PAN Card: ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದ್ರೆ ತಪ್ಪದೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ! ಇಲ್ಲವಾದ್ರೆ ಭಾರಿ ನಷ್ಟ!

PAN Card: ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದ್ರೆ ತಪ್ಪದೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ! ಇಲ್ಲವಾದ್ರೆ ಭಾರಿ ನಷ್ಟ!
HIGHLIGHTS

ಭಾರತದಲ್ಲಿ ಈ ಪ್ರತಿಯೊಬ್ಬ ಭಾರತೀಯನ ಪ್ರಮುಖ ದಾಖಲೆಗಳಲ್ಲಿ ಈ ಪ್ಯಾನ್ ಕಾರ್ಡ್ (PAN Card) ಸಹ ಒಂದಾಗಿದೆ.

ಮುಖ್ಯವಾಗಿ ಸಾಲ ಪಡೆಯಲು, ಆಸ್ತಿ ಖರೀದಿ/ಮಾರಾಟ ಅಥವಾ ಆಭರಣಗಳನ್ನು ಖರೀದಿಸಲು ಪ್ಯಾನ್ ಕಾರ್ಡ್ (PAN Card) ಮುಖ್ಯವಾಗಿದೆ.

ಭಾರತದಲ್ಲಿ ಈ ಪ್ರತಿಯೊಬ್ಬ ಭಾರತೀಯನ ಪ್ರಮುಖ ದಾಖಲೆಗಳಲ್ಲಿ ಈ ಪ್ಯಾನ್ ಕಾರ್ಡ್ (PAN Card) ಸಹ ಒಂದಾಗಿದೆ. ಏಕೆಂದರೆ ಈ ಪ್ಯಾನ್ ಕಾರ್ಡ್ ಅನೇಕ ಸ್ಥಳಗಳಲ್ಲಿ ಅನೇಕ ಕೆಲಸ ಪೂರ್ಣವಾಗೋದಿಲ್ಲ. ಮುಖ್ಯವಾಗಿ ಸಾಲ ಪಡೆಯಲು, ಆಸ್ತಿ ಖರೀದಿ/ಮಾರಾಟ ಅಥವಾ ಆಭರಣಗಳನ್ನು ಖರೀದಿಸಲು ಪ್ಯಾನ್ ಕಾರ್ಡ್ (PAN Card) ಬಹು ಮುಖ್ಯವಾಗಿ ಬಳಸಲಾಗುತ್ತದೆ.

ಪ್ಯಾನ್ ಕಾರ್ಡ್ ಅನ್ನು ಇತರ ಹಲವು ಪ್ರಮುಖ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ನಿಮ್ಮ ಪಾನ್ ಕಾರ್ಡ್ ತಪ್ಪಾದ ಕೈಗೆ ಬಿದ್ದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಅನೇಕ ಬಾರಿ ಅಂಗಡಿಯಿಂದ ಪ್ಯಾನ್ ಕಾರ್ಡ್‌ನ ಫೋಟೊಕಾಪಿಯನ್ನು ಪಡೆಯುತ್ತೇವೆ. ಆದರೆ ನಂತರ ಅದರ ನಕಲನ್ನು ಅನೇಕ ಸ್ಥಳಗಳಲ್ಲಿ ಬಳಸುವ ಅವಕಾಶಗಳಿವೆ.

Also Read: 8GB RAM ಮತ್ತು 50MP ಕ್ಯಾಮೆರಾವುಳ್ಳ Vivo T3 5G ಭಾರತದಲ್ಲಿ ಲಾಂಚ್! ಬೆಲೆ ಮತ್ತು ಟಾಪ್ 5 ಫೀಚರ್ಗಳೇನು?

ಪ್ಯಾನ್ ಕಾರ್ಡ್ (PAN Card) ಸುರಕ್ಷಿತವಾಗಿದೆಯೇ ಪರಿಶೀಲಿಸಿಕೊಳ್ಳಿ!

Most things to keep in mind if you have a PAN Card
Most things to keep in mind if you have a PAN Card

ನಿಮ್ಮ ಪ್ಯಾನ್ ಕಾರ್ಡ್ ವಿವರಗಳೊಂದಿಗೆ ಯಾರಾದರೂ ವಂಚನೆ ಮಾಡುತ್ತಿದ್ದಾರೆಯೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ನಿಮ್ಮ CIBIL ಸ್ಕೋರ್‌ನಿಂದ ನಿಮ್ಮ PAN ಕಾರ್ಡ್ ಅನ್ನು ತಪ್ಪಾಗಿ ಬಳಸಲಾಗಿದೆಯೇ ಅಥವಾ ನಿಮಗೆ ತಿಳಿಯದೆಯೇ ಬಳಸಲಾಗಿದೆಯೇ ಎಂಬುದನ್ನು ನೀವು ಕಂಡುಹಿಡಿಯಬಹುದು. Paytm ಅಥವಾ ಪಾಲಿಸಿ ಬಜಾರ್‌ನಂತಹ ಯಾವುದೇ ಫಿನ್‌ಟೆಕ್ ಕಂಪನಿಯಿಂದ ನಿಮ್ಮ BPT ಸ್ಕೋರ್ ಅನ್ನು ನೀವು ಪರಿಶೀಲಿಸಬಹುದು. ನೀವು ಹತ್ತಿರದ ಯಾವುದೇ ಬ್ಯಾಂಕ್‌ಗೆ ಹೋಗಿ CIBIL ಸ್ಕೋರ್ ಬಗ್ಗೆ ತಿಳಿದುಕೊಳ್ಳಬಹುದು. ನಿಮ್ಮ ಸ್ಕೋರ್ ಉತ್ತಮವಾಗಿದೆಯೇ ಅಥವಾ ಇಲ್ಲವೇ ಎಂದು ಬ್ಯಾಂಕ್ ಅನ್ನು ಕೇಳಬಹುದು.

ಪ್ಯಾನ್ ಕಾರ್ಡ್ (PAN Card) ಬಗ್ಗೆ ಈ ವಿಷಯಗಳನ್ನು ನೆನಪಿನಲ್ಲಿಡಿ

ನಿಮ್ಮ ಪ್ಯಾನ್ ಕಾರ್ಡ್ ವಿವರಗಳ ಮೂಲಕ ಯಾವುದೇ ವಂಚನೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. ನಿಮ್ಮ ಪ್ಯಾನ್ ಕಾರ್ಡ್ ನ ಫೋಟೊಕಾಪಿಯನ್ನು ಯಾವುದೇ ಅಪರಿಚಿತ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬೇಡಿ. ನೀವು ಯಾರೊಂದಿಗಾದರೂ ಫೋಟೋಕಾಪಿಯನ್ನು ಹಂಚಿಕೊಳ್ಳಬೇಕಾದರೆ ನೀವು ಪ್ಯಾನ್ ಕಾರ್ಡ್‌ನ ಫೋಟೊಕಾಪಿಯನ್ನು ಏಕೆ ನೀಡುತ್ತಿರುವಿರಿ ಎಂಬುದನ್ನು ಖಂಡಿತವಾಗಿಯೂ ಅದರ ಮೇಲೆ ಬರೆಯಿರಿ.

Most things to keep in mind if you have a PAN Card
Most things to keep in mind if you have a PAN Card

ಉದಾಹರಣೆಗೆ ನೀವು ಭೂಮಿಯನ್ನು ಖರೀದಿಸಲು PAN ಕಾರ್ಡ್ ಫೋಟೊಕಾಪಿಯನ್ನು ನೀಡುತ್ತಿದ್ದರೆ ಅದನ್ನು ಭೂಮಿ ಖರೀದಿಸಲು ಮಾತ್ರ ನನ್ನ ಅನುಮತಿ ಎಂದು ಪ್ಯಾನ್ ಕಾರ್ಡ್ ಸೇರಿಸಿ ನಿಮ್ಮ ಸಹಿ ಹಾಕಿ ನೀಡಬಹುದು. ಏಕೆಂದರೆ ಹಲವು ಬಾರಿ ವಂಚಕರು ಪ್ಯಾನ್ ಕಾರ್ಡ್ (PAN Card) ನಕಲು ಪ್ರತಿಯನ್ನು ಹೆಚ್ಚು ದುರ್ಬಳಕೆ ಮಾಡಿಕೊಳ್ಳುತ್ತಾರೆ.

ಕೂಡಲೇ ದೂರು ನೀಡುವುದು ಬಹು ಮುಖ್ಯ!

ನಿಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ನಿಮ್ಮ ಹೆಸರಿನಲ್ಲಿ ಯಾರಾದರೂ ಸಾಲ ಪಡೆದಿದ್ದಾರೆಯೇ ಎಂಬುದನ್ನು ಸಹ ಕಂಡುಹಿಡಿಯಿರಿ ಅದನ್ನು ಪಾವತಿಸಲಾಗಿಲ್ಲ. ಅದೇ ರೀತಿ ನಿಮ್ಮ ಆಧಾರ್ ಕಾರ್ಡ್ ಬಗ್ಗೆಯೂ ತಿಳಿದುಕೊಳ್ಳುವುದು ಬಹುಮುಖ್ಯವಾಗಿದೆ. ವಂಚನೆ ಮಾಡುವ ಜನರು ತುಂಬಾ ಬುದ್ಧಿವಂತರಾಗಿದ್ದು ಸಾಮಾನ್ಯ ಮುಗ್ದ ಜನರು ಹೆಚ್ಚು ಜಾಗರೂಕರಾಬೇಕಾಗುತ್ತದೆ. ನಿಮ್ಮ ದಾಖಲೆಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳುವ ಮೊದಲು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ. ಇನ್ನು ನಿಮ್ಮ ಪ್ಯಾನ್ ನಂಬರ್ ಸಹಾಯದಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿ ನಿಮಗೆ ಅರಿವಿಲ್ಲದೆ ಯಾವುದಾದರು ಚಟುವಟಿಕೆ ನಡೆದರೆ ಕೂಡಲೇ ದೂರು ನೀಡುವುದು ಬಹು ಮುಖ್ಯವಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo