ಮನೆಯಲ್ಲೇ ಕುಂತ್ತು ನಿಮ್ಮ WhatsApp ನಲ್ಲಿ PNR ಸಂಖ್ಯೆಯ ಸಂಪೂರ್ಣ ಸ್ಟೇಟಸ್ ಪಡೆಯುವುದೆಗೆಂದು ತಿಳಿಯೋಣ. ಮೊದಲು ಈ 10 ಅಂಕಿಯ PNR ಅಥವಾ ನೇರ ರೈಲು ಸ್ಥಿತಿಯನ್ನು ಪರೀಕ್ಷಿಸುವುದು ಕಷ್ಟಕರ ಕೆಲಸವಾಗಿತ್ತು. ಭಾರತೀಯ ರೈಲ್ವೆಯ ಮೀಸಲಾತಿ ವಿಚಾರಣಾ ಸಂಖ್ಯೆ '139' ಕ್ಕೆ ರೈಲು ಪ್ರಯಾಣಿಕರು ಕರೆ ನೀಡಬೇಕಾದರೆ ಅಥವಾ IRCTC ವೆಬ್ಸೈಟ್ ನವೀಕರಣಗಳನ್ನು ಪರಿಶೀಲಿಸಬೇಕಾಗಿತ್ತು ಈ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ ಇತ್ತೀಚೆಗೆ ನಿಮ್ಮ PNR ಸ್ಟೇಟಸ್ ನೇರ ರೈಲು ಸ್ಥಿತಿ ಮತ್ತು ಪ್ರಯಾಣಿಕರ ಸ್ಮಾರ್ಟ್ಫೋನ್ಗಳಲ್ಲಿ ಹೆಚ್ಚು ಬಲವಾದ ಮಾಹಿತಿಯನ್ನು ಪಡೆಯುತ್ತದೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
1.ನಿಮ್ಮ ಫೋನಲ್ಲಿ ಮೊದಲಿಗೆ WhatsApp ಇತ್ತೀಚಿನ ಲೇಟೆಸ್ಟ್ ಆವೃತ್ತಿಯನ್ನು ಹೊಂದಿರಬೇಕಾಗುತ್ತದೆ.
2.ಇದರೊಂದಿಗೆ ನಿಮ್ಮ ಫೋನಲ್ಲಿ ಇಂಟರ್ನೆಟ್ ಸೇವೆ ಲಭ್ಯವಿರಬೇಕಾಗುತ್ತದೆ.
3.ನಂತರ ನಿಮ್ಮ ಟ್ರೈನ್ ನಂಬರ್ ಮತ್ತು PNR ಸಂಖ್ಯೆಯೊಂದಿಗೆ ಈ ಹಂತಗಳನ್ನು ಅನುಸರಿಸಿರಿ.
4. ಮೊದಲಿಗೆ ನಿಮ್ಮ ಫೋನಲ್ಲಿ ಡೈಲ್ ಪ್ಯಾಡ್ ತೆರೆಯಿರಿ.
5. ಈಗ ಇದರಲ್ಲಿ '7349389104' ಈ ಸಂಖ್ಯೆಯನ್ನು ನಮೂದಿಸಿ ಸೇವ್ ಮಾಡಿಕೊಳ್ಳಿರಿ.
6. ನಂತರ ನಿಮ್ಮ WhatsApp ತೆರೆದು ಕಾಂಟೆಕ್ಟ್ ಪಟ್ಟಿಯನ್ನು ರಿಫ್ರೆಶ್ ಮಾಡಿರಿ.
7. ಇಲ್ಲಿ ನೀವು ಸೇವ್ ಮಾಡಿದ್ದ ನಂಬರಿನ ಮೇಲೆ ಟ್ಯಾಪ್ ಮಾಡಿ ಚಾಟ್ ಮಾಡಿ.
8. ಡೈರೆಕ್ಟ್ ಟ್ರೈನ್ ಸ್ಟೇಟಸನ್ನು ಚೆಕ್ ಮಾಡಲು ನಿಮ್ಮ ಟ್ರೈನ್ ನಂಬರ್ ಮತ್ತು PNR ಸಂಖ್ಯೆ ನಮೂದಿಸಿ
9. ಕೆಲವೇ ಕ್ಷಣಗಳಲ್ಲಿ MakeMyTrip ನಿಮ್ಮ PNR ಸಂಖ್ಯೆಯ ಸ್ಟೇಟಸ್ ಮತ್ತು ನಿಮ್ಮ ಬುಕಿಂಗ್ ಸ್ಟೇಟಸನ್ನು ಕಳುಹಿಸುತ್ತದೆ
10. ಈ ರೀತಿಯಲ್ಲಿ ಮನೆಯಲ್ಲೇ ಕುಂತ್ತು ನಿಮ್ಮ WhatsApp ನಲ್ಲಿ PNR ಸಂಖ್ಯೆಯ ಸಂಪೂರ್ಣ ಸ್ಟೇಟಸ್ ಪಡೆಯಬವುದು. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.