IRCTC Down Today: ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್ (IRCTC) ಎಂಬುದು ಭಾರತೀಯ ರೈಲ್ವೆ ಇಲಾಖೆಯ ಅಂಗ ಸಂಸ್ಥೆಯಾಗಿದ್ದು ಇದು ರೈಲ್ವೆ ಇಲಾಖೆಗೆ ಸಂಬಂಧಿಸಿದ ಆಹಾರ ಸರಬರಾಜು, ಪ್ರವಾಸ ಮತ್ತು ಆನ್ ಲೈನ್ ಟಿಕೆಟ್ ಕಾದಿರಿಸುವ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಆದರೆ ಪ್ರಸ್ತುತ ಭಾರತೀಯ ರೈಲ್ವೆ ಸೈಟ್ ಪರ್ಯಾಯವಾಗಿ ಸ್ಥಗಿತಗೊಂಡಿದ್ದು ಟೀಕೆಟ್ ಬುಕ್ ಮಾಡಲು ಪ್ರಯಾಣಿಕರು ಪರದಾಡುತ್ತಿದ್ದಾರೆ.
ಇದರ ಬಗ್ಗೆ ಸ್ವತಃ ಭಾರತೀಯ ರೈಲ್ವೆ ಇಲಾಖೆಯೆ ತಮ್ಮ ಸೈಟ್ ಮೂಲಕ ಮೆಸೇಜ್ ಸಹ ಅಪ್ಡೇಟ್ ಮಾಡಿದ್ದು ಇದು ನಿರ್ವಹಣೆ ಸೇವೆಗಳ (maintenance services) ಅಡಿಯಲ್ಲಿ ಈ ಸಮಸ್ಯೆ ಬಂದಿರುವುದಾಗಿ ಹೇಳಲಾಗಿದೆ. ಪ್ರಸ್ತುತ IRCTC ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಸ್ಥಗಿತಗೊಂಡಿದ್ದು ಟಿಕೆಟ್ ಕಾಯ್ದಿರಿಸುವ ಸೇವೆಯೊಂದಿಗೆ ಮತ್ತೆ ಅನೇಕ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹಲವಾರು ಪ್ರಯಾಣಿಕರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಇದರ ಬಗ್ಗೆ ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದು ಇದು ಈ ತಿಂಗಳ ಎರಡನೇ ಪ್ರಮುಖ IRCTC ಸ್ಥಗಿತವಾಗಿದೆ. ಇ-ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಈ ಮೊದಲು 9ನೇ ಡಿಸೆಂಬರ್ 2024 ರಂದು ಮೊದಲ ಬಾರಿಗೆ ಸುಮಾರು 1 ಗಂಟೆಯವರೆಗೆ ಯಾವುದೇ ಮಾಹಿತಿಗಳನ್ನು ನೀಡದೆ ನಿರ್ವಹಣೆ ಸೇವೆಗಳ (maintenance services) ಒಳಗಾಯಿತು. ಈ ಸಮಯದಲ್ಲಿ ಹೆಚ್ಚು ಹಣ ನೀಡಿ ತತ್ಕಾಲ್ ಟಿಕೆಟ್‌ಗಳನ್ನು ಕಾಯ್ದಿರಿಸಲು ಪ್ರಯತ್ನಿಸುತ್ತಿದ್ದ ಪ್ರಯಾಣಿಕರಲ್ಲಿ ಆಕ್ರೋಶಕ್ಕೆ ಕಾರಣವಾಯಿತು.
Also Read: Vivo Y29 5G ಸ್ಮಾರ್ಟ್ಫೋನ್ 50MP ಕ್ಯಾಮೆರಾ ಮತ್ತು 5500mAh ಬ್ಯಾಟರಿಯೊಂದಿಗೆ ಬಿಡುಗಡೆ! ಬೆಲೆ ಎಷ್ಟಿದೆ?
ಅದೇ ಪ್ರಕಾರ ಯಾವುದೇ ಮುನ್ಸೂಚನೆ ಇಲ್ಲದೆ ಇಂದು ಮತ್ತೆ ತಲೆನೋವನ್ನು ನೀಡಿದೆ. ಅಲ್ಲದೆ ಪ್ರಸ್ತುತ ಈ ಸಮಯಗಳೊಂದಿಗೆ ರೈಲು ಮೂಲ ನಿಲ್ದಾಣದಿಂದ ಹೊರಡುವ ಒಂದು ದಿನ ಮೊದಲು ಬುಕ್ ಮಾಡಲು ಅವಕಾಶ ನೀಡಿದೆ ಆದರೆ ಈ ರೀತಿ ಹೇಳದೇ ಕೇಳದೆ ನಿರ್ವಹಣೆ ನಡೆಸುತ್ತಿದ್ದರೆ ಪ್ರತಿದಿನ ಪ್ರಯಾಣಿಸುವ ಅಥವಾ ತುರ್ತು ಸಂದರ್ಭದಲ್ಲಿ ಯಾರಿಗೆ ಏನು ಹೇಳಬೇಕೋ ನಮಗೆ ತಿಳಿಯುತಿಲ್ಲ ಎನ್ನುತ್ತಿದ್ದರೆ ಪ್ರಯಾಣಿಕರು.