ಸ್ ಹೊಸ ವೆಬ್‌ಸೈಟ್ ಲಾಂಚ್ ಮಾಡಿದ್ದೇಕೆ ಗೊತ್ತಾ? ಸಂಪೂರ್ಣ ಮಾಹಿತಿ

Updated on 17-Nov-2021
HIGHLIGHTS

ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಜಾಲತಾಣ ನೆಟ್‌ಫ್ಲಿಕ್ಸ್ ತನ್ನ ಹೊಸದೊಂದು ವೆಬ್‌ಸೈಟ್ ಅನ್ನು ಲಾಂಚ್

ಪ್ರತಿ ವಾರ ತನ್ನ ಸ್ಟ್ರೀಮಿಂಗ್ ಸೇವೆಯಲ್ಲಿ ಹೆಚ್ಚು ವಿಕ್ಷಣೆ ಪಡೆದ ಕಂಟೆಂಟ್‌ಗಳ ಬಗ್ಗೆ ಮಾಹಿತಿ ನೀಡಿದೆ.

ಹೆಚ್ಚು ವಿಕ್ಷಣೆ ಪಟ್ಟಿಯು ಸರಣಿಯ ಸೀಸನ್‌ಗಳನ್ನು ಪ್ರತ್ಯೇಕ ಶೀರ್ಷಿಕೆಗಳಾಗಿ ಎಣಿಕೆ ಮಾಡುವ ಬಗ್ಗೆ ನೆಟ್‌ಫ್ಲಿಕ್ಸ್ ಹೇಳಿದೆ.

ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಜಾಲತಾಣ ನೆಟ್‌ಫ್ಲಿಕ್ಸ್ ತನ್ನ ಹೊಸದೊಂದು ವೆಬ್‌ಸೈಟ್ ಅನ್ನು ಲಾಂಚ್ ಮಾಡಿದ್ದು ಈ ನೂತನ ವೆಬ್‌ಸೈಟ್‌ನಲ್ಲಿ ಪ್ರತಿ ವಾರ ತನ್ನ ಸ್ಟ್ರೀಮಿಂಗ್ ಸೇವೆಯಲ್ಲಿ ಹೆಚ್ಚು ವಿಕ್ಷಣೆ ಪಡೆದ ಕಂಟೆಂಟ್‌ಗಳ ಬಗ್ಗೆ ಮಾಹಿತಿ ನೀಡಿದೆ. ನೆಟ್‌ಫ್ಲಿಕ್ಸ್ ವಿಡಿಯೋಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಪ್ರದರ್ಶನಗಳ ಒಟ್ಟು ಗಂಟೆಗಳ ಸಂಖ್ಯೆಯ ಮೂಲಕ ಉನ್ನತ-ವೀಕ್ಷಣೆ ಶೀರ್ಷಿಕೆಗಳನ್ನು ಶ್ರೇಣೀಕರಿಸುವುದಾಗಿ ಈ ಮೊದಲು ತಿಳಿಸಿತ್ತು. ಅದರಂತೆ ತನ್ನ ಸ್ಟ್ರೀಮಿಂಗ್ ಸೇವೆಗಳ ಟಾಪ್ 10 ಹಬ್ (https://top10.netflix.com/) ಜಾಲತಾಣವನ್ನು ತೆರೆದಿದೆ.

ನೆಟ್‌ಫ್ಲಿಕ್ಸ್ ತನ್ನ ಹೊಸ ಸಾಪ್ತಾಹಿಕ ಟಾಪ್ 10 ಹಬ್ (https://top10.netflix.com/)ಜಾಲತಾಣವನ್ನು ಪ್ರತಿ ಮಂಗಳವಾರ ಅಪ್‌ಡೇಟ್ ಮಾಡಲಿದೆ. ಅಂದರೆ ತನ್ನ ವಿಡಿಯೋ ಸ್ಟ್ರೀಮಿಂಗ್ ಸೇವೆಯಲ್ಲಿ ಹೆಚ್ಚು ವಿಕ್ಷಣೆ ಪಡೆದ ಕಂಟೆಂಟ್‌ಗಳ ಬಗ್ಗೆ ಮಂಗಳವಾರದಂದು ಪ್ರಕಟಿಸಲಿದೆ. ಪ್ರತಿ ಮಂಗಳವಾರ ಪಟ್ಟಿಯನ್ನು ಪ್ರಕಟಿಸುವ ಮೊದಲು ಸೋಮವಾರದಿಂದ ಭಾನುವಾರದವರೆಗೆ ನೆಟ್‌ಫ್ಲಿಕ್ಸ್ ವಿಷಯದ ವೀಕ್ಷಣೆಯ ಮಾಹಿತಿಯನ್ನು ಟ್ರ್ಯಾಕ್ ಮಾಡುತ್ತದೆ. ಇಲ್ಲಿ ಹಲವಾರು ವಿಭಾಗಗಳಲ್ಲಿ ನೆಟ್‌ಫ್ಲಿಕ್ಸ್ ಟಾಪ್ ಚಲನಚಿತ್ರಗಳು ಮತ್ತು ಸರಣಿಗಳೊಂದಿಗೆ ನವೀಕರಿಸಲಾಗುತ್ತದೆ.

ಹೆಚ್ಚು ವಿಕ್ಷಣೆ ಪಟ್ಟಿಯು ಸರಣಿಯ ಸೀಸನ್‌ಗಳನ್ನು ಪ್ರತ್ಯೇಕ ಶೀರ್ಷಿಕೆಗಳಾಗಿ ಎಣಿಕೆ ಮಾಡುವ ಬಗ್ಗೆ ನೆಟ್‌ಫ್ಲಿಕ್ಸ್ ಹೇಳಿದೆ. ಅಂದರೆ ನೀವು ಒಂದೇ ಸಂಚಿಕೆಯಲ್ಲಿನ ದೃಶ್ಯವನ್ನು ಪದೇ ಪದೇ ವೀಕ್ಷಿಸಿದರೆ ಅದು ಆ ಸೀಸನ್‌ನ ಒಟ್ಟು ವೀಕ್ಷಣೆ ಗಂಟೆಗಳ ವೀಕ್ಷಣೆಯಾಗಿ ಸೇರ್ಪಡೆಯಾಗುತ್ತದೆ. ಚಲನಚಿತ್ರಗಳು (ಇಂಗ್ಲಿಷ್), ಚಲನಚಿತ್ರಗಳು (ಇಂಗ್ಲಿಷ್ ಅಲ್ಲದ), ಟಿವಿ (ಇಂಗ್ಲಿಷ್) ಮತ್ತು ಟಿವಿ (ಇಂಗ್ಲಿಷ್ ಅಲ್ಲದ)ಯಂತಹ ವಿಭಾಗಗಳಲ್ಲಿ ಅಗ್ರ ಚಲನಚಿತ್ರಗಳು ಮತ್ತು ಟಿವಿ ಸರಣಿಗಳನ್ನು ಶ್ರೇಣೀಕರಿಸುತ್ತದೆ. ಈ ಎಲ್ಲವೂ ಗಂಟೆಗಳ ವೀಕ್ಷಣೆ ಆಧಾರದಲ್ಲಿ ರ್ಯಾಂಕಿಂಗ್ ಪಡೆಯುತ್ತವೆ.

ನೆಟ್‌ಫ್ಲಿಕ್ಸ್ ಸಂಸ್ಥೆ ಕಳೆದ ತಿಂಗಳು ತನ್ನ ಹೂಡಿಕೆದಾರರಿಗೆ "ವೀಕ್ಷಿಸಿದ ಗಂಟೆಗಳ ಮೂಲಕ ಅಳೆಯುವ ಯೋಜನಯು ನಮ್ಮ ಶೀರ್ಷಿಕೆಗಳ ಒಟ್ಟಾರೆ ಯಶಸ್ಸಿನ ಸ್ವಲ್ಪ ಉತ್ತಮ ಸೂಚಕವಾಗಿದೆ" ಎಂದು ಹೇಳಿತ್ತು ಮತ್ತು ಇದರಿಂದ ನೆಟ್‌ಫ್ಲಿಕ್ಸ್ ವೀಕ್ಷಕರೂ ಕೂಡ ಯಾವ ವಿಷಯವು ಹೆಚ್ಚು ವೀಕ್ಷಣೆಯಾಗಿದೆ ಎಂಬುದನ್ನು ತಿಳಿಯಬಹುದು ಎಂದು ತಿಳಿಸಿತ್ತು. ಇದೀಗ ವಿಶ್ವಾದ್ಯಂತ ಮನೆ ಮಾತಾಗಿರುವ ನೆಟ್‌ಫ್ಲಿಕ್ಸ್ ಕಂಟೆಂಟ್ ವೀಕ್ಷಣೆಯ ಬಗ್ಗೆ ವೀಕ್ಷಕರೂ ಕೂಡ ಕುತೂಹಲವನ್ನು ಹೊಂದಿದ್ದು ಅದರಲ್ಲೂ ವೆಬ್‌ಸೀರೀಸ್ ವೀಕ್ಷಕರು ಈ ಬಗ್ಗೆ ಡೇಟಾ ನೀಡಲು ಕೋರಿಕೊಂಡಿದ್ದರು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :