BSNL ನಂತರ ಈಗ ಮೈಕ್ರೋಮ್ಯಾಕ್ಸ್ ವೊಡಾಫೋನಿನ ಜೋತೆ ಪಾರ್ಟ್ನರಾಗಿದೆ, ಮತ್ತು ಕೇವಲ 999-ರೂ ನಲ್ಲಿ ಭಾರತ್ 2 ಅಲ್ಟ್ರಾ ಸ್ಮಾರ್ಟ್ಫೋನನ್ನು ಬಿಡುಗಡೆಗೊಳಿಸಲಿದೆ.

BSNL ನಂತರ ಈಗ ಮೈಕ್ರೋಮ್ಯಾಕ್ಸ್ ವೊಡಾಫೋನಿನ ಜೋತೆ ಪಾರ್ಟ್ನರಾಗಿದೆ, ಮತ್ತು ಕೇವಲ 999-ರೂ ನಲ್ಲಿ ಭಾರತ್ 2 ಅಲ್ಟ್ರಾ ಸ್ಮಾರ್ಟ್ಫೋನನ್ನು ಬಿಡುಗಡೆಗೊಳಿಸಲಿದೆ.
HIGHLIGHTS

ಈ ಹೊಸ ಮೈಕ್ರೋಮ್ಯಾಕ್ಸ್ ಭಾರತ್ 2 ಅಲ್ಟ್ರಾ ಸ್ಮಾರ್ಟ್ಫೋನ್ ಅಧಿಕೃತವಾಗಿ ಭಾರತದ ಮಾರುಕಟ್ಟೆಯಲ್ಲಿ ಇದೇ ನವೆಂಬರ್ ಮೊದಲ ವಾರದಲ್ಲಿ ಪ್ರಾರಂಭವಾಗುತ್ತದೆ.

ಭಾರತದ ದೇಶೀಯ ಸ್ಮಾರ್ಟ್ಫೋನ್ ಬ್ರಾಂಡ್ ಆದ ಮೈಕ್ರೋಮ್ಯಾಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಈಗ ಕೆಲ ಆಕ್ರಮಣಕಾರಿಯಾ ಚಲನೆಗಳನ್ನು ಮಾಡುತ್ತಿದೆ. ಏಕೆಂದರೆ ಕಳೆದ ವಾರ ಕೇವಲ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಇದೇ ಕಂಪೆನಿಯು 4G ವೊಲ್ಟೆ ವೈಶಿಷ್ಟ್ಯವನ್ನು ಘೋಷಿಸಿತ್ತು. ಮತ್ತು ಅದೇ ಕಂಪೆನಿ "ಮೈಕ್ರೋಮ್ಯಾಕ್ಸ್ ಭಾರತ್ 2 ಅಲ್ಟ್ರಾ" ಸ್ಮಾರ್ಟ್ಫೋನನ್ನು ವೊಡಾಫೋನ್ ಸಹಭಾಗಿತ್ವದಲ್ಲಿ ಪ್ರಕಟಿಸಿದೆ.

ಭಾರತಿ ಏರ್ಟೆಲ್ Karbonn A40 ಭಾರತೀಯ ಸ್ಮಾರ್ಟ್ಫೋನ್ ಅನ್ನು ಕಾರ್ಬನ್, ವೊಡಾಫೋನ್ ಮತ್ತು ಐಡಿಯ ಸೆಲ್ಯುಲಾರ್ ಸಹಯೋಗದೊಂದಿಗೆ ದೇಶದಲ್ಲಿ ಕೈಗೆಟುಕುವ 4G ಸ್ಮಾರ್ಟ್ಫೋನ್ಗಳನ್ನು ಪ್ರಾರಂಭಿಸಲು ವದಂತಿಗಳಿದ್ದವು ಮತ್ತು ಪಾಲುದಾರಿಕೆಯ ಮೊದಲ ಫಲಿತಾಂಶ ಇಲ್ಲಿದೆ. ಹಾಗಾಗಿ, ಮೈಕ್ರೋಮ್ಯಾಕ್ಸ್ ಮತ್ತು ವೊಡಾಫೋನ್ಗಳು ಕೈಯಲ್ಲಿ ಸೇರಿಕೊಂಡು ಮೈಕ್ರೊಮ್ಯಾಕ್ಸ್ ಭಾರತ್ 2 ಅಲ್ಟ್ರಾ ಸ್ಮಾರ್ಟ್ಫೋನ್ ಅನ್ನು ರೂ. 999.

ಇಂದು ಮೈಕ್ರೊಮ್ಯಾಕ್ಸ್ ಮತ್ತು ವೊಡಾಫೋನ್ ಈ ಪ್ರಸ್ತಾಪ ಪೂರ್ತಿಯಾಗಿ ಏರ್ಟೆಲ್ ಮತ್ತು ಕಾರ್ಬನ್ ಸ್ಮಾರ್ಟ್ಫೋನ್ಗಳ ಒಪ್ಪಂದವನ್ನು ಹೋಲುತ್ತದೆ. ಏಕೆಂದರೆ ಈ ಫೋನ್ಗಳು  ಮೂಲತಃ ರೂ. 2899/- ರೂಗಳಾಗಿದ್ದು ಈ ಸಾಧನವನ್ನು ಖರೀದಿಸುವಾಗ ಪಾವತಿಸಬೇಕಾದ ಅದೇ ಮೊತ್ತವಾಗಿದೆ. ಇದನ್ನು ನೀವು ಖರೀದಿ ಮಾಡಿದ ನಂತರ ವೊಡಾಫೋನ್ ಸಿಮ್ ಕಾರ್ಡ್ ಅನ್ನು ಅಳವಡಿಸಿ ಕೇವಲ 150/- ಯಾ ರಿಚಾರ್ಜ್ ಅನ್ನು ಮಾಡಬೇಕಾಗುತ್ತದೆ. ಇದರ ನೈಜ ಪ್ರಯೋಜನಗಳನ್ನು ಇನ್ನೂ ವೊಡಾಫೋನ್ ಬಹಿರಂಗಪಡಿಸಬೇಕಾಗಿಲ್ಲ. ನಮ್ಮ ಮೂಲಗಳ ಪ್ರಕಾರ ವೊಡಾಫೋನ್ ಅತಿ ಶೀಘ್ರದಲ್ಲೇ ಈ ಪ್ಲಾನನ್ನು ನೀಡಲಿದೆ.

ಈಗ ವೋಡಫೋನಿನ ಗ್ರಾಹಕರು ಪ್ರತಿ ತಿಂಗಳಿಗೆ ಕೇವಲ 150 ರೂನಂತೆ ಸುಮಾರು 36 ತಿಂಗಳಿಗೆ ಮರುಪಾವತಿ ಮಾಡಿದರೆ 1,900 ರೂವನ್ನು ಮರುಪಾವತಿಯನ್ನಾಗಿ ಪಡೆಯುವಿರಿ. ಮತ್ತು ಈ ಯೋಜನೆಯನ್ನು ಎರಡು ಭಾಗಗಳಲ್ಲಿ ನೋಡಬವುದಾಗಿದೆ 18 ತಿಂಗಳನ್ನು ನೀವು ಪೂರ್ಣಗೊಳಿಸಿದ ನಂತರ 900/- ಮತ್ತು 36 ತಿಂಗಳನ್ನು ನೀವು ಪೂರ್ಣಗೊಳಿಸಿದ ನಂತರ 1,000 ರೂ ನಂತೆ ನಿಮ್ಮ ಪೂರ್ತಿ 1,900/- ರೂ ನಿಮಗೆ ದೊರೆಯಲಿದೆ. ಮತ್ತು ವೊಡಾಫೋನಿನ ಗ್ರಾಹಕರು ಬೇಕಾದರೆ ಈ ಮೊತ್ತವನ್ನು ತಮ್ಮ m-pesa ಖಾತೆಗೂ ಸಹ ಕ್ಯಾಶ್ ಬ್ಯಾಕ್ ಆಗಿ ಅದನ್ನು ಕ್ರೆಡಿಟ್ ಮಾಡಿಕೊಳ್ಳಬವುದು.

ಇದು 4 ಇಂಚಿನ WVGA ಯಾ ಡಿಸ್ಪ್ಲೇಯನ್ನು ಹೊಂದಿದೆ. ಮತ್ತು ಇದರ ಹೆಡ್ ಅಡಿಯಲ್ಲಿ 1.3GHz ನಲ್ಲಿ ಸ್ಪ್ರೆಡ್ಟ್ರಾಮ್ ಕ್ವಾಡ್-ಕೋರ್ ಪ್ರೊಸೆಸರ್ ಇದೆ. ಮತ್ತು 512MB ಯಾ RAM ಮತ್ತು 4GB ಇಂಟರ್ನಲ್ ಸ್ಟೋರೇಜನ್ನು ಹೊಂದಿದೆ. ಅಲ್ಲದೆ ಇದು ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ನಿಮ್ಮ ಈ ಫೋನನ್ನು 32GB ಯಾ ವರೆಗೆ ವಿಸ್ತರಿಸಬಹುದಾಗಿದೆ. ಇದು 2 MP ಬ್ಯಾಕ್ ಫ್ಲಾಶ್ ಮತ್ತು 0.3MP ಯಾ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಡ್ಯುಯಲ್-ಸಿಮ್ ಬೆಂಬಲದೊಂದಿಗೆ 4G, ವೋಲ್ಟೆ, ವೈ-ಫೈ, ಬ್ಲೂಟೂತ್ ಮತ್ತು GPS ಸೇರಿದಂತೆ ಸ್ಮಾರ್ಟ್ಫೋನ್ಗಳಲ್ಲಿನ ಮುಖ್ಯ ಸಂಪರ್ಕವನ್ನು ಆಯ್ದುಕೊಂಡಿದೆ.

 

ಸೋರ್ಸ್

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo