ಇಂದಿನ ದಿನಗಳಲ್ಲಿ ಆನ್‌ಲೈನ್ ವಂಚಕರು ಅದರಲ್ಲೂ ಮುಖ್ಯವಾಗಿ ಹ್ಯಾಕರ್‌ಗಳು ಜನ ಸಾಮಾನ್ಯರ ಮೊಬೈಲ್ ಫೋನ್‌ಗಳ ಹ್ಯಾಕ್ (Phone Hack) ಮಾಡಲು ಹಲವಾರು ತಂತ್ರಗಳನ್ನು ಅನುಸರಿಸುತ್ತಾರೆ. ಎಷ್ಟೋ ಜನರಿಗೆ ಹಲವಾರು ಬಾರಿ ತಮ್ಮ ತಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂಬ ಅರಿವೇ ಇರುವುದಿಲ್ಲ. ಆದರೆ ಹ್ಯಾಕರ್‌ಗಳು ಮತ್ತು ಅಪರಾಧಿಗಳು ಬಳಕೆದಾರರ ವೈಯಕ್ತಿಕ ಡೇಟಾವನ್ನು ಕದಿಯುತ್ತಾರೆ ಮತ್ತು ಅವರ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುವುದು ಇವರ ಗುರಿಯಾಗಿರುತ್ತದೆ. ಈ ವಂಚಕರು ಹಲವು ಬಾರಿ ಬಳಕೆದಾರರಿಗೆ ಮುಗ್ದ ಜನರನ್ನು ಬ್ಲ್ಯಾಕ್ ಮೇಲ್ ಮಾಡಿ ಅವರ ವೈಯಕ್ತಿಕ ಡೇಟಾ ಸೋರಿಕೆ ಮಾಡಿ ಹಣ ವಸೂಲಿ ಮಾಡುತ್ತಾರೆ.
Also Read: 108MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯ Smartphone ಕೇವಲ ₹8,900 ರೂಗಳಿಗೆ ಲಭ್ಯ
ನಿಮ್ಮ ಸ್ಮಾರ್ಟ್ಫೋನ್‌ನಲ್ಲಿ ಈ ಕೆಳಗೆ ಪಟ್ಟಿ ಮಾಡಲಾಗಿರುವ ಸಾಮಾನ್ಯ 3 ಲಕ್ಷಣಗಳು ಕಂಡು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಅದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮೊಬೈಲ್ ಹ್ಯಾಕ್ (Phone Hack) ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಕಂಡುಹಿಡಿಯಬಹುದು. ವಾಸ್ತವವಾಗಿ ಹ್ಯಾಕರ್‌ಗಳು ನಿಮ್ಮ ಫೋನ್ ಅನ್ನು ಪ್ರವೇಶಿಸಿದಾಗ ಅಂದರೆ ಫೋನ್ ಅನ್ನು ಹ್ಯಾಕ್ ಮಾಡಿದಾಗ ಫೋನ್‌ನಲ್ಲಿ ಈ ಕೆಲವು ಸಿಗ್ನಲ್‌ಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಅನೇಕ ಬಾರಿ ಫೋನ್‌ನಲ್ಲಿ ಮಾಲ್‌ವೇರ್ ಇದ್ದಾಗ ಇಲ್ಲಿಯವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ನಿಮ್ಮ ಫೋನ್ ಇದ್ದಕ್ಕಿದ್ದಂತೆ ನಿಧಾನವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗುತ್ತಿದೆ ಎಂದು ಹೇಳುತ್ತಾರೆ ಆದರೆ ಇದು ಹ್ಯಾಂಗಿಂಗ್‌ನಿಂದ ಮಾತ್ರವಲ್ಲದೆ ಹ್ಯಾಕಿಂಗ್‌ನಿಂದಲೂ ಸಂಭವಿಸುತ್ತದೆ. ಪದೇ ಪದೇ ಮೊಬೈಲ್ ಸ್ಕ್ರೀನ್ ಫ್ರೀಜ್ ಅಥವಾ ಹ್ಯಾಂಗ್ ಆಗುವುದು ಮತ್ತು ಫೋನ್ ಕ್ರ್ಯಾಶ್ ಆಗುವುದು ಕೂಡ ಹ್ಯಾಕಿಂಗ್ನ ಸಾಮಾನ್ಯ ಲಕ್ಷಣಗಳಾಗಿವೆ.
ನಿಮ್ಮ ಫೋನ್‌ನಲ್ಲಿ ಮಾಲ್‌ವೇರ್ ಅಥವಾ ವಂಚನೆ ಅಪ್ಲಿಕೇಶನ್ ಇದ್ದರೆ ನಿಮ್ಮ ಮೊಬೈಲ್ ಬ್ಯಾಟರಿ ವೇಗವಾಗಿ ಖಾಲಿಯಾಗುವುದು ಹ್ಯಾಕಿಂಗ್‌ನ ಸಂಕೇತವಾಗಿದೆ. ಫೋನ್‌ನ ಬ್ಯಾಟರಿಯು ಸಾಮಾನ್ಯಕ್ಕಿಂತ ವೇಗವಾಗಿ ಖಾಲಿಯಾಗುತ್ತದೆ ಏಕೆಂದರೆ ಸ್ಕ್ರೀನ್ ಆಫ್ ಆಗುವುದು, ಲೊಕೇಶನ್, ಬ್ಲೂಥೂತ್, ಡೇಟಾ ಅಥವಾ Wi-Fi ಆನ್ ಆಗುವುದು, ಆಗಿರುವಾಗ ಮತ್ತು ನಿಮ್ಮ ಡೇಟಾವನ್ನು ಕದಿಯುತ್ತಿರುವಾಗಲೂ ಈ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಕೆಲವು ಸಂದರ್ಭಗಳಲ್ಲಿ ಮೊಬೈಲ್ ಸೆನ್ಸರ್ ಮತ್ತೆ ಮತ್ತೆ ಪತ್ತೆಹಚ್ಚಲು ಪ್ರಾರಂಭಿಸುವುದು ನಿಮ್ಮ ಮೊಬೈಲ್ ಹ್ಯಾಕ್ ಆಗಿರುವ ಸಂಕೇತವಾಗಿದೆ.
ಅಕೌಂಟ್ ಲಾಗಿನ್ ಬಗ್ಗೆ ನೀವು ಪದೇ ಪದೇ ಮೆಸೇಜ್‌ಗಳನ್ನು ಪಡೆಯುತ್ತಿದ್ದರೂ ಸಹ ನಿಮ್ಮ ಫೋನ್ ಹ್ಯಾಕಿಂಗ್‌ಗೆ ಬಲಿಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ತಕ್ಷಣ ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಬೇಕು. ನೀವು ಯಾವುದೇ ಅನುಮಾನಾಸ್ಪದ ಲಾಗಿನ್ ಬಗ್ಗೆ ಮಾಹಿತಿಯನ್ನು ಪಡೆದರೆ ಯಾರಾದರೂ ಫೋನ್ ಅನ್ನು ಹ್ಯಾಕ್ ಮಾಡಿದ್ದಾರೆ ಎಂದು ಅರ್ಥಮಾಡಿಕೊಳ್ಳಿ. ಅನೇಕ ಬಾರಿ ಹ್ಯಾಕರ್‌ಗಳು ಟ್ರೋಜನ್ ಮೆಸೇಜ್‌ಗಳ ಮೂಲಕ ಬಳಕೆದಾರರ ಮೊಬೈಲ್‌ಗಳನ್ನು ಬಲೆಗೆ ಬೀಳಿಸುತ್ತಾರೆ. ಇದಲ್ಲದೆ ಹ್ಯಾಕರ್‌ಗಳು ನಿಮಗೆ ಹತ್ತಿರವಿರುವವರ ಫೋನ್ ಅನ್ನು ಸಹ ಹ್ಯಾಕ್ ಮಾಡಬಹುದು. ಇದರಿಂದ ಅವರು ನಿಮ್ಮ ಡೇಟಾವನ್ನು ಕದಿಯಬಹುದು. ಆದ್ದರಿಂದ ಯಾವುದೇ SMS ನಲ್ಲಿ ಬರುವ ಲಿಂಕ್ ಮೇಲೆ ಎರಡು ಬಾರಿ ಪರಿಶೀಲಿಸಿ ಕ್ಲಿಕ್ ಮಾಡಿ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!