ಆನ್‌ಲೈನ್ ವಂಚನೆಗಳಿಂದ ಸುರಕ್ಷಿತವಾಗಿರಲು ಇಂದೇ ನಿಮ್ಮ Aadhaar Card ಲಾಕ್ ಮಾಡಿಕೊಳ್ಳಿ

Updated on 21-Feb-2024
HIGHLIGHTS

ಆಧಾರ್ ಕಾರ್ಡ್‌ನೊಂದಿಗೆ (Aadhaar Card) ಲಿಂಕ್ ಆಗಿ ಸಂಬಂಧಿಸಿರುವ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುವುದಾಗಿದೆ.

ಆಧಾರ್ ಆಧಾರಿತ ಪೇಮೆಂಟ್ ಸಿಸ್ಟಮ್ (AePS) ಹೊಂದಿರುವವರನ್ನು ಗುರಿಯಾಗಿಸಿಕೊಂಡಿದ್ದಾರೆ

ಹೊಸ ರೀತಿಯ ಹಗರಣದ ಕುರಿತು ಸರ್ಕಾರ ನಾಗರಿಕರಿಗೆ ಎಚ್ಚರಿಕೆಯನ್ನು ನೀಡುತ್ತಿದೆ.

ಭಾರತದಲ್ಲಿ ಆನ್‌ಲೈನ್ ವಂಚನೆಗಳ ಬಗ್ಗೆ ಪ್ರತಿದಿನ ನಾವೆಲ್ಲ ಕೇಳುತ್ತಲೇ ಇರುತ್ತೇವೆ. ಆದರೆ ಈಗ ಸಾಮಾಜಿಕ ಜಾಲತಾಣಗಲ್ಲಿ ಹೆಚ್ಚಾಗಿ ಹರಡುತ್ತಿರುವ ಹೊಸ ಸ್ಕ್ಯಾಮ್ ಅಂದ್ರೆ ಆಧಾರ್ ಕಾರ್ಡ್‌ನೊಂದಿಗೆ (Aadhaar Card) ಲಿಂಕ್ ಆಗಿ ಸಂಬಂಧಿಸಿರುವ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುವುದಾಗಿದೆ. ಈಗ ನೀವು ಆಧಾರ್ ಆಧಾರಿತ ಪೇಮೆಂಟ್ ಸಿಸ್ಟಮ್ (AePS – Aadhaar-enabled Payment System) ಒಳಗೆ ಲೋಪದೋಷವನ್ನು ಭಾರತದಾದ್ಯಂತ ಆಧಾರ್ ಕಾರ್ಡ್ ಹೊಂದಿರುವವರು ಸಾಮಾಜಿಕ ಮಾಧ್ಯಮ ಬಳಸಿಕೊಂಡು ನಿಮ್ಮ ಬ್ಯಾಂಕ್ ಖಾತೆಯು ಸ್ಕ್ಯಾಮರ್‌ಗಳಿಂದ ಶೂನ್ಯಗೊಳಿಸುವ ಹೊಸ ರೀತಿಯ ಹಗರಣದ ಕುರಿತು ಸರ್ಕಾರ ನಾಗರಿಕರಿಗೆ ಎಚ್ಚರಿಕೆಯನ್ನು ನೀಡುತ್ತಿದೆ.

Aadhaar ಸ್ಕ್ಯಾಮರ್‌ಗಳ ಗೇಮ್ ಹೇಗಿದೆ?

ಈ ಹಗರಣದಲ್ಲಿ OTP ದೃಢೀಕರಣಕ್ಕೆ ಯಾವುದೇ ಅವಕಾಶವಿರುವುದಿಲ್ಲ ಮತ್ತು ನಿಮ್ಮ ಆಧಾರ್ ಸಂಖ್ಯೆ ಮತ್ತು ನೀವು ಖಾತೆಯನ್ನು ಹೊಂದಿರುವ ಬ್ಯಾಂಕ್‌ನ ಹೆಸರನ್ನು ತಿಳಿದುಕೊಳ್ಳುವ ಮೂಲಕ ನಿಮ್ಮ ಫಿಂಗರ್‌ಪ್ರಿಂಟ್ ಡೇಟಾಗೆ ಪ್ರವೇಶ ಪಡೆಯುವ ಮೂಲಕ ಸ್ಕ್ಯಾಮರ್ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ. ವಿಷಯಗಳನ್ನು ಇನ್ನಷ್ಟು ಹದಗೆಡಿಸಲು ನಿಮ್ಮ ಖಾತೆಯಿಂದ ಹಣವನ್ನು ಡೆಬಿಟ್ ಮಾಡಿದಾಗ ನೀವು SMS ನೋಟಿಫಿಕೇಶನ್ ಅನ್ನು ಸಹ ಪಡೆಯುವುದಿಲ್ಲ.

ಇದನ್ನೂ ಓದಿ: 6000mAh ಬ್ಯಾಟರಿಯೊಂದಿಗೆ Honor Play 8T ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?

mAadhaar ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

➥ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ ಮತ್ತು mAadhaar ಅಪ್ಲಿಕೇಶನ್ ಅನ್ನು ಸ್ಥಾಪಿಸಿ. ಐಫೋನ್‌ಗಳಿಗಾಗಿ ಆಪ್ ಸ್ಟೋರ್ ಬಳಸಿ.

➥ಡೌನ್‌ಲೋಡ್ ಮಾಡಲು mAadhaar ಅಪ್ಲಿಕೇಶನ್‌ಗೆ ಅಗತ್ಯವಿರುವ ಅನುಮತಿಯನ್ನು ಅನುಮತಿಸಿ

➥ಒಮ್ಮೆ ನಿಮ್ಮ ಫೋನ್‌ನಲ್ಲಿ mAadhaar ಅನ್ನು ಡೌನ್‌ಲೋಡ್ ಆದ ನಂತರ ತೆರೆದು 4 ಅಂಕಿಯ ಪಾಸ್‌ವರ್ಡ್ ನೀಡಿ

➥ಈ ಪಾಸ್ವರ್ಡ್ 4 ನಂಬರ್ ಅಂಕೆಗಳನ್ನು ಮಾತ್ರ ಒಳಗೊಂಡಿರಬೇಕು ಯಾವುದೇ ಅಕ್ಷರಗಳಿರಬಾರದು ಎಂಬುದನ್ನು ಗಮನಿಸಿ.

➥ನಿಮ್ಮ ಆಧಾರ್ ವಿವರಗಳನ್ನು ಪರಿಶೀಲಿಸಲು ರಿಜಿಸ್ಟರ್ ಮೊಬೈಲ್ ನಂಬರ್ಗೆ OTP ಕಳುಹಿಸಲಾಗುತ್ತದೆ.

➥ಇದನ್ನು ಹಾಕಿದ ನಂತರ ಮತ್ತು ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ ಬಯೋಮೆಟ್ರಿಕ್ ಅನ್ನು ಲಾಕ್ ಮಾಡಬಹುದು.

➥ಅಪ್ಲಿಕೇಶನ್ ತೆರೆಯಿರಿ ಮತ್ತು ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗ್ ಇನ್ ಮಾಡಿ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ

➥ಬಯೋಮೆಟ್ರಿಕ್ ಸೆಟ್ಟಿಂಗ್ಸ್’ ಮೇಲೆ ಕ್ಲಿಕ್ ಮಾಡಿ ಎನೇಬಲ್ ಬಯೋಮೆಟ್ರಿಕ್ ಲಾಕ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

➥ಟ್ಯಾಪ್ ಮಾಡಿ ಮತ್ತು ಆಧಾರ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ

➥OTP ನಮೂದಿಸಿದ ತಕ್ಷಣ ಬಯೋಮೆಟ್ರಿಕ್ ವಿವರಗಳು ತಕ್ಷಣವೇ ಲಾಕ್ ಆಗುತ್ತವೆ.

Aadhaar Card ಬಯೋಮೆಟ್ರಿಕ್ ಹೇಗೆ ಸುರಕ್ಷಿಸುತ್ತದೆ?

ಈ AePS ಅನ್ನು ನಿಷ್ಕ್ರಿಯಗೊಳಿಸಲು ಮತ್ತು ನಿಮ್ಮ ಆಧಾರ್ ಕಾರ್ಡ್‌ನ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ mAadhaar ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಸೈನ್ ಅಪ್ ಮಾಡಲು ನಿಮ್ಮ ಆಧಾರ್ ನಂಬರ್ ಅನ್ನು ಬಳಸಬೇಕಾಗುತ್ತದೆ. ನಂತರ ನಿಮಗೆ ಅಗತ್ಯವಿರುವಾಗ ಈ ಅಪ್ಲಿಕೇಶನ್ ಬಳಸಿ ನೀವು ಬಯೋಮೆಟ್ರಿಕ್ಸ್ ಅನ್ನು ಅನ್ಲಾಕ್ ಮಾಡಬಹುದು. ಈ ಆಪ್‌ನಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಲಾಕ್ ಮತ್ತು ಅನ್ಲಾಕ್ ಮಾಡುವ ಆಯ್ಕೆಗಳಿವೆ. ಅಂದ್ರೆ ಲಾಕ್ ಆಗಿರುವ ಆಧಾರ್ ಖಾತೆಯಿಂದ ಯಾವುದೇ ರೀತಿಯ ವಂಚನೆಗೆ ಅವಕಾಶಗಳಿಲ್ಲ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :