Apple Store in India 2023: ಭಾರತದಲ್ಲಿ ಸರಕು ಮತ್ತು ಸೇವೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ 25 ವರ್ಷಗಳ ನಂತರ ಐಕಾನಿಕ್ ಕನ್ಸೂಮರ್ ಟೆಕ್ನಾಲಜಿ ಬ್ರ್ಯಾಂಡ್ ಆಗಿರುವ ಆಪಲ್ (Apple) ಮುಂಬೈನಲ್ಲಿ ಭಾರತದ ಮೊದಲ ರಿಟೇಲ್ ಸ್ಟೋರ್ ಅನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮ ಮುಂಬೈನಲ್ಲಿರುವ ಬ್ಯಾಂಡ್ರ ಕುರ್ಲಾ ಕಾಂಪ್ಲೆಕ್ಸ್ (BKC-Bandra Kurla Complex) ಅಲ್ಲಿರುವ ಶಾಪಿಂಗ್ ಮಾಲ್ ಒಳಗೆ ಆಪಲ್ ರಿಟೇಲ್ ಸ್ಟೋರ್ (Apple Retail Store) ಅನ್ನು ಪ್ರಾರಂಭಿಸುವ ಮೂಲಕ ಗ್ರಾಹಕರನ್ನು ಸ್ವಾಗತಿಸಿದೆ. ಒಟ್ಟಾರೆಯಾಗಿ ಇದರ ಪ್ರಯೋಜನ ನಿಜಕ್ಕೂ ದೇಶದ ಆಪಲ್ ವಸ್ತುಗಳನ್ನು ಖರೀದಿಸುವವರಿಗಾಗಿ ಉತ್ತಮ ಸುದ್ದಿಯಾಗಿದೆ.
ಆಪಲ್ ಕಂಪನಿಯ CEO ಆಗಿರುವ ಟಿಮ್ ಕುಕ್ (Tim Cook) ಮತ್ತು ರಿಟೇಲ್ ಹಿರಿಯ ಉಪಾಧ್ಯಕ್ಷ ಡೀರ್ಡ್ರೆ ಒಬ್ರಿಯನ್ (Deirdre O'Brien) ಜೊತೆಗೂಡಿ ಮಾಧ್ಯಮಗಳಿಗೆ ಪೋಸ್ ನೀಡಿದರು. ನಂತರ ಆಪಲ್‌ನ ಮೊದಲ ಹೊಸ ರಿಟೇಲ್ ಸ್ಟೋರ್ ಬಾಗಿಲು ತೆರೆಯುವ ಮೂಲಕ ಗ್ರಾಹಕರನ್ನು ಸ್ವಾಗತಿಸಲು ಪ್ರಾರಂಭಿಸಿದರು. ಪ್ರಪಂಚದಾದ್ಯಂತದ ಸುಮಾರು 100 ಸಿಬ್ಬಂದಿ ಮತ್ತು ಇತರ ಕಂಪನಿ ಅಧಿಕಾರಿಗಳಿಂದ ಕೂಡಿದ್ದ ಸ್ಟೋರ್ನೊಳಗೆ ಕುಕ್ ಸುಮಾರು 12 ಕ್ಕಿಂತ ಹೆಚ್ಚು ಗ್ರಾಹಕರನ್ನು ಏಳು ನಿಮಿಷಗಳ ಕಾಲ ಸ್ವಾಗತಿಸಿದರು.
https://twitter.com/tim_cook/status/1648218538778439681?ref_src=twsrc%5Etfw
ಕಂಪನಿಯು ರಿಟೇಲ್ ಸ್ಟೋರ್ ಅನ್ನು ತೆರೆಯುವುದಾಗಿ ಘೋಷಣೆ ಮಾಡಿದಾಗಿನಿಂದ ಕಳೆದ ಹದಿನೈದು ದಿನಗಳಿಂದ ಉತ್ಸಾಹದ ಮಟ್ಟವು ತುಂಬಾ ಹೆಚ್ಚಾಗಿದೆ. ರಿಟೇಲ್ ಸ್ಟೋರ್ ನಲ್ಲಿ ಶಾಪಿಂಗ್ ಮಾಡಲು ಹಲವಾರು ಅಭಿಮಾನಿಗಳು ಬೆಳಿಗ್ಗೆಯಿಂದ ಮಾಲ್‌ನಲ್ಲಿ ಕಾಯುತ್ತ ಸರತಿ ಸಾಲಿನಲ್ಲಿ ನಿಂತಿದ್ದರು. ಕುಕ್ ಕ್ಲೈಂಟ್‌ಗಳೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು ನಂತರ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನಲ್ಲಿರುವ ಸ್ಟೋರ್ಗೆ ಗ್ರಾಹಕರನ್ನು ಸ್ವಾಗತಿಸಿದರು. ಮುಂಬೈ ಸ್ಟೋರ್‌ನ ಪ್ರಾರಂಭದ ನಂತರ ಗುರುವಾರ ನವದೆಹಲಿಯ ಸಾಕೇತ್‌ನಲ್ಲಿ ಮತ್ತೊಂದು ರಿಟೇಲ್ ಸ್ಟೋರ್ ಅನ್ನು ತೆರೆಯಲಾಗುವುದು.