Jio Diwali 2023 ದೀಪಾವಳಿಯ ಪ್ರಯುಕ್ತ ತಮ್ಮ ಪ್ರಿಪೇಯ್ಡ್ ಬಳಕೆದಾರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ
ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಸ್ವಿಗ್ಗಿ (Swiggy) ಜೊತೆಗೆ ಕೈ ಜೋಡಿಸಿ ಅದ್ದೂರಿಯ ಆಫರ್ ಅನ್ನು ಘೋಷಿಸಿದ Jio
ಈ ಯೋಜನೆ Swiggy One Lite ಚಂದಾದಾರಿಕೆಯನ್ನು 3 ತಿಂಗಳ ಉಚಿತ ಚಂದಾದಾರಿಕೆ ಪ್ರಯೋಜನಗಳನ್ನು ನೀಡುತ್ತದೆ.
ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಆಗಿರುವ ಸ್ವಿಗ್ಗಿ (Swiggy) ಜೊತೆಗೆ ಕೈ ಜೋಡಿಸಿರುವ ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ Jio Diwali 2023 ಈ ದೀಪಾವಳಿಯ ಪ್ರಯುಕ್ತ ತಮ್ಮ ಪ್ರಿಪೇಯ್ಡ್ ಬಳಕೆದಾರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಇದೇ ಮೊದಲ ಬಾರಿಗೆ ರಿಲಯನ್ಸ್ ಜಿಯೋ ತನ್ನ 866 ರೂಗಳ ಪ್ರಿಪೇಯ್ಡ್ ಯೋಜನೆಯಲ್ಲಿ ಇಂತಹ ಆಫರ್ ನೀಡುತ್ತಿರುವುದು. ದೀಪಾವಳಿ ಹಬ್ಬದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಈ ಯೋಜನೆ ಬಂದಿದ್ದು ಈ ರಿಚಾರ್ಜ್ ಮಾಡಿ ಸ್ವಿಗ್ಗಿ ಒನ್ ಲೈಟ್ (Swiggy One Lite) ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದು.
Jio Diwali 2023 ಬೆಸ್ಟ್ ಪ್ರಿಪೇಯ್ಡ್ ಪ್ಲಾನ್
ಈ ಲೇಟೆಸ್ಟ್ ಆಫರ್ ಪ್ರಿಪೇಯ್ಡ್ ಪ್ಲಾನ್ ದಿನಕ್ಕೆ 2GB ಹೈಸ್ಪೀಡ್ 5G ಡೇಟಾವನ್ನು ಒಳಗೊಂಡಿದ್ದು ದಿನದ ಮಿತಿ ಮೀರಿದ ನಂತರ 64Kbps ನಲ್ಲಿ ಅನಿಯಮಿತ ಡೇಟಾ ಬಳಸಬಹುದು. ಇದು ಅನಿಯಮಿತ ವಾಯ್ಸ್ ಕರೆಗಳು, ದಿನಕ್ಕೆ 100 SMS ಎಲ್ಲಾ 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ JioTV, JioCinema ಮತ್ತು JioCloud ಚಂದಾದಾರಿಕೆಗಳನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ ಆಹಾರ, ದಿನಸಿ ಮತ್ತು ಇತರ ವರ್ಗಗಳಾದ್ಯಂತ Swiggy ಬೇಡಿಕೆಯ ಉಚಿತ ವಿತರಣಾ ಪ್ರಯೋಜನಗಳನ್ನು ಆನಂದಿಸುವವರಿಗೆ ಈ ಯೋಜನೆಯು Swiggy One Lite ಚಂದಾದಾರಿಕೆಯನ್ನು 3 ತಿಂಗಳ ಉಚಿತ ಚಂದಾದಾರಿಕೆ ಪ್ರಯೋಜನಗಳನ್ನು ನೀಡುತ್ತದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
ಈ ಮೇಲಿನ ರೀಚಾರ್ಜ್ ಮಾಡಿಸಿಕೊಂಡಲ್ಲಿ ಬಳಕೆದಾರರು ಯಾವುದೇ ಅಡೆತಡೆಯಿಲ್ಲದ ಸಂಪರ್ಕ ಪಡೆಯಬಹುದು ಹಾಗೂ ತಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಜತೆಗೆ ಸಂತೋಷವಾದ ಸಮಯವನ್ನು ಕಳೆಯಬಹುದು. ಅದು ಹೇಗೆಂದರೆ ಜಿಯೋ ಪ್ರಿಪೇಯ್ಡ್ ಗ್ರಾಹಕರು ಸ್ವಿಗ್ಗಿಯಲ್ಲಿ ಉಚಿತ ಡೆಲಿವರಿ ಅನುಕೂಲಗಳನ್ನು ಪಡೆಯಬಹುದಾಗಿದೆ. ಹಬ್ಬದ ಸಂದರ್ಭದ ಉದ್ಘಾಟನಾ ಆಫರ್ ಆಗಿ ಜಿಯೋ ಸ್ವಿಗ್ಗಿ ಜತೆಗಿನ ಪ್ಲಾನ್ ರೀಚಾರ್ಜ್ ಮಾಡಿಸುವಂಥವರ ಮೈಜಿಯೋ (MyJio) ಖಾತೆಗೆ 50 ರೂಪಾಯಿಗಳ ಉಚಿತ ಕ್ಯಾಶ್ ಬ್ಯಾಕ್ ಸಹ ದೊರೆಯಲಿದೆ.
Swiggy One Lite ಚಂದಾದಾರಿಕೆ ಪ್ರಯೋಜನಗಳು:
➥ ಜಿಯೋ 149 ರೂಪಾಯಿ ಮೇಲ್ಪಟ್ಟ ಆಹಾರ ಪದಾರ್ಥ ಹತ್ತು ಉಚಿತ ಹೋಮ್ ಡೆಲಿವರಿ ಪಡೆಯಬಹುದು
➥ ಜಿಯೋ 199 ರೂಪಾಯಿ ಮೇಲ್ಪಟ್ಟ ಹತ್ತು ಇನ್ ಸ್ಟಾಮಾರ್ಟ್ ಆರ್ಡರ್ ಗಳ ಹತ್ತು ಉಚಿತ ಹೋಮ್ ಡೆಲಿವರಿ ಪಡೆಯಬಹುದು
➥ ಜಿಯೋ ಆಹಾರ ಮತ್ತು ಇನ್ ಸ್ಟಾಮಾರ್ಟ್ ಆರ್ಡರ್ ಗಳಿಗೆ ಯಾವುದೇ ಹೆಚ್ಚು ಶುಲ್ಕಗಳಿಲ್ಲ
➥ ಜಿಯೋ ಇಪ್ಪತ್ತು ಸಾವಿರಕ್ಕೂ ಹೆಚ್ಚು ಆಹಾರ ಡೆಲಿವರಿ ರೆಸ್ಟೋರೆಂಟ್ ಗಳಲ್ಲಿ ಸಾಮಾನ್ಯವಾಗಿ ಸಿಗುವಂಥ ಆಫರ್ ಗಳಿಗಿಂತ 30 ಪರ್ಸೆಂಟ್ ತನಕ ಹೆಚ್ಚುವರಿ ರಿಯಾಯಿತಿ ಪಡೆಯಬಹುದು.
➥ ಜಿಯೋ 60 ರೂಪಾಯಿ ಮೇಲ್ಪಟ್ಟ ಜೆನಿ ಡೆಲಿವರಿಗಳ ಮೇಲೆ ಶೇ 10ರಷ್ಟು ರಿಯಾಯಿತಿಯನ್ನು ನೀಡುತ್ತಿದೆ.
ಒಂದು ವೇಳೆ ಸ್ವಿಗ್ಗಿ ಒನ್ ಲೈಟ್ ಚಂದಾದಾರಿಕೆಯನ್ನು ಮೂರು ತಿಂಗಳ ಅವಧಿಗೆ 99 ರೂಪಾಯಿ ಆಗುತ್ತದೆ. ರಿಲಯನ್ಸ್ ಜಿಯೋ ಈ ಪ್ಲಾನ್ ಅಡಿಯಲ್ಲಿ ಚಂದಾದಾರರಿಗೆ ಅನಿಯಮಿತ 5G ಡೇಟಾ ದೊರೆಯಲಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ಭರ್ಜರಿ ಯೋಜನೆಯನ್ನು ಘೋಷಣೆ ಮಾಡಿದೆ. ಮತ್ತು ಇದುವರೆಗೆ ಇಂಥದ್ದೊಂದು ಪ್ಲಾನ್ ಅನ್ನು ಉಳಿದ ಯಾವುದೇ ಟೆಲಿಕಾಂ ಕಂಪನಿಗಳು ಜಾರಿಗೆ ತಂದಿಲ್ಲ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile