‘ಈಗ ಜಿಯೋಫೋನ್ ಬಂದ್’ ಎಂಬ ವದಂತಿಯನ್ನು ರದ್ದುಪಡಿಸಿ ಅತಿ ಶೀಘ್ರದಲ್ಲೇ ಮತ್ತೆ ತನ್ನ ಪ್ರೀ-ಬುಕಿಂಗನ್ನು ಪ್ರಕಟಿಸಲಿದೆ.

Updated on 31-Oct-2017

ಈಗ ರಿಲಯನ್ಸ್ ಜಿಯೊ ತನ್ನ ಜಿಯೋಫೋನ್ನ ಉತ್ಪಾದನೆಯನ್ನು ನಿಲ್ಲಿಸಲಿದೆ ಎಂದು ನಿನ್ನೆ ವರದಿಯೊಂದು ಸುದ್ದಿ ಮಾಡಿತ್ತು. ಆದರೆ ಅದು ನಿಜವಾಗಿ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ಫೋನ್ ತಯಾರಿಸಲು ಕಂಪನಿಯೊಂದಿಗೆ ಗೂಗಲ್ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ವರದಿಯಾ ಬಹಿರಂಗಗೊಂಡ ಬಳಿಕ ಜಿಯೋ ಈ ಮಾಹಿತಿಯನ್ನು ನಿರಾಕರಿಸಿದಂತೆ ಹೇಳಿಕೆ ನೀಡಿತ್ತು. ಅಲ್ಲದೆ ಜಿಯೋಫೋನ್ 'ಭಾರತ ಕಾ ಸ್ಮಾರ್ಟ್ಫೋನ್' ದೇಶದ ಡಿಜಿಟಲ್ ದೃಷ್ಟಿ ಪೂರೈಸುವಲ್ಲಿ ಬದ್ಧವಾಗಿದೆ. 

JioPhone ನೊಂದಿಗೆ ಡಿಜಿಟಲ್ ಜೀವನಕ್ಕೆ ಚಲಿಸುತ್ತಿರುವ ಆರಂಭಿಕ 6 ಮಿಲಿಯನ್ ಭಾರತೀಯರನ್ನು ಜಿಯೋ ಸ್ವಾಗತಿಸುತ್ತಿದೆ.  ಮತ್ತು ಶೀಘ್ರದಲ್ಲೇ ಮುಂದಿನ ಜಿಯೋಫೋನ್ ಬುಕಿಂಗ್ ದಿನಾಂಕವನ್ನು ಪ್ರಕಟಿಸಲಿದೆ. ಈಗ ಜಿಯೋ ತನ್ನ ಎರಡನೇ ಸುತ್ತಿನ ಮುಂಚೆ ಬುಕಿಂಗ್ ಅತಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ರಿಲಯನ್ಸ್ ಜಿಯೊ ಹೇಳಿದೆ. ಮತ್ತು ಸದ್ಯಕ್ಕೆ ಇದರ ಯಾವುದೇ ನಿರ್ದಿಷ್ಟ ದಿನಾಂಕವನ್ನು ಹೇಳಲಾಗಿಲ್ಲ. ಜಿಯೊಫೋನ್ ಫೋನ್ ಕೈಯೋಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ.  

ಇದು Firefox OS ಫೋರ್ಕ್ಡ್ ಆವೃತ್ತಿಯಾಗಿದೆ. ಮತ್ತು ಪ್ರಸ್ತುತವಾಗಿ JioPhone ಕೇವಲ JioMusic, JioTV ಮತ್ತು ಹೆಚ್ಚಿನಂತಹ Jio ಅಪ್ಲಿಕೇಶನ್ಗಳನ್ನು ಬೆಂಬಲಿಸುತ್ತದೆ. ಫೇಸ್ಬುಕ್ ಮತ್ತು Whatsapp ನಂತಹ ಜನಪ್ರಿಯ ಅಪ್ಲಿಕೇಶನ್ಗಳು ಇನ್ನೂ ಬೆಂಬಲಿತವಾಗಿಲ್ಲ.  ಆದರೆ ಕಂಪನಿಯು ಈ ಅಪ್ಲಿಕೇಶನ್ಗಳನ್ನು ವೈಶಿಷ್ಟ್ಯದ ಫೋನ್ನಲ್ಲಿ ತರುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗುತ್ತದೆ. 

ಈಗ ಜಿಯೋಫೋನ್ಗಾಗಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರ್ತಿ ಏರ್ಟೆಲ್ ತನ್ನ ಎದುರಾಳಿಯಾಗಿ ಅದೇ ಕಡಿಮೆ ವೆಚ್ಚದ ಹೊಸ 4G ಸ್ಮಾರ್ಟ್ಫೋನನ್ನು ಪ್ರಾರಂಭಿಸಿದೆ. ಮತ್ತು ಕಾರ್ಬನ್ ಜೊತೆ A40 ಇಂಡಿಯನ್ ಎಂಬ 4G ಸ್ಮಾರ್ಟ್ಫೋನನ್ನು ಕೇವಲ 1,399 ರೂ ನಂತರ ಸೆಲ್ಕಾನ್ ಜೊತೆಗಿನ ಪಾಲುದಾರಿಕೆಯಲ್ಲಿ ಮತ್ತೊಂದು ಕಡಿಮೆ ವೆಚ್ಚದ 4G ಫೋನನ್ನು ಏರ್ಟೆಲ್ ಪ್ರಕಟಿಸಿದೆ ಇದು ಸಹ 1,349 ರೂ ಬೆಲೆಯಲ್ಲಿ ಲಭ್ಯವಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :