ಭಾರತದಲ್ಲಿ Moto Buds ಮತ್ತು Moto Buds+ ಉತ್ತಮ ಫೀಚರ್ಗಳೊಂದಿಗೆ ಬಿಡುಗಡೆ! ಬೆಲೆ ಮತ್ತು ವಿಶೇಷಣಗಳೇನು?

Updated on 13-May-2024
HIGHLIGHTS

ಭಾರತದಲ್ಲಿ ತನ್ನ ಲೇಟೆಸ್ಟ್ Moto Buds ಮತ್ತು Moto Buds+ ಕೈಗೆಟಕುವ ಬೆಲೆಗೆ ಅದ್ದೂರಿಯ ಫೀಚರ್ಗಳೊಂದಿಗೆ ಬಿಡುಗಡೆಗೊಳಿಸಿದೆ.

Motorola ಅತ್ಯುತ್ತಮ ವಾಯ್ಸ್ ಉತ್ಪಾದನೆಯೊಂದಿಗೆ ಪ್ರೀಮಿಯಂ ವಿನ್ಯಾಸವನ್ನು ಹುಡುಕುತ್ತಿರುವ ಪ್ರೀಮಿಯಂ ಗ್ರಾಹಕರನ್ನು ಆಕರ್ಷಿಸುವ ಗುರಿಯನ್ನು ಕಂಪನಿ ಹೊಂದಿದೆ.

Moto Buds and Moto Buds+ launched in India: ಮೋಟೋರೋಲಾ ಭಾರತೀಯ ಬಳಕೆದಾರರಿಗೆ ಮತ್ತೊಂದು ದೊಡ್ಡ ಉಡುಗೊರೆಯನ್ನು ನೀಡಿದೆ. ಮೊಟೊರೊಲ ಭಾರತದಲ್ಲಿ ತನ್ನ ಲೇಟೆಸ್ಟ್ Moto Buds ಮತ್ತು Moto Buds+ ಕೈಗೆಟಕುವ ಬೆಲೆಗೆ ಅದ್ದೂರಿಯ ಫೀಚರ್ಗಳೊಂದಿಗೆ ಬಿಡುಗಡೆಗೊಳಿಸಿದೆ. ಕಂಪನಿಯು ಇಂದು ಭಾರತದಲ್ಲಿ Moto Buds ಮತ್ತು Moto Buds+ ಅನ್ನು ಸಕ್ರಿಯ ಶಬ್ದ ರದ್ದತಿ ವೈಶಿಷ್ಟ್ಯ ಮತ್ತು ಟ್ರಿಪಲ್ ಮೈಕ್‌ನೊಂದಿಗೆ ರೂ 3,999 ರೂಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಅತ್ಯುತ್ತಮ ವಾಯ್ಸ್ ಉತ್ಪಾದನೆಯೊಂದಿಗೆ ಪ್ರೀಮಿಯಂ ವಿನ್ಯಾಸವನ್ನು ಹುಡುಕುತ್ತಿರುವ ಪ್ರೀಮಿಯಂ ಗ್ರಾಹಕರನ್ನು ಆಕರ್ಷಿಸುವ ಗುರಿಯನ್ನು ಕಂಪನಿ ಹೊಂದಿದೆ. ಬೆಲೆಯಿಂದ ಪ್ರಾರಂಭಿಸಿ ಈ ಬಡ್ಸ್‌ಗಳ ಎಲ್ಲಾ ವೈಶಿಷ್ಟ್ಯಗಳನ್ನು ನೋಡೋಣ.

ಭಾರತದಲ್ಲಿ Moto Buds ಮತ್ತು Moto Buds+ ಬೆಲೆ

ಈ ಲೇಟೆಸ್ಟ್ ಬಡ್ಸ್ ಬೆಲೆಯ ಬಗ್ಗೆ ಮಾತನಾಡುವುದಾದರೆ ಮೊಟೊರೊಲಾ ಕಂಪನಿಯು ಮೋಟೋ ಬಡ್ಸ್ ಬೆಲೆಯನ್ನು ರೂ 4,999 ಮತ್ತು ಮೋಟೋ ಬಡ್ಸ್ + ರೂ 9,999 ಗೆ ನಿಗದಿಪಡಿಸಿದೆ ಮತ್ತು ಅದರ ಮೊದಲ ಮಾರಾಟವು ಮೇ 15 ರಿಂದ ಪ್ರಾರಂಭವಾಗುತ್ತದೆ. ಗ್ರಾಹಕರು ಫ್ಲಿಪ್‌ಕಾರ್ಟ್ ಮತ್ತು ಮೊಟೊರೊಲಾ ಅಧಿಕೃತ ವೆಬ್‌ಸೈಟ್‌ನಿಂದ ಬಡ್‌ಗಳನ್ನು ಖರೀದಿಸಬಹುದು. ಆರಂಭಿಕ ಕೊಡುಗೆಯ ಪ್ರಕಾರ Moto Buds ಬೆಲೆಯನ್ನು ಸುಮಾರು 3,999 ರೂಗಳಿಗೆ ನಿಗದಿ ಪಡಿಸಿದ್ದು ಇದರ ಮತ್ತೊಂದು Moto Buds+ ಬೆಲೆಯನ್ನು ಸುಮಾರು 7,999 ರೂಗಳಿಗೆ ಬಿಡುಗಡೆಗೊಳಿಸಿದೆ. ಅಲ್ಲದೆ ಇದೊಂದು ಲಂಚ್ ಆಫರ್ ಬೆಲೆಯಾಗಿದ್ದು ಈ ಬಡ್ಸ್ ಲಾಂಚ್ ಆಫರ್ ಮುಗಿದ ನಂತರ ಇದರ ಬೆಲೆಗಳಲ್ಲಿ ಮತ್ತಷ್ಟು ಬದಲಾಗಲಿದೆ.

ಭಾರತದಲ್ಲಿ Moto Buds ಮತ್ತು Moto Buds+ ಉತ್ತಮ ಫೀಚರ್ಗಳೊಂದಿಗೆ ಬಿಡುಗಡೆ! ಬೆಲೆ ಮತ್ತು ವಿಶೇಷಣಗಳೇನು?

ಭಾರತದಲ್ಲಿ ಮೋಟೋ Buds+ ವಿಶೇಷಣಗಳು

ಟಾಪ್-ಎಂಡ್ ಮೋಟೋ ಬಡ್ಸ್+ ನಲ್ಲಿ ಎರಡು ಡ್ರೈವರ್‌ಗಳು ಕಂಡುಬರುತ್ತವೆ. ಇದರಲ್ಲಿ 11 ಎಂಎಂ ಡ್ರೈವರ್ ಮತ್ತು 6 ಎಂಎಂ ಟ್ವೀಟರ್ ಜೊತೆಗೆ 46 ಡಿಬಿ ಸಕ್ರಿಯ ನೋಯಿಸ್ ಕ್ಯಾನ್ಸಲೇಷನ್ ಇದೆ. ಇದರ ಹೊರತಾಗಿ ಬಡ್ಸ್‌ಗಳಲ್ಲಿ ಪಾರದರ್ಶಕತೆ ಮತ್ತು ಹೊಂದಾಣಿಕೆಯ ಮೋಡ್ ಸಹ ಬೆಂಬಲಿತವಾಗಿದೆ. ಅಲ್ಲದೆ ಹೊಸ ಬಡ್ಸ್ + ಡಾಲ್ಬಿ ಅಟ್ಮಾಸ್ ವಾಯ್ಸ್ ಮತ್ತು ಬೋಸ್-ಟ್ಯೂನ್ ಮಾಡಿದ ಆಡಿಯೊದೊಂದಿಗೆ 3 ಪಟ್ಟು ಉತ್ತಮ ವಾಯ್ಸ್ ಅನ್ನು ಒದಗಿಸುತ್ತದೆ.

ಇದನ್ನೂ ಓದಿ: Reliance Jio ಬಳಕೆದಾರರಿಗೆ ಉಚಿತ OTT ಪ್ರಯೋಜನಳೊಂದಿಗೆ 5G ಡೇಟಾ ಮತ್ತು ಕರೆ ನೀಡುವ 3 ಅತ್ಯುತ್ತಮ ಪ್ಲಾನ್‌ಗಳು!

ಬ್ಯಾಟರಿ ಬಾಳಿಕೆ ಕುರಿತು ಮಾತನಾಡುವುದಾದರೆ ಮೊಟೊರೊಲಾ ಬಿಡುಗಡೆಯಾದ Moto Buds + ಕವರ್ ಸೇರಿದಂತೆ ಒಂದೇ ಚಾರ್ಜ್‌ನಲ್ಲಿ 38 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಚಾರ್ಜ್ ಮಾಡಲು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಬಡ್ಸ್‌ಗಳು IP54 ರೇಟಿಂಗ್ ಅನ್ನು ಹೊಂದಿವೆ. ಇದಲ್ಲದೇ ವೈಯಕ್ತೀಕರಿಸಿದ ಗೆಸ್ಚರ್‌ಗಳು, ಸೌಂಡ್ ಕಂಟ್ರೋಲ್ ಸೇರಿದಂತೆ ಹಲವು ಶಕ್ತಿಶಾಲಿ ವೈಶಿಷ್ಟ್ಯಗಳು ಬಡ್ಸ್‌ಗಳಲ್ಲಿ ಲಭ್ಯವಿದೆ.

ಭಾರತದಲ್ಲಿ Moto Buds ಮತ್ತು Moto Buds+ ಉತ್ತಮ ಫೀಚರ್ಗಳೊಂದಿಗೆ ಬಿಡುಗಡೆ! ಬೆಲೆ ಮತ್ತು ವಿಶೇಷಣಗಳೇನು?

ಭಾರತದಲ್ಲಿ ಮೋಟೋ Buds ವಿಶೇಷಣಗಳು

Moto ಬಡ್ಸ್ 12.4mm ಡ್ರೈವರ್‌ಗಳೊಂದಿಗೆ 50dB ಸಕ್ರಿಯ ನೋಯಿಸ್ ಕ್ಯಾನ್ಸಲೇಶನ್ ಜೊತೆಗೆ ಪಾರದರ್ಶಕ ಮತ್ತು ಹೊಂದಾಣಿಕೆಯ ANC ಸೆಟ್ಟಿಂಗ್‌ಗಳೊಂದಿಗೆ ಬರುತ್ತದೆ. ಇದನ್ನು ಒಂದೇ ಚಾರ್ಜ್‌ನಲ್ಲಿ 42 ಗಂಟೆಗಳವರೆಗೆ ಮತ್ತು ANC ಇಲ್ಲದೆ 9 ಗಂಟೆಗಳವರೆಗೆ ಬಳಸಬಹುದು. ಬಡ್ಸ್‌ಗಳು IPX4 ರೇಟಿಂಗ್ ಅನ್ನು ಹೊಂದಿವೆ ಮತ್ತು ಕೇವಲ 36 ಗ್ರಾಂ ತೂಗುತ್ತದೆ. ನೀವು ಅವುಗಳನ್ನು ಕೋರಲ್ ಪೀಚ್, ಸ್ಟಾರ್ಲೈಟ್ ಬ್ಲೂ ಮತ್ತು ಗ್ಲೇಸಿಯರ್ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :