ನೆಟ್ಫ್ಲಿಕ್ಸ್ ಪಾಸ್ವರ್ಡ್ ಹಂಚಿಕೆಯು ತುಂಬಾ ಸಾಮಾನ್ಯವಾಗಿದೆ. ಅನೇಕ ಜನರು ಒಂದೇ ಚಂದಾದಾರಿಕೆಯನ್ನು ಸಾಧನಗಳಾದ್ಯಂತ ಮಾತ್ರವಲ್ಲದೆ ಮನೆಯಾದ್ಯಂತ ಹಂಚಿಕೊಳ್ಳುತ್ತಾರೆ. ನೆಟ್ಫ್ಲಿಕ್ಸ್ ಪ್ರತ್ಯೇಕ ಬಳಕೆದಾರರ ಪ್ರೊಫೈಲ್ಗಳಂತಹ ವೈಶಿಷ್ಟ್ಯಗಳನ್ನು ಸೇರಿಸುತ್ತಿದೆ. ಸ್ಟ್ರೀಮಿಂಗ್ ಸೇವೆಯು ಶೀಘ್ರದಲ್ಲೇ ತಮ್ಮ ಪಾಸ್ವರ್ಡ್ ಅನ್ನು ಮನೆಯಾದ್ಯಂತ ಹಂಚಿಕೊಳ್ಳಲು ಬಳಕೆದಾರರಿಗೆ ಶುಲ್ಕ ವಿಧಿಸಲು ಪ್ರಾರಂಭಿಸಬಹುದು. ಕಂಪನಿಯು ಪ್ರಕಟಿಸಿದ ಹೊಸ ಪೋಸ್ಟ್ನಲ್ಲಿ ನೆಟ್ಫ್ಲಿಕ್ಸ್ ಚಿಲಿ, ಕೋಸ್ಟಾ ರಿಕಾ ಮತ್ತು ಪೆರುಗಳಲ್ಲಿ ಎರಡು ಹೊಸ ವೈಶಿಷ್ಟ್ಯಗಳನ್ನು ಪರೀಕ್ಷಿಸಲಿದೆ ಎಂದು ಹೇಳುತ್ತದೆ.
ಇದು ಖಾತೆಗಳ ನಡುವೆ ಪಾಸ್ವರ್ಡ್ಗಳನ್ನು ಹೇಗೆ ಹಂಚಿಕೊಳ್ಳುತ್ತದೆ ಎಂಬುದನ್ನು ಬದಲಾಯಿಸುತ್ತದೆ. ನೆಟ್ಫ್ಲಿಕ್ಸ್ ಇದೀಗ ತನ್ನ ಚಂದಾದಾರರು ಸ್ನೇಹಿತರೊಡನೆ ಪಾಸ್ವರ್ಡ್ ಹಂಚಿಕೊಳ್ಳಬಹುದಾದ ಅವಕಾಶಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲು ಯೋಚಿಸುತ್ತಿದೆ. ಈ ಹಿಂದೆ ನೆಟ್ಫ್ಲಿಕ್ಸ್ ಚಂದಾದಾರು ತಮ್ಮ ಪಾಸ್ವರ್ಡ್ ಅನ್ನು ಗೆಳೆಯರೊಡನೆ ಹಂಚಿಕೊಳ್ಳುವ ಮೂಲಕ ತಮಗೆ ಸಿಗುತ್ತಿದ್ದ ಮಲ್ಟಿಪಲ್ ಡಿವೈಸ್ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಇನ್ನು ಮುಂದೆ ಈ ಅವಕಾಶಕ್ಕೆ ನೆಟ್ಫ್ಲಿಕ್ಸ್ ಕಡಿವಾಣ ಹಾಕಲಿದೆ.
ಗೆಳೆಯರೊಡನೆ ಪಾಸ್ವರ್ಡ್ ಹಂಚಿಕೊಳ್ಳಲು ನೆಟ್ಫ್ಲಿಕ್ಸ್ ಹೆಚ್ಚುವರಿ ಶುಲ್ಕ ವಿಧಿಸಲಿದೆ. ಹಂಚಿದ ನೆಟ್ಫ್ಲಿಕ್ಸ್ ಖಾತೆಯಲ್ಲಿ ಬಳಕೆದಾರರು ತಮ್ಮ ಪ್ರೊಫೈಲ್ ಅನ್ನು ಆಯ್ಕೆ ಮಾಡಿದಾಗ ಖಾತೆದಾರರಿಗೆ ಕಳುಹಿಸಿದ ಪಠ್ಯ ಅಥವಾ ಇಮೇಲ್ನೊಂದಿಗೆ ದೃಢಿಕರಿಸುವ ಮೂಲಕ ಖಾತೆಯನ್ನು ಪರಿಶೀಲಿಸಲು ಪಾಪ್-ಅಪ್ ಮೂಲಕ ಕೇಳುತ್ತದೆ. ಅಂದರೆ ನೆಟ್ಫ್ಲಿಕ್ಸ್ ಖಾತೆಯ ಮುಖ್ಯ ಬಳಕೆದಾರರಿಗೆ ಇ-ಮೇಲ್ ಮೂಲಕ ಕೋಡ್ ಕಳುಹಿಸಲಾಗುತ್ತದೆ.
ಒಂದು ವೇಳೆ ನೆಟ್ಫ್ಲಿಕ್ಸ್ ಖಾತೆಯನ್ನು ಮನೆಯ ಮತ್ತೊಬ್ಬ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುವ ಸಂದರ್ಭದಲ್ಲಿ ಬಳಕೆದಾರ ಕಡ್ಡಾಯವಾಗಿ ಕೋಡ್ ಅನ್ನು ವೆರಿಫೈ ಮಾಡಬೇಕಾಗುತ್ತದೆ. ಇದರಿಂದಾಗಿ ನೆಟ್ಫ್ಲಿಕ್ಸ್ ಖಾತೆಯ ಒಂದು ಪಾಸ್ ವರ್ಡ್ ಎಷ್ಟು ಮೊಬೈಲ್ ನಲ್ಲಿ ಬಳಕೆಯಾಗುತ್ತಿದೆ ಎಂಬುದು ತಿಳಿಯಲಿದ್ದು ಈ ಮೂಲಕ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಈಗಾಗಲೇ ಬ್ರಿಟನ್ ಹಾಗೂ ಐರ್ಲೆಂಡಿನಲ್ಲಿ ಈ ಕ್ರಮ ಜಾರಿಯಾಗಿದೆ. ಚಂದಾದಾರರು ತಮ್ಮ ಗೆಳೆಯರೊಂದಿಗೆ ಪಾಸ್ವರ್ಡ್ ಹಂಚಿಕೊಳ್ಳಲು ಹೆಚ್ಚುವರಿ 2-3 ಡಾಲರ್ ಭರಿಸಬೇಕು ಎಂದು ಕಂಪನಿ ತಿಳಿಸಿದೆ.
ಶೀಘ್ರವೇ ನೆಟ್ಫ್ಲಿಕ್ಸ್ನ ಹೊಸ ಕ್ರಮ ಜಾಗತಿಕವಾಗಿ ಜಾರಿಯಾಗುವ ಸಾಧ್ಯತೆ ಇದೆ. ನೆಟ್ಫ್ಲಿಕ್ಸ್ ತನ್ನ ಹೊಸ ಚಂದಾದಾರಿಗೆ ಈಗಾಗಲೇ ಈ ನಿಯಮವನ್ನು ಜಾರಿಗೊಳಿಸಿದೆ. ಪ್ರಸ್ತುತ ನೆಟ್ಫ್ಲಿಕ್ಸ್ ಬಳಕೆದಾರರಿಗೆ ಈ ನಿಯಮ ಅನ್ವಯವಾಗುವುದಕ್ಕೂ 30 ದಿನಗಳ ಮೊದಲು ತಿಳಿಸಲಿದೆ. ನೆಟ್ಫ್ಲಿಕ್ಸ್ ಬ್ರಿಟನ್ನಲ್ಲಿ 14 ಮಿಲಿಯನ್ ಸಬ್ಸ್ ಕ್ರೈಬರ್ ಅನ್ನು ಹೊಂದಿದ್ದು ಐರ್ಲೆಂಡ್ನಲ್ಲಿ 6,00,000 ಸಬ್ಸ್ ಕ್ರೈಬರ್ ಇದ್ದಾರೆ.