Lava Yuva 2 5G launched in India: ಭಾರತದ ಸ್ವದೇಶಿ ಸ್ಮಾರ್ಟ್ಫೋನ್ ಕಂಪನಿ ಲಾವಾ (Lava) ಸದ್ದಿಲ್ಲದೇ ತನ್ನ ಲೇಟೆಸ್ಟ್ Lava Yuva 2 5G ಸ್ಮಾರ್ಟ್ಫೋನ್ 50MP ಕ್ಯಾಮೆರಾದೊಂದಿಗೆ ₹9,499 ರೂಗಳ ಬಜೆಟ್ ಬೆಲೆಗೆ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಮತ್ತಷ್ಟು ಆಕರ್ಷಕವಾಗಿ ಕಾಣಲು ಇದರಲ್ಲಿನ ಹೊಸ ನೋಟಿಫಿಕೇಶನ್ ಬ್ಯಾಕ್‌ಲೈಟ್ ಡಿಸೈನಿಂಗ್ ಇದರಲ್ಲಿ ಕರೆಗಳು ಮತ್ತು ನೋಟಿಫಿಕೇಶನ್ ಬದಲಾಯಿಸುವ ಬಣ್ಣದ ಬೆಳಕಿನೊಂದಿಗೆ ಕಂಗೊಳಿಸುತ್ತದೆ. ಪ್ರಸ್ತುತ ಈ 2024 ವರ್ಷ ಕೊನೆಗೊಳ್ಳುವ ಮೊದಲು ಭಾರತದಲ್ಲಿ ಸುಮಾರು 10,000 ರೂಗಳ ಬೆಲೆಯ ಲೇಟೆಸ್ಟ್ 5G ಸ್ಮಾರ್ಟ್ಫೋನ್ ವಿಭಾಗದಲ್ಲಿ ಈ Lava Yuva 2 5G ಸಹ ಸೇರಿಕೊಂಡಿದೆ.
ಈ Lava Yuva 2 5G ಸ್ಮಾರ್ಟ್ಫೋನ್ ಪ್ರಸ್ತುತ ಒಂದೇ ಒಂದು ರೂಪಾಂತದರಲ್ಲಿ ಮಾತ್ರ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 4GB RAM ಮತ್ತು 4GB ವರ್ಚುಯಲ್ RAM ಜೊತೆಗೆ 128GB ಸ್ಟೋರೇಜ್ ರೂಪಾಂತರವನ್ನು ₹9,499 ರೂಗಳಿಗೆ ಬಿಡುಗಡೆಗೊಳಿಸಲಾಗಿದೆ. Lava Yuva 2 5G ಸ್ಮಾರ್ಟ್ಫೋನ್ ಭಾರತದಲ್ಲಿ ಇಂದು ಬಿಡುಗಡೆಯಾಗಿ ಈಗಾಗಲೇ ಹತ್ತಿರದ ಸ್ಟೋರ್ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. Lava Yuva 2 5G ಸ್ಮಾರ್ಟ್ಫೋನ್ ಅನ್ನು ನೀವು Marble Black ಮತ್ತು Marble White ಎಂಬ 2 ಆಕರ್ಷಕ ಬಣ್ಣಗಳಲ್ಲಿ ಖರೀದಿಸಬಹುದು.
Lava Yuva 2 5G ಸ್ಮಾರ್ಟ್ಫೋನ್ 6.67 ಇಂಚಿನ HD+ ಡಿಸ್‌ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್, 700 nits ಬ್ರೈಟ್‌ನೆಸ್ ಮತ್ತು ಸೆಂಟ್ರಲ್ ಪಂಚ್-ಹೋಲ್ ಕಟೌಟ್ ಅನ್ನು ಹೊಂದಿದೆ. ಫೋನ್ ಹಿಂಭಾಗದಲ್ಲಿ 50MP+2MP AI ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. Lava Yuva 2 5G ಸ್ಮಾರ್ಟ್ಫೋನ್ ಈ ಫೋನ್‌ನೊಂದಿಗೆ ಮನೆಯಲ್ಲಿ 1 ವರ್ಷದ ವಾರಂಟಿ ಮತ್ತು ಉಚಿತ ಸೇವೆಯನ್ನು ಒದಗಿಸುತ್ತದೆ.
Also Read: Redmi 14C 5G ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
ಫೋನ್‌ನ Unisoc T760 ಚಿಪ್‌ಸೆಟ್ ಜೊತೆಗೆ ಒಟ್ಟು 8GB RAM ಅನ್ನು ಪಡೆಯುತ್ತೀರಿ ಇದರಲ್ಲಿ 4GB ಹಾರ್ಡ್‌ವೇರ್ RAM ಮತ್ತು 4GB ವರ್ಚುವಲ್ RAM ಆಗಿದೆ. ಇದರೊಂದಿಗೆ ಫೋನ್ 128GB UFS 2.2 ಸಂಗ್ರಹಣೆಯನ್ನು ಹೊಂದಿದೆ. 5000mAh ಬ್ಯಾಟರಿಯನ್ನು ಹೊಂದಿದೆ ಮತ್ತು ಇದು 18W ವೇಗದ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಈ ಫೋನ್ anಆಂಡ್ರಾಯ್ಡ್ 14 ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಡ್ಯುಯಲ್ ಸ್ಟೀರಿಯೋ ಸ್ಪೀಕರ್ ಸೆಟಪ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್ ಮತ್ತು ಫೇಸ್-ಅನ್‌ಲಾಕಿಂಗ್ ಆಯ್ಕೆಯನ್ನು ಒಳಗೊಂಡಿದೆ.