ರಿಲಯನ್ಸ್ ಜಿಯೋ ಈಗ ದೇಶದಲ್ಲಿ ಲ್ಯಾಪ್‌ಟಾಪ್ ವಲಯಕ್ಕೂ ಕಾಲಿಟ್ಟಿ ತನ್ನ ಮೊಟ್ಟ ಮೊದಲ ಜಿಯೋಬುಕ್ ಲ್ಯಾಪ್‌ಟಾಪ್ (JioBook Laptop) ಅನ್ನು ಕೈಗೆಟಕುವ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಜಿಯೋ ತನ್ನ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವ ಕ್ರಮದಲ್ಲಿ ಈ ಹೊಸ ಜಿಯೋಬುಕ್ ಲ್ಯಾಪ್‌ಟಾಪ್ (JioBook Laptop) ಅನ್ನು ಕೇವಲ ರೂ ₹16,499 ಕ್ಕೆ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಇದು ಸಾಮಾನ್ಯ ಬಳಕೆಗಾಗಿ ಮೂಲಭೂತ ಲ್ಯಾಪ್ಟಾಪ್ ಆಗಿದೆ.
ಲ್ಯಾಪ್‌ಟಾಪ್ ಜೊತೆಗೆ ಜನರು ಡಿಜಿಬಾಕ್ಸ್‌ನಲ್ಲಿ 100GB ಉಚಿತ ಕ್ಲೌಡ್ ಸ್ಟೋರೇಜ್ ಜಾಗವನ್ನು ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ ಮತ್ತು ಇದು ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ. ಅದರ ವೈಶಿಷ್ಟ್ಯಗಳು ಮತ್ತು ಮಾರಾಟದ ವಿವರಗಳನ್ನು ಒಳಗೊಂಡಂತೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ. ಹೊಸ ಜಿಯೋ ಲ್ಯಾಪ್‌ಟಾಪ್ ಆಗಸ್ಟ್ 5 ರಂದು ಅಮೆಜಾನ್ ಮತ್ತು ಇತರ ಚಾನಲ್‌ಗಳ ಮೂಲಕ ಮಾರಾಟವಾಗಲಿದೆ.
ಹೊಸ JioBook ಲ್ಯಾಪ್‌ಟಾಪ್ ಆಗಸ್ಟ್ 5 ರಂದು ಮಾರಾಟವಾಗಲಿದೆ ಮತ್ತು ಇದು ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಜಿಯೋಬುಕ್ ಲ್ಯಾಪ್‌ಟಾಪ್ (JioBook Laptop) ಅನ್ನು ಕೇವಲ ರೂ ₹16,499 ಕ್ಕೆ ಕೈಗೆಟುಕುವ ಬೆಲೆಗೆ ಬಿಡುಗಡೆಗೊಳಿಸಲಾಗಿದೆ. ಇದರ ಜೊತೆಗೆ ಡಿವೈಸ್‌ಗಳನ್ನು ಅಮೆಜಾನ್ ಮೂಲಕ ಮಾರಾಟ ಮಾಡಲಾಗುತ್ತದೆ.
https://twitter.com/reliancejio/status/1685984150677749761?ref_src=twsrc%5Etfw
ಈ ಹೊಸ ಜಿಯೋ ಲ್ಯಾಪ್ಟಾಪ್ 11.6 ಇಂಚಿನ ಕಾಂಪ್ಯಾಕ್ಟ್ ಆಂಟಿ-ಗ್ಲೇರ್ HD ಡಿಸ್ಪ್ಲೇಯನ್ನು ಹೊಂದಿದೆ. JioBook ಹೆಚ್ಚು ಪೋರ್ಟಬಲ್ ಆಗಿದೆ ಎಂದು ಇದು ಸೂಚಿಸುತ್ತದೆ. ಹೊಸ ಜಿಯೋ ಲ್ಯಾಪ್‌ಟಾಪ್ ಆಕ್ಟಾ-ಕೋರ್ ಪ್ರೊಸೆಸರ್ ಮತ್ತು 4GB LPDDR4 RAM ಅನ್ನು ಹೊಂದಿದೆ. ಕಂಪನಿಯು ತನ್ನ ಟೀಸರ್‌ಗಳಲ್ಲಿ ಜಿಯೋಬುಕ್ ಸುಗಮ ಬಹುಕಾರ್ಯಕ ಮತ್ತು ಪರಿಣಾಮಕಾರಿ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದು 64GB ಸ್ಟೋರೇಜ್ ಅನ್ನು SD ಕಾರ್ಡ್‌ನೊಂದಿಗೆ 256GB ವರೆಗೆ ವಿಸ್ತರಿಸಬಹುದಾಗಿದೆ.
ಜಿಯೋಬುಕ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಇನ್ಫಿನಿಟಿ ಕೀಬೋರ್ಡ್ ಮತ್ತು ದೊಡ್ಡ ಮಲ್ಟಿ-ಗೆಸ್ಚರ್ ಟ್ರ್ಯಾಕ್‌ಪ್ಯಾಡ್ ಅನ್ನು ಹೊಂದಿದೆ. ಲ್ಯಾಪ್‌ಟಾಪ್ ಇಂಟರ್ನಲ್ USB ಮತ್ತು HDMI ಪೋರ್ಟ್‌ಗಳೊಂದಿಗೆ ಬರುತ್ತದೆ. ಇದು ಬಳಕೆದಾರರಿಗೆ ಮಲ್ಟಿ ಡಿವೈಸ್‌ಗಳನ್ನು ಮತ್ತು ಪೆರಿಫೆರಲ್‌ಗಳಿಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಕಂಪನಿಯ JioOS ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಲ್ಯಾಪ್‌ಟಾಪ್ 4G ಸಂಪರ್ಕ ಮತ್ತು ಡ್ಯುಯಲ್-ಬ್ಯಾಂಡ್ ವೈ-ಫೈಗೆ ಬೆಂಬಲವನ್ನು ಹೊಂದಿದೆ. ಹೊಸ ಲ್ಯಾಪ್‌ಟಾಪ್ ಅಲ್ಟ್ರಾ-ಸ್ಲಿಮ್ ಮತ್ತು ಹಗುರವಾದ ಡಿಸೈನ್ ಜೊತೆಗೆ ಕೇವಲ 990 ಗ್ರಾಂ ತೂಕವನ್ನು ಹೊಂದಿದೆ.