Mobile Photography: ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಪ್ರೊಫೆಷನಲ್ ಫೋಟೋಗ್ರಾಫಿ ಮಾಡಲು ಈ 5 ಸೆಟ್ಟಿಂಗ್‌ಗಳು

Mobile Photography: ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಪ್ರೊಫೆಷನಲ್ ಫೋಟೋಗ್ರಾಫಿ ಮಾಡಲು ಈ 5 ಸೆಟ್ಟಿಂಗ್‌ಗಳು
HIGHLIGHTS

Mobile Photography ಬಳಸಿಕೊಂಡು ಜನರು ತಮ್ಮ ಜೀವನದ ಸುಂದರವಾದ ಕ್ಷಣಗಳನ್ನು ಕ್ಲಿಕ್ ಮಾಡಲು ಸದಾ ಕಾಯುತ್ತಿರುತ್ತಾರೆ.

Instagram ಮತ್ತು Facebook ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್‌ ಮಾಡಿ ಹೆಚ್ಚು ಲೈಕ್ ಶೇರ್ ಯಾರಿಗೆ ತಾನೇ ಬೇಡ ಹೇಳಿ

ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಪ್ರೊಫೆಷನಲ್ ಫೋಟೋಗ್ರಾಫಿ (Mobile Photography) ಮಾಡಲು ಈ 5 ಸೆಟ್ಟಿಂಗ್‌ಗಳನ್ನು ತಪ್ಪದೆ ಪ್ರಯತ್ನಿಸಬಹದು.

Mobile Photography: ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ಸುಂದರವಾದ ಕ್ಷಣಗಳನ್ನು ಕ್ಲಿಕ್ ಮಾಡಲು ಅಥವಾ ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ರೆಕಾರ್ಡ್ ಮಾಡಲು ತಮ್ಮ ಸ್ಮಾರ್ಟ್‌ಫೋನ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. Instagram ಮತ್ತು facebook ಸೇರಿದಂತೆ ಹಲವಾರು ಸೋಶಿಯಲ್ ಮೀಡಿಯಾ ಪೋಸ್ಟ್‌ಗಾಗಿ ಅಥವಾ ಗ್ರೂಪ್ ಚಾಟ್‌ಗೆ ಅತ್ಯುತ್ತಮ ಫೋಟೋ ಪ್ರತ್ಯುತ್ತರಕ್ಕಾಗಿ ನೀಡಲು ಅತ್ಯುತ್ತಮವಾದ ಶಾಟ್‌ಗಳನ್ನು ಸೆರೆಹಿಡಿಯಲು ಪ್ರಯತ್ನಿಸುವ ಕ್ಯಾಮರಾ ಟಿಪ್ಸ್ ಮತ್ತು ಟ್ರಿಕ್ಗಳ (Mobile Photography) ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿ ನೀಡಲಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಪ್ರೊಫೆಷನಲ್ ಫೋಟೋಗ್ರಾಫಿ ಮಾಡಲು ಈ 5 ಸೆಟ್ಟಿಂಗ್‌ಗಳನ್ನು ಇಂದೆ ತಪ್ಪದೆ ಆನ್ ಮಾಡಿ ಒಮ್ಮೆ ಪ್ರಯತ್ನಿಸಬಹದು.

ಮೊಬೈಲ್ ಫೋಟೋಗ್ರಫಿ ಮಾಡುವ ಮೊದಲು ಲೆನ್ಸ್ ಸ್ವಚ್ಛಗೊಳಿಸಿ

ಇದೊಂದು ಮೂಲ ಮತ್ತು ಅತಿ ಮುಖ್ಯವಾದ ಅಂಶವಾಗಿರುತ್ತದೆ ಯಾಕೆಂದರೆ ಪ್ರತಿ ಬಾರಿ ನೀವು ಫೋಟೋ ಕ್ಲಿಕ್ ಮಾಡುವಾಗ ಹೆಚ್ಚಾಗಿ ಗಮನಿಸದೆ ಕ್ಲಿಕ್ ಮಾಡುತ್ತೀರಾ ಆದರೆ ನೀವು ತೆಗೆದ ಫೋಟೋವಿನ ಮೇಲೆ ಯಾವುದೇ ಅಡಚಣೆಗಾಳಿದ್ದರೆ ಅದನ್ನು ತೆಗೆಯಲು ಮತ್ತಷ್ಟು ಸಾಹಸ ಪಡಬೇಕಾಗುತ್ತದೆ. ಈ ಮೂಲಕ ಉತ್ತಮ ಸ್ಟ್ಯಾಪ್‌ಗಳನ್ನು ತೆಗೆದುಕೊಳ್ಳಲು ನಿಮ್ಮ ಸ್ಮಾರ್ಟ್‌ಫೋನ್ ಲೆನ್ಸ್ ಯಾವಾಗಲು ಅಚ್ಚುಕಟ್ಟಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಚಿತ್ರವನ್ನು ತೆಗೆದುಕೊಳ್ಳುವ ಮೊದಲು ನೀವು ಯಾವಾಗಲೂ ನಿಮ್ಮ ಫೋನ್‌ನ ಲೆನ್ಸ್ ಅನ್ನು ಒರೆಸಬೇಕು.

Also Read: ಕಂಪನಿಗಳಿಂದ ಬರುವ WhatsApp ಮೆಸೇಜ್‌ಗಳಿಂದ ತಲೆ ಕೆಡುತ್ತಿದ್ದರೆ ಈ ಟ್ರಿಕ್ ಅನುಸರಿಸಿ ಸಾಕು!

How to click professional photos by using your smartphone - Mobile Photography
How to click professional photos by using your smartphone

ನಾವು ಸಾಮಾನ್ಯವಾಗಿ ನಮ್ಮ ಕ್ಯಾಮರಾವನ್ನು ತೆರೆದಾಗ ಮತ್ತು ಅದರ ಬಗ್ಗೆ ಏನನ್ನೂ ಮಾಡುವುದನ್ನು ತಪ್ಪಿಸಿದಾಗ ನಾವು ಮಂಜುಗಡ್ಡೆಯ ಛಾಯೆಯನ್ನು ನೋಡುತ್ತೇವೆ. ಆದರೆ ಇದು ವಾಸ್ತವವಾಗಿ ಲೆನ್ಸ್ ಮೇಲೆ ಬೀಳುವ ತೈಲ ಮತ್ತು ಧೂಳು. ಉತ್ತಮ ಚಿತ್ರಗಳನ್ನು ತೆಗೆದುಕೊಳ್ಳಲು ನಿಮ್ಮ ಸ್ಮಾರ್ಟ್‌ಫೋನ್‌ನ ಲೆನ್ಸ್ ಅನ್ನು ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿ. ಲೆನ್ಸ್ ಅನ್ನು ಸ್ವಚ್ಛಗೊಳಿಸಲು ನಿಮ್ಮ ಬಟ್ಟೆಗಳನ್ನು ಬಳಸುವುದನ್ನು ತಪ್ಪಿಸಲು ಪ್ರಯತ್ನಿಸಿ ಇದು ನಾವೆಲ್ಲರೂ ವಿಪರೀತವಾಗಿ ಮಾಡುವ ಮಾನವ ತಪ್ಪು ಇದು ಮುಂದೆ ಕೆಲವು ಗುರುತುಗಳನ್ನು ಬಿಡಬಹುದು.

ಫೋಟೋದಲ್ಲಿ ಯಾವ ಭಾಗ ಮುಖ್ಯವೆಂದು ಪರಿಗಣಿಸಿ

ಮೊದಲಿಗೆ ನೀವು ಸೆರೆಹಿಡಿಯುವಾಗ ಏನನ್ನು ಗಮನಿಸದೆ ಫೋಟೋ ಕ್ಲಿಕ್ ಮಾಡುವುದು ಹೆಚ್ಚು ಜನರ ಅಭ್ಯಾಸವಾಗಿದೆ. ಆದರೆ ಇನ್ಮೇಲೆ ನೀವು ಸೆರೆಹಿಡಿಯಲಿರುವ ಯಾವುದೇ ವಸ್ತುವಿನಲ್ಲಿ ನಿಮಗೆ ಹೆಚ್ಚಾಗಿ ಮುಖ್ಯವಾಗಿರುವುದರ ಮೇಲೆ ಕೊಂಚ ಗಮನಹರಿಸಿ ಫೋನ್ ಡಿಸ್ಪ್ಲೇಯಲ್ಲಿ ಈ ಭಾಗವನ್ನು ಆಯ್ಕೆ ಮಾಡಿ. ಉದಾಹರಣೆಗೆ ನೀವೊಂದು ಮಗುವಿನ ಫೋಟೋ ತೆಗೆಯುತ್ತಿದ್ದರೆ ಕ್ಯಾಮೆರಾ ಆನ್ ಮಾಡಿ ಪ್ರೋಟ್ರೇಟ್ ಆನ್ ಮಾಡಿ ಮಗುವಿನ ಕಣ್ಣುಗಳ ಮೇಲೆ ಟಚ್ ಮಾಡಿ ಫೋಟೋವನ್ನು ಕ್ಲಿಕ್ ಮಾಡಿ ನೋಡಿ.

How to click professional photos by using your smartphone - Mobile Photography
How to click professional photos by using your smartphone

ನಿಮಗೆ ಅತ್ಯುತ್ತಮವಾದ ಕ್ಲೀನ್ ಮತ್ತು ಶಾರ್ಪ್ ಇಮೇಜ್ ಎದ್ದು ಕಾಣುತ್ತದೆ. ಆದರೆ ನೀವೊಂದು ಗ್ರೂಪ್ ಫೋಟೋ ಕ್ಲಿಕ್ ಮಾಡುತ್ತಿದ್ದರೆ ಫೋನ್ಗಳಿಂದ ಪೋಟ್ರೇಟ್ ಮೋಡ್ ಅಷ್ಟಾಗಿ ಕೆಲಸ ಮಾಡದ ಕಾರಣ ನಾರ್ಮಲ್ ಫೋಟೋ ಮೂಡ್ನಲ್ಲೆ ಕ್ಲಿಕ್ ಮಾಡಬಹುದು ಆದರೆ ಗಮನವಿರಲಿ ಗ್ರೂಪ್ನಲ್ಲಿರುವ ಫೇಸ್ ಮೇಲೆ ಟಚ್ ಮಾಡಿ ಫೋಟೋ ಸೆರೆಹಿಡಿಯಬಹುದು. ಒಂದು ವೇಳೆ ನಿಮ್ಮ ಫೋನ್ ಒಳಗೆ Auto Focus ಅಥವಾ Auto Eye Tracking / Detection ಫೀಚರ್ ಹೊಂದಿದ್ದರೆ ಶಾರ್ಪ್ ಮತ್ತು ಕ್ರೆಜಿ ಫೋಟೋ ಪಡೆಯಬಹುದು.

Mobile Photography ಮಾಡಲು ಲೈಟಿಂಗ್ ಪರಿಸ್ಥಿತಿಯನ್ನು ಹೆಚ್ಚು ಮುಖ್ಯ

ನೀವು ಸೆರೆಹಿಡಿಯಲಿರುವ ಯಾವುದೇ ವಸ್ತುಗಳ ಮೇಲೆ ಲೈಟಿಂಗ್ ಪರಿಸ್ಥಿತಿ ಹೇಗಿದೆ ಎಂಬುದನ್ನು ಗಮನಿಸುವುದು ಬಹಳ ಮುಖ್ಯವಾಗಿದೆ. ಏಕೆಂದರೆ ಹಲವರು ಬಾರಿ ಬೆಳಕಿನ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಗಮನಿಸದೆ ಫೋಟೋ ಕ್ಲಿಕ್ ಮಾಡಿ ಏನೂ ಕಾಣದ ಅಥವಾ ಅರ್ಥಹೀನವಾದ ಇಮೇಜ್ ಅಥವಾ ವಿಡಿಯೋವನ್ನು ಸೆರೆಹಿಡಿದಿರುವುದನ್ನು ನೀವು ಎಂದಾದರೂ ಕಂಡಿರಬಹುದು. ಆದ್ದರಿಂದ ನೀವು ಆ ತಪ್ಪುಗಳನ್ನು ಮಾಡದೇ ಫೋಟೋ ಕ್ಲಿಕ್ ಮಾಡುವಾಗ ನೀವು ಸದಾ ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ.

How to click professional photos by using your smartphone - Mobile Photography
How to click professional photos by using your smartphone

ಏನಪ್ಪಾ ಅಂದ್ರೆ ಆದಷ್ಟು ನೀವು ಹೊರಗಿನ ಬೆಳಗಿನಲ್ಲಿ ಫೋಟೋಗಳನ್ನು ಕ್ಲಿಕ್ ಮಾಡಿ ಇದರೊಂದಿಗೆ ಯಾವ ಕಡೆಯಿಂದ ಸೂರ್ಯನ ಕಿರಣಗಳು ಬರುತ್ತಿವೆಯೋ ಆ ಕಡೆಗೆ ನಿಮ್ಮ ಬೆನ್ನು ಇರಲಿ ನೀವು ಸೆರೆಹಿಡಿಯಲಿರುವ ವಸ್ತುವಿನ ಮುಖ ಈ ಸೂರ್ಯನ ಕಿರಣಗಳಿಗೆ ನೇರವಾಗಿರಲಿ. ಈ ಅಭ್ಯಾಸವನ್ನು ನೈಟ್ ಫೋಟೊಗ್ರಾಫಿಯಲ್ಲೂ ಅನುಸರಿಸಿ ಯಾವ ಕಡೆಯಿಂದ ಲೈಟ್ ಬರುತಿದ್ಯೋ ಆ ಕಡೆ ನೀವು ನಿಂತು ವಸ್ತ್ರುವಿನ ಮೇಲೆ ಲೈಟ್ ಬೀಳುವ ಪರಿಸ್ಥಿಯನ್ನು ಅನುಸರಿಸಿ ಫೋಟೋ ಕ್ಲಿಕ್ ಮಾಡಿ.

Mobile Photography ಪೋರ್ಟ್ರೇಟ್ ಮೋಡ್

ಅನ್ನು ಬಳಸುವುದರಿಂದ ನಿರ್ದಿಷ್ಟ ವಸ್ತುವಿನ ಹೆಚ್ಚಿನದನ್ನು ಪ್ರದರ್ಶಿಸಲು ನಿಮಗೆ ಅನುಮತಿಸುತ್ತದೆ. ನೀವು ಸುಂದರವಾದ ರಸ್ತೆ, ಕಟ್ಟಡ, ಪ್ರಾಣಿಗಳ ಅಥವಾ ಇತರ ಯಾವುದೇ ವಸ್ತುವಿನೊಂದಿಗೆ ನಿಂತು ಚಿತ್ರಗಳನ್ನು ತೆಗೆದುಕೊಳ್ಳಲು ಬಯಸಿದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪೋರ್ಟ್ರೇಟ್‌ ಕ್ಯಾಮೆರಾ ಮೋಡ್ ಅನ್ನು ಉತ್ತಮವಾಗಿ ಬಳಸಬಹುದು. ಇದರಲ್ಲಿ ನೀವು ಸೆರೆ ಹಿಡಿಯುವ ವಸ್ತುವಿನ ಹಿಂಭಾಗದಲ್ಲಿ ಖಾಲಿ ಇದ್ದರೆ ಅತ್ಯುತ್ತಮ ಪೋರ್ಟ್ರೇಟ್ ಇಮೇಜ್ಗಳನ್ನು ಪಡೆಯಬಹುದು.

How to click professional photos by using your smartphone - Mobile Photography
How to click professional photos by using your smartphone

ಹಾಗೆ ಮಾಡುವುದರಿಂದ ವಸ್ತುವು ಕೇಂದ್ರೀಕೃತವಾಗಿರುತ್ತದೆ ಮತ್ತು ಹಿನ್ನೆಲೆಯು ಸರಳವಾಗಿ ಕಳೆದುಹೋಗುತ್ತದೆ ಎಂದು ನೀವು ಖಚಿತವಾಗಿ ಹೇಳಬಹುದು. ಇಂದು ಬಹುಪಾಲು ಸ್ಮಾರ್ಟ್‌ಫೋನ್‌ಗಳು ಮುಂಭಾಗ ಮತ್ತು ಹಿಂಭಾಗದ ಪೋರ್ಟೇಟ್ ಮೋಡ್‌ಗಳನ್ನು ಹೊಂದಿವೆ. ಪೋರ್ಟ್ರೇಟ್ ಮೋಡ್‌ನಲ್ಲಿನ ಫಲಿತಾಂಶಗಳು ಆಗಾಗ್ಗೆ ಜನರನ್ನು ಸೆಳೆಯುತ್ತವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo