Lok Sabha Election: ನಿಮ್ಮ QR ವೋಟರ್ ಇನ್ಫರ್ಮೇಷನ್ ಸ್ಲಿಪ್ ಪರಿಶೀಸಿ ಡೌನ್ಲೋಡ್ ಮಾಡೋದು ಹೇಗೆ?

Updated on 19-Apr-2024
HIGHLIGHTS

Lok Sabha Election: ಮತದಾರರಿಗೆ ಮತದಾರರ QR ವೋಟರ್ ಇನ್ಫರ್ಮೇಷನ್ ಸ್ಲಿಪ್ (VIS) ಮುದ್ರಿಸಿ ಕಳುಹಿಸಲು ಪ್ರಾರಂಭಿಸಿದೆ.

ಮತದಾರರಿಗೆ ತಿಳಿಸಲು ಚುನಾವಣೆಗೆ ಮುಂಚಿತವಾಗಿ EIC ನೀಡಿದ ದಾಖಲೆಯಾಗಿದೆ.

Lok Sabha Election ನಿಮ್ಮ ಫೋನ್‌ನಲ್ಲಿ ಮತದಾರರ ಮಾಹಿತಿ ಸ್ಲಿಪ್ ಅಥವಾ ವಿಐಎಸ್ ಅನ್ನು ಹೇಗೆ ಡೌನ್‌ಲೋಡ್ ಮಾಡುವುದು.

Lok Sabha Election: ಈ ವರ್ಷದ ಲೋಕಸಭೆ ಚುನಾವಣೆ 2024 ಇಂದಿನಿಂದ 19ನೇ ಏಪ್ರಿಲ್ ರಿಂದ ಈಗಾಗಲೇ ಪ್ರಾರಂಭವಾಗಿದ್ದು ಭಾರತೀಯ ಚುನಾವಣಾ ಆಯೋಗ (ECI) ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ನೋಂದಾಯಿತ ಮತದಾರರಿಗೆ ಮತದಾರರ QR ವೋಟರ್ ಇನ್ಫರ್ಮೇಷನ್ ಸ್ಲಿಪ್ (VIS) ಮುದ್ರಿಸಿ ಕಳುಹಿಸಲು ಪ್ರಾರಂಭಿಸಿದೆ. ಮತದಾರರ ಚೀಟಿ ಅಥವಾ ವಿಐಎಸ್ ಅಗತ್ಯ ವಿವರಗಳ ಬಗ್ಗೆ ಹೆಚ್ಚಿನ ಅರಿವಿಲ್ಲದವರಿಗೆ ಮತದಾರರಿಗೆ ತಿಳಿಸಲು ಚುನಾವಣೆಗೆ ಮುಂಚಿತವಾಗಿ EIC ನೀಡಿದ ದಾಖಲೆಯಾಗಿದೆ. ನಿಮ್ಮ ಫೋನ್‌ನಲ್ಲಿ ಮತದಾರರ ಮಾಹಿತಿ ಸ್ಲಿಪ್ ಅಥವಾ ವಿಐಎಸ್ ಅನ್ನು ಹೇಗೆ ಡೌನ್‌ಲೋಡ್ ಮಾಡುವುದು ಎಂಬುದರ ಕುರಿತು ಹಂತ-ಹಂತದ ಮಾರ್ಗದರ್ಶಿ ಇಲ್ಲಿದೆ.

Lok Sabha Election: QR ಕೋಡ್ ವೋಟರ್ ಸ್ಲಿಪ್ ಎಂದರೇನು?

ಈ ಹೊಸ ಮಾದರಿಯ QR ಕೋಡ್ ವೋಟರ್ ಸ್ಲಿಪ್ ಎನ್ನುವುದು ಹೆಚ್ಚುವರಿ ದೃಶ್ಯ ಅಂಶವನ್ನು ಹೊಂದಿರುವ ಸಾಮಾನ್ಯ ವೋಟರ್ ಸ್ಲಿಪ್ ಆಗಿದೆ – QR ಕೋಡ್ (ಕ್ವಿಕ್ ರೆಸ್ಪಾನ್ಸ್ ಕೋಡ್). ಈ ಕೋಡ್ ಮತದಾರರ ಮಾಹಿತಿಯನ್ನು ಎನ್ಕೋಡ್ ಮಾಡುತ್ತದೆ, ಸ್ಮಾರ್ಟ್ಫೋನ್ ಕ್ಯಾಮರಾವನ್ನು ಬಳಸಿಕೊಂಡು ವಿವರಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಪ್ರವೇಶಿಸಲು ಅನುಮತಿಸುತ್ತದೆ.

Lok Sabha Election – How to check and download your qr voter slip online

ಇದರಲ್ಲಿ ನಿಮ್ಮ ಸ್ಲಿಪ್ ಹೆಸರು, ವಯಸ್ಸು, ಲಿಂಗ, ಅಸೆಂಬ್ಲಿ ಕ್ಷೇತ್ರ ಮತ್ತು ಪ್ರಮುಖವಾಗಿ ಮತಗಟ್ಟೆ ಸ್ಥಳ, ಕೊಠಡಿ ಸಂಖ್ಯೆ, ಮತದಾನದ ದಿನಾಂಕ ಮತ್ತು ಹೆಚ್ಚಿನ ವಿವರಗಳನ್ನು ಒಳಗೊಂಡಿದೆ. ಇದರೊಂದಿಗೆ ಮತದಾರರ ವಿವರಗಳನ್ನು ತ್ವರಿತವಾಗಿ ಪರಿಶೀಲಿಸಲು ಇದು ಕ್ಯೂಆರ್ ಕೋಡ್ ಅನ್ನು ಸಹ ಒಳಗೊಂಡಿದೆ. ಈಗ ನೀವು ಇಲ್ಲಿಯವರೆಗೆ ನಿಮ್ಮ VIS ಅನ್ನು ಸ್ವೀಕರಿಸದಿದ್ದರೆ ನೀವು ಅದನ್ನು ಮತದಾನದ ದಿನಾಂಕದ ಸಮೀಪದಲ್ಲಿ ಸ್ವೀಕರಿಸುತ್ತೀರಿ ಅಥವಾ ನೀವು EIC ಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮತ್ತು EIC ಯ ಅಧಿಕೃತ ವೆಬ್‌ಸೈಟ್‌ ಅನ್ನು ಬಳಸಿಕೊಂಡು ತಕ್ಷಣವೇ ಅದನ್ನು ಡೌನ್‌ಲೋಡ್ ಮಾಡಬಹುದು.

ಮೊಬೈಲ್ ಅಪ್ಲಿಕೇಶನ್ ಬಳಸಿ ಮತದಾರರ ಮಾಹಿತಿ ಸ್ಲಿಪ್ ಡೌನ್‌ಲೋಡ್ ಮಾಡೋದು ಹೇಗೆ?

ಮೊದಲಿಗೆ ನೀವು ಪ್ಲೇ ಸ್ಟೋರ್ ಅಥವಾ ಅಪಲ್ ಆಪ್ ಸ್ಟೋರ್ ತೆರೆದು ಮತದಾರರ ಸಹಾಯವಾಣಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಇದು ಡೌನ್‌ಲೋಡ್ ಆದ ನಂತರ ತೆರೆದು “E-EPIC” ಆಯ್ಕೆಯನ್ನು ಟ್ಯಾಪ್ ಮಾಡಿ ನಿಮ್ಮ ನೋಂದಾಯಿತ ಫೋನ್ ಸಂಖ್ಯೆ, ಪಾಸ್‌ವರ್ಡ್ ಮತ್ತು OTP ಬಳಸಿ ಲಾಗಿನ್ ಮಾಡಿ.

ಈಗ ಒಮ್ಮೆ ಲಾಗಿನ್ ಮಾಡಿದ ನಂತರ ನಿಮ್ಮ EPIC ಸಂಖ್ಯೆಯನ್ನು ನಮೂದಿಸಿ (ಮತದಾರ ID ಕಾರ್ಡ್‌ನಲ್ಲಿ ಕಂಡುಬರುತ್ತದೆ) ಅಲ್ಲದೆ ಪರ್ಯಾಯವಾಗಿ ನೀವು ಅಪ್ಲಿಕೇಶನ್ ಉಲ್ಲೇಖ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ VIC ಅನ್ನು ಸಹ ನಮೂದಿಸಬಹುದು.

ಇದರ ನಂತರ ನಿಮ್ಮ ವೋಟರ್ ಸ್ಲಿಪ್ ವಿವರಗಳನ್ನು ನೀವು ನೋಡುತ್ತೀರಿ ಅದರ ಮೇಲೆ ಟ್ಯಾಪ್ ಮಾಡಿ ಮತ್ತು VIS (Voter Information Slip) ಡಾಕ್ಯುಮೆಂಟ್ ಅನ್ನು ತೆರೆಯಲು OTP ಅನ್ನು ಮತ್ತೊಮ್ಮೆ ನಮೂದಿಸಿ ಅಷ್ಟೇ ಡೌನ್ಲೋಡ್ ಆಗೋಗುತ್ತೆ ನಂತರ ನಿಮ್ಮ ಮಾಹಿತಿಯೊಂದಿಗೆ ಹತ್ತಿರದ ನಿಮ್ಮ ಮತದಾನ ಕೇಂದ್ರಕ್ಕೆ ಭೇಟಿ ನೀಡಿ ವೋಟ್ ನೀಡಬಹುದು.

Lok Sabha Election – How to check and download your qr voter slip online

Also Read: ಪ್ಲಾನ್ ಅಂದ್ರೆ ಇದಪ್ಪಾ! Reliance Jio ಪ್ರತಿದಿನ 5G ಡೇಟಾ ಮತ್ತು ಅನ್ಲಿಮಿಟೆಡ್ ಕರೆಯೊಂದಿಗೆ ಉಚಿತ OTT ನೀಡುವ ಬೆಸ್ಟ್ ಪ್ಲಾನ್!

ವೆಬ್‌ಸೈಟ್ ಬಳಸಿ ಮತದಾರರ ಮಾಹಿತಿ ಸ್ಲಿಪ್ ಡೌನ್‌ಲೋಡ್ ಮಾಡೋದು ಹೇಗೆ?

ನೇರವಾಗಿ ನೀವು “https://voters.eci.gov.in/” ತೆರೆಯಿರಿ ಮತ್ತು ಫೋನ್ ಸಂಖ್ಯೆ, ಪಾಸ್‌ವರ್ಡ್ ಮತ್ತು OTP ಬಳಸಿ ಲಾಗಿನ್ ಮಾಡಿ (ನೀವು ವೆಬ್‌ಸೈಟ್‌ಗೆ ಹೊಸಬರಾಗಿದ್ದರೆ ನೋಂದಾಯಿಸಿ).

ಈಗ ‘ಡೌನ್‌ಲೋಡ್ E-EPIC’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ EPIC ಸಂಖ್ಯೆಯನ್ನು ನಮೂದಿಸಿ (ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ಕಂಡುಬರುತ್ತದೆ) ಒಮ್ಮೆ ಮಾಡಿದ ನಂತರ VIS ಜೊತೆಗೆ E-EPIC ಅನ್ನು ಡೌನ್‌ಲೋಡ್ ಮಾಡಲಾಗುತ್ತದೆ

ಒಮ್ಮೆ ನೀವು ನಿಮ್ಮ E-EPIC ಅನ್ನು ಹೊಂದಿದ್ದರೆ ನೀವು ಸಂಪೂರ್ಣ ಪುಟವನ್ನು ಮುದ್ರಿಸಬಹುದು ಅಥವಾ VIS ಪುಟವನ್ನು ನೀವು ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು ಮತ್ತು ಮತ ಚಲಾಯಿಸಲು ಅದನ್ನು ನಿಮ್ಮೊಂದಿಗೆ ಮತಗಟ್ಟೆಗೆ ಕೊಂಡೊಯ್ಯಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :