ನಿಮ್ಮ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸ್ಕ್ರಾಲ್ ಮಾಡಿ ತಲೆಬುಡವಿಲ್ಲದ ರೀಲ್‌ಗಳ ನೋಡುವ ಅಭ್ಯಾಸದಿಂದ ಬಳಲುತ್ತಿದ್ದರೆ
ಮಕ್ಕಳು ಮಂದಬುದ್ಧಿ, ಬುದ್ಧಿಹೀನ ಅಥವಾ ಮೆದುಳಿಗೆ ಮತ್ತು ಕಣ್ಣುಗಳಿಗೆ ಸಂಭವಿಸುವ ಅನೇಕ ರೋಗಗಳಿಗೆ ಅವರ ಅರಿವೇ ಇಲ್ಲದಂತೆ ಶರಣಾಗುತ್ತಿದ್ದಾರೆ.
Kids Addicted with Phones: ಸಾಮಾನ್ಯವಾಗಿ ನಿಮ್ಮ ಮಗು Instagram, YouTube, Facebook, Google ಅನ್ನು ಹೆಚ್ಚು ಸ್ಕ್ರಾಲ್ ಮಾಡಿ ತಲೆಬುಡವಿಲ್ಲದ ರೀಲ್‌ಗಳನ್ನು ನೋಡುವ ಚಟದಿಂದ ಬಳಲುತ್ತಿದ್ದರೆ ಈ ಟೆಕ್ ಟಿಪ್ ನಿಮಗಾಗಲಿದೆ. ಯಾಕೆಂದರೆ ಇಂದಿನ ದಿನಗಳಲ್ಲಿ ಅದರಲ್ಲೂ ಮಕ್ಕಳಾಗಿರಲಿ ಅಥವಾ ವಯಸ್ಕರಾಗಿರಲಿ ಪ್ರತಿಯೊಬ್ಬರೂ ರೀಲ್‌ಗಳನ್ನು ವೀಕ್ಷಿಸುತ್ತಿದ್ದಾರೆ. ಆದರೆ ಈ ಮೊಬೈಲ್ ಫೋನ್ (Mobile Phones) ಬಳಸುವ ಚಟವನ್ನು ವಿಶೇಷ ಮತ್ತು ಅಧಿಕವಾಗಿ ಮಕ್ಕಳಿಗೆ ತೊಂದರೆಗೆ ಕಾರಣವಾಗಿದೆ. ಏಕೆಂದರೆ ದೊಡ್ಡವರಿಗಿಂತ ಮಕ್ಕಳು ಸಾಮಾಜಿಕ ಜಾಲತಾಣಗಳಿಗೆ ಹೆಚ್ಚು ಅಂಟಿಕೊಂಡಿರುತ್ತಾರೆ.
ಇದು ಅವರ ಆರೋಗ್ಯಕ್ಕೆ ಭಾರಿ ನಷ್ಟವನ್ನು ನೀಡುವ ದಾರಿಯಾಗಲಿದೆ. ಯಾಕೆಂದರೆ ಇದರಿಂದ ಮಂದಬುದ್ಧಿ, ಬುದ್ಧಿಹೀನ ಅಥವಾ ಮೆದುಳಿಗೆ ಮತ್ತು ಕಣ್ಣುಗಳಿಗೆ ಸಂಭವಿಸುವ ಅನೇಕ ರೋಗಗಳಿಗೆ ಅವರ ಅರಿವೇ ಇಲ್ಲದಂತೆ ಶರಣಾಗುತ್ತಿದ್ದಾರೆ. ಆದ್ದರಿಂದ ನಿಮ್ಮ ಮಕ್ಕಳು ಹಗಲು ರಾತ್ರಿ ಎನ್ನದೆ ಮೊಬೈಲ್ ಫೋನ್‌ಗೆ ಅಂಟಿಕೊಂಡಿರುವವರಲ್ಲಿ ಒಬ್ಬರಾಗಿದ್ದಾರೆ ಈ ಚಟವನ್ನು ಕಡಿಮೆ ಮಾಡಲು ನಿಮ್ಮ ಫೋನ್ ಒಳಗೆ ಈ ಸಣ್ಣ ಸೆಟ್ಟಿಂಗ್‌ಗಳನ್ನು ಅನುಸರಿಸಿ ಅವರ ಹವ್ಯಾಸವನ್ನು ಹಂತ ಹಂತವಾಗಿ ಬದಲಾಯಿಸಬಹುದು!
Also Read: 2000 ರೂಗಳ ಡಿಸ್ಕೌಂಟ್‍ನೊಂದಿಗೆ Vivo Y300 5G ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
ಮಕ್ಕಳಲ್ಲಿ ಫೋನ್ ಬಳಸುವ ಚಟ (Kids Addicted with Mobile Phones)
ಈ ಸೆಟ್ಟಿಂಗ್ ಅನ್ನು ಪ್ರತಿ ಸ್ಮಾರ್ಟ್ಫೋನ್ನಲ್ಲಿ ನೀಡಲಾಗಿದೆ. ಇದರೊಂದಿಗೆ ಮಕ್ಕಳು ಹೆಚ್ಚು ಸ್ಕ್ರೋಲಿಂಗ್ ಮಾಡುವ ಅಭ್ಯಾಸವನ್ನು ಮುರಿಯಬಹುದು. ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಕ್ರೀನ್ ಟೈಮ್ ಮಿತಿ ವೈಶಿಷ್ಟ್ಯವನ್ನು ಒದಗಿಸಲಾಗಿದೆ. ಇದರ ಸಹಾಯದಿಂದ ನಿಮ್ಮ ಮಕ್ಕಳು ಫೋನ್ ಅನ್ನು ಅತಿಯಾಗಿ ಬಳಸುವುದನ್ನು ನೀವು ನಿಲ್ಲಿಸಬಹುದು. ಇದರಲ್ಲಿ ನೀವು ಯಾವುದೇ ಒಂದು ಅಪ್ಲಿಕೇಶನ್‌ಗೆ ಸಮಯದ ಮಿತಿಯನ್ನು ಹೊಂದಿಸಬಹುದು. ನಿಮ್ಮ ಮಗು Instagram, YouTube, Facebook, Google ಅನ್ನು ಹೆಚ್ಚು ಬಳಸಿದರೆ. ನೀವು ಅದಕ್ಕೆ ಸಮಯ ಮಿತಿಯನ್ನು ಹೊಂದಿಸಬೇಕಾಗುತ್ತದೆ.
ಇದರಿಂದ ಆ ಮಿತಿಯನ್ನು ತಲುಪಿದ ತಕ್ಷಣ ಅಪ್ಲಿಕೇಷನ್ ಲಾಕ್ ಆಗುತ್ತೆ ಮಕ್ಕಳು ಆಗ ಬಳಸಲು ಸಾಧ್ಯವಾಗುವುದಿಲ್ಲ. ಇದು ಸಿಕ್ಕಾಪಟ್ಟೆ ಉತ್ತಮವಾಗಿದ್ದು ಮಕ್ಕಳಿಂದ ನೀವು ನೇರವಾಗಿ ಫೋನ್ ಕಸಿದುಕೊಂಡರೆ ಆಗುವ ರಾದ್ಧಾಂತದ ಬಗ್ಗೆ ನಿಮಗೆ ವಿವರಿಸುವ ಅಗತ್ಯವಿಲ್ಲ. ಆದರೆ ಫೋನ್ ಅಪ್ಲಿಕೇಷನ್ ಲಾಕ್ ಆದರೆ ಬೇರೆ ಆಯ್ಕೆ ಇಲ್ಲದೆ ಅದನ್ನು ಬಿಡಲೇಬೇಕಾಗುತ್ತದೆ. ಸಲಹೆ ಅಂದರೆ 5-6 ಗಂಟೆ ಫೋನ್ ಬಳಸುವ ಮಗುವಿಗೆ 5 ನಿಮಿಷ ಸೆಟ್ ಮಾಡಿಕೊಟ್ಟರೆ ಈ ನಿಮ್ಮ ಪ್ರಯತ್ನ ವಿಪಲವಾಗುವುದು ಕಟ್ಟಿಟ್ಟ ಬುತ್ತಿ. ಆದ್ದರಿಂದ ಹಂತ ಹಂತವಾಗಿ ಕಡಿಮೆ ಸಮಯವನ್ನು ಸೆಟ್ ಮಾಡುವುದು ಉತ್ತಮ.
ಫೋನ್‌ನಲ್ಲಿ ಸ್ಕ್ರೀನ್ ಮಿತಿಯನ್ನು (Screen Limit) ಹೊಂದಿಸುವುದು ಹೇಗೆ?
ಮೊದಲು ನಿಮ್ಮ ಫೋನ್‌ನಲ್ಲಿ ಈ ಸ್ಕ್ರೀನ್ ಮಿತಿಯನ್ನು (Screen Limit) ಹೊಂದಿಸುವುದು ಹೇಗೆಂದು ತಿಳಿಯುವುದು ಮುಖ್ಯವಾಗಿದೆ. ಅದಕ್ಕಾಗಿ ನೀವು ನೇರವಾಗಿ Setting ತೆರೆಯಿರಿ ಇದರ ನಂತರ ಸರ್ಚ್ ಪಟ್ಟಿಯಲ್ಲಿ Parental Control / Parental Lock ಟೈಪ್ ಮಾಡಿ ಕೆಳಗೆ ಬರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದರ ನಂತರ ಇದರಲ್ಲಿ ನಿಮಗೆ App Limit ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಇದರ ನಂತರ ನಿಮ್ಮ ಫೋನ್ ಒಳಗೆ ಲಭ್ಯವಿರುವ ಎಲ್ಲ ಅಪ್ಲಿಕೇಶನ್ ಪಟ್ಟಿ ತೆರೆದುಕೊಳ್ಳುತ್ತದೆ. ಈಗ ನಿಮಗೆ ಯಾವ ಅಪ್ಲಿಕೇಶನ್ಗಳಿಗೆ ಮಿತಿಯನ್ನು ಸೆಟ್ ಮಾಡಬೇಕೋ ಅದನ್ನು ಕ್ಲಿಕ್ ಮಾಡಿ. ಕೆಳಗೆ App Timer / Set App Limit ಕಾಣುತ್ತದೆ. ಈಗ ಇಲ್ಲಿ ನೀವು ಈ ಅಪ್ಲಿಕೇಶನ್ ಅನ್ನು ನಿಮ್ಮ ಮಕ್ಕಳು ಎಷ್ಟು ಸಮಯ ಬಳಸಬೇಕೆಂದು ನೀವು ನಿರ್ಧರಿಸಿ ಸೆಟ್ ಮಾಡಬಹುದು. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ಶಾರ್ಟ್ ಕಟ್ ಫೀಚರ್ ಬಳಸಿಕೊಂಡು ಬಳಕೆದಾರರು ತಮ್ಮ ಆಯ್ಕೆಯ ಪ್ರಕಾರ ಸಮಯವನ್ನು ಹೊಂದಿಸಲು ಅನುಮತಿಯನ್ನು ಪಡೆಯುತ್ತಾರೆ.
ಬಳಕೆದಾರರು ಒಂದು ನಿಮಿಷ ಪರದೆಯನ್ನು ಆನ್ ಮಾಡಲು ಬಯಸಿದರೆ ಅವರು ಒಂದು ನಿಮಿಷದ ಮಿತಿಯನ್ನು ಹೊಂದಿಸಬಹುದು. ಈ ಮೋಡ್‌ನಲ್ಲಿ 15 ಸೆಕೆಂಡು, 30 ಸೆಕೆಂಡು, 1 ನಿಮಿಷ ಮತ್ತು ಸದಾ ಪ್ರದರ್ಶನದ ಆಯ್ಕೆಗಳು ಲಭ್ಯವಿರುತ್ತವೆ. ನಿಮ್ಮ ಇಚ್ಛೆಯಂತೆ ನೀವು ಫೋನ್ ಹೊಂದಿರುವ ಯಾವುದೇ Instagram, YouTube, Facebook, Google ಸೇರಿ ಜನಪ್ರಿಯ ಅಪ್ಲಿಕೇಷನ್ಗಳಿಗೆ ಈ ಮಿತಿಯನ್ನು ಹೊಂದಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile