SIM Card Issued on Your Aadhaar Card: ಭಾರತದಲ್ಲಿ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ದೇಶದ ಎಲ್ಲಾ ನಿವಾಸಿಗಳಿಗೆ ವಿಶಿಷ್ಟ ಗುರುತು (UID) ಅಥವಾ ಆಧಾರ್ ಸಂಖ್ಯೆಗಳನ್ನು (Aadhaar Numbers) ನೀಡುವ ಜವಾಬ್ದಾರಿಯನ್ನು ಹೊತ್ತಿದೆ. ಇದರೊಂದಿಗೆ ನಿಮಗೊತ್ತಾ ಈ ಆಧಾರ್ ಕಾರ್ಡ್ ಎಷ್ಟು ಮುಖ್ಯವಾಗಿದೆ ಅಂದ್ರೆ ಈ ದಾಖಲೆ ಇಲ್ಲದೆ ಯಾವುದೇ ಅಧಿಕೃತ ಖಾತೆ ತೆರೆವು, ಸಿಮ್ ಕಾರ್ಡ್ ಖರೀದಿ, ಹಣದ ವ್ಯವಹಾರ ಅಥವಾ ಯಾವುದೇ ಸರ್ಕಾರಿ ಕೆಲಸ ಕಾರ್ಯ ಯಾವುದು ನಡೆಯೋಲ್ಲ ಅಂದ್ರೆ ಲೆಕ್ಕ ಹಾಕಿ.
ಇತ್ತೀಚೆಗೆ ಇಂತಹ ಹಲವು ಪ್ರಕರಣಗಳಲ್ಲಿ ಆಧಾರ್ ಕಾರ್ಡ್ ಅನೇಕ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಿರುವುದು ಕಂಡುಬಂದಿದೆ. ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿದ ನಂತರವೂ ಅನೇಕ ವಂಚನೆ ಪ್ರಕರಣಗಳು ನೋಡುತ್ತಿರಬಹುದು. ನಿಮಗೊತ್ತಾ ಹೊಸ ಸಿಮ್ ಕಾರ್ಡ್ (SIM Card) ಪಡೆಯಲು ಈಗ ನೀವು ಯಾವುದೇ Xerox ಪ್ರತಿಗಳನ್ನು ನೀಡುವ ಅಗತ್ಯಗಳಿಲ್ಲ. ಇದರ ಬದಲಾಗಿ ಕೇವಲ ನೀವು ನಿಮ್ಮ ಆಧಾರ್ ಸಂಖ್ಯೆ ಅಥವಾ ಮಾಸ್ಕ ಆಧಾರ್ ನೀಡಿದರೆ ಸಾಕು.
Also Read: POCO M7 Pro 5G ಸ್ಮಾರ್ಟ್ಫೋನ್ ಮೊದಲ ಮಾರಾಟ ಆರಂಭ! Flipkart ಆಫರ್ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
ಆನ್ಲೈನ್ ಸಿಮ್ ಕಾರ್ಡ್ ವಂಚನೆಗಳನ್ನು ತಪ್ಪಿಸಲು ದೂರಸಂಪರ್ಕ ಇಲಾಖೆ ಹೊಸ ಪೋರ್ಟಲ್ ಆರಂಭಿಸಿದೆ. ಈ ಪೋರ್ಟಲ್‌ನ ಹೆಸರು ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ (TAFCOP). ಈ ಪೋರ್ಟಲ್ ಸಹಾಯದಿಂದ ನಿಮ್ಮ ಆಧಾರ್ ಕಾರ್ಡ್ ಎಷ್ಟು ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಆಗಿದೆ ಎಂಬುದನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ನಿಮ್ಮ Aadhaar ಕಾರ್ಡ್‌ನಿಂದ ಎಷ್ಟು Sim ಕಾರ್ಡ್ ಖರೀದಿಯಾಗಿದೆ ತಿಳಿಯೋದು ಹೇಗೆ ಮುಂದೆ ತಿಳಿಯಿರಿ.
ಇದು ತುಂಬಾ ಮುಖ್ಯವಾದ ಪ್ರಶ್ನೆಯಾಗಿದ್ದು ಇದರ ಬಗ್ಗೆ ಸರ್ಕಾರಿ ಟೆಲಿಕಾಂ ಇಲಾಖೆಯಯಾಗಿರುವ ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಷನ್ (DoT) ಹೊರಡಿಸಿರುವ ನಿಯಮಗಳ ಪ್ರಕಾರ ಒಂದು ಆಧಾರ್ ಕಾರ್ಡ್‌ಗೆ 9 ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಬಹುದು ಯಾವುದೇ ಆಧಾರ್ ಬಳಕೆದಾರರ ಆಧಾರ್ ಕಾರ್ಡ್ 9 ಕ್ಕಿಂತ ಹೆಚ್ಚು ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಿದ್ದರೆ ನಂತರ ಅವರಿಗೆ ಸಂದೇಶ ಬರುತ್ತದೆ. ಒಂದೇ ಆಧಾರ್ ನಂಬರ್‌ರಿಂದ ಬಹು ಕನೆಕ್ಷನ್ ತೆಗೆದುಕೊಳ್ಳುವ ಸಂದರ್ಭಗಳು ದೊಡ್ಡ ಕುಟುಂಬಗಳಿಗೆ ಅನಿವಾರ್ಯವಾಗಿ ಈ ಸೌಲಭ್ಯವನ್ನು ಒದಗಿಸಲಾಗಿದೆ. ಆದಾಗ್ಯೂ ಈ ನಿಯಮವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ.