Mera Ration 2.0 Update 2025: ಭಾರತದಲ್ಲಿ ಈ ಪಡಿತರ ಚೀಟಿಯು (Ration Card) ಸರ್ಕಾರದಿಂದ ವಿತರಿಸಲಾಗಿರುವ ಪ್ರಮುಖ ಗುರುತಿನ ದಾಖಲೆಗಳಲ್ಲಿ ಒಂದಾಗಿದೆ. ಈಗ ಹೊಸ ವರ್ಷದಿಂದ ರೇಷನ್ ಖರೀದಿಸಲು ಸಾಲುಗಳಲ್ಲಿ ನಿಲ್ಲುವ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯನ್ನು ಪರಿಚಯಿಸಿದ್ದು ಇದು 1ನೇ ಜನವರಿ 2025 ರಿಂದ ಅನ್ವಯವಾಗಲಿದೆ. ಸರ್ಕಾರ ಪಡಿತರ ಚೀಟಿಯಲ್ಲಿ (Ration Card) ಅದ್ದೂರಿಯ ಅಪ್ಡೇಟ್ ಮಾಡಿದೆ. ಇನ್ಮುಂದೆ ಮೇರಾ ರೇಷನ್ ಕಾರ್ಡ್ (Mera Ration 2.0) ಯೋಜನೆಯಡಿಯಲ್ಲಿ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ರೇಷನ್ ಖರೀದಿಸಬಹುದು. ಹಾಗಾದ್ರೆ ಏನಿದು ಹೊಸ ನಿಯಮ ಮತ್ತು ಇದರ ಸಂಪೂರ್ಣ ಮಾಹಿತಿಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಬಹುದು.
ಭಾರತ ಸರ್ಕಾರದಡಿಯಲ್ಲಿ ಮೇರಾ ರೇಷನ್ ಕಾರ್ಡ್ (Mera Ration 2.0) ಪಡಿತರ ಚೀಟಿ ವ್ಯವಸ್ಥೆಯನ್ನು ಆಧುನೀಕರಿಸಲು ಮತ್ತು ಪರಿಣಾಮಕಾರಿಯಾಗಿಸಲು ಭಾರತ ಸರ್ಕಾರವು ಪ್ರಾರಂಭಿಸಿದ ಇತ್ತೀಚಿನ ಡಿಜಿಟಲ್ ಉಪಕ್ರಮವಾಗಿದೆ. ಈ ಯೋಜನೆಯನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ ನಡೆಸಲಾಗುತ್ತಿದೆ.
Also Read: ಹೊಸ ವರ್ಷದಲ್ಲೂ ಉಚಿತ Amazon Prime ನೀಡುವ Jio, Airtel, Vi ರಿಚಾರ್ಜ್ ಯೋಜನೆಗಳು
ಈ ಪಡಿತರ ವಿತರಕರಿಂದ ವಿವಿಧ ವಸ್ತುಗಳನ್ನು ಸಂಗ್ರಹಿಸಲು ನೀವು ಇನ್ನು ಮುಂದೆ ನಿಮ್ಮ ಪಡಿತರ ಚೀಟಿಯನ್ನು (Ration Card) ತೋರಿಸುವ ಅಗತ್ಯವಿಲ್ಲ. ಬದಲಿಗೆ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಪಡೆಯಬಹುದು. ಅಲ್ಲದೆ ಸಮಯ ಕಳೆಯುವುದರೊಂದಿಗೆ ಈ ಪಡಿತರ ಚೀಟಿಗಳ ಪ್ರಾಮುಖ್ಯತೆ ಸಹ ಕಡಿಮೆಯಾಗುತ್ತಿರುದು ಗಮನಿಸಬಹುದು.
ವೇಗವಾಗಿ ಬೆಳೆಯುತ್ತಿರುವ ಟೆಕ್ನಾಲಜಿಯಡಿಯಲ್ಲಿ ಸರ್ಕಾರ ಸಹ ಆಧುನೀಕರಣದೊಂದಿಗೆ ಹೆಜ್ಜೆ ಹಾಕುವುದರೊಂದಿಗೆ ಜನ ಸಾಮನ್ಯರಿಗೆ ಅತಿ ಹೆಚ್ಚಾಗಿ ಅಗತ್ಯವಿರುವ ಸೌಲಭ್ಯಗಳೊಂದಿಗೆ ಟೆಕ್ನಾಲಜಿಯನ್ನು ಸೇರಿಸಿ ಬಳಕೆಯನ್ನು ಮತ್ತಷ್ಟು ಸರಳ ಮತ್ತು ಸುಲಭಗೊಳಿಸಿದೆ. ಈ ದಿನಗಳಲ್ಲಿ ಗ್ರಾಮೀಣ ಮತ್ತು ಹಳ್ಳಿ ಪ್ರದೇಶಗಳಲ್ಲೂ ಹೆಚ್ಚಿನ ಜನರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವುದು ಎಮ್ಮೆಯ ವಿಷಯವಾಗಿದೆ.
ಈ ಸ್ಮಾರ್ಟ್‌ಫೋನ್‌ಗಳಲ್ಲಿ ವಿಶೇಷ ಮೊಬೈಲ್ ಅಪ್ಲಿಕೇಶನ್ನೊಂದಿಗೆ ಪಡಿತರ ವಿತರಕರಿಂದ ವಿವಿಧ ವಸ್ತುಗಳನ್ನು ಪಡೆಯಬಹುದು. ಪಡಿತರ ಗ್ರಾಹಕರ ಅನುಕೂಲಕ್ಕಾಗಿ ಮೇರಾ ರೇಷನ್ 2.0 ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗುತ್ತಿದೆ. ಈ ಅಪ್ಲಿಕೇಶನ್ ಮೂಲಕ ಪಡಿತರ ವಿತರಕರಿಂದ ವಿವಿಧ ವಸ್ತುಗಳನ್ನು ಸಂಗ್ರಹಿಸಬಹುದು. ನೀವು ಪಡಿತರ ಚೀಟಿಯನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಕಾಗಿಲ್ಲ.
ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಮೇರಾ ರೇಷನ್ 2.0 ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು ನಿಮ್ಮ ಆಧಾರ್ (Aadhaar) ಅನ್ನು ಪರಿಶೀಲಿಸಿ. ನಂತರ ಈ ಅಪ್ಲಿಕೇಶನ್ ಸಕ್ರಿಯವಾಗುತ್ತದೆ. ಮೇರಾ ರೇಷನ್ 2.0 (Mera Ration 2.0) ಅಪ್ಲಿಕೇಶನ್‌ನಲ್ಲಿ ನೀವು ಪಡಿತರ ಚೀಟಿ ಮಾಹಿತಿಯನ್ನು ಹೊಂದಿದ್ದರೆ ನಿಮ್ಮ ಸ್ಮಾರ್ಟ್ಫೋನ್ ಅನ್ನು ಪಡಿತರ ವಿತರಕರಿಗೆ ಕೊಂಡೊಯ್ಯಿರಿ.
Also Read: OTP Tips: ನಿಮ್ಮ ಫೋನಿಗೆ ಬರುವ OTP ಮೆಸೇಜ್‌ಗಳು 24 ಗಂಟೆಗಳ ನಂತರ Auto Delete ಆಗಲು ಈ ಸೆಟ್ಟಿಂಗ್ ಮಾಡಿ!
ಈ ಅಪ್ಲಿಕೇಶನ್ ಸಹಾಯದಿಂದ ಪಡಿತರ ವಿತರಕರು ಗ್ರಾಹಕರ ಮಾಹಿತಿಯನ್ನು ಪರಿಶೀಲಿಸಬಹುದು ಮತ್ತು ವಿವಿಧ ವಸ್ತುಗಳನ್ನು ನೀಡಬಹುದು. ಅಲ್ಲದೆ ಈ ಅಪ್ಲಿಕೇಶನ್ ಬಳಸಿಕೊಂಡು ರಿಯಲ್-ಟೈಮ್ ಟ್ರ್ಯಾಕಿಂಗ್ ಮಾಡುವುದರೊಂದಿಗೆ ಪಡಿತರ ಲಭ್ಯತೆ ಮತ್ತು ವಿತರಣೆಯನ್ನು ನೈಜ ಸಮಯದಲ್ಲಿ ಟ್ರ್ಯಾಕ್ ಮಾಡಬಹುದು. ಅಲ್ಲದೆ ಯಾವುದೇ ಕುಂದುಕೊರತೆ ಬಗ್ಗೆ ಈ ಅಪ್ಲಿಕೇಶನ್ ಮೂಲಕ ದೂರು ಸಲ್ಲಿಸಲು ಮತ್ತು ಅದರ ಸ್ಥಿತಿಯನ್ನು ತಿಳಿದುಕೊಳ್ಳಲು ಸೌಲಭ್ಯವನ್ನು ಸಹ ನೀಡುತ್ತದೆ.