ನಿಮ್ಮ ಫೋನ್ ಕಳೆದೋಯ್ತಾ…? ಹೀಗೆ ನಿಮ್ಮ WhatsApp ಚಾಟ್ ಮತ್ತು ಮೆಸೇಜ್ಗಳನ್ನು ಭದ್ರವಾಗಿ ಸುರಕ್ಷಿಸಿಬವುದು.

ನಿಮ್ಮ ಫೋನ್ ಕಳೆದೋಯ್ತಾ…? ಹೀಗೆ ನಿಮ್ಮ WhatsApp ಚಾಟ್ ಮತ್ತು ಮೆಸೇಜ್ಗಳನ್ನು ಭದ್ರವಾಗಿ ಸುರಕ್ಷಿಸಿಬವುದು.
HIGHLIGHTS

ಗಮನದಲ್ಲಿಡಿ ನಿಮ್ಮ ಕಳೆದುಹೋದ ಫೋನ್ ಪತ್ತೆಹಚ್ಚಲು WhatsApp ಲೊಕೇಶನ್ ಸಹಾಯ ಮಾಡುವುದಿಲ್ಲ.

ಇನ್ಸ್ಟಂಟ್ ಮೇಸಜ್ಗಳಿಲ್ಲದೆ ಹೆಚ್ಚಿನ ಜನರಿಗೆ ಜನಪ್ರಿಯತೆ ಇರುವುದಿಲ್ಲವಾದ್ದರಿಂದ WhatsApp ನಲ್ಲಿನ ಹೆಚ್ಚಿನ ಅವಲಂಬನೆಯು ಒಂದು ವೇಳೆ ನಿಮ್ಮ ಫೋನ್ ಕಳೆದುಕೊಳ್ಳುವುದನ್ನು ಕೊನೆಗೊಳ್ಳುವ ಅನಿರೀಕ್ಷಿತ ಘಟನೆಗಳಲ್ಲಿ ಏನಾಗುತ್ತದೆ? ನಿಮ್ಮ ಅಮೂಲ್ಯವಾದ ಚಾಟ್ಗಳು, ಮೆಸೇಜ್ಗಳು, ಡಾಕ್ಯುಮೆಂಟ್ಗಳು ಮತ್ತು ನಿಮ್ಮ ವೈಯಕ್ತಿಕ ಸಂಭಾಷಣೆಗಳು ಏನಾಗುತ್ತದೆ? ಆದ್ದರಿಂದ ಇಂದು ನಾವು ನಿಮ್ಮ ಫೋನ್ಗಳನ್ನು ಕಳೆದುಕೊಂಡರೆ ನಿಮ್ಮ ಚಾಟ್ಗಳು ಮತ್ತು ಮೆಸೇಜ್ಗಳನ್ನು ಸುರಕ್ಷಿತವಾಗಿರಿಸುವುದು ಹೇಗೆ ಎಂದು ನಾವು ಇಲ್ಲಿ ತಿಳಿಯೋಣ.

1.ಮೊದಲ ಮಾತೆಂದರೆ ನಿಮ್ಮ ಫೋನ್ಗಳನ್ನು ಕಳೆದುಕೊಂಡರೆ ನಿಮ್ಮ ಮೊಬೈಲ್ ಆಪರೇಟರ್ಗೆ ಕರೆ ಮಾಡಿ ತಕ್ಷಣ ನಿಮ್ಮ SIM ಕಾರ್ಡ್ ಲಾಕ್ ಮಾಡಿಸಿ. ಇದರ ಪರಿಶೀಲನೆ SMS ಅಥವಾ ಕರೆ ಇಲ್ಲದೆಯೇ WhatsApp ಸಕ್ರಿಯಗೊಳ್ಳುವುದಿಲ್ಲವಾದರಿಂದ ನಿಮ್ಮ ಖಾತೆಯನ್ನು ಪರಿಶೀಲಿಸಲು ಯಾರಿಂದಲು ಸಾಧಾರಣವಾಗಿ ಸಾಧ್ಯವಾಗುವುದಿಲ್ಲ. 

2.ನಿಮ್ಮ ಫೋನ್ನಲ್ಲಿ WhatsApp ಅನ್ನು ಸಕ್ರಿಯಗೊಳಿಸಲು ಅದೇ ಸಂಖ್ಯೆಯೊಂದಿಗೆ ಹೊಸ ಸಿಮ್ ಕಾರ್ಡ್ ಪಡೆದು ಬಳಸಿರಿ.

3.ನೆನಪಿನಲ್ಲಿಡಿ ಒಮ್ಮೆಗೆ ಒಂದೇ ಫೋನಲ್ಲಿ ಒಂದು ಫೋನ್ ನಂಬರ್ರೊಂದಿಗೆ ಮಾತ್ರ WhatsApp ಅನ್ನು ಸಕ್ರಿಯಗೊಳಿಸಬಹುದು.

4.ನೀವು ಹೊಸ ಸಿಮ್ ಕಾರ್ಡ್ ಬಳಸಲು ಬಯಸದಿದ್ದರೆ ಎಲ್ಲಕ್ಕೂ ಮೊದಲು ಈ ಐಡಿಗೆ ಇಮೇಲ್ ಕಳುಹಿಸಿ: support@whatsapp.com
ಇದರಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಯಾವ ಕಾರಣಕ್ಕಾಗಿ ನಿಮ್ಮ ಅಕೌಂಟನ್ನು ಡಿಆಕ್ಟಿವೇಟ್ ಮಾಡುವ ಕಾರಣ ತಿಳಿಸಿ.
  
5.ಇಮೇಲ್ನಲ್ಲಿ ವಿಷಯದಲ್ಲಿ Lost/Stolen ಎಂದು ಬರೆಯಿರಿ ನಂತರ "ದಯವಿಟ್ಟು ನನ್ನ ಖಾತೆಯನ್ನು ನಿಷ್ಕ್ರಿಯಗೊಳಿಸಿ" ಎಂಬ ಪದವನ್ನು ಇಮೇಲ್ ಬಾಡಿಯಲ್ಲಿ ಬಳಸಿ ಮತ್ತು ನಿಮ್ಮ ಫೋನ್ ನಂಬರ್ ಅನ್ನು ಅಂತರರಾಷ್ಟ್ರೀಯ ರೂಪದಲ್ಲಿ ಸೇರಿಸಿ. ಉದಾ:+91 987654321.

6.ನಿಮ್ಮ ಚಾಟ್ಗಳನ್ನು ಮರಳಿ ಪಡೆಯಲು ನಿಮ್ಮ ಫೋನ್ ಕಳೆದು ಹೋದ ನಂತರ ಮೆಸೇಜ್ಗಳ ಬ್ಯಾಕ್ಅಪ್ ಅನ್ನು ಗೂಗಲ್ ಡ್ರೈವ್, ಐಕ್ಲೌಡ್ ಅಥವಾ ಒನ್ಡ್ರೈವ್ ಬಳಸಿ ಮಾಡಬೇಕಾಗಿರುತ್ತದೆ.

7.ಇದರ ಮೂಲಕ ನಿಮ್ಮ ಇಮೇಲ್ ಐಡಿ ನೀಡಿ ನಿಮ್ಮ ಹಳೆಯ ಎಲ್ಲ ಚಾಟ್ಗಳನ್ನು ಬ್ಯಾಕ್ಅಪ್ ಮಾಡಿಕೊಳ್ಳಬವುದು.      

ನಿಮ್ಮ ಕಾಂಟೆಕ್ಟ್ ನಿಮಗೆ ಮೆಸೇಜ್ಗಳನ್ನು ಕಳುಹಿಸಬಹುದು. ಇದು ಬಾಕಿ ಉಳಿದಿರುವ ಸ್ಥಿತಿಯಲ್ಲಿಯೇ 30 ದಿನಗಳ ವರೆಗೆ ಉಳಿಯುತ್ತದೆ. ನಿಮ್ಮ ಖಾತೆಯನ್ನು ಅಳಿಸುವ ಮೊದಲು ನೀವು ಪುನಃ ಸಕ್ರಿಯಗೊಳಿಸಿದರೆ ನಿಮ್ಮ ಹೊಸ ಫೋನ್ನಲ್ಲಿ ಯಾವುದೇ ಬಾಕಿ ಉಳಿದಿರುವ ಮೆಸೇಜ್ಗಳನ್ನು ನೀವು ಪಡೆಯುವಿರಿ ಮತ್ತು ನೀವು ಇನ್ನೂ ನಿಮ್ಮ ಎಲ್ಲಾ ಗ್ರೂಪ್ ಚಾಟ್ಗಳಲ್ಲಿ ಸಹ Exit ಆಗದೆ ಇರುವಿರಿ. ನೀವು ಖಾತೆಯನ್ನು ನಿಷ್ಕ್ರಿಯಗೊಳಿಸುವ ವಿನಂತಿಯನ್ನು ಮಾಡದಿದ್ದರೆ WhatsApp ಅನ್ನು Wi-Fi ನಲ್ಲಿ ಬಳಸಬಹುದು. ಗಮನದಲ್ಲಿಡಿ ನಿಮ್ಮ ಕಳೆದುಹೋದ ಫೋನ್ ಪತ್ತೆಹಚ್ಚಲು WhatsApp ಲೊಕೇಶನ್ ಸಹಾಯ ಮಾಡುವುದಿಲ್ಲ.

ಇಮೇಜ್ ಕ್ರೆಡಿಟ್

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo