ನಿಮ್ಮ Aadhaar ಕಾರ್ಡ್‌ನಿಂದ ಎಷ್ಟು SIM Card ಖರೀದಿಯಾಗಿದೆ ತಿಳಿಯೋದು ಹೇಗೆ ಮುಂದೆ ತಿಳಿಯಿರಿ.
ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಕಾರ್ಡ್ (Aadhaar Card) ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಪ್ರತಿ ಕಡೆ ಆಧಾರ್ ಕಾರ್ಡ್ ಬದಲಾಗಿ ಕೇವಲ ನೀವು ನಿಮ್ಮ ಆಧಾರ್ ಸಂಖ್ಯೆ ಅಥವಾ ಮಾಸ್ಕ ಆಧಾರ್ ನೀಡಿದರೆ ಸಾಕು.
SIM Card Issued on Your Aadhaar Card: ಭಾರತದಲ್ಲಿ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ದೇಶದ ಎಲ್ಲಾ ನಿವಾಸಿಗಳಿಗೆ ವಿಶಿಷ್ಟ ಗುರುತು (UID) ಅಥವಾ ಆಧಾರ್ ಸಂಖ್ಯೆಗಳನ್ನು (Aadhaar Numbers) ನೀಡುವ ಜವಾಬ್ದಾರಿಯನ್ನು ಹೊತ್ತಿದೆ. ಇದರೊಂದಿಗೆ ನಿಮಗೊತ್ತಾ ಈ ಆಧಾರ್ ಕಾರ್ಡ್ ಎಷ್ಟು ಮುಖ್ಯವಾಗಿದೆ ಅಂದ್ರೆ ಈ ದಾಖಲೆ ಇಲ್ಲದೆ ಯಾವುದೇ ಅಧಿಕೃತ ಖಾತೆ ತೆರೆವು, ಸಿಮ್ ಕಾರ್ಡ್ ಖರೀದಿ, ಹಣದ ವ್ಯವಹಾರ ಅಥವಾ ಯಾವುದೇ ಸರ್ಕಾರಿ ಕೆಲಸ ಕಾರ್ಯ ಯಾವುದು ನಡೆಯೋಲ್ಲ ಅಂದ್ರೆ ಲೆಕ್ಕ ಹಾಕಿ.
ಇತ್ತೀಚೆಗೆ ಇಂತಹ ಹಲವು ಪ್ರಕರಣಗಳಲ್ಲಿ ಆಧಾರ್ ಕಾರ್ಡ್ ಅನೇಕ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಿರುವುದು ಕಂಡುಬಂದಿದೆ. ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿದ ನಂತರವೂ ಅನೇಕ ವಂಚನೆ ಪ್ರಕರಣಗಳು ನೋಡುತ್ತಿರಬಹುದು. ನಿಮಗೊತ್ತಾ ಹೊಸ ಸಿಮ್ ಕಾರ್ಡ್ (SIM Card) ಪಡೆಯಲು ಈಗ ನೀವು ಯಾವುದೇ Xerox ಪ್ರತಿಗಳನ್ನು ನೀಡುವ ಅಗತ್ಯಗಳಿಲ್ಲ. ಇದರ ಬದಲಾಗಿ ಕೇವಲ ನೀವು ನಿಮ್ಮ ಆಧಾರ್ ಸಂಖ್ಯೆ ಅಥವಾ ಮಾಸ್ಕ ಆಧಾರ್ ನೀಡಿದರೆ ಸಾಕು.
Also Read: POCO M7 Pro 5G ಸ್ಮಾರ್ಟ್ಫೋನ್ ಮೊದಲ ಮಾರಾಟ ಆರಂಭ! Flipkart ಆಫರ್ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
ನಿಮ್ಮ Aadhaar ಹೆಸರಲ್ಲಿ ಎಷ್ಟು Sim ಕಾರ್ಡ್‌ಗಳಿವೆ?
ಆನ್ಲೈನ್ ಸಿಮ್ ಕಾರ್ಡ್ ವಂಚನೆಗಳನ್ನು ತಪ್ಪಿಸಲು ದೂರಸಂಪರ್ಕ ಇಲಾಖೆ ಹೊಸ ಪೋರ್ಟಲ್ ಆರಂಭಿಸಿದೆ. ಈ ಪೋರ್ಟಲ್‌ನ ಹೆಸರು ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ (TAFCOP). ಈ ಪೋರ್ಟಲ್ ಸಹಾಯದಿಂದ ನಿಮ್ಮ ಆಧಾರ್ ಕಾರ್ಡ್ ಎಷ್ಟು ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಆಗಿದೆ ಎಂಬುದನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ನಿಮ್ಮ Aadhaar ಕಾರ್ಡ್‌ನಿಂದ ಎಷ್ಟು Sim ಕಾರ್ಡ್ ಖರೀದಿಯಾಗಿದೆ ತಿಳಿಯೋದು ಹೇಗೆ ಮುಂದೆ ತಿಳಿಯಿರಿ.
Aadhaar ಎಷ್ಟು ಸಿಮ್ ಕಾರ್ಡ್ ಲಿಂಕ್ ಆಗಿದೆ ಪರಿಶೀಲಿಸುವುದು ಹೇಗೆ?
- ಮೊದಲು ನೀವು TAFCOP (https://tafcop.dgtelecom.gov.in/) ನ ಪೋರ್ಟಲ್‌ಗೆ ಹೋಗಬೇಕು.
- ಇದರ ನಂತರ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
- ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
- ಇದರ ನಂತರ ನಿಮ್ಮ ಮುಂದೆ ಹೊಸ ವಿಂಡೋ ತೆರೆಯುತ್ತದೆ. ನಿಮ್ಮ ಮೊಬೈಲ್ ಸಂಖ್ಯೆಗಳಲ್ಲಿ ಎಷ್ಟು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗಿದೆ ಎಂಬುದನ್ನು ನೀವು ಇಲ್ಲಿ ಪರಿಶೀಲಿಸಬಹುದು.
- ಯಾವುದೇ ಸಂಖ್ಯೆಯ ಬಗ್ಗೆ ನಿಮಗೆ ಅನುಮಾನವಿದ್ದರೆ ನೀವು ಅದನ್ನು ನಿರ್ಬಂಧಿಸಬಹುದು.
ನಿಮ್ಮ ಆಧಾರ್ ಕಾರ್ಡ್ ಬಳಸಿ ಎಷ್ಟು ಸಿಮ್ ಖರೀದಿಸಬಹುದು?
ಇದು ತುಂಬಾ ಮುಖ್ಯವಾದ ಪ್ರಶ್ನೆಯಾಗಿದ್ದು ಇದರ ಬಗ್ಗೆ ಸರ್ಕಾರಿ ಟೆಲಿಕಾಂ ಇಲಾಖೆಯಯಾಗಿರುವ ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಷನ್ (DoT) ಹೊರಡಿಸಿರುವ ನಿಯಮಗಳ ಪ್ರಕಾರ ಒಂದು ಆಧಾರ್ ಕಾರ್ಡ್‌ಗೆ 9 ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಬಹುದು ಯಾವುದೇ ಆಧಾರ್ ಬಳಕೆದಾರರ ಆಧಾರ್ ಕಾರ್ಡ್ 9 ಕ್ಕಿಂತ ಹೆಚ್ಚು ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಿದ್ದರೆ ನಂತರ ಅವರಿಗೆ ಸಂದೇಶ ಬರುತ್ತದೆ. ಒಂದೇ ಆಧಾರ್ ನಂಬರ್‌ರಿಂದ ಬಹು ಕನೆಕ್ಷನ್ ತೆಗೆದುಕೊಳ್ಳುವ ಸಂದರ್ಭಗಳು ದೊಡ್ಡ ಕುಟುಂಬಗಳಿಗೆ ಅನಿವಾರ್ಯವಾಗಿ ಈ ಸೌಲಭ್ಯವನ್ನು ಒದಗಿಸಲಾಗಿದೆ. ಆದಾಗ್ಯೂ ಈ ನಿಯಮವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile