ಮತ್ತೆ ಲಾಕ್‌ಡೌನ್‌ ಆಗಲಿದೆಯೇ ಈ ರಾಜ್ಯ? ಪರೋಕ್ಷವಾಗಿ ಸುಳಿವು ನೀಡಿದ ಸಚಿವರು!

ಮತ್ತೆ ಲಾಕ್‌ಡೌನ್‌ ಆಗಲಿದೆಯೇ ಈ ರಾಜ್ಯ? ಪರೋಕ್ಷವಾಗಿ ಸುಳಿವು ನೀಡಿದ ಸಚಿವರು!
HIGHLIGHTS

ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಸೋಂಕು ಜಾಸ್ತಿಯಾಗುತ್ತಲೇ ಇವೆ.

ವಿಮಾನಯಾನ ಸಂಸ್ಥೆಗಳ ಮೇಲಿನ ನಿರ್ಬಂಧಗಳು ಇನ್ನೂ ಜಾರಿಯಲ್ಲಿವೆ.

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿದರೆ ಮತ್ತೊಮ್ಮೆ ನಿರ್ಬಂಧಗಳನ್ನು ಹಾಕಬೇಕಾಗುತ್ತದೆ.

ಹೌದು ಮತ್ತೆ ಲಾಕ್‌ಡೌನ್‌ ಆಗಲಿದೆಯೇ ಈ ರಾಜ್ಯ? ಪರೋಕ್ಷವಾಗಿ ಸುಳಿವು ನೀಡಿದ ಸಚಿವರು! ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಸೋಂಕು ಜಾಸ್ತಿಯಾಗುತ್ತಲೇ ಇವೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಸಾವಿರಕ್ಕೂ ಹೆಚ್ಚು ಏರಿಕೆಯಾಗುತ್ತಲೇ ಇದ್ದರೆ ರಾಜ್ಯವು ಮತ್ತೊಂದು ಲಾಕ್‌ಡೌನ್ ಅನ್ನು ವಿಧಿಸಲಿದೆ ಎಂದು ಮುಂಬೈ ನಗರ ಸಚಿವ ಅಸ್ಲಂ ಶೇಖ್ ಹೇಳಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿದರೆ ಮತ್ತೊಮ್ಮೆ ನಿರ್ಬಂಧಗಳನ್ನು ಹಾಕಬೇಕಾಗುತ್ತದೆ. 

ವಿಮಾನಯಾನ ಸಂಸ್ಥೆಗಳ ಮೇಲಿನ ನಿರ್ಬಂಧಗಳು ಇನ್ನೂ ಜಾರಿಯಲ್ಲಿವೆ. ಜನರು ಕಾಳಜಿ ವಹಿಸದಿದ್ದರೆ ನಿರ್ಬಂಧಗಳ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಅಸ್ಲಾಮ್ ಶೇಖ್ ಹೇಳಿದ್ದಾರೆಂದು ಫ್ರೀ ಪ್ರೆಸ್ ಜರ್ನಲ್ ಉಲ್ಲೇಖಿಸಿದೆ. ಇನ್ನು ಉಳಿದ 30$ ಪ್ರತಿಶತ ಜನರು ಇನ್ನೂ ಎರಡನೇ ಡೋಸ್ ಲಸಿಕೆ ಪಡೆದಿಲ್ಲ ಎನ್ನಲಾಗಿದೆ.

ಕೋವಿಡ್ ಪ್ರಕರಣಗಳ ಬಗ್ಗೆ ಬಿಎಂಸಿ ಎಚ್ಚರಿಕೆ

ಮತ್ತೊಂದೆಡೆ ಮುಂಬರುವ ಕೋವಿಡ್ ನಾಲ್ಕನೇ ಅಲೆ  ಬಗ್ಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಎಚ್ಚರಿಕೆ ನೀಡಿದೆ. ಹೆಚ್ಚುತ್ತಿರುವ COVID ಪ್ರಕರಣಗಳೊಂದಿಗೆ ಮುಂಬೈನಲ್ಲಿ ಕನಿಷ್ಠ ಸೆಪ್ಟೆಂಬರ್‌ವರೆಗೆ ಎಲ್ಲಾ ಸೌಲಭ್ಯಗಳನ್ನು ಇರಿಸಿಕೊಳ್ಳುವಂತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಮಹಾರಾಷ್ಟ್ರದ 100 ಮಿಲಿಯನ್ ಜನರಲ್ಲಿ ವ್ಯಾಕ್ಸಿನೇಷನ್‌ಗೆ ಅರ್ಹರಾದ ಕೇವಲ 70% ಪ್ರತಿಶತ ಜನರು ಮಾತ್ರ ಇದುವರೆಗೆ ಲಸಿಕೆಗಳ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. 

ಓಮೈಕ್ರಾನ್ ರೂಪಾಂತರಿ ಪತ್ತೆ

ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ ನಾಲ್ಕು ಮಂದಿಗೆ ಓಮೈಕ್ರಾನ್‌ ರೂಪಾಂತರ ತಳಿ ಬಿ.ಎ. 4 ಮತ್ತು ಇದರ ಉಪತಳಿ ಬಿ.ಎ.5 ಸೋಂಕಿನ ಮೂರು ಪ್ರಕರಣಗಳು ದೃಢಪಟ್ಟಿವೆ. ಈ ಬಗ್ಗೆ ಮಹಾರಾಷ್ಟ್ರ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪುಣೆಯಿಂದ ಬಂದವರಲ್ಲಿ ಸೋಂಕು ಪತ್ತೆ

ಪುಣೆಯಿಂದ ಬಂದಿದ್ದ ಏಳು ರೋಗಿಗಳಲ್ಲಿ ಓಮೈಕ್ರಾನ್‌ ಉಪ ತಳಿಗಳ ಸೋಂಕು ಪತ್ತೆಯಾಗಿದೆ. ಇವರ ಇಡೀ ಜಿನೋಮ್ ಸೀಕ್ವೆನ್ಸ್‌ ಪರೀಕ್ಷೆಯನ್ನು ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್‌ನಲ್ಲಿ ನಡೆಸಲಾಗಿದ್ದು ಫರಿದಾಬಾದ್‌ನಲ್ಲಿರುವ ಭಾರತೀಯ ಜೈವಿಕ ದತ್ತಾಂಶ ಕೇಂದ್ರದ ಸಂಶೋಧನೆ ಸೋಂಕು ಇರುವುದನ್ನು ದೃಢಪಡಿಸಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo