ಭಾರತದಲ್ಲಿ ಈ ಭಾರಿಯ ರಾಖಿ ಮತ್ತು ಓಣಂ ಹಬ್ಬದ ಪ್ರಯುಕ್ತ ದೇಶದ ಸಮಸ್ತ ಜನರಿಗೆ ಕೇಂದ್ರ ಸರ್ಕಾರ ಹೊಸ ಕೊಡುಗೆಯನ್ನು ನೀಡಿದೆ. ಗೃಹ ಬಳಕೆಗಾಗಿ ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು ಎಲ್ಲಾ ಬಳಕೆದಾರರಿಗೆ ಪ್ರತಿ ಸಿಲಿಂಡರ್‌ಗೆ 200 ರೂಪಾಯಿಗಳಷ್ಟು ಇಳಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಂಗಳವಾರ ಪ್ರಕಟಿಸಿದ್ದಾರೆ. ಇದು 14.2 ಕೆಜಿ ಅಡುಗೆ ಅನಿಲ ಸಿಲಿಂಡರ್‌ನ ಬೆಲೆಯಲ್ಲಿ ಶೇಕಡಾ 18% ರಷ್ಟು ಇಳಿಕೆಯಾಗಿದೆ. ಗೃಹ ಬಳಕೆಗಾಗಿ ಪ್ರತಿಯೊಬ್ಬ ಬಳಕೆದಾರರಿಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 200 ರೂಪಾಯಿಗಳಷ್ಟು ಇಳಿಸಲಾಗಿದೆ.
ಇದನ್ನೂ ಓದಿ: 150 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು 2GB ಡೇಟಾ ನೀಡುವ BSNL ಪ್ಲಾನ್ ಬೆಲೆ ಎಷ್ಟು?
ಈಗಾಗಲೇ ಹೊಸ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಎಲ್ಲ ಕಡೆ ಅನ್ವಯವಾಗಿದ್ದು ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ಈಗ ರೂ 1,103 ರಿಂದ ರೂ 903 ಕ್ಕೆ ಇಳಿಯಲಿದೆ. ಅದೇ ರೀತಿ, ಮುಂಬೈನಲ್ಲಿ ಪ್ರಸ್ತುತ ರೂ 1,102.50 ಇರುವ ಎಲ್‌ಪಿಜಿ ಸಿಲಿಂಡರ್ ಬುಧವಾರದಿಂದ ರೂ 902.50 ಆಗಲಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ದ್ವಿಗುಣ ಲಾಭ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 200 ರೂಪಾಯಿ ಇಳಿಕೆಯಾಗಿದ್ದು ಸರ್ಕಾರದ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಈಗ ಪ್ರತಿ ಸಿಲಿಂಡರ್‌ಗೆ 400 ರೂಪಾಯಿ ಇಳಿಕೆಯಾಗಿದೆ. ಈಗ ನಿಮ್ಮ ಗ್ಯಾಸ್ ಖಾಲಿಯಾಗಿದ್ದರೆ ಬುಕ್ ಮಾಡುವ ಮೊದಲು ನಿಮ್ಮ ಗ್ಯಾಸ್ ಏಜನ್ಸಿಯಲ್ಲೊಂಮ್ಮೆ ಕರೆ ಮಾಡಿ ಹೊಸ ಬೆಲೆಯನ್ನು ತಿಳಿಯುವುದು ಉತ್ತಮ.
ಇದನ್ನೂ ಓದಿ: Jio AirFiber: ಗಣೇಶ ಚತುರ್ಥಿಯಂದೇ ಜಿಯೋ ಏರ್ ಫೈಬರ್ ಬಿಡುಗಡೆ! ಬೆಲೆ ಮತ್ತು ಸ್ಪೀಡ್ ಎಷ್ಟು?
ಹೌದು ಏಕೆಂದರೆ ಈಗಾಗಲೇ 200 ರೂಗಳ ಸಬ್ಸಿಡಿ ಪಡೆಯುತ್ತಿರುವವರಿಗೆ ಮತ್ತೊಂದು ಲಡ್ಡು ಬಂದು ಬಾಯಿಗೆ ಬಿದ್ದಂತಾಗಿದೆ. ಇದರರ್ಥ ಹೆಚ್ಚುವರಿ ಸಬ್ಸಿಡಿ ನಂತರ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ ದೆಹಲಿಯಲ್ಲಿ 703 ರೂ. ಮತ್ತು ಉಜ್ವಲ ಫಲಾನುಭವಿಗಳಿಗೆ ಮುಂಬೈನಲ್ಲಿ 702.50 ರೂ. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ಈಗಾಗಲೇ 200 ರೂಪಾಯಿ ಸಬ್ಸಿಡಿ ಪಡೆಯುತ್ತಿದ್ದಾರೆ. ಆದರೆ ದರ ಇಳಿಕೆಯಿಂದ ಅವರಿಗೂ ಲಾಭವಾಗಲಿದೆ. ಅಂದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ದರ ಕಡಿತವು ಪ್ರತಿ ಸಿಲಿಂಡರ್‌ಗೆ 400 ರೂಗಳನ್ನು ಪಡೆಯುತ್ತಾರೆ.
ಪಿಎಂಯುವೈ ಅಡಿಯಲ್ಲಿ 75 ಲಕ್ಷ ಹೊಸ ಗ್ಯಾಸ್ ಕನೆಕ್ಷನ್‌ಗಳನ್ನು ಮಹಿಳೆಯಾರಿಗಾಗಿ ಉಚಿತವಾಗಿ ನೀಡುತ್ತಿದ್ದಾರೆ. ಅಲ್ಲದೆ ಓಣಂ ಮತ್ತು ರಕ್ಷಾ ಬಂಧನದ ಮುನ್ನಾದಿನದಂದು ಪ್ರಧಾನಿಯವರು ಮಹಿಳೆಯರಿಗೆ ದೊಡ್ಡ ಕೊಡುಗೆ ನೀಡಿದ್ದು ಸುಮಾರು 75 ಲಕ್ಷ ಮಹಿಳೆಯರಿಗೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಕನೆಕ್ಷನ್‌ಗಾಗಿ ಉಚಿತವಾಗಿ ನೀಡುತ್ತಿದ್ದರೆ. ಅದನ್ನು ಪಡೆಯಲು ಅರ್ಜಿದಾರರು ಭಾರತದ ಖಾಯಂ ನಿವಾಸಿಯಾಗಿರಬೇಕು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಅರ್ಜಿದಾರರು ಬಿಪಿಎಲ್ ಕುಟುಂಬಕ್ಕೆ ಸೇರಿದ ಮಹಿಳೆಯಾಗಿರಬೇಕು. ಅರ್ಜಿದಾರರ ಮನೆಯಲ್ಲಿ ಬೇರೆ ಯಾರ ಹೆಸರಿನಲ್ಲಿಯೂ LPG ಕನೆಕ್ಷನ್ ಹೊಂದಿರಬಾರದು.
ಇದನ್ನೂ ಓದಿ: ಜಾವೆಲಿನ್ ಸ್ಟಾರ್ ನೀರಾಜ್ ಚೋಪ್ರಾ ಅತಿ ಹೆಚ್ಚಾಗಿ ಬಳಸುವ ಆಪ್ ಮತ್ತು ಫೋನ್ ಯಾವುದು?