ಮನೆಯೊಳಗೆ ಕಾಲಿಟ್ಟ ತಕ್ಷಣ Phone Network ಮಂಗಾ ಮಾಯವಾಗುತ್ತಿದ್ರೆ ಈ 5 ಅಂಶಗಳಿಂದ ಪರಿಹಾರ ಸಿಗಬಹುದು!

ಮನೆಯೊಳಗೆ ಕಾಲಿಟ್ಟ ತಕ್ಷಣ Phone Network ಮಂಗಾ ಮಾಯವಾಗುತ್ತಿದ್ರೆ ಈ 5 ಅಂಶಗಳಿಂದ ಪರಿಹಾರ ಸಿಗಬಹುದು!
HIGHLIGHTS

ಸ್ಮಾರ್ಟ್‌ಫೋನ್‌ಗಳಿಂದ ಹೆಚ್ಚು ತಲೆಕೆಡುವ ವಿಷಯವೆಂದರೆ ಫೋನ್ ನೆಟ್ವರ್ಕ್ (Phone Network) ಸಮಸ್ಯೆಯಾಗಿದೆ.

ಫೋನ್‌ನಲ್ಲಿ ಕೇವಲ ನೆಟ್ವರ್ಕ್ ಮಾತ್ರ ಇಲ್ಲವಾದರೆ ಬೇರೆ ಇರೋದೆಲ್ಲ ಒಂದು ರೀತಿಯಲ್ಲಿ ವ್ಯರ್ಥ ಅಂದ್ರೆ ತಪ್ಪಿಲ್ಲ.

ಮನೆಯಲ್ಲಿ ಮೊಬೈಲ್ ಫೋನ್ ನೆಟ್ವರ್ಕ್ (Phone Network) ದುರ್ಬಲವಾಗಿದ್ದರೆ ಸುಧಾರಿಸಲು ಹಲವು ಕ್ರಮಗಳು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಸಾಮಾನ್ಯವಾಗಿ ಮೊಬೈಲ್ ಸ್ಮಾರ್ಟ್‌ಫೋನ್‌ಗಳಿಂದ ಹೆಚ್ಚು ತಲೆಕೆಡುವ ವಿಷಯವೆಂದರೆ ಫೋನ್ ನೆಟ್ವರ್ಕ್ (Phone Network) ಸಮಸ್ಯೆಯಾಗಿದೆ. ನೀವು ನಂಬರ್ ರಿಚಾರ್ಜ್ ಮಾಡಿಕೊಂಡಿದ್ದು ಫೋನ್ ಉತ್ತಮ ಕಂಡೀಷನ್ ಹೊಂದಿದ್ದು ಬ್ಯಾಟರಿಯೂ ಪೂರ್ತಿಯಾಗಿದ್ದು ಕೇವಲ ನೆಟ್ವರ್ಕ್ ಮಾತ್ರ ಇಲ್ಲವಾದರೆ ಇರೋದೆಲ್ಲ ಒಂದು ರೀತಿಯಲ್ಲಿ ವ್ಯರ್ಥ ಅಂದ್ರೆ ತಪ್ಪಿಲ್ಲ. ಯಾಕೆಂದರೆ ಅನೇಕ ಬಾರಿ ನಾವು ಮನೆಯೊಳಗೆ ಕಾಲಿಟ್ಟ ತಕ್ಷಣ ಫೋನ್ ನೆಟ್ವರ್ಕ್ (Phone Network) ಮಾಯವಾಗುತ್ತಿದ್ರೆ ಈ 5 ಅಂಶಗಳಿಂದ ಪರಿಹಾರ ಪಡೆಯಬಹುದು. ನೆಟ್ವರ್ಕ್ ಇಲ್ಲದೆ ಕರೆ, ಮೆಸೇಜ್ ಅಥವಾ ಇಂಟರ್ನೆಟ್ ಬಳಸಲು ತುಂಬ ಕಷ್ಟವಾಗುತ್ತದೆ. ಈ ಸಮಸ್ಯೆಯು ಹಲವಾರು ಕಾರಣಗಳಿಗಾಗಿ ಸಂಭವಿಸುತ್ತಿರಬಹುದು. ನಿಮ್ಮ ಮನೆಯಲ್ಲಿ ಮೊಬೈಲ್ ಫೋನ್ ನೆಟ್ವರ್ಕ್ (Phone Network) ದುರ್ಬಲವಾಗಿದ್ದರೆ ಅದನ್ನು ಸುಧಾರಿಸಲು ಹಲವು ಕ್ರಮಗಳನ್ನು ಈ ಕೆಳಗೆ ನೀಡಿದ್ದೇವೆ.

Also Read: 6000mAh ಬ್ಯಾಟರಿ ಮತ್ತು 50MP ಕ್ಯಾಮೆರಾದ Vivo Y58 5G ಬಿಡುಗಡೆ! ಬೆಲೆ ಮತ್ತು ಟಾಪ್ 5 ಫೀಚರ್ ತಿಳಿಯಿರಿ!

ಮೊದಲು Phone Network ಸಮಸ್ಯೆಯ ಮೂಲ ಕಾರಣ ಪತ್ತೆ ಹಚ್ಚಿ:

ಹೌದು ಮೊದಲು ನೀವು ನಿಮ್ಮ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಸಿಗ್ನಲ್‌ಗೆ ಅಡ್ಡಿಯಾಗುವ ವಸ್ತುಗಳನ್ನು ಗುರುತಿಸುವುದು ಮುಖ್ಯವಾಗಿದೆ. ಇದಕ್ಕೆ ಉದಾಹರಣೆಗೆ ಲೋಹದ ಬಾಗಿಲುಗಳು, ಲೋಹದ ಫ್ರಮ್‌ಗಳನ್ನು ಹೊಂದಿರುವ ಗೋಡೆಗಳು, ಕಟ್ಟಡಗಳು ಮತ್ತು ಗಾಜಿನ ಲೇಪನದೊಂದಿಗೆ ನಿಂತಿರುವ ಕಟ್ಟಡಗಳು ನೆಟ್ವರ್ಕ್ ಸಿಗ್ನಲ್‌ ದುರ್ಬಲಕ್ಕೆ ಪ್ರಮುಖ ಕಾರಣವಾಗಿರುತ್ತದೆ. ನಿಮ್ಮ ಕಾರ್ಯಸ್ಥಳ ಭೂಮಿಯ ಕೆಳಗಿನ ಅಂದ್ರೆ ನಿಮ್ಮ ಮನೆಯ ಮುಂದಿರುವ ರಸ್ತೆಗಿಂತ ಕೆಳಗಿದ್ದರೆ ಅಥವಾ ಹೆಚ್ಚು ಗಾಳಿ ಪ್ರವೇಶಿಸದ ಸ್ಥಳದಲ್ಲಿದ್ದರೆ ಇಂತಹ ಸ್ಥಳಗಳಲ್ಲಿ ಸಹಜವಾಗಿಯೇ ನೆಟ್ವರ್ಕ್ ಸಿಗ್ನಲ್‌ ಕಡಿಮೆ ಇರುತ್ತದೆ. ಇದಕ್ಕೆ ಒಂದೇ ಪರಿಹಾರವೆಂದರೆ ಇಂತಹ ಸ್ಥಳಗಳಲ್ಲಿ ನೆಟ್ವರ್ಕ್ ಬೂಸ್ಟರ್ ಅಳವಡಿಸುವುದು ಮುಖ್ಯವಾಗಿರುತ್ತದೆ.

Know how to improve your phone network signal at home
Know how to improve your phone network signal at home

ನಿಮ್ಮ ಫೋನ್‌ ಕವರ್ ಕೇಸ್‌ ಪರಿಶೀಲಿಸಿಕೊಳ್ಳಿ:

ನಿಮ್ಮ ಮೊಬೈಲ್ ಫೋನ್ನೊಂದಿಗೆ ಬಳಸುತ್ತಿರುವ ನಿಮ್ಮ ಫೋನ್‌ ಕವರ್ ಕೇಸ್‌ ಪರಿಶೀಲಿಸಿಕೊಳ್ಳುವುದು ಉತ್ತಮ ಯಾಕೆಂದರೆ ಅದು ದಪ್ಪವಾಗಿದ್ದರೆ ಅಥವಾ ಯಾವುದೇ ಲೋಹದ ಪದಾರ್ಥಗಳಿಂದ ತಯಾರಿಸಲಾಗಿದ್ದರೆ ಅಂತಹ ಫೋನ್‌ ಕೇಸ್‌ಗಳು ಸಹ ಸಿಗ್ನಲ್‌ಗೆ ಅಡ್ಡಿಯಾಗಬಹುದು. ಉತ್ತಮ ಸಿಗ್ನಲ್‌ ಪಡೆಯಲು ಒಂದು ಸಲ ಫೋನ್‌ ಕೇಸ್‌ ತೆಗೆದುಹಾಕಿ ಸಿಗ್ನಲ್‌ ಹೆಚ್ಚಾಗಿದೆಯೇ ಎಂದು ಪರೀಕ್ಷಿಸಬಹುದು. ಸಾಧ್ಯವಾದಷ್ಟು ಸಣ್ಣ ಮತ್ತು ತೆಳ್ಳಗಿನ ಒಳ್ಳೆ ಮಾದರಿಯ ಕವರ್ ಕೇಸ್ ಬಳಸುವ ಸಲಹೆಯನ್ನು ನೀಡಲಾಗುತ್ತದೆ.

ಮನೆಯಲ್ಲಿ ಯಾವ ಸ್ಥಳದಲ್ಲಿ ಹೆಚ್ಚು ಸಿಗ್ನಲ್‌ ಬರುತ್ತದೆ ಗುರುತಿಸಿ:

ಇದು ನಿಮ್ಮ ಬಳಕೆಯನ್ನು ಹೆಚ್ಚಿಸಲು ಸಹಾಯವಾಗಲಿದೆ ಮನೆಯ ಒಳಗೆ ನಿಮಗೆ ಸಿಗ್ನಲ್‌ ಸಮಸ್ಯೆ ಇದ್ದರೆ ನಿಮಗೆ ಹೆಚ್ಚು ಮುಖ್ಯವಾದ ಅಂಶವಾಗಿದೆ. ಯಾಕೆಂದರೆ ಒಮ್ಮೆ ನಿಮಗೆ ಯಾವ ಸ್ಥಳದಲ್ಲಿ ನೆಟ್ವರ್ಕ್ ಲಭ್ಯವಿದೆಯೋ ಆ ಸ್ಥಳವನ್ನು ಗುರುತಿಸಿ ಬಳಕೆ ಮಾಡಬಹುದು. ಮನೆಯ ವಿವಿಧ ಭಾಗಗಳಲ್ಲಿ ನೆಟ್ವರ್ಕ್ ಸಿಗ್ನಲ್‌ ಪವರ್ ಅನ್ನು ಮಾಪನ ಮಾಡಿಕೊಳ್ಳುವುದು ಉತ್ತಮ. ಹೆಚ್ಚಾಗಿ ಇದನ್ನು ನೀವು ಬಾಲ್ಕನಿ, ಕಿಟಿಕಿ ಅಥವಾ ಮನೆಯ ನಿರ್ದಿಷ್ಟ ಕೋಣೆಯಲ್ಲಿ ಸಿಗ್ನಲ್‌ ಬಲವಾಗಿದೆ ಎಂದು ಗುರುತಿಸಿದರೆ ನೀವು ಸಾಧ್ಯವಾಗುವಷ್ಟು ಮಟ್ಟಿಗೆ ಅಲ್ಲಿಯೇ ಫೋನ್‌ ಬಳಸುವುದು ಸಹಾಯ ಮಾಡಬಹುದು.

Know how to improve your phone network signal at home
Know how to improve your phone network signal at home

ನಿಮ್ಮ Phone Network ಆಪರೇಟರ್‌ನ್ನು ಸಂಪರ್ಕಿಸಿ:

ನಿಮ್ಮ ಮನೆಯೊಂದಿಗೆ ನಿಮ್ಮ ಏರಿಯಾದಲ್ಲೂ ಹೆಚ್ಚಿನ ಫೋನ್ ನೆಟ್ವರ್ಕ್ ಸಿಗ್ನಲ್ ಹೆಚ್ಚು ಕಡಿಮೆ ಇದ್ದರೆ ಅಥವಾ ನಿಮ್ಮ ಮನೆ ಸೆಲ್ ಟವರ್‌ಗಿಂತ ಹೆಚ್ಚು ದೂರದಲ್ಲಿದ್ದರೆ ನಿಮ್ಮ ನೆಟ್‌ವರ್ಕ್ ಸೇವಾ ಪೂರೈಕೆದಾರರ ಗ್ರಾಹಕ ಸೇವಾ ವಿಭಾಗಕ್ಕೆ ಕರೆ ಮಾಡಿ ನೆಟ್ವರ್ಕ್ ಸಂಭಂದಿಸಿದ ಸಮಸ್ಯೆಗೆ ಕುರಿತು ದೂರು ನೀಡಬಹುದು. ಟೆಲಿಕಾಂ ಕಂಪನಿಯವರು ಸೆಲ್ ಟವರ್ ಸಿಗ್ನಲ್‌ ಪರೀಕ್ಷಿಸಿ ಹೆಚ್ಚಿಸಲು ಅಥವಾ ಬೇರೆ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯವಿರುತ್ತದೆ. ಒಂದು ವೇಳೆ ಅವರು ಇದಕ್ಕೆ ತಕ್ಕಂತೆ ಯಾವುದೇ ಸಹಾಯ ಮಾಡಲು ವಿಫಲವಾದರೆ ನೀವು ಬೇರೆ ಟೆಲಿಕಾಂ ಕಂಪನಿಗೆ ನಿಮ್ಮ ಇದೆ ಮೊಬೈಲ್‌ನೊಂದಿಗೆ ವರ್ಗಾವಣೆ (PORT OUT) ಮಾಡಿಕೊಳ್ಳಬಹುದು.

ನೆಟ್ವರ್ಕ್ ಸಿಗ್ನಲ್ ಬೂಸ್ಟರ್ ಬಳಸಿ:

ಕೊನೆಯದಾಗಿ ಈ ಪಟ್ಟಿಯ ಬಹು ಮುಖ್ಯವಾದ ಅಂಶವೆಂದರೆ ಈ ನೆಟ್ವರ್ಕ್ ಸಿಗ್ನಲ್ ಬೂಸ್ಟರ್‌ಗಳು (Network Singnal Booster) ಇವು ಸಿಗ್ನಲ್‌ ಹೆಚ್ಚಿಸುವ ಸಾಧನಗಳಾಗಿದ್ದು ನಿಮ್ಮ ಮನೆಯ ಅಥವಾ ಹತ್ತಿರದ ಉದ್ದವಿರುವ ಯಾವುದಾದರೊಂದು ಕಂಬಕ್ಕೆ ಕಟ್ಟಿ ಉತ್ತಮ ನೆಟ್ವರ್ಕ್ ಸಿಗ್ನಲ್ ಪಡೆಯಬಹುದು. ಆದರೆ ಈ ನೆಟ್ವರ್ಕ್ ಬೂಸ್ಟರ್ ಉಚಿತವಲ್ಲ ಇದಕ್ಕಾಗಿ ಪ್ರತ್ಯೇಕ ಹಣ ನೀಡಿ ಖರೀದಿಸಬೇಕುತ್ತದೆ. ಇದನ್ನು ಒಬ್ಬ ವ್ಯಯಕ್ತಿಕ ವ್ಯಕ್ತಿ ಅಥವಾ ಪೂರ್ತಿ ಕುಟುಂಬ ಸೇರಿ ಟೆಲಿಕಾಂ ಕಂಪನಿಯಿಂದ ಪಡೆಯಬಹುದು. ನೀವು ಇದನ್ನು ಎಲ್ಲಿಂದಾದರೂ ಪಡೆಯಿರಿ ಇದಕ್ಕೆ ನಿಮ್ಮ ನೆಟ್‌ವರ್ಕ್ ಆಪರೇಟರ್‌ ಅನುಮತಿ ಪಡೆಯುವುದು ಅತ್ಯಗತ್ಯವಾಗಿದೆ. ನಂತರ ಉತ್ತಮ ಕರೆ ಕ್ವಾಲಿಟಿಯೊಂದಿಗೆ ಫಾಸ್ಟ್ ಇಂಟರ್ನೆಟ್ ಸ್ಪೀಡ್ ಬಳಸಬಹುದು.

Know how to improve your phone network signal at home
Know how to improve your phone network signal at home

ಸೂಚನೆ: ನೀವು ಬೇಕಾದರೆ ಅಮೆಜಾನ್ ಅಥವಾ ಫ್ಲಿಪ್ಕಾರ್ಟ್ ಮೂಲಕವೂ ಸಹ 4G ಅಥವಾ 5G ನೆಟ್ವರ್ಕ್ ಬೂಸ್ಟರ್ ಡಿವೈಸ್ಗಳನ್ನು ಪಡೆಯಬಹುದು ಆದರೆ ಕೆಲವು ದೇಶಗಳಲ್ಲಿ ಈ ಸಿಗ್ನಲ್ ಬೂಸ್ಟರ್‌ಗಳು ಕಾನೂನುಬದ್ಧವಾಗಿದ್ದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎಂಬುದನ್ನು ಗಮನಿಸಬೇಕಿದೆ. ಈ ಬೂಸ್ಟರ್ ಅಯಾನೀಕರಿಸದ EMF ಎಂದು ಕರೆಯಲ್ಪಡುವ ಒಂದು ರೀತಿಯ ವಿಕಿರಣವನ್ನು ಹೊರಸೂಸುತ್ತವೆ. ಇದನ್ನು ಸಾಮಾನ್ಯವಾಗಿ ನಿರುಪದ್ರವವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಯಾಕೆಂದರೆ ಈ ಸಣ್ಣ ಸೆಲ್ ಫೋನ್ ಬೂಸ್ಟರ್‌ಗಳು ತಮ್ಮದೇ ಆದ ಸೆಲ್ಯುಲಾರ್ ಸಿಗ್ನಲ್‌ಗಳನ್ನು ರಚಿಸುವುದಿಲ್ಲ. ಇದು ಈಗಾಗಲೇ ಅಸ್ತಿತ್ವದಲ್ಲಿರುವ ಸಿಗ್ನಲ್‌ಗಳನ್ನು ಸೆಳೆದು ಸುಧಾರಿಸಿ ನಿಮ್ಮ ಬಳಕೆಗೆ ಯೋಗ್ಯವಾಗುವಂತೆ ಮಾಡುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo