Jio ಮತ್ತು Airtel ಬಳಕೆದಾರರು ಉಚಿತವಾಗಿ Amazon Prime Membership ಪಡೆಯುವುದು ಹೇಗೆ? | Tech News

Jio ಮತ್ತು Airtel ಬಳಕೆದಾರರು ಉಚಿತವಾಗಿ Amazon Prime Membership ಪಡೆಯುವುದು ಹೇಗೆ? | Tech News

ಭಾರತದಲ್ಲಿ ಅಮೆಜಾನ್ ತನ್ನ ಮುಂದಿನ ಅತಿದೊಡ್ಡ ಸೇಲ್ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Great Indian Festival 2023) ಅನ್ನು 8ನೇ ಅಕ್ಟೋಬರ್ 2023 ರಿಂದ ಶುರುವಾಗಲಿದೆ. ಆದರೆ ಇಂದು ರಾತ್ರಿ 12:00 ರಿಂದ ಮೊದಲು ಕೇವಲ ಅಮೆಜಾನ್ ಪ್ರೈಮ್ ಸದಸ್ಯರಿಗೆ (Amazon Prime Membership) ಲಭ್ಯವಾಗಲಿದೆ. ಅಮೆಜಾನ್ ಈಗ ತಮ್ಮ ಪ್ರೇಕ್ಷಕರನ್ನು ಆಕರ್ಷಿಸಲು ವಿವಿಧ ಸದಸ್ಯತ್ವ ಡೀಲ್ ಹೊರತರುವುದರೊಂದಿಗೆ ಸದಸ್ಯತ್ವಕ್ಕಾಗಿ ಸ್ಪರ್ಧೆಯು ಎತ್ತರದಲ್ಲಿರಿಸಿದೆ. ನೀವು Airtel ಅಥವಾ Jio ಬಳಕೆದಾರರಾಗಿದ್ದರೆ ನಿಮಗೆ ಉಚಿತವಾಗಿಯೇ ಅಮೆಜಾನ್ ಪ್ರೈಮ್ ಸದಸತ್ವ ಪಡೆಯಬಹುದು.

How to Get Free Amazon Prime Membership 2023

ನೀವು ಅರ್ಹ ರಿಚಾರ್ಜ್ ಯೋಜನೆ ಹೊಂದಿದ್ದರೆ ಹೆಚ್ಚುವರಿ ಹಣ ಖರ್ಚು ಮಾಡದೆ ಅಮೆಜಾನ್ ಪ್ರೈಮ್ ಜೊತೆಗೆ ಪ್ರೈಮ್ ಡೆಲಿವರಿ, ಪ್ರೈಮ್ ಮ್ಯೂಸಿಕ್ ಮತ್ತು ಸಿನಿಮಾ ಮತ್ತು ಟಿವಿ ಷೋಗಳನ್ನು ಪಡೆಯಬಹುದು. ಚಂದಾದಾರಿಕೆಯ ವೆಚ್ಚಗಳು ಸಾಕಷ್ಟು ಸಮಂಜಸವಾಗಿದೆ. ತಿಂಗಳಿಗೆ 299 ರೂಗಳಾಗಿದ್ದು ಪ್ರತಿ ತ್ರೈಮಾಸಿಕಕ್ಕೆ 459 ರೂ ಮತ್ತು ಇಡೀ ವರ್ಷಕ್ಕೆ 1499 ರೂಗಳಾಗಿದೆ. ಈ ಪ್ರಯೋಜನಗಳಿಗಾಗಿ ಪ್ರೀಮಿಯಂ ಖರ್ಚು ಮಾಡದೆ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಉಚಿತವಾಗಿ ಹೇಗೆ ಪಡೆಯುವುದು ಎಂದು ಈ ಲೇಖನವು ನಿಮಗೆ ತಿಳಿಸುತ್ತದೆ ಇದರಿಂದ ನೀವು ಒಂದು ಪೈಸೆಯನ್ನು ಖರ್ಚು ಮಾಡದೆಯೇ ಪ್ರೀಮಿಯಂ ಚಂದಾದಾರಿಕೆಯ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು.

ಅಮೆಜಾನ್ ಪ್ರೈಮ್ ಹೊಂದಿರುವ ರೂ 699 ಪ್ರಿಪೇಯ್ಡ್ ಪ್ಲಾನ್:

ಪೂರ್ತಿ ಒಂದು ತಿಂಗಳಿಗಿಂತ ಹೆಚ್ಚಾಗಿ ನಡೆಯುವ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಪ್ರೈಮ್ ಪ್ರಯೋಜನಗಳನ್ನು ಪಡೆಯಲು ಏರ್ಟೆಲ್ ಬಳಕೆದಾರರಿಗೆ ಅತ್ಯುತ್ತಮ ಪ್ಲಾನ್ ಇದಾಗಿದೆ. ಈ ಯೋಜನೆಯು ಅಮೆಜಾನ್ ಪ್ರೈಮ್ ಸದಸ್ಯತ್ವದ ಪ್ರಯೋಜನಗಳೊಂದಿಗೆ 3GB ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು 56 ದಿನಗಳ ಪ್ಯಾಕ್ ಮಾನ್ಯತೆಯ ಮೇಲೆ ದಿನಕ್ಕೆ 100 SMS ನೀಡುತ್ತದೆ. ಟೆಲ್ಕೊ ಅಪೊಲೊ 24/7 ಸರ್ಕಲ್ ಸದಸ್ಯತ್ವ, ಉಚಿತ ವೈಂಕ್ ಮ್ಯೂಸಿಕ್ ಚಂದಾದಾರಿಕೆ, ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್, ಹೆಲೋಟ್ಯೂನ್ಸ್ ಮತ್ತು ಫಾಸ್ಟ್‌ಟ್ಯಾಗ್‌ನಲ್ಲಿ ರೂ 100 ಕ್ಯಾಶ್‌ಬ್ಯಾಕ್ ನೀಡುತ್ತದೆ. ಗಮನಾರ್ಹವಾಗಿ ದೈನಂದಿನ ಡೇಟಾ ಮಿತಿ ಮತ್ತು SMS ಮುಗಿದ ನಂತರ ಇಂಟರ್ನೆಟ್ ವೇಗವನ್ನು 64Kbps ಗೆ ಇಳಿಸಲಾಗುತ್ತದೆ.

ಅಮೆಜಾನ್ ಪ್ರೈಮ್ ಹೊಂದಿರುವ ರೂ 699 ಪೋಸ್ಟ್‌ಪೇಯ್ಡ್ ಪ್ಲಾನ್:

ಜಿಯೋ ಬಳಕೆದಾರರಿಗೆ ಕೊಂಚ ಬೇಸರದ ವಿಷಶಯವೆಂದರೆ ಅಮೆಜಾನ್ ಪ್ರೈಮ್ ಸೇವೆಯನ್ನು ಯಾವುದೇ ಜಿಯೋ ಪ್ರಿಪೇಯ್ಡ್ ಯೋಜನೆಯಲ್ಲಿ ನೋಡಲು ಸಾಧ್ಯವಿಲ್ಲ. ಬದಲಾಗಿ ನಿಮಗೆ ಕೇವಲ ಜಿಯೋ ರೂ 699 ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಮಾತ್ರ ಈ ಸೇವೆಯನ್ನು ಪಡೆಯಬಹುದು. ಈ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆ ಸೌಲಭ್ಯ ಲಭ್ಯವಿದೆ. ಜೊತೆಗೆ 100GB ಡೇಟಾವನ್ನು ನೀಡಲಾಗುತ್ತದೆ. ಇದಲ್ಲದೇ 100 ಎಸ್ಎಂಎಸ್ ಸೌಲಭ್ಯವನ್ನು ನೀಡಲಾಗುತ್ತಿದೆ. ಇದಲ್ಲದೇ ಅನಿಯಮಿತ ಸಂದೇಶ ಕಳುಹಿಸುವ ಸೌಲಭ್ಯವೂ ಉಚಿತವಾಗಿ ಲಭ್ಯವಿದೆ. ಅಲ್ಲದೆ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವೀಡಿಯೊಗಳ ಚಂದಾದಾರಿಕೆಯನ್ನು ಒಂದು ತಿಂಗಳವರೆಗೆ ನೀಡಲಾಗುತ್ತಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo