Link Voter ID with Aadhaar: ದೇಶದಲ್ಲಿ ಮತದಾರರು ತಮ್ಮ ವೋಟರ್ ಐಡಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ಕೊಟ್ಟ ಸಮಯವನ್ನ ಈಗ ವಿಸ್ತರಿಸಿದೆ. ಅಲ್ಲದೆ ಈ ಸೇವೆಯನ್ನು ಜನರ ಹಿತಕ್ಕಾಗಿ ನೀಡಿದ್ದು ಸದ್ಯಕ್ಕೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ನೀವು ಮನೆಯಲ್ಲೇ ಕುಳಿತು ಲಿಂಕ್ ಮಾಡಿಕೊಳ್ಳಬಹುದು. ವೋಟರ್ ಐಡಿ ಜೊತೆಗೆ ಆಧಾರ್ ಕಾರ್ಡ್ ಅನ್ನು ಆನ್ಲೈನ್ ಮೂಲಕ ಅಥವಾ SMS ಮೂಲಕ 31ನೇ ಮಾರ್ಚ್ 2024 ಒಳಗೆ ಲಿಂಕ್ ಮಾಡಿಸಲೆಬೇಕು. ಈಗಾಗಲೇ ನಿಮಗೆ ತಿಳಿದಿರುವಂತೆ ಮೊದಲು ಕೇಂದ್ರದ ಇಲಾಖೆಯ ಕಾನೂನು ಸೂಚನೆಯಲ್ಲಿ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು 31ನೇ ಮಾರ್ಚ್ 2023 ಕೊನೆಯ ದಿನ ಎಂದು ಸೂಚಿಸಲಾಗಿತ್ತು.
ಈ ಸಮಯವನ್ನು ಈಗ ವಿಸ್ತರಿಸಲಾಗಿದ್ದು ಮತದಾರರು ತಮ್ಮ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು 31ನೇ ಮಾರ್ಚ್ 2024 ರವರೆಗೆ ಅವಕಾಶವಿರುತ್ತದೆ. ಈ ರೀತಿ ಆಧಾರ್ ಜೊತೆಗ್ ವೋಟರ್ ಈದ್ ಕಾರ್ಡ್ ಅನ್ನು ಲಿನ್ಕಲ್ ಮಾಡುವುದರಿಂದ ಜನರಿಗೆ ಆಗುವ ಪ್ರಯೋಜನ ಅಥವಾ ಅನುಕೂಲವೆಂದರೆ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದರೆ ಅದನ್ನು ರದ್ದುಗೊಳಿಸಲು ಇದು ನೆರವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಮೂಲಕ ನಕಲಿ ಐಡಿಗಳನ್ನು ಪತ್ತೆ ಹಚ್ಚಿ ಅದರ ವಿರುದ್ಧ ಅಸಲಿ ದಾಖಲೆಗಳಿಗೆ ಮತ್ತಷ್ಟು ಸುರಕ್ಷತೆ ಮತ್ತು ಭದ್ರತೆಯನ್ನು ನೀಡಲು ಸರ್ಕಾರ ಈ ಕಾರ್ಯವನ್ನು ಕಡ್ಡಾಯಗೊಳಿಸಲಿದೆ.
•ಅಧಿಕೃತ ಪೋರ್ಟಲ್ voterportal.eci.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
•ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ವೋಟರ್ ಐಡಿ ಸಂಖ್ಯೆಯನ್ನು ಬಳಸಿಕೊಂಡು ಪೋರ್ಟಲ್ ಲಾಗ್ ಇನ್ ಮಾಡಿ.
•ಲಾಗಿನ್ ಮಾಡಿದ ನಂತರ ನಿಮ್ಮ ರಾಜ್ಯ, ಜಿಲ್ಲೆ ಮತ್ತು ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ತಂದೆಯ ಹೆಸರಿನಂತಹ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ.
•ನೀವು Search ಬಟನ್ ಅನ್ನು ಟ್ಯಾಪ್ ಮಾಡಿದಾಗ ವಿವರಗಳು ಸ್ಕ್ರೀನ್ ಮೇಲೆ ಕಾಣಿಸುತ್ತದೆ. ನಂತರ 'Feed Aadhaar number' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
•ಆಧಾರ್ ಕಾರ್ಡ್, ಆಧಾರ್ ಸಂಖ್ಯೆ, ವೋಟರ್ ಐಡಿ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಪಾಪ್-ಅಪ್ ಪೇಜ್ ನಲ್ಲಿ ನೋಂದಾಯಿತ ಇಮೇಲ್ ವಿಳಾಸದಲ್ಲಿ ಕಾಣುವಂತೆ ಹೆಸರನ್ನು ಭರ್ತಿ ಮಾಡಿ.
•ಇದರ ನಂತರ 'Submit' ಬಟನ್ ಕ್ಲಿಕ್ ಮಾಡಿ. ವೋಟರ್ ಐಡಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು.
ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಮುಖ್ಯವಾಗಿ ನಕಲಿ ಮತದಾನದ ಕಿರಿಕಿರಿಯನ್ನು ತಪ್ಪಿಸುತ್ತದೆ. ಮತಗಟ್ಟೆ ಅಧಿಕಾರಿಯು ಮತದಾರರ ಆಧಾರ್ ಕಾರ್ಡ್ ಅನ್ನು ಪಡೆದು ದಾಖಲು ಮಾಡಿಕೊಳ್ಳುತ್ತಾರೆ. ಒಮ್ಮೆ ಮತದಾರರ ಆಧಾರ್ ಕಾರ್ಡ್ ಸಂಖ್ಯೆ ದಾಖಲಾದರೆ ಮತ್ತೊಂದು ಬೂತ್ ಬಳಿ ಹೋಗಿ ಅವರ ನಕಲಿ ಮತದಾನ ಮಾಡುವ ಮೂಲಕ ವಂಚಿಸುವುದನ್ನು ತಪ್ಪಿಸುತ್ತದೆ. ಈ ಆಧಾರ್ ಲಿಂಕ್ ಮಾಡುವ ಕಾಯಿದೆ ಬಂದ ನಂತರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಬಯಸಿ ಸಲ್ಲಿಸುವ ಯಾವುದೇ ಅರ್ಜಿಯನ್ನು ಏಕಾಏಕಿ ನಿರಾಕರಿಸಲಾಗುವುದಿಲ್ಲ. ಆಧಾರ್ಗೆ ಬದಲು ಪರ್ಯಾಯ ದಾಖಲಾತಿ ನೀಡುವ ಮೂಲಕವು ವೋಟರ್ ಲಿಸ್ಟ್ ನಲ್ಲಿ ಮತದಾರರು ಸೇರಬಹುದು.