ಈ 5 ಸಿಂಪಲ್ ಹಂತಗಳನ್ನು ಅನುಸರಿಸಿ ನಿಮ್ಮ ಕಳ್ಳತನವಾದ/ಮಿಸ್ ಪ್ಲೇಸಾದ ಫೋನ್ ಎಲ್ಲಿದೆಂದು ನಿಮಿಷದಲ್ಲಿ ಪತ್ತೆ ಹಚ್ಚಬವುದು.

ಈ 5 ಸಿಂಪಲ್ ಹಂತಗಳನ್ನು ಅನುಸರಿಸಿ ನಿಮ್ಮ ಕಳ್ಳತನವಾದ/ಮಿಸ್ ಪ್ಲೇಸಾದ ಫೋನ್ ಎಲ್ಲಿದೆಂದು ನಿಮಿಷದಲ್ಲಿ ಪತ್ತೆ ಹಚ್ಚಬವುದು.
HIGHLIGHTS

ಫೋನ್ ಯಾರಾದರೂ ಕದ್ದಿದ್ದರೆ / ನಿಮಗೆ ತಿಳಿಯದೆ ಕಳೆದುಹೋದಲ್ಲಿ ನೀವು Google ಫೀಚರ್ ಬಳಸಿ ಪತ್ತೆ ಮಾಡಬಹುದು

ಪ್ರಸ್ತುತ ಇದು ನಿಮ್ಮ ಅಧಿಕೃತವಾದ ಕೆಲಸ ಅಥವಾ ವೈಯಕ್ತಿಕ ಕೆಲಸವನ್ನು ನಾವು ಬಳಸುವ ನಮ್ಮ ಅತ್ಯಂತ ಸೂಕ್ತವಾದ ಸ್ಮಾರ್ಟ್ಫೋನ್ಗಳ ಬಗ್ಗೆ ಹೇಳಲಾಗಿದೆ. ಇಂದಿನ ದಿನಗಳಲ್ಲಿ ನಮ್ಮ ಫೋಟೋಗಳು, ವೀಡಿಯೊಗಳು, ಸೋಶಿಯಲ್ ಮಾಧ್ಯಮ ಖಾತೆಗಳು ಮತ್ತು ಬ್ಯಾಂಕಿಂಗ್ನಂತಹ ನಮ್ಮ ವೈಯಕ್ತಿಕ ಮಾಹಿತಿಗಳು ನಮ್ಮ ಸ್ಮಾರ್ಟ್ಫೋನ್ನಲ್ಲಿರುತ್ತವೆ. ಒಂದು ವೇಳೆ ಇದು ಕಳವಾದ ನಂತರ ಸಂಪರ್ಕ ನಷ್ಟವಾಗಿ ಬೇರೆ ಯಾವುದೇ ಬಳಕೆದಾರರ ಕೈ ಸೇರಿ ನಮ್ಮ ನಷ್ಟವಾಗಲು ಹೆಚ್ಚು ಸಮಯ ಅವಶ್ಯವಿಲ್ಲ.

ಆದ್ದರಿಂದ ನಿಮ್ಮ ಫೋನ್ ಯಾರಾದರೂ ಕದ್ದಿದ್ದರೆ ಅಥವಾ ನಿಮಗೆ ತಿಳಿಯದೆ ಕಳೆದುಹೋದಲ್ಲಿ ನೀವು Google ನ ವೈಶಿಷ್ಟ್ಯವನ್ನು ಬಳಸುವ ಮೂಲಕ ಪತ್ತೆ ಮಾಡಬಹುದು.   Google ನಕ್ಷೆಗಳೊಂದಿಗೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಕಳೆದುಹೋದ ಫೋನನ್ನು ನೀವು ಹುಡುಕಬವುದು. ಆದ್ದರಿಂದ ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಈ ಹಂತಗಳ ಮೂಲಕ ತಿಳಿದುಕೊಳ್ಳಿರಿ.

Map

1.ಮೊದಲಿಗೆ ನೀವು ಬೇರೊಂದು ಫೋನ್, ಲ್ಯಾಪ್ಟಾಪ್ ಅಥವಾ PC ಮೂಲಕ www.maps.google.co.in ಬ್ರೌಸರಿಗೆ ಹೋಗಿ.

2.ಕಳೆದುಹೋದ ಫೋನಲ್ಲಿ ನೀವು ಲಿಂಕ್ ಮಾಡಿದ್ದ ನಿಮ್ಮ Google ಖಾತೆಯೊಂದಿಗೆ ಲಾಗ್ ಇನ್ ಮಾಡಿರಿ.

3.ಲಾಗ್ ಇನ್ ಆದ ಮೇಲೆ ಈಗ ಬಲದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.

4.ನಿಮ್ಮ ಟೈಮ್ಲೈನ್ ​​ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿರಿ.

5.ನಿಮ್ಮ ಕಳೆದುಹೋದ ಫೋನ್ ಸ್ಥಳ ಕಂಡುಹಿಡಿಯಲು ಕಳೆದ ವರ್ಷ, ತಿಂಗಳು, ದಿನವನ್ನು ನಮೂದಿಸಿರಿ.

6.ನಮೂದಿಸಿದ ನಂತರ ಈಗ ನಕ್ಷೆಯಲ್ಲಿ ಕಳೆದ ಹಲವಾರು ವರ್ಷದಿಂದ ಪ್ರಸ್ತುತ ಸ್ಥಳದವರೆಗೆ ಸಂಪೂರ್ಣ ಮಾಹಿತಿ ಬರುತ್ತದೆ. ಇದರ ಮೂಲಕ ನೀವು ಸರಿಯಾದ ಲೊಕೇಶನ್ ತೋರಿ ಪೊಲೀಸರಿಗೆ ದೂರು ಸಲ್ಲಿಸಬವುದು ಇದರಿಂದ ಆದಷ್ಟು ಬೇಗ ನಿಮ್ಮ ಫೋನನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಹಾಯವಾಗುತ್ತದೆ.

ಗಮನಿಸಿ ನಿಮ್ಮ ಸ್ಮಾರ್ಟ್ಫೋನ್ ಮತ್ತು ಸ್ಥಳ ಸೇವೆ ಎರಡೂ ಆನ್ ಮಾಡಿದಾಗ ಮಾತ್ರ ಈ ಪ್ರಕ್ರಿಯೆಯು ಕಾರ್ಯನಿರ್ವಹಿಸುತ್ತದೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಡಿಜಿಟ್ ಕನ್ನಡ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo