ನೆಟ್ವರ್ಕ್ ಸಮಸ್ಯೆಗಳಿಗೆ (Network Problem) ಕಾರಣಗಳೇನು ಎನ್ನುವುದನ್ನು ತಿಳಿಯಿರಿ ಕಾರಣ ಗೊತ್ತಾದರೆ ಅದನ್ನು ಸರಿಪಡಿಸುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರವೂ ಸಿಕುತ್ತೆ.
ನೆಟ್ವರ್ಕ್ ಸಮಸ್ಯೆಗಳಿಗೆ ದೊಡ್ಡ ಕಾರಣವೆಂದರೆ ಕಳಪೆ ಸಿಗ್ನಲ್ ಮತ್ತು ಕಳಪೆ ಕವರೇಜ್ ಆಗಿದೆ
ಸಿಗ್ನಲ್ ಬಂದ ಮೇಲು ಕರೆ ಅಥವಾ ಡೇಟಾದಲ್ಲಿ ತೊಂದರೆಯಾದರೆ ಒಮ್ಮೆ ಏರ್‌ಪ್ಲೇನ್ ಮೋಡ್ (Flight Mode) ಆನ್ ಮಾಡಿ ಆಫ್ ಮಾಡಿ ನೋಡಬಹುದು.
ಸಾಮಾನ್ಯವಾಗಿ ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕರೆ ಮಾಡುವಾಗ ಅಥವಾ ಡೇಟಾ ಬಳಸುವಾಗ ನೆಟ್‌ವರ್ಕ್ ಸಮಸ್ಯೆಗಳಿದ್ದರೆ (Network Problem) ಸಾಕಷ್ಟು ತೊಂದರೆಯಾಗಬಹುದು. ಪ್ರತಿಯೊಬ್ಬರೂ ಪ್ರತಿ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಉದ್ದೇಶಗಳಿಗಾಗಿ ಸ್ಮಾರ್ಟ್ಫೋನ್ಗಳನ್ನು ಬಳಸುವುದು ಅನಿವಾರ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಈ ನೆಟ್‌ವರ್ಕ್ (Network) ಕೊರತೆಯಿಂದಾಗಿ ಕರೆಯಲ್ಲಿರುವ ವ್ಯಕ್ತಿಯೊಂದಿಗೆ ಮಾತನಾಡಲು ಅಥವಾ ಇಂಟರ್ನೆಟ್ ಅನ್ನು ಬಳಸಲು ಸಮಸ್ಯೆಗಳು ಎದುರಾಗುವುದು ಕಾಣಬಹುದು. ಇದರ ಕ್ಷಣದಲ್ಲಿ ನಿಮಗೆ ಸಿಕಾಪಟ್ಟೆ ಕೋಪ ಮತ್ತು ತಲೆನೋವಾಗುವುದು ಸಹಜ. ಆದರೆ ಈಗ ಇದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ನೀಡಲಿದ್ದು ಈ ನೆಟ್ವರ್ಕ್ ಸಮಸ್ಯೆಗಳಿವೆ ಕಾರಣಗಳೇನು ಎನ್ನುವುದನ್ನು ತಿಳಿಯಿರಿ ಕಾರಣ ಗೊತ್ತಾದರೆ ಅದನ್ನು ಸರಿಪಡಿಸುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರವೂ ಸಿಕುತ್ತೆ.
Also Read: ನಿಮ್ಮ ಬಜೆಟ್ ಬೆಲೆಗೊಂದು ಬೆಸ್ಟ್ Car Vacuum Cleaner ಹುಡುಕುತ್ತಿದ್ದರೆ ಈ ಡೀಲ್ ಮಿಸ್ ಮಾಡಿಕೊಳ್ಳಬೇಡಿ!
Network Problem ಕಾರಣ ಕಳಪೆ ಸಿಗ್ನಲ್ ಮತ್ತು ಕವರೇಜ್
ನೆಟ್ವರ್ಕ್ ಸಮಸ್ಯೆಗಳಿಗೆ ದೊಡ್ಡ ಕಾರಣವೆಂದರೆ ಕಳಪೆ ಸಿಗ್ನಲ್ ಮತ್ತು ಕಳಪೆ ಕವರೇಜ್ ಆಗಿದೆ. ಸಿಗ್ನಲ್ ದುರ್ಬಲವಾಗಿರುವ ಸ್ಥಳದಲ್ಲಿ ನೀವು ಇದ್ದರೆ ಫೋನ್ ನೆಟ್‌ವರ್ಕ್‌ಗೆ ಸಂಪರ್ಕದಲ್ಲಿರಲು ಕಷ್ಟವಾಗುತ್ತದೆ. ನಿಮ್ಮ ಮನೆ ಅಥವಾ ಆಫೀಸ್ ಸುತ್ತಮುತ್ತ ಮನೆಗಳು ಅಥವಾ ದೊಡ್ಡ ಮರ ಅಥವಾ ಬಿಲ್ಡಿಂಗ್ ಇದ್ದಾರೆ ನಿಮಗೆ ನೆಟ್ವರ್ಕ್ ಸಿಗ್ನಲ್ ಕವರೇಜ್ ಪಡೆಯಲು ಸಾಧ್ಯವಾಗದ ಕಾರಣ ನೀವು ಹತ್ತಿರದ ಕಿಟಕಿಯ ಬಳಿಗೆ ಸಿಗ್ನಲ್ ಹೆಚ್ಚಾಗಿ ಸಿಗುವ ಸ್ಥಳಕ್ಕೆ ಹೋಗಲೇಬೇಕಾಗುತ್ತದೆ. ಇಲ್ಲಿ ಉತ್ತಮವಾದ ಸಿಗ್ನಲ್ ಬಂದ ಮೇಲು ಕರೆ ಅಥವಾ ಡೇಟಾದಲ್ಲಿ ತೊಂದರೆಯಾದರೆ ಒಮ್ಮೆ ಏರ್‌ಪ್ಲೇನ್ ಮೋಡ್ (Flight Mode) ಆನ್ ಮಾಡಿ ಆಫ್ ಮಾಡಿ ನೋಡಬಹುದು ಇದರೊಂದಿಗೆ ಒಮ್ಮೆಗೆ ನೀವು ನಿಮ್ಮ ಫೋನ್ ಅನ್ನು ರೀಸ್ಟಾರ್ಟ್ ಸಹ ಮಾಡಬಹುದು.
Network Problem ಆಗಲು ಕಾರಣಗಳೇನು?
ಇದರ ಬಳಿಕವೂ ನೆಟ್ವರ್ಕ್ ಸಿಗದಿದ್ದರೆ ಮನೆ ಅಥವಾ ನಿಮ್ಮ ಕಚೇರಿಯಿಂದ ಹೊರಗೆ ಬಂದು ನೈಸರ್ಗಿಕ ಪರಿಸರದ ಗಾಳಿಯತ್ತ ಹೋಗುವುದು ತಕ್ಷಣದ ಪರಿಹಾರವಾಗಲಿದೆ. ನಿಮ್ಮ ಫೋನ್‌ನಲ್ಲಿ ನೆಟ್ವರ್ಕ್ ತೊಂದರೆಗೆ ಮೂಲ ಕಾರಣ ನೋಡುವುದಾದರೆ ನೀವಿರುವ ಸ್ಥಳವಾಗಿದೆ. ಇದರಿಂದ ತಲೆಕ್ಕೆಟ್ಟು ನೀವು ನಿಮ್ಮ ಸಿಮ್ ಕಾರ್ಡ್ ಕಂಪನಿಗೆ ಎಷ್ಟೇ ಬಾರಿ ಕರೆ ಮಾಡಿ ದೂರು ನೀಡಿದರು ಏನು ಪ್ರಯೋಜನಗಳಗೊಡಿದಿಲ್ಲ. ಆದರೆ ಒಂದೇ ಸಿಮ್ ಕಾರ್ಡ್ ಹೊಂದಿರುವ ಹತ್ತಾರು ಜನರಿಗೆ ಒಂದೇ ಸ್ಥಳದಿಂದ ತೊಂದರೆಯಾಗುತ್ತಿದ್ದರೆ ಕೆಲವು ಷರತ್ತು ಮತ್ತು ನಿಯಮಗಳ ಆಧಾರದ ಮೇರೆಗೆ ನೆಟ್ವರ್ಕ್ ಬೂಸ್ಟರ್ (Network Booster) ಎನ್ನುವ ಪರಿಹಾರವನ್ನು ನೀಡುತ್ತವೆ. ಆದರೆ ಇದು ಎಲ್ಲರಿಗು ಇದು ಸಿಗೋದಿಲ್ಲ ಇದಕ್ಕಾಗಿ ನೀವು ನಿಮ್ಮ ಕಸ್ಟಮರ್ ಕೇರ್ ವಿಭಾಗದಲ್ಲಿ ಇದರ ಬಗ್ಗೆ ಮಾಹಿತಿಯನ್ನು ಪಡೆಯಬಹುದು.
ರಸ್ತೆಯಲ್ಲಿ ಅಥವಾ ಬಯಲು ಪ್ರದೇಶದಲ್ಲೂ ನೆಟ್ವರ್ಕ್ ಪ್ರಾಬ್ಲಮ್ ಯಾಕೆ?
ನಿಮಗೆ ಈ ಸಮಸ್ಯೆಯೂ ಎದುರಾಗಿರಬಹುದು ಅಂದ್ರೆ ನೀವು ರಸ್ತೆಯಲ್ಲಿರುವಾಗ ಅಥವಾ ಬಯಲು ಪ್ರದೇಶದಲ್ಲಿರುವಾಗಲೂ ಸಹ ನೆಟ್ವರ್ಕ್ ಪ್ರಾಬ್ಲಮ್ ಕಂಡಿರಬಹುದು. ಯಾಕೆಂದರೆ ಸಾಮಾನ್ಯವಾಗಿ ಪ್ರತಿಯೊಂದು ಮೊಬೈಲ್ ನೆಟ್ವರ್ಕ್ ಟವರ್ (Cell Tower Range) ಸುಮಾರು 1km ರಿಂದ 50km ವ್ಯಾಪ್ತಿಯನ್ನು ಕವರ್ ಮಾಡುವ ಲಿಮಿಟ್ ಅನ್ನು ಹೊಂದಿರುತ್ತವೆ. ಹಾಗಂತ ಪ್ರತಿಯೊಂದು ಟವರ್ ಈ ಮಾದರಿಯ ಕವರೇಜ್ ಹೊಂದಿರುವುದಿಲ್ಲ. ಕೆಲವು 25km ಆದರೆ ಮತ್ತೊಂದು 10km ಮತ್ತೊಂದು 40km ಈ ಮಾದರಿಯಲ್ಲಿ ಹಂಚಿಕೆಯಾಗಿರುತ್ತದೆ. ಇದರಿಂದಾಗಿ ನೀವಿರುವ ಸ್ಥಳದಿಂದ ಸುಮಾರು ಕಿಲೋಮೀಟರ್ ದೂರವನ್ನು ತಲುಪದ ಕಾರಣ ನೀವು ಯಾವುದೇ ಪ್ರದೇಶದಲ್ಲಿದ್ದರು ನಿಮಗೆ ನೆಟ್ವರ್ಕ್ ಪ್ರಾಬ್ಲಮ್ ಆಗುತ್ತದೆ.
ಇದನ್ನು ಬಗೆಹರಿಸಲು ನೀವು ನಿಮ್ಮ ಸ್ಮಾರ್ಟ್ಫೋನ್ ಒಳಗೆ https://www.cellmapper.net/ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ಸ್ಥಳದ ಮಾಹಿತಿಯನ್ನು ನೀಡಿ ನೆಟ್ವರ್ಕ್ ಟವರ್ ಮಾಹಿತಿಯನ್ನು ಪಡೆಯಬಹುದು. ಇದರಿಂದ ನಿಮ್ಮ ಹತ್ತಿರ ಯಾವ ಟೆಲಿಕಾಂ ಆಪರೇಟರ್ ನೆಟ್ವರ್ಕ್ ಟವರ್ ಇದೆ ಎನ್ನುವುದರೊಂದಿಗೆ ನಿಮಗೆ ಅಗತ್ಯವಲ್ಲದ ಟೆಲಿಕಾಂ ಆಪರೇಟರ್ ಬಿಟ್ಟು (PORT) ನೀವು ನೀಡುವ ಬೆಲೆಗೆ ತಕ್ಕಂತ ಸೇವೆಗಳನ್ನು ನಿಮ್ಮ ಹತ್ತಿರದ ಟವರ್ ಆಪರೇಟರ್ ಕಂಪನಿಯಿಂದ ಪಡೆಯಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile