Network Issue: ನಿಮಗೆ ಸಾಮಾನ್ಯ ಕರೆ ಮಾಡುವಾಗ ಒಂದೆರಡು ಬಾರಿ ಸಮಸ್ಯೆಗಳಾಗುತ್ತಿದ್ದರೆ ಅದು ಸಾಮಾನ್ಯವಾಗಿಯುತ್ತದೆ. ಆದರೆ ಕರೆಯೇ ಕನೆಕ್ಟ್ ಆಗದಿದ್ದರೆ? ಪ್ರತಿ ಕರೆಯಲ್ಲೂ ಮಾತು ಆಡದೆ ಅಥವಾ ಕೇಳದೆ ಇದ್ದಾರೆ ಭಾರಿ ಕಿರಿಕಿರಿ ಉಂಟಾಗುತ್ತದೆ. ಕೆಲವೊಮ್ಮೆ ಫೋನ್ ಸಹವಾಸವೇ ಬೇಡ ಅನಿಸುತ್ತೆ ಆದರೆ ಕೆಲವು ಕಾರಣಗಳಿಂದಾಗಿ ಪ್ರತಿಯೊಬ್ಬರೂ ಫೋನ್ ಬಳಸಲೇ ಬೇಕಾಗುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿನ ಸೆಟ್ಟಿಂಗ್‌ಗಳ ದೋಷಗಳ ಪರಿಣಾಮವಾಗಿ ಇದು ಸಂಭವಿಸಬಹುದು. ಇಲ್ಲಿ ಹಲವಾರು ಮೂಲಭೂತ ಕಾರಣಗಳು ಮತ್ತು ಪ್ರತಿಯೊಬ್ಬ ಬಳಕೆದಾರರು ಮಾಡುವ ಮತ್ತು ಅವುಗಳು ಸಾಮಾನ್ಯ ದೋಷಗಗಳಾಗಿವೆ. ನಿಮ್ಮ ಫೋನ್ ಯಾವ ಕಾರಣಗಳಿಗಾಗಿ ಕರೆಗಳನ್ನು ಸ್ವೀಕರಿಸುತ್ತಿಲ್ಲ ಮತ್ತು ಅದನ್ನು ಹೇಗೆ ಪರಿಹರಿಸುವುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗದಿದ್ದರೆ ಅದಕ್ಕೆ ನೆಟ್‌ವರ್ಕ್ ಸಂಪರ್ಕವು ಒಂದು ಕಾರಣವಾಗಿರಬಹುದು. ನೆಟ್‌ವರ್ಕ್ ಸಂಪರ್ಕವನ್ನು ಸರಿಪಡಿಸಲು ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಆನ್ ಮಾಡಬೇಕಾಗುತ್ತದೆ. ನಂತರ ಇದಕ್ಕಾಗಿ ಇಂಟೆರ್ನೆಟ್ ಅನ್ನು ಆನ್ ಮಾಡಿ ನೋಡಿ ಅಲ್ಲದೆ ಗಮನದಲ್ಲಿರಲಿ ನಿಮ್ಮ ಡೇಟಾ ಹೊಂದಿರುವ ಸಿಮ್ ಕಾರ್ಡ್ ಮೊದಲ SIM ಸ್ಲಾಟ್ ಅಲ್ಲೇ ಇರಲಿ. ನಂತರ ಈ ಸೆಟ್ಟಿಂಗ್ ಮಾಡಿ Settings > Network & Internet > Mobile Network > Select your Telecom with 4G/3G ಒಮ್ಮೆ ನಿಮ್ಮ ಟೆಲಿಕಾಂ ನೆಟ್ವರ್ಕ್ ಆರಿಸಿದ ನಂತರ ಸೇವ್ ಮಾಡಿ ಒಮ್ಮೆ ಸ್ವಿಚ್ ಆಫ್ ಮಾಡಿ ಆನ್ ಮಾಡಿ ಪರಿಹಾರ ಪಡೆಯಬಹುದು.
ನಿಮ್ಮ ಸ್ಮಾರ್ಟ್‌ಫೋನ್‌ನ ಏರ್‌ಪ್ಲೇನ್ ಮೋಡ್ ಅನ್ನು ಆಗಾಗ್ಗೆ ಆನ್ ಮಾಡುವ ಅವಶ್ಯಕತೆಯಿದೆ. ಅದನ್ನು ಆನ್ ಮಾಡುವುದು ನಿಮಗೆ ಅಭ್ಯಾಸವಾಗಿದ್ದರೆ ನೀವು ಈ ಫೀಚರ್ ಅನ್ನು ಸಹ ನೋಡಬಹುದು. ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಲು ಬಳಕೆದಾರರು ಆಗಾಗ್ಗೆ ಮರೆತುಬಿಡುತ್ತಾರೆ. ಆದ್ದರಿಂದ ನಿಮ್ಮ ಮೊಬೈಲ್ ಡೇಟಾ ಆನ್ ಇಟ್ಕೊಂಡೇ ಏರ್‌ಪ್ಲೇನ್ ಮೋಡ್ ಅನ್ನು ಒಮ್ಮೆ ಆನ್ ಆಫ್ ಮಾಡಿ ನಂತರ ಯಾವುದೇ ವಿಡಿಯೋ ಅನ್ನು ಚಲಾಯಿಸಿ ನೋಡಿ.
ಒಮ್ಮೆ ನಿಮ್ಮ ಫೋನ್ ಅಲ್ಲಿ ಡೂ ನಾಟ್ ಡಿಸ್ಟರ್ಬ್ ಅನ್ನು ಪರಿಶೀಲಿಸಿಕೊಳ್ಳಿ ಏಕೆಂದರೆ ಈ ನೆಟ್ವರ್ಕ್ ವಿಭಾಗದಲ್ಲಿ ಈ ಫೀಚರ್ ಭಾರಿ ಪ್ರಯೋಜನಕಾರಿಯಾಗಿರುತ್ತದೆ. ಆದ್ದರಿಂದ ಈ ರೀತಿಯಲ್ಲಿ ಡೂ ನಾಟ್ ಡಿಸ್ಟರ್ಬ್ ಆಯ್ಕೆಯನ್ನು ಒಮ್ಮೆ ಪರಿಶೀಲಿಸಿ. ಕೆಲವೊಮ್ಮೆ ಈ ಫೀಚರ್ ಅನ್ನು ಆನ್ ಮಾಡಲು ಮರೆಯುವುದು ಕೂಡ ಒಂದು ತಪ್ಪಾಗಿರಬಹುದು. ಆದ್ದರಿಂದ ಈ ಸೆಟ್ಟಿಂಗ್ ಅನ್ನು ಸಹ ಒಮ್ಮೆ ಪರಿಶೀಲಿಸಬೇಕು.
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕರೆಗಳನ್ನು ಮಾಡಲು ಸಾಧ್ಯವಾಗದಿದ್ದರೆ ಸ್ಮಾರ್ಟ್‌ಫೋನ್ ಅನ್ನು ರಿಸ್ಟಾರ್ಟ್ ಮಾಡುವುದು. ಒಂದು ಆಯ್ಕೆಯಾಗಿದೆ. ಕೆಲವೊಮ್ಮೆ ಸಾಫ್ಟ್‌ವೇರ್ ದೋಷಗಳು ಕರೆ ಮಾಡುವಲ್ಲಿ ತೊಂದರೆಗಳನ್ನು ಉಂಟುಮಾಡುತ್ತವೆ. ಈ ಸಂದರ್ಭದಲ್ಲಿ ಫೋನ್ ಅನ್ನು ರೀಬೂಟ್ ಮಾಡುವುದು ಸಹ ಒಂದು ಆಯ್ಕೆಯಾಗಿದೆ.
ಕರೆ ಮಾಡಲು ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಪ್ರತಿಯೊಂದು ವಿಧಾನವನ್ನು ಪ್ರಯತ್ನಿಸಿದರೂ ಇನ್ನೂ ಕರೆಗಳನ್ನು ಮಾಡುವಲ್ಲಿ ಸಮಸ್ಯೆಗಳಿದ್ದರೆ ಫ್ಯಾಕ್ಟರಿ ರೀಸೆಟ್ ಮಾಡಲು ನೀವು ಆಯ್ಕೆ ಮಾಡಬಹುದು. ಇದು ಖಂಡಿತವಾಗಿಯೂ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ. ಆದರೆ ಹಾಗೆ ಮಾಡುವುದರಿಂದ ಫೋನ್‌ನಲ್ಲಿರುವ ಎಲ್ಲಾ ಡೇಟಾ ಸಂಪೂರ್ಣವಾಗಿ ಡಿಲೀಟ್ ಆಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ ನಿಮ್ಮ ಎಲ್ಲಾ ಪ್ರಮುಖ ಡೇಟಾವನ್ನು ಮುಂಚಿತವಾಗಿ ಉಳಿಸಲು ಸಲಹೆ ನೀಡಲಾಗುತ್ತದೆ.