ಜಿಯೋ ಮತ್ತು ಮೀಡಿಯಾಟೆಕ್ ಗೇಮಿಂಗ್ ಮಾಸ್ಟರ್ಸ್ 2.0 ಬಿಡುಗಡೆಗೆ ದಿನಾಂಕ, ಬಹುಮಾನದ ವಿವರ ಪ್ರಕಟಿಸಿದೆ

Updated on 12-Nov-2021
HIGHLIGHTS

2.5 ಲಕ್ಷ ರುಪಾಯಿ ಮೌಲ್ಯದ ಬಹುಮಾನಗಳನ್ನು ಪಡೆಯಲು ಉತ್ಸಾಹಿ ಮತ್ತು ವೃತ್ತಿಪರ ಗೇಮರ್ ಗಳಿಗೆ ಸುವರ್ಣಾವಕಾಶ ಕಲ್ಪಿಸಿವೆ.

ವೃತ್ತಿಪರ ಗೇಮರುಗಳಿಗೆ ಜಿಯೋ ಮತ್ತು ಮೆಡಿಯಾಟೆಕ್ ಒಗ್ಗೂಡಿ ಸ್ಪರ್ಧೆಯನ್ನು ನಡೆಸುತ್ತಿವೆ.

ಗೇಮಿಂಗ್ ಮಾಸ್ಟರ್ಸ್‌ನ ಎರಡನೇ ಸೀಸನ್ ನವೆಂಬರ್ 23 ರಂದು ಪ್ರಾರಂಭವಾಗಲಿದೆ.

ಭಾರತದಲ್ಲಿ ಈಗಾಗಲೇ ಆಡುತ್ತಿರುವ ಗೇಮರುಗಳು ಮತ್ತು ನೂತನ ಆನ್‌ಲೈನ್ ಗೇಮಿಂಗ್ ಉತ್ಸಾಹಿಗಳು ವೃತ್ತಿಪರ ಗೇಮರುಗಳಿಗೆ ಜಿಯೋ ಮತ್ತು ಮೆಡಿಯಾಟೆಕ್ ಒಗ್ಗೂಡಿ ಸ್ಪರ್ಧೆಯನ್ನು ನಡೆಸುತ್ತಿವೆ.  ಈ ಅತ್ಯಂತ ಜನಪ್ರಿಯ ಆಟದ ಶೀರ್ಷಿಕೆಗಳಲ್ಲಿ ಒಂದಾದ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಜೊತೆಗೆ 'ಗೇಮಿಂಗ್ ಮಾಸ್ಟರ್ಸ್ 2.0' ಅನ್ನು ಪ್ರಾರಂಭಿಸಲು ಜಿಯೋ ಮತ್ತು ಮೆಡಿಯಾಟೆಕ್ ಕೈಜೋಡಿಸಿವೆ. 2.5 ಲಕ್ಷ ರುಪಾಯಿ ಮೌಲ್ಯದ ಬಹುಮಾನಗಳನ್ನು ಪಡೆಯಲು ಉತ್ಸಾಹಿ ಮತ್ತು ವೃತ್ತಿಪರ ಗೇಮರ್ ಗಳಿಗೆ ಸುವರ್ಣಾವಕಾಶ ಕಲ್ಪಿಸಿವೆ.

ಗೇಮಿಂಗ್ ಮಾಸ್ಟರ್ಸ್‌ನ ಎರಡನೇ ಸೀಸನ್ ನವೆಂಬರ್ 23 ರಂದು ಪ್ರಾರಂಭವಾಗಲಿದೆ. ಸ್ಪರ್ಧೆಯಲ್ಲಿ ಭಾಗಿಯಾಗಲು ಯಾವುದೇ ಪ್ರವೇಶ ಶುಲ್ಕ ಇಲ್ಲ. ಅಲ್ಲದೇ ಪ್ರತಿ ಗೇಮರ್ ಗಳಿಗೆ  'ಆಟ ಆಡಿ ಮತ್ತು ಪ್ರತಿದಿನ ಗೆಲ್ಲಿರಿ' ಸರಣಿಯನ್ನು ಪ್ರಾರಂಭಿಸಲಾಗುತ್ತಿದೆ. ಈ ವರ್ಷದ ಆರಂಭದಲ್ಲಿ ನಡೆದಿದ್ದ ಫ್ರೀ ಫೈರ್‌ ಮೊದಲ ಸೀಸನ್‌ನಲ್ಲಿ  ಅಭೂತಪೂರ್ವ ಯಶಸ್ಸು ದಕ್ಕಿತ್ತು. 14000 ತಂಡಗಳು ಪಾಲ್ಗೊಂಡಿದ್ದವು.

BGMI ಗೇಮಿಂಗ್ ಮಾಸ್ಟರ್ಸ್ ವಿವರ

ಆನ್‌ಲೈನ್ ಗೇಮಿಂಗ್ ನಲ್ಲಿ ಕ್ರಾಂತಿತರಲು ಭಾರತದ ಅತಿದೊಡ್ಡ ಡಿಜಿಟಲ್ ಸೇವೆ ಒದಗಿಸುತ್ತಿರುವ ಜಿಯೋ ಮತ್ತು ವಿಶ್ವದ ನಾಲ್ಕನೇ-ಅತಿದೊಡ್ಡ ಫ್ಯಾಬ್ಲೆಸ್ ಸೆಮಿಕಂಡಕ್ಟರ್ ಕಂಪನಿಯಾದ ಮೀಡಿಯಾ ಟೆಕ್ ಒಗ್ಗೂಡಿ ರೂಪಿಸಿರುವ ಉಪಕ್ರಮವೇ ಇ ಸ್ಪೋರ್ಟ್ಸ್ ಗೇಮಿಂಗ್. ಪ್ರಸ್ತುತ ಭಾರತದಲ್ಲಿ ಆನ್‌ಲೈನ್ ಗೇಮಿಂಗ್‌ನಲ್ಲಿ ಮೀಡಿಯಾ ಟೆಕ್ ಮುಂಚೂಣಿಯಲ್ಲಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 5 ಜಿ ಸಿರೀಸ್ ಮತ್ತು ಮೀಡಿಯಾ ಟೆಕ್ ಹೆಲಿಯೊ ಜಿ ಸಿರೀಸ್ ಚಿಪ್‌ಸೆಟ್‌ಗಳೊಂದಿಗೆ ಭಾರತೀಯ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ವಿಸ್ಮಯಕಾರಿ ಗೇಮಿಂಗ್ ಅನುಭವವನ್ನು ಒದಗಿಸುತ್ತದೆ.

ಇದು ಸುಧಾರಿತ ಮೀಡಿಯಾ ಟೆಕ್ ಹೈಪರ್‌ಇಂಜಿನ್ ಗೇಮಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾವನ್ನು  ಗೇಮಿಂಗ್ ಮಾಸ್ಟರ್ಸ್ ಕ್ರಾಫ್ಟನ್‌ನ ಹಿಟ್ ಬ್ಯಾಟಲ್ ರಾಯಲ್ ಗೇಮ್ ಒಳಗೊಂಡಿರುತ್ತದೆ ಇದು ಜಿಯೋಗೇಮ್ಸ್ ಪ್ಲಾಟ್‌ಫಾರ್ಮ್ ಮೂಲಕ ಜಿಯೋ ಮತ್ತು ಜಿಯೋಯೇತರ ಬಳಕೆದಾರರಿಗೆ ಲಭ್ಯವಾಗಲಿದೆ. ಪಂದ್ಯಾವಳಿಯು ವರ್ಚುವಲ್ ಗೇಮಿಂಗ್ ಅಖಾಡದಲ್ಲಿ ಆಟಗಾರರ ಕೌಶಲ್ಯ ತಂಡದ ಶಕ್ತಿ ಮತ್ತು ಸಹಿಷ್ಣುತೆಯನ್ನು  ಪರೀಕ್ಷಿಸುತ್ತದೆ. ಗೆದ್ದವರಿಗೆ ₹12,50,000 ಮೌಲ್ಯದ ಬಹುಮಾನ ಒದಗಿಸುತ್ತದೆ.

ಪ್ಲೇ & ವಿನ್ ಡೈಲಿ' ಸರಣಿಯಡಿ ಗೇಮರುಗಳು ನಿತ್ಯವೂ ಆಡಿ ಗೆಲ್ಲಬಹುದು. ಗೆದ್ದವರಿಗೆ ಅಂತಿಮ ಚಾಂಪಿಯನ್‌ಶಿಪ್‌ಗಾಗಿ ವೃತ್ತಿಪರ ತಂಡಗಳೊಂದಿಗೆ ಸ್ಪರ್ಧಿಸುವ ಅವಕಾಶವೂ ಲಭ್ಯವಾಗಲಿದೆ. 12ನೇ ನವೆಂಬರ್ 2021 ರಿಂದ ನೋಂದಣಿ ಆರಂಭ.  23ನೇ ನವೆಂಬರ್ 2021 ರಿಂದ 10ನೇ ಜನವರಿ 2022ರವರೆಗೆ ಪಂದ್ಯಾವಳಿ ನಡೆಯಲಿದೆ. JioGames, Watch JioTV, HD Esports Channel, Facebook Gaming ಮತ್ತು JioGames YouTube ಚಾನೆಲ್ ಗಳಲ್ಲಿ ಲೈವ್ ಆಗಿ ಪಂದ್ಯಾವಳಿಗಳನ್ನು ವೀಕ್ಷಿಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :