ನಿಮಗೆ ತಿಳಿಯದಂತೆ ನಿಮ್ಮ ಫೇಸ್ ಬುಕ್ ಪ್ರೊಫೈಲ್‌ ಯಾರ್ಯಾರು ನೋಡುತ್ತಿದ್ದಾರೆ ಹೀಗೆ ತಿಳಿಯಿರಿ!

ನಿಮಗೆ ತಿಳಿಯದಂತೆ ನಿಮ್ಮ ಫೇಸ್ ಬುಕ್ ಪ್ರೊಫೈಲ್‌ ಯಾರ್ಯಾರು ನೋಡುತ್ತಿದ್ದಾರೆ ಹೀಗೆ ತಿಳಿಯಿರಿ!
HIGHLIGHTS

ಮೆಟಾ ಎಂದು ಮರು ನಾಮಕರಣವಾಗಿರುವ ಫೇಸ್‌ಬುಕ್ (Facebook) ಅನ್ನು ಭಾರತದಲ್ಲಿ ಕೋಟಿಗಟ್ಟಲೆ ಜನರು ಬಳಸುತ್ತಾರೆ.

ನಿಮಗೆ ಗೊತ್ತಿಲ್ಲದಂತೆ ನಿಮ್ಮ ಪ್ರೊಫೈಲ್ (Facebook profile) ಅನ್ನು ಯಾರು ವೀಕ್ಷಿಸುತ್ತಿದ್ದಾರೆ ಎನ್ನುವುದನ್ನು ಸುಲಭವಾಗಿ ಕಂಡ ಹಿಡಿಯಬಹುದು.

ಮೆಟಾ ಎಂದು ಮರು ನಾಮಕರಣವಾಗಿರುವ ಫೇಸ್‌ಬುಕ್ (Facebook) ಅನ್ನು ಭಾರತದಲ್ಲಿ ಕೋಟಿಗಟ್ಟಲೆ ಜನರು ಬಳಸುತ್ತಾರೆ. ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸಹ ಫೇಸ್ಬುಕ್ ಮೂಲಕ ಒಬ್ಬರನ್ನೊಬ್ಬರು ಸಂಪರ್ಕಿಸುತ್ತಾರೆ. ನಿಮ್ಮ ಸ್ನೇಹಿತರು, ಕಚೇರಿಯಲ್ಲಿ ಜೊತೆಗೆ ಕೆಲಸ ಮಾಡುವವರು, ನೆರೆಹೊರೆಯವರು ಹೀಗೆ ಯಾರು ಬೇಕಾದರೂ ಫೆಸ್ ಬುಕ್ ಮೂಲಕ ಫ್ರೆಂಡ್ ರಿಕ್ವೆಸ್ಟ್ (Friend request) ಕಳುಹಿಸಬಹುದು. ಇನ್ನು ಕೆಲವೊಮ್ಮೆ ಅಪರಿಚಿತರು ಕೂಡಾ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ.

Facebook ಮೂಲಕ ಜನರ ಅನೇಕ ವೈಯಕ್ತಿಕ ಮಾಹಿತಿಯೂ ಮುಂಚೂಣಿಗೆ ಬರುತ್ತದೆ. ಹೀಗಿರುವಾಗ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಪ್ರೊಫೈಲ್ (Facebook profile) ಅನ್ನು ಯಾರು ವೀಕ್ಷಿಸುತ್ತಿದ್ದಾರೆ ಎನ್ನುವುದನ್ನು ಸುಲಭವಾಗಿ ಕಂಡ ಹಿಡಿಯಬಹುದು. ಹೌದು ಸರಳ ಟ್ರಿಕ್ ಮೂಲಕ ನಿಮ್ಮ ಪ್ರೊಫೈಲ್ ಅನ್ನು ಯಾರು ಚೆಕ್ ಮಾಡುತ್ತಿದ್ದಾರೆ ಎನ್ನುವುದನ್ನು ಚಿಟಕಿ ಹೊಡೆಯುವುದರಲ್ಲಿ ಕಂಡುಕೊಳ್ಳಬಹುದು.

 

ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಮಾತ್ರ ಪತ್ತೆ ಮಾಡಬಹುದು:

ಅನ್ನು ಲ್ಯಾಪ್‌ಟಾಪ್ (laptop) ಅಥವಾ ಡೆಸ್ಕ್‌ಟಾಪ್‌ನಲ್ಲಿ (desktop) ಮಾತ್ರ ಕಂಡುಕೊಳ್ಳಬಹುದು. ನೀವು ಮೊಬೈಲ್‌ನಲ್ಲಿ ಈ ಟ್ರಿಕ್ ಅನ್ನು ಬಳಸಲಾಗುವುದಿಲ್ಲ. ನಿಮಗೆ ತಿಳಿಯುವ ಕುತೂಹಲವಿದ್ದರೆ ತಕ್ಷಣ ನಿಮ್ಮ ಲ್ಯಾಟ್‌ಪಾಟ್ ಮತ್ತು ಡೆಸ್ಕ್‌ಟಾಪ್ ಒಪನ್ ಮಾಡಿ ಈ ಕೆಳಗಿನ ತಗಳನ್ನು ಅನುಸರಿಸಿ . 

ಈ ಹಂತಗಳನ್ನು ಅನುಸರಿಸಿ:

1.ಮೊದಲನೆಯದಾಗಿ ನೀವು ಬ್ರೌಸರ್ ಅನ್ನು ತೆರೆಯಬೇಕು ಮತ್ತು ಅದರಲ್ಲಿ ಫೇಸ್‌ಬುಕ್‌ಗೆ ಲಾಗ್-ಇನ್ ಮಾಡಬೇಕು.

2.ಫೇಸ್‌ಬುಕ್‌ಗೆ ಲಾಗಿನ್ (facebook login) ಆದ ನಂತರ ನೀವು ನಿಮ್ಮ ಪ್ರೊಫೈಲ್‌ಗೆ ಹೋಗಬೇಕು.

3.ಅದರ ನಂತರ ನೀವು ರೈಟ್ ಕ್ಲಿಕ್ ಮಾಡಿ. ಅಲ್ಲಿ ಅನೇಕ ಆಯ್ಕೆಗಳನ್ನು ಕಾಣಬಹುದು. ಆದರೆ View Page Sourceಗೆ ಹೋಗಬೇಕು. 

4. View Page Sourceಗೆ ಹೋಗಲು CTRL+U ಕಮಾಂಡ್ ಅನ್ನು ಬಳಸಬೇಕಾಗುತ್ತದೆ.

5. CTRL+F ಮಾಡುವ ಮಲಕ BUDDY_ID ಸರ್ಚ್ ಮಾಡಿ.

6.ಅದರ ಮುಂದೆ 15 ಅಂಕೆಗಳು ಬರುತ್ತವೆ. ಈ ಅಂಕೆಗಳನ್ನು ಕಾಪಿ ಮಾಡಿಕೊಳ್ಳಿ. 

7.ಕಾಪಿ ಮಾಡಿದ ನಂತರ  ನೀವು https://www.facebook.com/15 ಅಂಕಿಯನ್ನು ನಮೂದಿಸಬೇಕು .

8. ಇಲ್ಲಿ ಸರ್ಚ್ ಮಾಡಿದ ನಂತರ ನಿಮ್ಮ ಪ್ರೊಫೈಲ್ ಅನ್ನು ನೋಡಿದ ವ್ಯಕ್ತಿಯನ್ನು ಕಂಡುಹಿಡಿಯುವುದು ಸಾಧ್ಯವಾಗುತ್ತದೆ.

1

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo