Jio AirFiber ಬಗ್ಗೆ ಮಹತ್ವದ ಹೇಳಿಕೆ! ಬೆಲೆ ಮತ್ತು ಬಿಡುಗಡೆ ದಿನ ಫಿಕ್ಸ್ ಮಾಡಿದ ಮುಖೇಶ್ ಅಂಬಾನಿ!

Jio AirFiber ಬಗ್ಗೆ ಮಹತ್ವದ ಹೇಳಿಕೆ! ಬೆಲೆ ಮತ್ತು ಬಿಡುಗಡೆ ದಿನ ಫಿಕ್ಸ್ ಮಾಡಿದ ಮುಖೇಶ್ ಅಂಬಾನಿ!
HIGHLIGHTS

ರಿಲಯನ್ಸ್ ಜಿಯೋ (Reliance Jio) ತನ್ನ 46ನೇ ವಾರ್ಷಿಕ ಸಾಮಾನ್ಯ ಸಭೆ ಅಂದ್ರೆ AGM 2023 ಅನ್ನು ಇಂದು ಅಂದ್ರೆ 28ನೇ ಆಗುಸ್ಟ್ 2023 ರಂದು ಹಮ್ಮಿಕೊಂಡಿದೆ

ಭಾರತದಲ್ಲಿ ರಿಲಯನ್ಸ್ ತನ್ನ Jio Airfiber ಸೇವೆಯನ್ನು ಬಿಡುಗಡೆಗೊಳಿಸಿದೆ

Jio AirFiber ಸಹಾಯದಿಂದ ಅತಿ ವೇಗದ Wi-Fi ಸೇವೆಯು ದೇಶದ ಪ್ರತಿಯೊಂದು ಮನೆಯನ್ನು ತಲುಪುಲಿದೆ ಇದರ ಒಂದಿಷ್ಟು ಮಾಹಿತಿಗಳು ಮುಂದೆ ಓದಿ.

ಭಾರತದಲ್ಲಿ ಇಂದು ರಿಲಯನ್ಸ್ ಜಿಯೋ (Reliance Jio) ತನ್ನ 46ನೇ ವಾರ್ಷಿಕ ಸಾಮಾನ್ಯ ಸಭೆ ಅಂದ್ರೆ AGM (Annual General Meeting) 2023 ಅನ್ನು ಇಂದು ಅಂದ್ರೆ 28ನೇ ಆಗುಸ್ಟ್ 2023 ರಂದು ಮಧ್ಯಾಹ್ನ 2:00pm ಗಂಟೆಗೆ ಹಮ್ಮಿಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕೆಲವು ಮಹತ್ವದ ಹೇಳಿಕೆಗಳನ್ನು ಹೊರಡಿಸಿದ್ದಾರೆ. ಭಾರತದಲ್ಲಿ ರಿಲಯನ್ಸ್ ತನ್ನ Jio Airfiber ಸೇವೆಯನ್ನು ಬಿಡುಗಡೆಗೊಳಿಸಿದ್ದು ಜಿಯೋ ಏರ್‌ಫಾರ್ ಭಾರತದಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಯನ್ನು ನೀಡಲಿದೆ. Jio AirFiber ಸಹಾಯದಿಂದ ಅತಿ ವೇಗದ Wi-Fi ಸೇವೆಯು ದೇಶದ ಪ್ರತಿಯೊಂದು ಮನೆಯನ್ನು ತಲುಪುಲಿದೆ ಇದರ ಒಂದಿಷ್ಟು ಮಾಹಿತಿಗಳು ಮುಂದೆ ಓದಿ.

ಜಿಯೋ ಏರ್‌ಫೈಬರ್ ಯಾವಾಗ ಬಿಡುಗಡೆಯಾಗಲಿದೆ?

ರಿಲಯನ್ಸ್ ಜಿಯೋ ಏರ್‌ಫೈಬರ್ ಭಾರತದಲ್ಲಿ ಈ ವರ್ಷ ಗಣೇಶ ಚತುರ್ಥಿಯ ದಿನದಂದು ಅಂದರೆ ಸೆಪ್ಟೆಂಬರ್ 19 ರಂದು ಬಿಡುಗಡೆಯಾಗಲಿದೆ. ಜಿಯೋ ಏರ್‌ಫೈಬರ್ ನೇರವಾಗಿ ಏರ್‌ಟೆಲ್ ಎಕ್ಸ್‌ಟ್ರೀಮ್ ಏರ್‌ಫೈಬರ್‌ನೊಂದಿಗೆ ಸ್ಪರ್ಧಿಸುತ್ತದೆ.

Jio Airfiber 2023

ಜಿಯೋ ಏರ್‌ಫೈಬರ್ ಬೆಲೆ ಎಷ್ಟಿರಬಹುದು? 

ಜಿಯೋ ತನ್ನ ಏರ್‌ಫೈಬರ್ ಯೋಜನೆಯನ್ನು 20% ಪ್ರತಿಶತ ಕಡಿಮೆ ಬೆಲೆಗೆ ಪ್ರಾರಂಭಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಅದರ ಮಾಸಿಕ ವೆಚ್ಚ ಸುಮಾರು 640 ರೂಗಳಾಗಿವೆ. ಅರ್ಧ ವಾರ್ಷಿಕ ಯೋಜನೆಯನ್ನು 3650 ರೂಗಳಿಂದ  ಪ್ರಾರಂಭಿಸಬಹುದು. ಅಲ್ಲದೆ JioCinema ಸೇರಿದಂತೆ ಅನೇಕ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು Jio ನೀಡಬಹುದು. ಈ ಹಿಂದೆ ಏರ್‌ಟೆಲ್ ಎಕ್ಸ್‌ಟ್ರೀಮ್ ಏರ್‌ಫೈಬರ್ ಅನ್ನು ಪ್ರಾರಂಭಿಸಲಾಯಿತು. Airtel Xstream AirFiber ದೆಹಲಿ ಮತ್ತು ಮುಂಬೈನಲ್ಲಿ ಲಭ್ಯವಿದೆ. ಇದರ ಆರಂಭಿಕ ಮಾಸಿಕ ಬೆಲೆ 799 ರೂಗಳಾಗಿವೆ.  ಅಲ್ಲದೆ ಇದರ ಅರ್ಧ ವಾರ್ಷಿಕ ಯೋಜನೆಯು ರೂ 4,435 ಬರುತ್ತದೆ.

ಜಿಯೋ ಏರ್‌ಫೈಬರ್ ಎಂದರೇನು?

ಏರ್ ಫೈಬರ್‌ನಲ್ಲಿ ಆಪ್ಟಿಕಲ್ ಫೈಬರ್ ಅಗತ್ಯವಿರುವುದಿಲ್ಲ. ಇದು 5G ವೈ-ಫೈ ಸೇವೆಯಾಗಿದೆ. ಇದು 5G ನೆಟ್‌ವರ್ಕ್ ರಿಸೀವರ್ ಅನ್ನು ಹೊಂದಿದೆ. ಅದಕ್ಕೆ ವೈ-ಫೈ ಸೆಟಪ್ ಸಂಪರ್ಕಗೊಳ್ಳುತ್ತದೆ. ಇದು 1Gbps ವರೆಗೆ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಯನ್ನು ಪಡೆಯುವ ನಿರೀಕ್ಷೆಯಿದೆ.

ಜಿಯೋ ಟ್ರೂ 5G ಲ್ಯಾಬ್ ಘೋಷಣೆ 

ಯೋ ಏರ್ ಫೈಬರ್ ಜೊತೆಗೆ ಜಿಯೋ ಟ್ರೂ 5G ಡೆವಲಪರ್ ಪ್ಲಾಟ್‌ಫಾರ್ಮ್ ಮತ್ತು ಜಿಯೋ ಟ್ರೂ 5G ಲ್ಯಾಬ್‌ನ ಬಿಡುಗಡೆಯನ್ನು ಘೋಷಿಸಲಾಗಿದೆ. ಜಿಯೋ ಟ್ರೂ 5G ಲ್ಯಾಬ್ ಮುಂಬೈನ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‌ನಲ್ಲಿದೆ. ಜಿಯೋ ಏರ್ ಫೈಬರ್ 20 ಕೋಟಿ ಮನೆಗಳು ಮತ್ತು ಆವರಣಗಳನ್ನು ತಲುಪಲು ಯೋಜಿಸಲಾಗಿದೆ. ಇದರ ಅಡಿಯಲ್ಲಿ ಪ್ರತಿದಿನ 1.5 ಲಕ್ಷ ಸಂಪರ್ಕಗಳನ್ನು ಮಾಡಬಹುದು. ಆಕಾಶ್ ಅಂಬಾನಿ ನಂಬುವುದಾದರೆ ಜಿಯೋದ ಆಪ್ಟಿಕಲ್ ಫೈಬರ್ ಮೂಲಸೌಕರ್ಯವು 1.5 ಮಿಲಿಯನ್ ಕಿಲೋಮೀಟರ್‌ಗಳಷ್ಟು ಹರಡಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo