JioHotstar: ಆಟವಾಡುವ ವಯಸ್ಸಿನಲ್ಲಿ ಮುಕೇಶ್ ಅಂಬಾನಿಗೆ ಆಫರ್ ನೀಡುತ್ತಿರುವ ಪುಟಾಣಿ ಮಾಲೀಕರು!

Updated on 13-Nov-2024
HIGHLIGHTS

ರಿಲಯನ್ಸ್‌ಗೆ ಪೈಪೋಟಿ ಕೊಡಲು JioHotstar.com ಡೊಮೇನ್ ಖರೀದಿಸಿಲ್ಲ

ಓದಿಗೆ ಸಹಾಯ ಮಾಡಬೇಕು ಅನ್ನೋ ಉದ್ದೇಶದಿಂದ Jainam ಮತ್ತು Jivika ಈ ಡೊಮೇನ್ ಖರೀದಿಸಿದ್ದಾರೆ.

ಇದರ ಕಹಾನಿ ಇಲ್ಲಿಂದ ಶುರುವಾಗುವುದರಿಂದ ಈ JioHotstar.com ಎಂಬ ಡೊಮೇನ್‌ ವಿಷಯದಲ್ಲಿ ಭಾರಿ ಬೇಡಿಕೆ ಹೆಚ್ಚಾಗಿದೆ.

JioHotstar News: ರಿಲಯನ್ಸ್ ಮತ್ತು ಹಾಟ್‌ಸ್ಟಾರ್ ನಡುವಿನ ಒಂದು ಬಿಸಿನೆಸ್ ಡೀಲ್‌ನಲ್ಲಿ ಒಂದು ಸಣ್ಣ ಅಂತರದಿಂದಾಗಿ ಒಂದು ಸಣ್ಣ ಸಮಸ್ಯೆಯನ್ನು ಎದುರಿಸುತ್ತಿದೆ. ಮುಕೇಶ್ ಅಂಬಾನಿ (Mukesh Ambani) ಮುಂದಿನ ದಿನಗಳಲ್ಲಿ ಹಾಟ್‌ಸ್ಟಾರ್ ಖರೀದಿಸಿದ್ರೆ ಅದರ ಹೆಸರು ಜಿಯೋ ಹಾಟ್‌ಸ್ಟಾರ್ ಆಗಬಹುದು. ಆದ್ರೆ ಈ ಡೊಮೇನ್‌ನ್ನು ರಿಲಯನ್ಸ್ ಜಿಯೋ ಡೀಲ್ ಮಾಡುವ ಮುನ್ನವೇ ದುಬೈನಲ್ಲಿರುವ ಜೈನಮ್ ಜೈನ್ (Jainam Jain) ಮತ್ತು ಜೀವಿಕಾ ಜೈನ್ (Jivika Jain) ಎಂಬ ಇಬ್ಬರು ಆ್ಯಪ್ ಡೆವಲಪರ್ ಮಕ್ಕಳು ಖರೀದಿಸಿದ್ದಾರೆ.

JioHotstar ಖರೀದಿಗೆ ರಿಲಯನ್ಸ್ ಜಿಯೋಗೆ ಮಾತ್ರ ಸ್ಪೆಷಲ್ ಆಫರ್:

ಇದರ ಕಹಾನಿ ಇಲ್ಲಿಂದ ಶುರುವಾಗುವುದರಿಂದ ಈ JioHotstar.com ಎಂಬ ಡೊಮೇನ್‌ ವಿಷಯದಲ್ಲಿ ಭಾರಿ ಬೇಡಿಕೆ ಹೆಚ್ಚಾಗಿದೆ. 15 ವರ್ಷದ ಈ ಮಕ್ಕಳು ಈ ಡೊಮಿನ್ ರಚಿಸಿದ ಆ್ಯಪ್ ಡೆವಲಪರ್‌ನಿಂದ ಬರೋಬ್ಬರಿ ಒಂದು ಕೋಟಿ ರೂಪಾಯಿಗಳಿಗೆ ಖರೀದಿಸಿದ್ದಾರೆ. ಈಗ ಈ ವೆಬ್‌ಸೈಟ್‌ ಹೆಸರು ಬೇಕೆಂದು ರಿಲಯನ್ಸ್ ಜಿಯೋ ಇವರ ಮುಂದೆ ಬಂದಿದೆ. ಇದರಂತೆ ಈಗಾಗಲೇ ಇದರ ಪ್ರಯೋಜನಗಳನ್ನು ಪಡೆಯಲು ನೂರಾರು ಜನರು ಈ ಮಕ್ಕಳಿಗೆ ಇಮೇಲ್ ಮೂಲಕ ಲಕ್ಷಾಂತರ ರೂಪಾಯಿಗಳ ಆಫರ್ ಕೊಟ್ಟಿದ್ದಾರೆ ಆದರೆ ಇನ್ನೂ ಯಾವುದೇ ಆಫರ್ ಒಪ್ಪಿಲ್ಲ.

ಬದಲಾಗಿ ಈ ಮಕ್ಕಳು ಈ ನಮ್ಮ JioHotstar.com ಎಂಬ ಡೊಮೇನ್‌ ಮಾರಾಟಕ್ಕಿಲ್ಲವೆಂದು ಸ್ಪಷ್ಟವಾಗಿ ವಿಡಿಯೋ ಮತ್ತು ಬರಹದ ಮೂಲಕ ತಿಳಿಸಿದ್ದಾರೆ. ಆದರೆ ರಿಲಯನ್ಸ್ ಜಿಯೋ ಬೇಕಾದರೆ ಇದಕ್ಕಾಗಿ ನಮ್ಮೊಂದಿಗೆ ಮಾತುಕತೆ ನಡೆಸಬಹುದೆಂದು ಮಕ್ಕಳು ವಿವರಿಸಿದ್ದಾರೆ.

Jainam ಮತ್ತು Jivika ಈ ಡೊಮಿನ್ ಖರೀದಿಸಲು ಕಾರಣವೇನು?

ಈಗ ಹೆಚ್ಚು ಸುದ್ದಿಯಲ್ಲಿರುವ JioHotstar ಡೊಮಿನ್ ಅನ್ನು ಈ ಸಣ್ಣ ಮಕ್ಕಳು ಖರೀದಿಸಲು ಕಾರಣವೇನು ಎನ್ನುವ ಪ್ರಶ್ನೆ ನಿಮಗೆ ಬಂದಿರಬಹುದು. ಇದಕ್ಕೆ ಉತ್ತರವನ್ನು ನೀಡಿರುವ ಮಕ್ಕಳು “ನಮಗೆ ಈ ಡೊಮಿನ್ ರಚಿಸಿದ ದೆಹಲಿ ಮೂಲದವರಿಂದ ನಮಗೆ ವಿನಂತಿ ಬಂದಿತ್ತು ಇದರಲ್ಲಿ ರಚನೆಗಾರ ತನ್ನ ಕೇಂಬ್ರಿಡ್ಜ್‌ನಲ್ಲಿ ಓದಬೇಕೆಂಬ ಕನಸನ್ನು ನನಸಾಗಿಸಿಕೊಳ್ಳಲು ಹಣವಿಲ್ಲದ ಕಾರಣದಿಂದಾಗಿ ಈ ಡೊಮೇನ್ ಅನ್ನು ಸುಮಾರು 1 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲು ತೀರ್ಮಾನಿಸಿದ್ದರು ಅವರ ಓದಿಗೆ ಸಹಾಯ ಮಾಡಬೇಕು ಅನ್ನೋ ಉದ್ದೇಶದಿಂದ Jainam ಮತ್ತು Jivika ಈ ಡೊಮೇನ್ ಖರೀದಿಸಿದೆವು ಎಂದು ಮಕ್ಕಳು ಹೇಳಿದ್ದಾರೆ.

ಸಣ್ಣ ವಯಸ್ಸಿನಲ್ಲೆ ಎಷ್ಟು ಸಾಮಾಜಿಕ ಕಾಳಜಿ, ಚಿನ್ನದಂತ ಗುಣ!

ಈ ಅಣ್ಣ ತಂಗಿಯರು ದುಬೈನಲ್ಲಿ ವಾಸವಾಗಿದ್ದಾರೆ. ಅಲ್ಲಿ ಓದ್ತಾ ಸಣ್ಣಪುಟ್ಟ ಸೇವಾ ಕಾರ್ಯಕ್ರಮಗಳನ್ನು ಮಾಡ್ತಾರೆ. ಇವರ sevakarmy.com ಅನ್ನೋ ಹೆಸರಿನಲ್ಲಿ ಸಾಮಾಜಿಕ ಸೇವೆ ಮಾಡ್ತಿದ್ದಾರೆ. ರಿಲಯನ್ಸ್‌ಗೆ ಪೈಪೋಟಿ ಕೊಡಲು JioHotstar.com ಡೊಮೇನ್ ಖರೀದಿಸಿಲ್ಲ ಕೇವಲ ಸೇವಾ ಕಾರ್ಯಕ್ರಮಗಗಳಿಗೆಂದು ಖರೀದಿಸಿದೆವು ಎಂದು ಹೇಳಿದ್ದಾರೆ. ಈಗ ಈ ಡೊಮೇನ್‌ನ್ನು ಮುಖೇಶ್ ಅಂಬಾನಿ ಕಂಪನಿಗೆ ಉಚಿತವಾಗಿ ನೀಡುವುದಾಗಿ ಜೈನಮ್ ಮತ್ತು ಜೀವಿಕಾ ಹೇಳಿದ್ದಾರೆ.

Also Read: ಕೇವಲ 10,000 ರೂಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಈ 3 ಲೇಟೆಸ್ಟ್ 5G Smartphones ಖರೀದಿಸುವ ಸುವರ್ಣವಕಾಶ!

ಸಾಮಾಜಿಕ ಸೇವೆಗಾಗಿ ಡೆವಲಪರ್‌ನಿಂದ ಡೊಮೇನ್ ಖರೀದಿಸಿದೆವು ಆದರೆ ಇದು ನಮ್ಮ ಅದೃಷ್ಟ ರಿಲಯನ್ಸ್ ಜಿಯೋ ಈ ಡೊಮೇನ್ ಖರೀದಿಸಲು ಬಯಸಿದ್ರೆ ಫ್ರೀಯಾಗಿ ಕೊಡ್ತೀವಿ ಎಂದು ಹೇಳಿದ್ದಾರೆ. ಹೀಗಾಗಿ jiohotstar.com ಡೊಮೇನ್ ಉಚಿತವಾಗಿ ಪಡೆಯುವ ಅವಕಾಶ ಸಾವಿರಾರು ಕೋಟಿ ಒಡೆಯ ಮುಕೇಶ್ ಅಂಬಾನಿಗೆ ದಕ್ಕಿದೆ ಆದರೆ ಈ ಆಫರ್ ಅನ್ನು ಜಿಯೋ ಒಪ್ಪುತ್ತಾರೋ ಇಲ್ವೋ ಅನ್ನೋದನ್ನು ಇನ್ನೂ ಕಾದು ನೋಡಬೇಕಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :