ಭಾರತೀಯ ರೈಲ್ವೆಯ ಎಲ್ಲಾ ಸೇವೆಯನ್ನು ಒಂದೇ ವೇದಿಕೆಯಲ್ಲಿ ತರಲು Super App ಅಪ್ಲಿಕೇಶನ್ ಶುರು | Tech News

Updated on 03-Jan-2024
HIGHLIGHTS

ಒಂದೇ ವೇದಿಕೆಯಲ್ಲಿ ತರಲು ಭಾರತೀಯ ರೈಲ್ವೆ ಸೂಪರ್ ಆ್ಯಪ್ (Super App) ಎಂಬ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

ಟಿಕೆಟ್ ಬುಕಿಂಗ್ಗಾಗಿ, ದೂರುಗಳಿಗಾಗಿ, ಸ್ಟೇಟಸ್‌, ತಿಳಿಯಲು ಮತ್ತು ಟ್ರ್ಯಾಕ್ ಮಾಡುವ ಸೇವೆಗಳು ಒಂದೇ ಕಡೆ ಪಡೆಯಬಹುದು

ದೇಶದ ಬಹು ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ ಎಂದು ಉಲ್ಲೇಖ

Super App: ದೇಶದಲ್ಲೇ ಅತಿ ದೊಡ್ಡ ಕಾರ್ಮಿಕ ವಲಯವನ್ನು ಹೊಂದಿರುವ ಭಾರತೀಯ ರೈಲ್ವೆ ಈಗ ತಮ್ಮ ಪ್ರಯಾಣಿಕರಿಗೆ 2024 ಹೊಸ ವರ್ಷದಲ್ಲಿ ಸಿಹಿಸುದ್ದಿಯನ್ನು ನೀಡಿದ್ದಾರೆ. ನಿಮ್ಮ ರೈಲು ಟಿಕೆಟ್ ಬುಕಿಂಗ್‌ಗಾಗಿ, ರೈಲ್ವೆ ದೂರುಗಳಿಗಾಗಿ, ಸಾಮಾನ್ಯ ಟಿಕೆಟ್‌ಗಳನ್ನು ಖರೀದಿಸಲು, ರೈಲು ಓಡಾಟದ ಸ್ಟೇಟಸ್‌ಗಾಗಿ ಮತ್ತಿ PNR ಸ್ಟೇಟಸ್ ತಿಳಿಯಲು ಪ್ರಸ್ತುತ ಹತ್ತಾರು ಅಪ್ಲಿಕೇಶನ್ ಇರುವುದು ನೀವು ನೋಡಬಹುದು. ಆದರೆ ಕೆಲವೇ ದಿನಗಳಲ್ಲಿ ಭಾರತೀಯ ರೈಲ್ವೆ ಈ ಎಲ್ಲಾ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ತರಲು ಭಾರತೀಯ ರೈಲ್ವೆ ಸೂಪರ್ ಆ್ಯಪ್ (Super App) ಎಂಬ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

Also Read: 12GB RAM ಮತ್ತು 5000mAh ಬ್ಯಾಟರಿಯ itel A70 ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?

90 ಕೋಟಿ ಖರ್ಚಿನಲ್ಲಿ ಸೂಪರ್ ಆ್ಯಪ್

ಭಾರತೀಯ ರೈಲ್ವೆಗೆ ಸಂಬಂಧಿಸಿದ ಎಲ್ಲಾ ರೀತಿಯ ಸೇವೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವುದು ಈ Super App ಅಪ್ಲಿಕೇಶನ್‌ನ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ರೈಲ್ವೆ ಇಲಾಖೆ 90 ಕೋಟಿ ರೂಗಳನ್ನು ವ್ಯಯಿಸಲಿದೆ ಎಂದು ವರದಿಗಳು ಹೇಳಿವೆ. ರೈಲ್ವೇ ಸಚಿವಾಲಯದ ಸೆಂಟರ್ ಫಾರ್ ರೈಲ್ವೇ ಮಾಹಿತಿ ವ್ಯವಸ್ಥೆ (CRIS – Centre for Railway Information Systems) ಮೂಲಕ ಇದನ್ನು ಅಭಿವೃದ್ಧಿಪಡಿಸುತ್ತಿದ್ದು ಇದರಿಂದಾಗಿ ಬಳಕೆದಾರರಿಗೆ ಬಹು ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಸಮಸ್ಯೆಗೆ ಬ್ರೇಕ್ ಹಾಕಲಿದೆ.

What is Super App used for?

ಈ ಮೇಲಿನ ಪ್ರಶ್ನೆಗೆ ಉತ್ತರವೆಂದರೆ ಭಾರತೀಯ ರೈಲ್ವೆ ಸೂಪರ್ ಆ್ಯಪ್ (Super App) ಎಂಬ ಅಪ್ಲಿಕೇಶನ್ ಟಿಕೆಟ್ ಬುಕಿಂಗ್‌ಗಾಗಿ, ದೂರುಗಳಿಗಾಗಿ, ಸ್ಟೇಟಸ್‌, ತಿಳಿಯಲು ಮತ್ತು ಟ್ರ್ಯಾಕ್ ಮಾಡುವ ಸೇವೆಗಳು ಒಂದೇ ಕಡೆ ಲಭ್ಯವಾಗಲಿದೆ. ದೇಶದ ಬಹು ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ ಎಂದು ಉಲ್ಲೇಖಿಸಲಾಗಿದೆ. ರೈಲ್ವೆಗೆ ಸಂಬಂಧಿಸಿದ ಎಲ್ಲಾ ಸೇವೆಗಳು ಒಂದೇ ಕಡೆ ನೀಡಲು ಲಭ್ಯವಾಗಲಿದೆ. ಪ್ರಸ್ತುತ ರೈಲ್ವೇ ಟಿಕೆಟ್‌ಗಳನ್ನು ಬುಕ್ ಮಾಡಲು ರೈಲ್ ಕನೆಕ್ಟ್ ಅಪ್ಲಿಕೇಶನ್ ಮಾತ್ರ ಲಭ್ಯವಿದೆ.

ಇದು ಲಕ್ಷಾಂತರ ಡೌನ್‌ಲೋಡ್‌ಗಳನ್ನು ಹೊಂದಿದೆ. ಇದಲ್ಲದೇ UTS ಮತ್ತು Rail Madad ಆ್ಯಪ್‌ಗಳನ್ನು ಸಹ ಸಾವಿರಾರು ಜನರು ಡೌನ್‌ಲೋಡ್ ಮಾಡಿದ್ದಾರೆ. ಈ ಸೂಪರ್ ಆಪ್ ಲಭ್ಯವಾದರೆ. ಇನ್ನು ಮುಂದೆ ಆ ಆಪ್ ಗಳನ್ನು ಡೌನ್ ಲೋಡ್ ಮಾಡುವ ಅಗತ್ಯವಿಲ್ಲ. ಅದನ್ನು ಯಾವಾಗ ತೆಗೆದುಕೊಳ್ಳಲಾಗುತ್ತದೆ ಎಂಬ ವಿವರಗಳು ಇನ್ನು ಅಧಿಕೃತವಾಗಿ ರೈಲ್ವೆ ಇಲಾಖೆ ತಿಳಿಸಿಲ್ಲ. ಅಲ್ಲದೆ IRCTC ಒದಗಿಸುವ ವಿಮಾನ ಟಿಕೆಟ್ ಬುಕಿಂಗ್ ಮತ್ತು ಆಹಾರ ವಿತರಣೆಯಂತಹ ಸೇವೆಗಳು ಇದರಲ್ಲಿ ಲಭ್ಯವಾಗುವ ನಿರೀಕ್ಷೆಗಳಿವೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :