Block Spam Calls: ಸಮಯ ಪ್ರಜ್ಞೆ ಇಲ್ಲದೆ ಬರುವ ಅನಗತ್ಯ ಕರೆಗಳಿಂದ ತಲೆನೋವಾಗಿದ್ಯಾ? ಹಾಗಾದ್ರೆ ಈ ರೀತಿ ಶಾಶ್ವತವಾಗಿ ತಡೆಗಟ್ಟಿ!

Updated on 26-Nov-2024
HIGHLIGHTS

DND (Do Not Disturb) ಸೇವೆ ಸಕ್ರಿಯಗೊಳಿಸಿದರೆ ಸುಮಾರು 90% ವರೆಗೆ ತಡೆಗಟ್ಟುತ್ತದೆ.

ಇದನ್ನು ಟೆಲಿಕಾಂ ಭಾಷೆಯಲ್ಲಿ ಡು ನಾಟ್ ಡಿಸ್ಟಿರ್ಬ್ (DND) ಸೇವೆ ಎಂದು ಕರೆಯಲಾಗುತ್ತದೆ.

ಟೆಲಿಮಾರ್ಕೆಟಿಂಗ್ ಕರೆ ಮತ್ತು ಮೆಸೇಜ್ (Block Spam Calls) ಸಮಸ್ಯೆಗೆ ಈಗ ನೀವೇ ಇದಕ್ಕೆ ಪರಿಹಾರ ಮಾಡಿಕೊಳ್ಳಬಹುದು

Block Spam Calls: ನೀವು ಬಿಡುವಿಲ್ಲದ ಸಮಯದಲ್ಲೂ ದಿನವಿಡೀ ತೊಂದರೆ ಕೊಡುವ ಅಪರಿಚಿತ ಅಥವಾ ವಂಚನಗೆಳ ಕರೆ ಮತ್ತು ಮೆಸೇಜ್‌ಗಳಿಂದ ಅದರಲ್ಲೂ ಬ್ಯಾಂಕ್, ಸೇಲ್ ಟೆಲಿಮಾರ್ಕೆಟಿಂಗ್ ಮೂಲಕ ಸಮಯ ಪ್ರಜ್ಞೆ ಇಲ್ಲದೆ ಬರುವ ಅನಗತ್ಯ ಕರೆಗಳಿಂದ ತಲೆನೋವಾಗಿದ್ಯಾ? ಹಾಗಾದ್ರೆ ಈ ರೀತಿ ಶಾಶ್ವತವಾಗಿ ತಡೆಗಟ್ಟಬಹುದು.

ಅಲ್ಲದೆ ಇಂತಹ ಕರೆಗಳನ್ನು ಶಾಶ್ವತವಾಗಿ ತಡೆಗಟ್ಟುವುದು ಹೇಗೆಂದು ತಿಳಿಯಲು ನೀವು ಒಂದಲ್ಲ ಒಂದು ಸಾರಿ ಯೋಚಿಸಿರಬಹುದು. ಆದ್ದರಿಂದ ಇದನ್ನು ತಲೆಗಟ್ಟುವುದು ಹೇಗೆ ಎಂಬುದರ ಕುರಿತು ಈ ಕೆಳಗೆ ಒಂದಿಷ್ಟು ಮಾಹಿತಿಯನ್ನು ನೀಡಲಾಗಿದೆ. ಅಲ್ಲದೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಸಹ ಇದನ್ನು ಅಧಿಕೃತವಾಗಿ ಎಲ್ಲ ಟೆಲಿಕಾಂ ಕಂಪನಿಗಳಿಂದ ನೀಡುವಂತೆ ಕೇಳಿಕೊಂಡಿದೆ.

Also Read: BSNL ಗ್ರಾಹಕರು ಒಮ್ಮೆ ಈ ರಿಚಾರ್ಜ್ ಮಾಡಿಕೊಂಡ್ರೆ 6 ತಿಂಗಳಿಗೆ ಟೆಂಷನ್ ಇರೋಲ್ಲ! ಕರೆ ಮತ್ತು ಡೇಟಾ ಎಲ್ಲ ಫ್ರೀ!

ಉಚಿತವಾಗಿ Block Spam Calls:

ಒಮ್ಮೆ ಈ DND ಸೇವೆಯನ್ನು ಸಕ್ರಿಯಗೊಳಿಸಿದರೆ ನಿಮಗೆ ಬರುವ ಟೆಲಿ ಮಾರ್ಕೆಟಿಂಗ್ ಅಥವಾ ವಂಚನೆಗಳ ಕರೆ ಮತ್ತು ಮೆಸಜ್ ಅನ್ನು ಸುಮಾರು 90% ವರೆಗೆ ತಡೆಗಟ್ಟುತ್ತದೆ. ಆದರೆ ತುಂಬಾ ಜನರಿಗೆ ಈ ಸೇವೆಯ ಬಗ್ಗೆ ತಿಳಿಯದ ಕಾರಣ ಟೆಲಿ ಮಾರ್ಕೆಟಿಂಗ್ ಅಥವಾ ವಂಚನೆಗಳ ಕರೆಗಳ ತೊಂದರೆಯನ್ನು ಅನುಭವಿಸುತ್ತಿರುತ್ತಾರೆ ಅವರೊಂದಿಗೆ ಟೆಲಿಮಾರ್ಕೆಟಿಂಗ್ ಕರೆಗಳು ಮತ್ತು ಮೆಸೇಜ್ ಸಮಸ್ಯೆಗಳು ಇನ್ನೂ ಹಾಗೆಯೇ ಉಳಿದಿದೆ. ಆದರೆ ಈಗ ನೀವೇ ಇದಕ್ಕೆ ಪರಿಹಾರ ಮಾಡಿಕೊಳ್ಳಬಹುದು. ಅದೇಗೆ ಎನ್ನುವುದನ್ನು ಈ ಕೆಳಗೆ ಹಂತ ಹಂತವಾಗಿ ತಿಳಿಯಬಹುದು.

DND ಸೇವೆಯ ಬಗ್ಗೆ ಒಂದಿಷ್ಟು ಮಾಹಿತಿ ಆರಂಭಿಸುವುದು ಹೇಗೆ?

ನೀವು ಜಿಯೋ, ಏರ್ಟೆಲ್ ಅಥವಾ ವೊಡಾಫೋನ್ ಐಡಿಯಾದ ಸಿಮ್ ಕಾರ್ಡ್ ಬಳಸುತ್ತಿದ್ದರೆ ಈ ಡು ನಾಟ್ ಡಿಸ್ಟಿರ್ಬ್ (DND) ಸೇವೆಯನ್ನು ಬಳಸಲು ಪ್ರತಿಯೊಂದು ಟೆಲಿಕಾಂ ಕಂಪನಿ ವಿವಿಧ ಮಾದರಿಯ ಕೋಡ್ಗಳನ್ನೂ ಹೊಂದಿರುತ್ತವೆ ಎನ್ನುವುದನ್ನು ಗಮನಿಸಬೇಕು. ಈ DND ಸೇವೆಯಲ್ಲಿ ಎರಡು ವಿಧಾನಗಳಿವೆ ಅವೆಂದರೆ ಫುಲ್ ಡು ನಾಟ್ ಡಿಸ್ಟಿರ್ಬ್ (Full DND) ಮತ್ತೊಂದು ಪರ್ಷಲ್ ಡು ನಾಟ್ ಡಿಸ್ಟಿರ್ಬ್ (Partial DND) ಆಗಿದೆ.

Also Read: Black Friday Sale ಅಡಿಯಲ್ಲಿ ಕೇವಲ 10,000 ರೂಪಾಯಿಗೆ ಲೇಟೆಸ್ಟ್ 5G ಫೋನ್‌ಗಳ ಜಬರ್ದಸ್ತ್ ಮಾರಾಟ!

ಈ ಸೇವೆ ಸಾಮಾನ್ಯವಾಗಿ ಉಚಿತವಾಗಿದ್ದು ಇದರ ಪ್ರಯೋಜನಗಳೇನು ಎಂದು ನೋಡುವುದಾದರೆ ನಿಮಗೆ ಸಾಮಾನ್ಯವಾಗಿ ಬರುವ ಕರೆಗಳನ್ನು ಒಟ್ಟು 7 ವರ್ಗಗಳಲ್ಲಿ (Travel related, Health-related, Real estate related, Automobile-related, Education and study related, Communication and entertainment, Banking, insurance, and finance related) ವಿಂಗಡಿಸಲಾಗಿದ್ದು ನಿಮಗೆ ಬೇಕಾದ ವರ್ಗದಿಂದ ಕರೆ ಮತ್ತು ಮೆಸೇಜ್ ತಡೆಯಲುಬಹುದು ಅಥವಾ ಪಡೆಯಲುಬಹುದು.

  • ಫುಲ್ ಡು ನಾಟ್ ಡಿಸ್ಟಿರ್ಬ್ (Full DND) : ಎಲ್ಲ 7 ವರ್ಗದ ಕರೆ ಮತ್ತು ಮೆಸೇಜ್ ತಡೆಗಟ್ಟುತ್ತದೆ.
  • ಪರ್ಷಲ್ ಡು ನಾಟ್ ಡಿಸ್ಟಿರ್ಬ್ (Partial DND): 7 ವರ್ಗದಲ್ಲಿ ನಿಮಗೆ ಬೇಡದ ವರ್ಗದಿಂದ ಮಾತ್ರ ಕರೆ ಮತ್ತು ಮೆಸೇಜ್ ತಡೆಗಟ್ಟುತ್ತದೆ.

Jio ಬಳಕೆದಾರರು DND ಸೇವೆ ಆರಂಭಿಸುವುದು ಹೇಗೆ?

ನೀವು ಜಿಯೋ ಬಳಕೆದಾರರಾಗಿದ್ದಾರೆ ನಿಮಗೆ ಹಲವಾರು ರೀತಿಯಲ್ಲಿ ಈ DND ಸೇವೆಯನ್ನು ಸಕ್ರಿಯಾಗೋಳಿಸಬಹುದು. ಪ್ರಸ್ತುತ 4 ರೀತಿಯನ್ನು ಕೆಲವೇ ನಿಮಿಷಗಳಲ್ಲಿ ನಿಮ್ಮ ಜಿಯೋ ನಂಬರ್ ಮೂಲಕ DND ಸೇವೆಗಳನ್ನು ಆರಂಭಿಸಬಹುದು. ಮತ್ತೊಂದು ಮುಖ್ಯವಾದ ಸೂಚನೆ ಈ DND ಇತ್ತೀಚಿನ ಸ್ಮಾರ್ಟ್ಫೋನ್ಗಳಲ್ಲೂ ಸೆಟ್ಟಿಂಗ್ ವಿಭಾಗದಲ್ಲಿ ನೀಡಲಾಗಿರುವ ಕಾರಣ ಕೆಲವರಿಗೆ ಇವೆರಡು ಒಂದೇ ಎಂದುಕೊಂಡಿದ್ದರೆ ಆದರೆ ಇವೆರಡು ಬೇರೆಯಾಗಿವೆ ಎನ್ನುವುದನ್ನು ಗಮನಿಸಬೇಕಿದೆ.

  • START ಎಂದು ಟೈಪ್ ಮಾಡಿ ನಿಮ್ಮ ಜಿಯೋ ಮೊಬೈಲ್ ನಂಬರ್ನಿಂದ 1909 ನಂಬರ್ಗೆ ಸೆಂಡ್ ಮಾಡಿ
  • ನೇರವಾಗಿ ನಿಮ್ಮ ಜಿಯೋ ಮೊಬೈಲ್ ನಂಬರ್ನಿಂದ 1909 ನಂಬರ್ಗೆ ಕರೆ ಮಾಡಿ ಸಕ್ರಿಯಗೋಳಿಸಬಹುದು.
  • ನೀವೇ ಮೈ ಜಿಯೋ ಅಪ್ಲಿಕೇಷನ್ ಮೂಲಕ ಈ ಸೇವೆಯನ್ನು ಸಕ್ರಿಯಗೋಳಿಸಬಹುದು.
  • ಕೊನೆಯದಾಗಿ ಜಿಯೋ ಕಸ್ಟಮರ್ ಕೇರ್ಗೆ ಕರೆ ಮಾಡಿ ಅವರಿಂದ ಈ ಸೇವೆಯನ್ನು ಸಕ್ರಿಯಗೋಳಿಸಿಕೊಳ್ಳಬಹುದು.

ಏರ್ಟೆಲ್ ಬಳಕೆದಾರರು ರೀತಿಯಲ್ಲಿ ಈ DND ಸೇವೆಯನ್ನು ಸಕ್ರಿಯಾಗೋಳಿಸಬಹುದು.

START 0 ಎಂದು ಟೈಪ್ ಮಾಡಿ ನಿಮ್ಮ ಏರ್ಟೆಲ್ ಮೊಬೈಲ್ ನಂಬರ್ನಿಂದ 1909 ನಂಬರ್ಗೆ ಸೆಂಡ್ ಮಾಡಿ
ನೇರವಾಗಿ ನಿಮ್ಮ ಏರ್ಟೆಲ್ ಮೊಬೈಲ್ ನಂಬರ್ನಿಂದ 1909 ನಂಬರ್ಗೆ ಕರೆ ಮಾಡಿ ಸಕ್ರಿಯಗೋಳಿಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :