ಈ ಪ್ರಕ್ರಿಯೆ ಕಂಡು ಉಳಿದ ಹಲವಾರು ಸಣ್ಣ ಪುಟ್ಟ ಮತ್ತು ಕೆಲವು ಅನುಭವಿಗಳಿಗೆ ನುಗ್ಗಲಾಗದ ಕೈ ತುತ್ತಾಗಿತ್ತು.
ಮಲಯಾಳಂ ಚಿತ್ರವೊಂದರ ಹಾಡಿನಲ್ಲಿ ಹುಬ್ಬು ಹಾರಿಸುತ್ತ ಚಮತ್ಕಾರ ಸೃಷ್ಟಿಸಿದ ಪ್ರಿಯಾ ವಾರಿಯರ್ 'ಒರು ಅಧಾರ್ ಲವ್' ಚಿತ್ರದ ಮತ್ತೊಂದು ಹಾಡು ಮೊನ್ನೆ ಬಿಡುಗಡೆಯಾಗಿದೆ. ಇದಕ್ಕೂ ಮುನ್ನ ಒಂದೇ ಹಾಡಿನಲ್ಲಿ ದೇಶ ವಿದೇಶಗಳಲ್ಲಿ ಅದ್ದೂರಿಯಾಗಿ ಸದ್ದು ಮಾಡಿ ಪ್ರಸಿದ್ದಿ ಪಡೆದಿರುವ ಈ ಕಣ್ಮಣಿಗೆ ಸಿಕ್ಕ ಭಾರಿ ಜನಪ್ರಿಯತೆ ನಿಜಕ್ಕೂ ಸಿನಿಮಾ ಮತ್ತು ಮೀಡಿಯಾ ವಲಯದ ಅದೆಷ್ಟು ಜನರ ಹೊಟ್ಟೆಯಲ್ಲಿ ಕೆಚ್ಚು ಹಾದು ಹೋಗಿತ್ತು… ಈ ಪ್ರಕ್ರಿಯೆ ಕಂಡು ಉಳಿದ ಹಲವಾರು ಸಣ್ಣ ಪುಟ್ಟ ಮತ್ತು ಕೆಲವು ಅನುಭವಿಗಳಿಗೆ ನುಗ್ಗಲಾಗದ ಕೈ ತುತ್ತಾಗಿತ್ತು.
ಕೇವಲ ತನ್ನ ಹುಬ್ಬು ಹಾರಿಸೋ ವಿಡಿಯೋ ಮೂಲಕ ದೇಶಾದ್ಯಂತ ಪಡ್ಡೆಗಳನ್ನು ರೊಚ್ಚಿಗೆಬ್ಬಿಸಿ ಏಕಾಏಕಿ ಸ್ಟಾರ್ ಆದವಳು ಈ ಪ್ರಿಯಾ ವಾರಿಯರ್. ಅದೇ ರೀತಿಯಲ್ಲಿ ಒಂದೇ ದಿನದಲ್ಲಿ ಭಾರಿ ಪ್ರಚಾರ ಪಡೆದು ನ್ಯಾಷನಲ್ ಕ್ರಶ್ ಆಗಿ ಬಿಟ್ಟಳು. ಅದರಲ್ಲು ಮೊದಲ ಹಾಡಿನ ನಂತರ ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ನಲ್ಲಿ ಭಾರಿ ಸದ್ದು ಮಾಡಿದಳು. ಅಂದ್ರೆ ಕೇವಲ 20 ಸೆಕೆಂಡ್ಗಳ ವಿಡಿಯೋದಲ್ಲಿ ಇಡೀ ದೇಶ ವಿದೇಶವನ್ನೇ ತನ್ನತ್ತ ಸೆಳೆದಿದ್ದಳು. ಆದರೆ ಇಂದು ಈಕೆಗೆ ಬಹು ದೊಡ್ಡ ಶಾಕ್ ಮುಂದೆ ಬಂದಿದೆ.
ಏನಪ್ಪಾ ಆ ಶಾಕ್ ಅಂದ್ರೆ 'ಒರು ಅಧಾರ್ ಲವ್' ಚಿತ್ರದ ಮತ್ತೊಂದು ಹಾಡು ಮೊನ್ನೆ ಬಿಡುಗಡೆಯಾಗಿದೆ. ಎರಡನೇ ಹಾಡು ಬಿಡುಗಡೆಯಾಗಿದ್ದು ಸಿಹಿಸುದ್ದೀಯೆ ಸರಿ ಆದರೆ ಈ ಹಾಡಿಗೆ ಸಿಕ್ಕಿರುವ ನೆಗೆಟಿವ್ ರೆಸ್ಪೋನ್ಸ್ (ನಕಾರಾತ್ಮಕ ಪ್ರತಿಕ್ರಿಯೆ) ಕಂಡು ಒಟ್ಟು ಚಿತ್ರತಂಡವೇ ಶಾಕ್ ಆಗಿ ತಲೆ ಕೆರೆಯುವ ಅವಸ್ಥೆಯಲ್ಲಿದೆ. ಯಾವುದಪ್ಪಾ ಈ ಹಾಡು ಅಂದ್ರೆ 'ಫ್ರೆಕ್ ಪೆನ್ನೇ' ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆಯಾದಲ್ಲಿಂದ ಇಂದಿನ ವರೆಗೆ 14 ಲಕ್ಷ ವೀಕ್ಷಕರು ನೋಡಿದ್ದರೆ…ಆದರೆ ಈ ಹಾಡನ್ನು ನೋಡಿದ ಪ್ರೇಕ್ಷಕರು ಬರೋಬ್ಬರಿ 2.31 ಲಕ್ಷ ಜನರು 'Dislikes' ನೀಡಿದ್ದಾರೆ. ಅಂದ್ರೆ ಕೇವಲ 29 ಸಾವಿರ ಜನರು ಮಾತ್ರ 'Likes' ನೀಡಿದ್ದಾರೆ.
ಇದರರ್ಥ ಈವರೆಗೆ ಭಾರತದ ಯಾವುದೇ ಯೂಟ್ಯೂಬ್ ವೀಡಿಯೋ ಇಷ್ಟು ಕಳಪೆ ಮತ್ತು ನೆಗೆಟಿವ್ ರೆಸ್ಪೋನ್ಸ್ ಪಡೆದಿಲ್ಲ. ಈ ರೀತಿಯ ಕಳಪೆ ಮತ್ತು ನೆಗೆಟಿವ್ ರೆಸ್ಪೋನ್ಸ್ ಪಡೆದು ಭಾರತದ ಇತಿಹಾಸದಲ್ಲೇ ಮೊದಲ ವೀಡಿಯೋವಾಗಿದೆ. ಇದನ್ನು ಹೊರತೆಪಡಿಸಿ ಬೇರೆ ಯಾವುದೇ ವಿಡಿಯೋ ಈ ರೀತಿಯ ಉದಾರಣೆಯಾಗಿಲ್ಲ. ನೀವೇ ಯೋಚಿಸಿ ಈ ಹಾಡಿನಲ್ಲಿ ಕಣ್ಣೊಡೆದ ಈ ಚಲುವೆಯನ್ನು ಯಾವ ಮಟ್ಟಕ್ಕೆ ತಿರಸ್ಕರಿಸಿದ್ದಾರೆ. ಈ ಹಾಡು ಅಪ್ಲೋಡ್ ಆದ ಕೆಲವೇ ನಿಮಿಷಗಳಲ್ಲಿ ಬರತೊಡಗಿದ ನೆಗೆಟಿವ್ ರೆಸ್ಪೋನ್ಸ್ (Dislikes) ನೋಡಿ ಚಿತ್ರತಂಡ ಏನ್ ಮಾಡಬೇಕು ಅಂತ ದಾರಿ ತೋರದೆ ದವಡೆಗೆ ಕೈ ಕೊಟ್ಟು ಕುಳಿತಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile