Kannada OTT App: ಓಟಿಟಿ ವಲಯಕ್ಕೆ ಕಾಲಿಟ್ಟ ಕನ್ನಡದ ಮೊದಲ ಓಟಿಟಿ ಅಪ್ಲಿಕೇಶನ್ ಟಾಕೀಸ್

Updated on 05-May-2022
HIGHLIGHTS

ಎಕ್ಸ್​ಕ್ಲೂಸಿವ್​ ಆಗಿ ಕನ್ನಡದ ಕಂಟೆಂಟ್​ಗಳಿಗಾಗಿ ‘ಟಾಕೀಸ್​’ (Talkies Kannada OTT) ಆರಂಭ

ಸಿನಿಮಾ ಮತ್ತು ಕಿರುಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದ ‘ಟಾಕೀಸ್​’ ಈಗ ತನ್ನ ವ್ಯಾಪ್ತಿ ಹಿರಿದಾಗಿಸಿಕೊಂಡಿದೆ.

ಕನ್ನಡಕ್ಕೂ ಕಾಲಿಟ್ಟಿದ್ದು OTT App ಸಕಲ ತಯಾರಿಯೊಂದಿಗೆ ಕಾರ್ಯಾರಂಭ ಮಾಡಿದೆ.

ಹ್ಯಾಟ್ರಿಕ್ ಹೀರೊ ಮತ್ತು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರು ಜನಪ್ರಿಯ ತುಳು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಟಾಕೀಸ್‌ನ ಕನ್ನಡ ಕಂಟೆಂಟ್ ಬಕೆಟ್ ಅನ್ನು ತೆರೆಯುವುದಾಗಿ ಘೋಷಿಸಿದರು. ವಿಜಯ್ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಚಿತ್ರವನ್ನು ನಿರ್ಮಿಸಿದ ಸ್ವಯಂಪ್ರಭ ಪ್ರೊಡಕ್ಷನ್ಸ್‌ನ ಉಪಕ್ರಮವು ಎರಡು ವರ್ಷಗಳಿಂದ ಟಾಕೀಸ್ ಕಾರ್ಯನಿರ್ವಹಿಸುತ್ತಿದೆ, ವ್ಯಾಪಕವಾದ ತುಳು ಚಲನಚಿತ್ರ ವಿಭಾಗದೊಂದಿಗೆ (200 ಕ್ಕೂ ಹೆಚ್ಚು ಶೀರ್ಷಿಕೆಗಳು) ಹೊರಗಿನ ಭಾಷೆಯಲ್ಲಿ ಚಲನಚಿತ್ರಗಳ ಪ್ರದರ್ಶನಕ್ಕಾಗಿ ವ್ಯಾಪಕವಾದ ಬೇಡಿಕೆಯನ್ನು ಪೂರೈಸುತ್ತದೆ.

ಟಾಕೀಸ್ (Talkies) ಕನ್ನಡದ ಮೊದಲ ಓಟಿಟಿ ಅಪ್ಲಿಕೇಶನ್

ಇಂದಿನ ಕಾಲದಲ್ಲಿ ಒಟಿಟಿ ವೇದಿಕೆಯ (OTT Platform) ಪ್ರಾಮುಖ್ಯತೆ ಬಗ್ಗೆ ಅವರು ಮಾತನಾಡಿ ಎಕ್ಸ್​ಕ್ಲೂಸಿವ್​ ಆಗಿ ಕನ್ನಡದ ಕಂಟೆಂಟ್​ಗಳಿಗಾಗಿ ‘ಟಾಕೀಸ್​’ (Talkies Kannada OTT) ಆರಂಭ ಆಗಿದೆ. ಇದರಲ್ಲಿ ಹಲವು ವಿಶೇಷತೆಗಳಿವೆ. ಹಾಗಾಗಿ ಶಿವಣ್ಣ ಅವರು ಈ ತಂಡದ ಬೆನ್ನು ತಟ್ಟಿದ್ದಾರೆ. ಇಂಥ ಕಾರ್ಯಗಳಿಗೆ ತಮ್ಮ ಬೆಂಬಲ ಯಾವಾಗಲೂ ಇರಲಿದೆ ಎಂದು ಅವರು ಭರವಸೆ ನೀಡಿದರು.

ಈ ಮೊದಲು ತುಳು ಸಿನಿಮಾ ಮತ್ತು ಕಿರುಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದ ‘ಟಾಕೀಸ್​’ ಈಗ ತನ್ನ ವ್ಯಾಪ್ತಿ ಹಿರಿದಾಗಿಸಿಕೊಂಡಿದೆ. ಕನ್ನಡಕ್ಕೂ ಕಾಲಿಟ್ಟಿದ್ದು ಸಕಲ ತಯಾರಿಯೊಂದಿಗೆ ಕಾರ್ಯಾರಂಭ ಮಾಡಿದೆ. ಇದರಲ್ಲಿ ಕನ್ನಡದ ಅನೇಕ ಒರಿಜಿನಲ್​ ಕಂಟೆಂಟ್​ಗಳು ಲಭ್ಯ ಆಗುತ್ತಿವೆ. ಖ್ಯಾತ ಕಲಾವಿದರು ನಟಿಸಿರುವ ಸಿನಿಮಾ, ಕಿರುಚಿತ್ರ, ವೆಬ್​ ಸೀರಿಸ್​ಗಳನ್ನು ಪ್ರೇಕ್ಷಕರು ‘ಟಾಕೀಸ್​’ನಲ್ಲಿ ನೋಡಬಹುದು.

ವಿಜಯ್​ ರಾಘವೇಂದ್ರ, ಪ್ರಮೋದ್​ ಶೆಟ್ಟಿ, ರಂಜನಿ ರಾಘವನ್​, ಮಂಜು ಪಾವಗಡ, ವೈಷ್ಣವಿ ಗೌಡ, ಭೂಮಿ ಶೆಟ್ಟಿ, ಹರೀಶ್​ ರಾಜ್​ ಸೇರಿದಂತೆ 1200ಕ್ಕೂ ಅಧಿಕ ಕಲಾವಿದರು ‘ಟಾಕೀಸ್​’ ಜೊತೆ ಕೈ ಜೋಡಿಸಿದ್ದಾರೆ. 700ಕ್ಕೂ ಹೆಚ್ಚು ತಂತ್ರಜ್ಞರು ಕೆಲಸ ಮಾಡಿದ್ದಾರೆ. 200ಕ್ಕೂ ಅಧಿಕ ದಿನಗಳ ಪರಿಶ್ರಮದಿಂದ ಈ ಒಟಿಟಿ ಶುರುವಾಗಿದೆ. 400ಕ್ಕಿಂತಲೂ ಹೆಚ್ಚಿನ ಕನ್ನಡ ಸಿನಿಮಾಗಳು ಇದರಲ್ಲಿ ಲಭ್ಯವಾಗುತ್ತಿವೆ. ಇದರ ಜೊತೆಗೆ ಇನ್ನೂ ಹೊಸ ಹೊಸ ಮನರಂಜನಾ ಕಂಟೆಂಟ್​ಗಳನ್ನು ನಿರ್ಮಿಸುವ ಗುರಿಯೊಂದಿಗೆ ‘ಟಾಕೀಸ್​’ ಮುಂದಡಿ ಇಟ್ಟಿದೆ. ಇದರಿಂದ ಸಾಕಷ್ಟು ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಅವಕಾಶ ಸಿಗಲಿದೆ.

‘ಟಾಕೀಸ್​’ ಬಗ್ಗೆ ಶಿವರಾಜ್​ಕುಮಾರ್​ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ‘ಕನ್ನಡಿಗರಿಂದ ಕನ್ನಡಿಗರಿಗೋಸ್ಕರ ಎಂಬ ಆಶಯದೊಂದಿಗೆ ಈ ಟಾಕೀಸ್​ ಒಟಿಟಿ ಶುರುವಾಗಿದೆ. ಇದರಿಂದ ಕನ್ನಡಿಗರಿಗೆ ಉದ್ಯೋಗ ಸಿಗುತ್ತದೆ. ಇದು ಬೇರೆ ಭಾಷೆಯ ಒಟಿಟಿಗಿಂತಲೂ ಕಮ್ಮಿ ಇಲ್ಲದಂತೆ ಬೆಳೆಯುತ್ತದೆ ಎಂಬ ನಂಬಿಕೆ ನನಗಿದೆ. ಈ ಅವಕಾಶವನ್ನು ಕನ್ನಡದ ಕಲಾವಿದರು ಮತ್ತು ತಂತ್ರಜ್ಞರು ಉಪಯೋಗ ಮಾಡಿಕೊಳ್ಳಬೇಕು. ಓಕೆ ಆಗದಿದ್ದರೂ ಪರವಾಗಿಲ್ಲ. ಧೈರ್ಯವಾಗಿ ಕಥೆ ಹೇಳಿ. ಒಳ್ಳೊಳ್ಳೆಯ ವೆಬ್​ ಸಿರೀಸ್​ ಕನ್ನಡದಲ್ಲಿ ನಿರ್ಮಾಣ ಆಗಲಿ. 

ನಮ್ಮಲ್ಲೂ ಸಾಕಷ್ಟು ಜನ ಬುದ್ಧಿವಂತರು ಮತ್ತು ಪ್ರತಿಭಾವಂತರು ಇದ್ದರೆ. ಅವರ ಪ್ರತಿಭೆಯನ್ನು ಗುರುತಿಸಲು ಬಂದಿರುವ ರತ್ನಾಕರ್​ ಕಾಮತ್​ ಅವರಿಗೆ ಧನ್ಯವಾಗಳು’ ಎಂದು ಶಿವಣ್ಣ ಹೇಳಿದ್ದಾರೆ. ಲಾಕ್​ಡೌನ್​ ಬಳಿಕ ಒಟಿಟಿ ಪ್ಲಾಟ್​ಫಾರ್ಮ್​ಗಳ ಬಳಕೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಶಿವರಾಜ್​ಕುಮಾರ್​ ಅವರು ಕೂಡ ವೆಬ್​ ಸರಣಿಗಳಲ್ಲಿ ನಟಿಸಲಿದ್ದಾರೆ. ಆ ಬಗ್ಗೆ ಇದೇ ವೇದಿಕೆಯಲ್ಲಿ ಅವರು ಮಾಹಿತಿ ಹಂಚಿಕೊಂಡರು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :