ಭಾರತದ ಜಾವೆಲಿನ್ ಸ್ಟಾರ್ ಎಂದೇ ಜನಪ್ರಿಯವಾಗಿರುವ ನೀರಜ್ ಚೋಪ್ರಾ (Neeraj Chopra) ಒಬ್ಬ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಭರ್ಜಿ ಎಸೆತದ ಕ್ರೀಡಾಪಟು ಆಗಿದ್ದರೆ
ನೀರಜ್ ಪ್ರತಿದಿನದ ತರಬೇತಿಯ ವೀಡಿಯೊಗಳನ್ನು ರೆಕಾರ್ಡ್ ಮಾಡಿ ತಮ್ಮ ಕೋಚ್‌ಗೆ ಕಳುಹಿಸುವ ಸಲುವಾಗಿ ಕ್ಯಾಮೆರಾ ಹೆಚ್ಚಾಗಿ ಬಳಸುತ್ತಿದ್ದರು
ಪ್ರತಿಯೊಂದು ಇನ್‌ಸ್ಟಾಗ್ರಾಮ್ ಚಿತ್ರದಲ್ಲಿ ಧರಿಸಿರುವ ಸ್ಮಾರ್ಟ್‌ವಾಚ್ ಕ್ಯಾಸಿಯೊ ಬ್ರ್ಯಾಂಡ್‌ನಿಂದ ಸೂಪರ್ ಸ್ಟೈಲಿಶ್ ವೈಟ್ ವಾಚ್ ಆಗಿದೆ
ಭಾರತದ ಜಾವೆಲಿನ್ ಸ್ಟಾರ್ ಎಂದೇ ಜನಪ್ರಿಯವಾಗಿರುವ ನೀರಜ್ ಚೋಪ್ರಾ (Neeraj Chopra) ಒಬ್ಬ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಭರ್ಜಿ ಎಸೆತದ ಕ್ರೀಡಾಪಟು ಆಗಿದ್ದರೆ. ಅಲ್ಲದೆ ಈಗ ನಡೆಯುತ್ತಿಯುವ ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (World Athletics Championships 2023) ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ಪಡೆಯಲು ನೀರಜ್ 88.17 ಮೀಟರ್ ದೂರಕ್ಕೆ ತಮ್ಮ ಭರ್ಜಿ ಎಸೆತ ಇಡೀ ಟೂರ್ನಿಯಲ್ಲಿ ಅತ್ಯಧಿಕ ದೂರದ ಭರ್ಜಿ ಎಸೆತಕ್ಕೆ ಹೆಸರಾಗಿದ್ದಾರೆ. ನೀರಜ್‌ನ ಬೆಳವಣಿಗೆಗೆ ಕಾರಣವೆಂದರೆ ಮೈದಾನದಲ್ಲಿ ಉತ್ತಮವಾಗಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವಲ್ಲಿ ಟೆಕ್ನಾಲಜಿ ಯಾವ ರೀತಿ ಅವರ ಜೀವನದಲ್ಲಿ ಸೇರಿಕೊಂಡಿತ್ತು ಎನ್ನುವುದನ್ನು ತಿಳಿಯೋಣ.
ನೀರಾಜ್ ಚೋಪ್ರಾರ ಬಗ್ಗೆ ಅಚ್ಚರಿ!
ನಿಮಗೊತ್ತಾ ಗೋಲ್ಡನ್ ಬಾಯ್ ಎಂದೇ ಪ್ರಸಿದ್ಧವಾಗುತ್ತಿರುವ ನೀರಜ್ ಸಾಮನ್ಯವಾಗಿ ಅತಿ ಹೆಚ್ಚಾಗಿ ಬಳಕೆಯಲ್ಲಿರುವ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಅಥವಾ ಟ್ವಿಟರ್ ಬಳಸುತ್ತಾರೆ ಎಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆಯಾಗಿದೆ. ಏಕೆಂದರೆ ಈಗಾಗಲೇ ಹಲವಾರು ಸಂದರ್ಶನಗಳಲ್ಲಿ ಅವರು ಹೇಳಿರುವಂತೆ ಅವರು ಹೆಚ್ಚಾಗಿ ಫೋನೇ ಬಳಸೋದಿಲ್ಲ. ಆದರೆ ನೀರಜ್ ತನ್ನ ಫೋನ್ ಕ್ಯಾಮೆರಾವನ್ನು ಅತಿ ಹೆಚ್ಚು ಬಳಸುತ್ತಿದ್ದರಂತೆ.
ಏಕೆಂದರೆ ತಮ್ಮ ಪ್ರತಿದಿನದ ತರಬೇತಿಯ ವೀಡಿಯೊಗಳನ್ನು ರೆಕಾರ್ಡ್ ಮಾಡಿ ತಮ್ಮ ಕೋಚ್‌ಗೆ ಕಳುಹಿಸುವ ಸಲುವಾಗಿ ಕ್ಯಾಮೆರಾ ಹೆಚ್ಚಾಗಿ ಬಳಸುತ್ತಿದ್ದರು. ಇದರ ಬಗ್ಗೆ ಅವರು "ನಾನು ಕೊಂಚ ಜಾಸ್ತಿನೆ ಕ್ಯಾಮರಾ ಫೀಚರ್ ಬಳಸುತ್ತೇನೆ ಏಕೆಂದರೆ ಕೋಚ್ ಆಗಾಗ್ಗೆ ನನ್ನ ವರ್ಕೌಟ್ ಮತ್ತು ಲೈವ್ ವೀಡಿಯೊಗಳನ್ನು ರೆಕಾರ್ಡ್ ಮಾಡಿ ಕಳುಹಿಸಲು ಅಗತ್ಯವಿರುತ್ತದೆ" ಎಂದು ನೀರಜ್ ಹೇಳಿದ್ದಾರೆ. ಅಲ್ಲದೆ ಅವರ ಸೆಲ್ಫಿ ಮೂಲಕ ಸದ್ಯಕ್ಕೆ ನೀರಜ್ Apple iPhone X ಫೋನ್ ಬಳಸುವುದನ್ನು ಸ್ಪಷ್ಟವಾಗಿ ಕಾಣಬಹುದು.
ನೀರಾಜ್ ಚೋಪ್ರಾರ ಸ್ಮಾರ್ಟ್‌ವಾಚ್
ಚೋಪ್ರಾರ ಅಚ್ಚುಮೆಚ್ಚಿನ ಮತ್ತು ಪ್ರತಿಯೊಂದು ಇನ್‌ಸ್ಟಾಗ್ರಾಮ್ ಚಿತ್ರದಲ್ಲಿ ಧರಿಸಿರುವ ಸ್ಮಾರ್ಟ್‌ವಾಚ್ ಕ್ಯಾಸಿಯೊ ಬ್ರ್ಯಾಂಡ್‌ನಿಂದ ಸೂಪರ್ ಸ್ಟೈಲಿಶ್ ವೈಟ್ ವಾಚ್ ಆಗಿದೆ. ಇದು ಪ್ರತಿಯೊಬ್ಬ ಕ್ರೀಡಾಪಟು ಅಥವಾ ಕ್ರೀಡಾಪಟುಗಳಿಗೆ ಸೂಕ್ತವಾಗಿದೆ. ಇದು ಕ್ಯಾಸಿಯೊ ಜಿ-ಶಾಕ್ ಜಿಎ 110 (Casio G-SHOCK GA 110) ಇದು ಅನಲಾಗ್ ಮತ್ತು ಡಿಜಿಟಲ್ ಡಿಸ್ಪ್ಲೇ ಎರಡನ್ನೂ ಹೊಂದಿದೆ. ನೀರಜ್ ಚೋಪ್ರಾ ಅವರಂತಹ ಅಥ್ಲೀಟ್‌ಗೆ ಹೇಳಿ ಮಾಡಿಸಿದಂತಿದೆ.
ಅದು 200-ಮೀಟರ್ ವಾಟರ್ ಪ್ರೂಫ್, ವರ್ಲ್ಡ್ ಕ್ಲಾಕ್, 1/1000 ಸೆಕೆಂಡ್ ಸ್ಟಾಪ್‌ವಾಚ್, 24 ಗಂಟೆಗಳ ಕೌಂಟ್‌ಡೌನ್ ಟೈಮರ್ ಮತ್ತು 5 ದೈನಂದಿನ ಅಲಾರಂಗಳ ಪ್ರಮುಖ ಫೀಚರ್ಗಳನ್ನು ಹೊಂದಿದೆ. ಮತ್ತೊಂದು ಕಾಂತೀಯ ಪ್ರತಿರೋಧ ಮತ್ತು LED ಲೈಟ್ ಅನ್ನು ಒಳಗೊಂಡಿವೆ. ವಾಚ್‌ನ ಒಟ್ಟಾರೆ ನೋಟವು ಸಾಕಷ್ಟು ವಿಶಿಷ್ಟವಾಗಿದೆ. ಏಕೆಂದರೆ ಇದು ಎರಡು ಟೋನ್ ಎಥಿನಿಕ್ ಟ್ರೈಬಲ್ ಮಾದರಿಯೊಂದಿಗೆ ಬಿಳಿ ಅಂಚಿನ ಮತ್ತು ಬ್ಯಾಂಡ್ ಅನ್ನು ಹೊಂದಿದೆ.
ಇದನ್ನೂ ಓದಿ: 240W ಫಾಸ್ಟ್ ಚಾರ್ಜಿಂಗ್ ಮತ್ತು 24GB RAM ಜೊತೆಗೆ Realme GT 5 ಬಿಡುಗಡೆ! ಫೀಚರ್ ಮತ್ತು ಬೆಲೆ ಎಷ್ಟು?
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile