Reliance Jio AGM 2023: ಜಿಯೋಫೋನ್ 5G ಆಗಸ್ಟ್ 28ಕ್ಕೆ ಅಧಿಕೃತವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ!

Reliance Jio AGM 2023: ಜಿಯೋಫೋನ್ 5G ಆಗಸ್ಟ್ 28ಕ್ಕೆ ಅಧಿಕೃತವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ!
HIGHLIGHTS

ರಿಲಯನ್ಸ್ ಪ್ರತಿವರ್ಷದಂತೆ ವರ್ಷವೂ ಸಹ ತನ್ನ ವಾರ್ಷಿಕ ಸಾಮಾನ್ಯ ಸಭೆಯ (AGM - Annual General Meeting) ದಿನಾಂಕವನ್ನು ಪ್ರಕಟಿಸಿದೆ

ಈ ಸಭೆ ರಿಲಯನ್ಸ್ ಎಜಿಎಂ (AGM 2023) ಈ ತಿಂಗಳ ಕೊನೆ ವಾರ ಅಂದ್ರೆ 28ನೇ ಆಗಸ್ಟ್ 2023 ರಂದು ನಡೆಯಲಿದೆ

ಈ ಸಭೆಯಲ್ಲಿ ಅತಿ ನಿರೀಕ್ಷಿತ JioPhone 5G ಸ್ಮಾರ್ಟ್ಫೋನ್ ಮತ್ತು Jio AirFiber 5G ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ ಎಂಬ ವದಂತಿಗಳಿವೆ

ಭಾರತದ ಅತಿದೊಡ್ಡ  ಕಂಪನಿಯಾಗಿರುವ ರಿಲಯನ್ಸ್ ಪ್ರತಿವರ್ಷದಂತೆ  ವರ್ಷವೂ ಸಹ ತನ್ನ ವಾರ್ಷಿಕ ಸಾಮಾನ್ಯ ಸಭೆಯ (AGM – Annual General Meeting) ದಿನಾಂಕವನ್ನು ಪ್ರಕಟಿಸಿದೆ. ಈ ಸಭೆ ರಿಲಯನ್ಸ್ ಎಜಿಎಂ (AGM 2023) ಈ ತಿಂಗಳ ಕೊನೆ ವಾರ ಅಂದ್ರೆ 28ನೇ ಆಗಸ್ಟ್ 2023 ರಂದು ನಡೆಯಲಿದೆ. ಇದು ರಿಲಯನ್ಸ್ ಕಂಪನಿಯ 46ನೇ ಮಹಾಸಭೆಯಾಗಿದ್ದು ಈ ವರ್ಷದ ಸಾಮಾನ್ಯ ಸಭೆಯನ್ನು ರಿಲಯನ್ಸ್ ಜಿಯೋ  ಯುಟ್ಯೂಬ್‌ ಚಾನಲ್‌ನಲ್ಲಿ ನೇರ ಲೈವ್-ಸ್ಟ್ರೀಮ್ ಮಾಡುವ ನಿರೀಕ್ಷೆಯಿದೆ. 

ವಾರ್ಷಿಕ ಸಾಮಾನ್ಯ ಸಭೆಯ (AGM 2023)

ರಿಲಯನ್ಸ್ ಈ AGM 2023 ಸಭೆಯಲ್ಲಿ ಅತಿ ನಿರೀಕ್ಷಿತ JioPhone 5G ಸ್ಮಾರ್ಟ್ಫೋನ್ ಮತ್ತು Jio AirFiber 5G ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ ಎಂಬ ವದಂತಿಗಳಿವೆ. ರಿಲಯನ್ಸ್ ಎಜಿಎಂ (AGM 2023) ರಲ್ಲಿ ಕಂಪನಿಯ CEO ಆಗಿರುವ ಶ್ರೀ ಮುಖೇಶ್ ಅಂಬಾನಿಯವರು ಕಂಪನಿಯ ಮುಂದಿನ ಬೆಳವಣಿಗೆಯ ಬಗ್ಗೆ ಒಂದೊಂದೆ ಎಳೆ ಎಳೆಯಾಗಿ ವಿವರಿಸುವ ನಿರೀಕ್ಷೆಯಿದೆ. ಅದರೊಂದಿಗೆ ಅವರು ಜಿಯೋ ಬಳಕೆದಾರರಿಗೆ ಹೊಸ 5G ಯೋಜನೆಗಳನ್ನು ಸಹ ಘೋಷಿಸಬಹುದು.

ರಿಲಯನ್ಸ್ ಜಿಯೋಫೋನ್ 5G 

ನಿಮಗೊತ್ತಾ ಈಗಾಗಲೇ ಮುಖೇಶ್ ಅಂಬಾನಿ ಜಿಯೋ ಬ್ರಾಂಡ್ ಅಡಿಯಲ್ಲಿ ಭಾರತದಲ್ಲಿ ಕೈಗೆಟುಕುವ 5G ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಗೂಗಲ್‌ನೊಂದಿಗೆ ಸಹಯೋಗವನ್ನು ಘೋಷಿಸಿದ್ದರು. ಈಗ Jio 5G ಸ್ಮಾರ್ಟ್‌ಫೋನ್ ಅನ್ನು AGM 2023 ರಲ್ಲಿ ಬಿಡುಗಡೆ ಮಾಡಬಹುದೆಂಬ ಬಲವಾದ ಊಹಾಪೋಹಗಳಿವೆ. ಸ್ಮಾರ್ಟ್ಫೋನ್ ಈ ಹಿಂದೆ Geekbench ನಲ್ಲಿ ಗುರುತಿಸಲಾಗಿತ್ತು. ಜಿಯೋ ಫೋನ್ 5G ಯಲ್ಲಿ ಸ್ನಾಪ್‌ಡ್ರಾಗನ್ 480+ ಚಿಪ್‌ಸೆಟ್ ಆಂಡ್ರಾಯ್ಡ್ 12 ಓಎಸ್ ಅನ್ನು ವರದಿಗಳು ಬಹಿರಂಗಪಡಿಸಿವೆ. 

ಇತ್ತೀಚೆಗೆ ಕೆಲವು ಹೊಸ ರೆಂಡರ್‌ಗಳು ಸಹ ಸೋರಿಕೆಯಾಗಿವೆ ಇದು ಸನ್ನಿಹಿತವಾದ ಉಡಾವಣೆಯನ್ನು ಸೂಚಿಸುತ್ತದೆ. ಮುಂದಿನ ಸಾಲಿನಲ್ಲಿ ಜಿಯೋ 5G ಯೋಜನೆಗಳು. ಜಿಯೋ 5G ಸಂಪರ್ಕವನ್ನು ಈಗಾಗಲೇ ವಿವಿಧ ನಗರಗಳಲ್ಲಿ ಅಳವಡಿಸಲಾಗಿದೆ. 5G ಯೋಜನೆಗಳನ್ನು ಇನ್ನೂ ಘೋಷಿಸಲಾಗಿಲ್ಲ ಮತ್ತು ಬಳಕೆದಾರರು ಅಸ್ತಿತ್ವದಲ್ಲಿರುವ 4G ಯೋಜನೆಗಳಿಂದ 5G ಸೇವೆಗಳನ್ನು ಪ್ರವೇಶಿಸುತ್ತಿದ್ದಾರೆ. ಈ ವಾರ್ಷಿಕ ಸಾಮಾನ್ಯ ಸಭೆಯ (AGM 2023) ಸಭೆಯಲ್ಲಿ ಅಂತಿಮವಾಗಿ ಹೊಸ 5G ಯೋಜನೆಗಳನ್ನು ಅನಾವರಣಗೊಳಿಸುವ ನಿರೀಕ್ಷೆ

ರಿಲಯನ್ಸ್ ಜಿಯೋ ಏರ್‌ಫೈಬರ್‌ 5G

ಜಿಯೋ ಈ ಹಿಂದೆ ಘೋಷಿಸಿದ ಮತ್ತೊಂದು ಉತ್ಪನ್ನವೆಂದರೆ Jio AirFiber 5G ಹಾಟ್‌ಸ್ಪಾಟ್ ಡಿವೈಸ್ ಆಗಿದೆ. 2023 AGM ಸಾಧನದ ಬೆಲೆ ಮತ್ತು ಲಭ್ಯತೆಯನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ. ಜಿಯೋ ಏರ್‌ಫೈಬರ್ ಅನ್ನು ಮನೆ ಅಥವಾ ಕಚೇರಿ ಬಳಕೆಗಾಗಿ ವೈರ್‌ಲೆಸ್ ಫೈಬರ್ ಸಂಪರ್ಕದಂತೆಯೇ ಅಲ್ಟ್ರಾ-ಹೈ-ಸ್ಪೀಡ್ 5G ಸಂಪರ್ಕವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಹೊಸ ಫೈಬರ್ 5G ಯೋಜನೆಗಳನ್ನು ಅನಾವರಣಗೊಳಿಸಲಿದ್ದು ಇದು ಪ್ರಸ್ತುತ ಫೈಬರ್ ಯೋಜನೆಗಳಂತೆಯೇ ಬೆಲೆಯನ್ನು ಹೊಂದುವ ನಿರೀಕ್ಷೆಗಳಿವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo