ಕರ್ನಾಟಕದ ರಾಕಿಂಗ್ ಸ್ಟಾರ್ (Rocking Star) ಯಶ್(Yash) ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 (KGF Chapter 2) ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಂತಿದ್ದಾರೆ. 2018 ಡಿಸೆಂಬರ್ನಲ್ಲಿ ಭಾಗ 1 ಬಿಡುಗಡೆಯಾಗಿತ್ತು ಇದೀಗ 2022 ರಲ್ಲಿ ಏಪ್ರಿಲ್ 14ರಂದು ಇದರ ಎರಡನೇಯದ ಭಾಗ ರಿಲೀಸ್ ಆಗಲಿದೆ. ಕೆಜಿಎಫ್ ಇಡೀ ವಿಶ್ವವನ್ನೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಅದ್ದೂರಿಯ ಸಿನಿಮಾ. ಕೆಜಿಎಫ್ ಎಂಬ ಹೆಸರನಲ್ಲೇ ಒಂದು ಖದರ್ ಇದೆ. ಅದರಲ್ಲಿ ನಟಿಸಿದ ಯಶ್ಗೊಂದು ಈಗ ಫೇಮ್ ಇದೆ. ರಾಕಿ ಭಾಯ್(Raki Bhai) ಅಂದರೆ ಜನ ಹುಚ್ಚೆದ್ದು ಕುಣಿಯುತ್ತಾರೆ. ಅಷ್ಟರ ಮಟ್ಟಿಗೆ ಕೆಜಿಎಫ್ ಸಿನಿಮಾ ಜನರ ತಲೆಯೊಳಗೆ ಹೊಕ್ಕಿದೆ. ಕೆಜಿಎಫ್ ಚಿತ್ರ ಆಧುನಿಕ ಕಾಲದಲ್ಲಿ ಕನ್ನಡ ಚಿತ್ರರಂಗವನ್ನ ಇಡೀ ಜಗತ್ತಿಗೇ ಪರಿಚಯಿಸಿದ ಸಿನಿಮಾ. ಈ ಮಧ್ಯೆ ಈಗ ಕೆಜಿಎಫ್ ಚಾಪ್ಟರ್ 2 (KGF Chapter 2) ಕುರಿತು ಹೊಸ ಅಪ್ಡೇಟ್ ಬಂದಿದೆ.
ಸ್ವತಃ ಈ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟ್ಟರ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ವಿಚಾರ ತಿಳಿದ ಫ್ಯಾನ್ಸ್ ಫುಲ್ ದಿಲ್ಖುಷ್ ಆಗಿದ್ದಾರೆ. ಹೊಂಬಾಳೆ ಬ್ಯಾನರ್ಸ್ 'ಕೆಜಿಎಫ್' ಫ್ಯಾನ್ಸ್ಗೆ ಟ್ವಿಟ್ಟರ್ನಲ್ಲಿ ಪ್ರಶ್ನೆಯೊಂದನ್ನ ಕೇಳಿತ್ತು. ನಿಮಗೆ ಕೆಜಿಎಫ್ ಭಾಗ 2ರಲ್ಲಿ ಮೊದಲು ಏನನ್ನು ನೋಡಬೇಕು ಅಂದುಕೊಂಡಿದ್ದೀರಿ ಎಂದು ಪ್ರಶ್ನೆ ಕೇಳಿತ್ತು. ಈ ಪೈಕಿ ಆಯ್ಕೆಗಳನ್ನು ಕೂಡ ಹೊಂಬಾಳೆ ಬ್ಯಾನರ್ಸ್ ನೀಡಿತ್ತು. ಅದರಲ್ಲಿ ಹಾಡು, ಟ್ರೈಲರ್ ಮತ್ತು ಸರ್ಪ್ರೈಸ್ ಬೇಕಾ ಎಂದು ಕೇಳಲಾಗಿತ್ತು. ಇದರಲ್ಲಿ ಶೇಕಡಾ 85ಕ್ಕಿಂತ ಹೆಚ್ಚು ಅಭಿಮಾನಿಗಳು ಟ್ರೈಲರ್ ಬೇಕು ಎಂದು ಉತ್ತರಿಸಿದ್ದಾರೆ. ಹೀಗಾಗಿ ಮಾರ್ಚ್ 27ಕ್ಕೆ ಸಂಜೆ 6:40 ಕ್ಕೆ ಕೆಜಿಎಫ್ ಟ್ರೈಲರ್ ರಿಲೀಸ್ ಮಾಡಲು ಸಕಲ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ.
https://twitter.com/prashanth_neel/status/1499263301523423232?ref_src=twsrc%5Etfw
ಕೆಜಿಎಫ್ ಚಾಪ್ಟರ್ 2 ಅಮೆಜಾನ್ ಪ್ರೈಮ್ ಒಡೆತನದಲ್ಲಿದೆ. ಮತ್ತು ಚಲನಚಿತ್ರವು ಅದರ ಬಳಕೆದಾರರಿಗಾಗಿ ಅಮೆಜಾನ್ ಪ್ರೈಮ್ (Amazon Prime) ನಲ್ಲಿ ಡಿಜಿಟಲ್ ಆಗಿ ಬಿಡುಗಡೆಯಾಗುತ್ತದೆ. ಚಲನಚಿತ್ರವು ಘೋಷಣೆಗೆ ಸಿದ್ಧವಾದ ನಂತರ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಡಿಜಿಟಲ್ನಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಯ ಅಧಿಕೃತ ದಿನಾಂಕವು ಒಮ್ಮೆ ಘೋಷಿಸಿದ ನಂತರ ಇದರ ನವೀಕರಣವಾಗಲಿದೆ. ಚಿತ್ರದಲ್ಲಿ ಯಶ್ ರಾಕಿ ಭಾಯ್ ಪಾತ್ರವನ್ನು ನಿರ್ವಹಿಸುತ್ತಿದ್ದರೆ ಸಂಜಯ್ ದತ್ (Sanjay Dutt) ದಕ್ಷಿಣ ಭಾರತದ ಚಲನಚಿತ್ರೋದ್ಯಮಕ್ಕೆ ಅಧೀರನ ಪಾತ್ರದಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ (Srinidhi Shetty) ಮತ್ತು ರವೀನಾ ಟಂಡನ್ (Raveena Tandon) ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಸಹ ಮೊದಲ ಭಾಗದಂತೆ ಕೋಲಾರ ಗೋಲ್ಡ್ ಫೀಲ್ಡ್ಸ್ (KGF) ರಕ್ತ ನೆನೆಸಿದ ಭೂಮಿ ಈಗ ಹೊಸ ಅಧಿಪತಿಯನ್ನು ಹೊಂದಿದೆ. ರಾಕಿ ಅವರ ಹೆಸರು ತನ್ನ ವೈರಿಗಳ ಹೃದಯದಲ್ಲಿ ಭಯವನ್ನು ಉಂಟುಮಾಡುತ್ತದೆ. ಅವನ ಮಿತ್ರರು ರಾಕಿಯನ್ನು ತಮ್ಮ ಸಂರಕ್ಷಕನಾಗಿ ನೋಡುತ್ತಾರೆ. ಸರ್ಕಾರವು ಅವನನ್ನು ಕಾನೂನು ಮತ್ತು ಸುವ್ಯವಸ್ಥೆಗೆ ಬೆದರಿಕೆಯಾಗಿ ನೋಡುತ್ತದೆ. ಶತ್ರುಗಳು ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತ ಅವನತಿಗೆ ಪಿತೂರಿ ಮಾಡುತ್ತಿದ್ದಾರೆ. ರಾಕಿ ಅವಿರೋಧವಾದ ಪ್ರಾಬಲ್ಯಕ್ಕಾಗಿ ತನ್ನ ಅನ್ವೇಷಣೆಯನ್ನು ಮುಂದುವರೆಸುತ್ತಿರುವಾಗ ರಕ್ತಮಯವಾದ ಯುದ್ಧಗಳು ಮತ್ತು ಕರಾಳ ದಿನಗಳು ಕಾಯುತ್ತಿವೆ.