WhatsApp ಅಲ್ಲಿ ನೀವು ಯಾರ್ಯಾರ ಜೊತೆ ಎಷ್ಟು ಚಾಟಿಂಗ್ ಮಾಡಿದ್ದೀರೆಂದು ಈ ರೀತಿ ತಿಳಿಯಿರಿ

WhatsApp ಅಲ್ಲಿ ನೀವು ಯಾರ್ಯಾರ ಜೊತೆ ಎಷ್ಟು ಚಾಟಿಂಗ್ ಮಾಡಿದ್ದೀರೆಂದು ಈ ರೀತಿ ತಿಳಿಯಿರಿ
HIGHLIGHTS

WhatsApp ಅಲ್ಲಿ ನೀವು ಯಾರ್ಯಾರಿಗೆ ಏನೇನು ಎಷ್ಟು ಕಳುಯಿಸಿದ್ದೀರೆಂದು ಈ ತಿರಿ ತಿಳಿಯಬವುದು

ಇಂದು ನೀವು ನಿಮ್ಮ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಸರಳವಾಗಿ 24×7 ಗಂಟೆಗಳ ಕಾಲ ಸಂಪರ್ಕದಲ್ಲಿರಲು ವಾಟ್ಸಾಪ್ ಸುಲಭ ಮತ್ತು ಎಲ್ಲಾರ ನೆಚ್ಚಿನ ಮಾರ್ಗವಾಗಿದೆ. ಅದರಲ್ಲೂ ಇದರ ಚಾಟಿಂಗ್‌ನೊಂದಿಗೆ ತಮ್ಮ ತಮ್ಮ ಮನದಾಳದ ಮಾತುಗಳನ್ನು ಒಬ್ಬರ ಜೊತೆ ಮತ್ತೊಬ್ಬರು ಹಂಚಿಕೊಳ್ಳುತ್ತಾರೆ. ಆದಾಗ್ಯೂ ಪ್ರತಿ ಬಳಕೆದಾರರ ಪಟ್ಟಿಯಲ್ಲಿ ಕೆಲವು ಮುಖ್ಯ ಮತ್ತು ನೆಚ್ಚಿನ ಕಾಂಟೆಕ್ಟ್ಗಳಿರುತ್ತದೆ. ಇದರಿಂದ ಯಾರು ಯಾರೊಂದಿಗೆ ಹೆಚ್ಚು GIF, ವಿಡಿಯೋ, ಫೋಟೋ ಅಥವಾ ಆಡಿಯೋ ಶೇರ್ ಅಥವಾ ಚಾಟ್ ಮಾಡುತ್ತಿದ್ದಾರೆ ಎಂದು ತಿಳಿಯಲು ನೀವು ಬಯಸುವವರಿಗಾಗಿ ವಾಟ್ಸಾಪ್‌ನಲ್ಲೂ ಇದಕ್ಕಾಗಿ ವಿಶೇಷ ವೈಶಿಷ್ಟ್ಯವಿದೆ ಎನ್ನುವುದು ವಿಶೇಷವಾಗಿದೆ.

ಮೊದಲಿಗೆ ನೀವು ನಿಮ್ಮ WhatsApp ಅಪ್ಡೇಟ್ ಮಾಡಿ ನಂತರ ತೆರೆದು ಸೆಟ್ಟಿಂಗ್‌ ಆಯ್ಕೆ ಮಾಡಿ

ಸೆಟ್ಟಿಂಗ್‌ ಅಲ್ಲಿ ಅನೇಕ ಆಯ್ಕೆಗಳಿರುತ್ತವೆ ಇಲ್ಲಿ Data And storage usage ಆಯ್ಕೆ ಮೇಲೆ ಕ್ಲಿಕ್ ಮಾಡಿ 

ಇದರ ನಂತರ ಈಗ ಇದರಲ್ಲಿ Storage usage ಮೇಲೆ ಕ್ಲಿಕ್ ಮಾಡಿ

ಸ್ಟೋರೇಜ್ ಯೂಸೇಜ್ ಕ್ಲಿಕ್ ಮಾಡಿದ ಮೇಲೆ ಲಿಸ್ಟ್ ನೋಡಬವುದು ಇಲ್ಲಿ ಯಾವ ಫೈಲ್ ಎಷ್ಟು ಸ್ಟೋರೇಜ್ ತೆಗೆದುಕೊಂಡಿದೆ ನೋಡಬವುದು

ಇದರಲ್ಲಿ ಎಷ್ಟು ಮೆಸೇಜ್ಗಳು, ಫೋಟೋಗಳು, ವೀಡಿಯೊಗಳನ್ನು ಪರಸ್ಪರ ಕಳುಹಿಸಿದ್ದೀರಿರೆಂದು ತಿಳಿಯಲು ಕಾಂಟೆಕ್ಟ್ ಮೇಲೆ ಟ್ಯಾಪ್ ಮಾಡಿ

ನೀವು ಬಯಸಿದರೆ ನೀವು ಈ ಸ್ಟೋರೇಜ್ ಜಾಗವನ್ನು ಕ್ಲಿಯರ್ ಮುಕ್ತಗೊಳಿಸಬಹುದು. ಕೊನೆಯ ಕೆಳಭಾಗದಲ್ಲಿ ನೀವು ಕ್ಲಿಯರ್ ಜಾಗವನ್ನು ನೋಡಬವುದು. ನೀವು ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ಡಿಲೀಟ್ ಮಾಡಲು ಬಯಸುವ ಯಾವುದನ್ನಾದರೂ ಆಯ್ಕೆ ಮಾಡಿ ಮತ್ತು ಡಿಲೀಟ್ ಮಾಡ್ಕೊಳ್ಳಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo