ಫೇಸ್ಬುಕ್ ನಲ್ಲಿ ಈ ಹೀಗೆ ನಿಮ್ಮ ಫೋನಿಂದ 3D ಫೋಟೋ ಪೋಸ್ಟ್ ಮಾಡಬವುದು…ಹೇಗೆಂದು ಇಲ್ಲಿಂದ ತಿಳಿಯಿರಿ.

Updated on 17-Dec-2018
HIGHLIGHTS

ಫೇಸ್ಬುಕಲ್ಲಿ ನಿಮ್ಮ 3D ಫೋಟೋಗಳನ್ನು ಪೋಸ್ಟ್ ಮಾಡಲು ಬಯಸಿದರೆ ಈ ಹಂತಗಳನ್ನು ಅನುಸರಿಸಿ.

ಸೋಶಿಯಲ್ ಸೈಟ್ ಪ್ಲಾಟ್ಫಾರ್ಮ್ 3D ಫೋಟೋ ವೈಶಿಷ್ಟ್ಯಗಳನ್ನು ರೋಲಿಂಗ್ ಪ್ರಾರಂಭಿಸಿದೆ. ಈ ವೈಶಿಷ್ಟ್ಯದ ಅಡಿಯಲ್ಲಿ, ಫೋಟೋಗೆ ಪ್ರತ್ಯೇಕ ಆಳ ಲೇಯರ್ ಅನ್ನು ಸೇರಿಸಲಾಗುತ್ತದೆ. ಇದರಿಂದಾಗಿ ಫೋಟೋವು 3D ಅಥವಾ ಮೂರನೇ ಆಯಾಮದ ನೋಟವನ್ನು ಪಡೆಯುತ್ತದೆ. ಮುಂಭಾಗ ಮತ್ತು ಬ್ರೇಕ್ಗ್ರೌಂಡ್ ನಡುವಿನ ವ್ಯತ್ಯಾಸವನ್ನು ಈ ವೈಶಿಷ್ಟ್ಯವು ಸೆರೆಹಿಡಿಯುತ್ತದೆ. ಇದರಿಂದಾಗಿ ಫೋಟೋಗಳಲ್ಲಿನ ಆಳ ಮತ್ತು ಚಲನೆಯನ್ನು ಉತ್ತಮವಾಗಿ ಕಾಣಬಹುದು. 

ಈ ವೈಶಿಷ್ಟ್ಯವು ಪ್ರಸ್ತುತ ಆಪಲ್ ಐಫೋನ್ಗಳಿಗಾಗಿ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಆಂಡ್ರಾಯ್ಡ್ ಫೋನ್ಗಳಿಗೂ ಬರುವ ಸಾಧ್ಯಾತೆಗಳಿವೆ. ಆಪಲ್ ಐಫೋನ್ ಬಳಕೆದಾರರು ತಮ್ಮ ಡ್ಯುಯಲ್-ಲೆನ್ಸ್ ಐಫೋನ್ನ ಮೂಲಕ ಪೋಟ್ರೇಟ್ ಇಮೇಜ್ ಅನ್ನು ಸೆರೆಹಿಡಿಯಬೇಕು ಮತ್ತು ಅದನ್ನು ಫೇಸ್ಬುಕ್ನಲ್ಲಿ 3D ಫೋಟೋದೊಂದಿಗೆ ಹಂಚಿಕೊಳ್ಳಬೇಕು.

ಬಳಕೆದಾರರು ಹಂಚಿದ ಫೋಟೋವನ್ನು ಸ್ಕ್ರೋಲಿಂಗ್, ಪ್ಯಾನ್ ಮತ್ತು ಟಿಲ್ಟ್ನಿಂದ 3D ನಲ್ಲಿ ವೀಕ್ಷಿಸಬಹುದು. 3D ಫೋಟೋಗಳನ್ನು Oculus Go, Oculus Browser ಅಥವಾ Oculus Rift VR ರಿಫ್ಟ್ನಲ್ಲಿ ನೋಡಬಹುದು. ನೀವು 3D ಫೋಟೋಗಳನ್ನು ಕೂಡ ಪೋಸ್ಟ್ ಮಾಡಲು ಬಯಸಿದರೆ ಇಲ್ಲಿ ನಾವು ಅದರ ಹಂತ ಹಂತದ ಮಾರ್ಗದರ್ಶನವನ್ನು ಹೇಳುತ್ತೇವೆ.

1. ಇದಕ್ಕಾಗಿ ನೀವು ಫೋನ್ನ ಕ್ಯಾಮರಾವನ್ನು ತೆರೆಯಬೇಕು ಮತ್ತು ಪೋಟ್ರೇಟ್ ಮೋಡ್ನಲ್ಲಿ ಟ್ಯಾಪ್ ಮಾಡಬೇಕಾಗುತ್ತದೆ. 

2. ಈಗ ನೀವು 3D ನಲ್ಲಿ ಹಂಚಿಕೊಳ್ಳಲು ಬಯಸುವ ಫೋಟೋ ಕ್ಲಿಕ್ ಮಾಡಿ.

3. ಅದರ ನಂತರ ಫೇಸ್ಬುಕ್ ಅಪ್ಲಿಕೇಶನ್ಗೆ ಹೋಗಿ. ಇಲ್ಲಿಂದ ಹೊಸ ಪೋಸ್ಟ್ ರಚಿಸಲು ಆಯ್ಕೆಯನ್ನು ಕ್ಲಿಕ್ ಮಾಡಿ.

4. ಇದರ ನಂತರ 3D ಫೋಟೋಗಳ ಆಯ್ಕೆಯನ್ನು ಆರಿಸಿ ಮತ್ತು ಐಫೋನ್ನ ಭಾವಚಿತ್ರ ಫೋಲ್ಡರ್ ತೆರೆಯಿರಿ.

5. ನಂತರ ನೀವು 3D ಮಾಡಲು ಬಯಸುವ ಚಿತ್ರವನ್ನು ಆಯ್ಕೆ ಮಾಡಿ ಅದನ್ನು ಹಂಚಿಕೊಳ್ಳಿರಿ……ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

ಇಮೇಜ್ ಸೋರ್ಸ್

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :