Internet Slow: ನಮ್ಮ ಫೋನ್ ಇಂಟರ್ನೆಟ್ ಸದಾ ಫಾಸ್ಟ್ ಆಗಿರಬೇಕು ಅನ್ನೋ ಉದ್ದೇಶದಿಂದಾಗಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯ ಟ್ರಿಕ್ ಹುಡುಕ್ತನೇ ಇರ್ತಾರೆ. ಅದರಲ್ಲೂ ವಾಟ್ಸಾಪ್ನಲ್ಲಿ ಮೆಸೇಜ್ ಮಾಡುವಾಗ ಅಥವಾ ಯುಟ್ಯೂಬ್ ವೀಡಿಯೋಗಳನ್ನು ವೀಕ್ಷಿಸುವಾಗ ಲೋಡ್ ಆಗುತ್ತಿದ್ದರೆ ಸಿಕ್ಕಾಪಟ್ಟೆ ಕಿರಿಕಿರಿ ಉಂಟಾಗುತ್ತದೆ. ಅದರಲ್ಲೂ ವಿಶೇಷವಾಗಿ ಪ್ರಯಾಣಿಸುವಾಗ ಅಥವಾ ಹೊರಗಡೆ ಇದ್ದಾಗ ಈ ಸಮಸ್ಯೆ ನಿಮ್ಮ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದ್ದರಿಂದ ಸಾಮಾನ್ಯ ಜನರ ಸಮಸ್ಯೆಯೆಂದರೆ ಪದೇ ಪದೇ ಟೆಲಿಕಾಂ ಕಂಪನಿಗಳ ನಡವಳಿಕೆಯನ್ನು ಬದಲಾಯಿಸಲು ಸಾಧ್ಯವಾಗೋದಿಲ್ಲ ಆದರೆ ಮೊಬೈಲ್ ಇಂಟರ್ನೆಟ್ ವೇಗವನ್ನು ಹೆಚ್ಚಿಸಲು ಹ್ಯಾಂಡ್‌ಸೆಟ್‌ನಲ್ಲಿ ಈ ಕೆಳಗಿನ ಕೆಲವು ಟ್ರಿಕ್‌ಗಳನ್ನು ಬಳಸಿ ಇಂಟರ್ನೆಟ್ ಸ್ಪೀಡ್ ಅನ್ನು ಹೆಚ್ಚಿಸಿಕೊಳ್ಳಬವುದು. ಇವುಗಳಲ್ಲಿ ಯಾವುದೇ ಸಮಸ್ಯೆಗಳನ್ನ ನೀವು ಎದುರಿಸುತ್ತಿದ್ದರೆ ನಿಮ್ಮ ಮೊಬೈಲ್ ಇಂಟರ್ ನೆಟ್ ಫಾಸ್ಟ್ ಆಗಿ ವರ್ಕ್ ಆಗ್ಬೇಕು ಅಂತ ನಿಮ್ಮಗೆ ಅನಿಸಿದರೆ ಮುಂದೆ ಓದಿ.
ನಿಮ್ಮ ಮೊಬೈಲ್ ಇಂಟರ್ ನೆಟ್ ವೇಗವನ್ನು ಸುಧಾರಿಸಲು ನಿಮ್ಮ ಇಂಟರ್ ನಲ್ ಸ್ಟೋರೇಜ್ ಸ್ಪೇಸ್ ನ ಕ್ಲಿಯರ್ ಮಾಡಿ. ಇದು ನಿಮ್ಮ ಮೊಬೈಲ್ ಬ್ರೌಸಿಂಗ್ ಅನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಫೋನ್‌ನಲ್ಲಿ ಸ್ಟೋರ್ ಆಗಿರುವ ಬೇಡದ ಫೈಲ್‌ಗಳನ್ನು ತೆಗೆದುಹಾಕುತ್ತದೆ. ನಿಮ್ಮ ಸ್ಟೋರೇಜ್ ಸ್ಪೇಸ್ ನ ಕ್ಲಿಯರ್ ಮಾಡುವುದರಿಂದ ನಿಮ್ಮ ಫೋನ್ ಕೂಡ ಸಕ್ರಿಯವಾಗಿ ವರ್ಕ್ ಆಗುವುದರ ಜೊತೆಗೆ ನಿಮ್ಮ ಇಂಟರ್ ನಟ್ ಕನೆಕ್ಟಿವಿಟಿಯನ್ನ ಸಹ ಸುಧಾರಿಸುತ್ತದೆ.
ನಿಮ್ಮ ಇಂಟರ್ ನೆಟ್ ಸ್ಲೋ ಆಗಿದ್ದರೆ ನಿಮ್ಮ ಮೊಬೈಲ್ ನ ಬ್ಯಾಕ್ ರೌಂಡ್ ಕೆಲವು ಅಪ್ಲಿಕೇಶನ್‌ಗಳನ್ನು ಕ್ಲೋಸ್ ಮಾಡಿ ನೋಡಿ ಇದರಿಂದ ನಿಮ್ಮ ಮೊಬೈಲ್ ಇಂಟರ್ ನೆಟ್ ಸ್ಪೀಡ್ ಆಗುತ್ತೆ. ಇದನ್ನು ಮಾಡಲು ನೀವು ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ > ಪ್ರೈವಸಿಗೆ ಹೋಗಿ> ಹಿನ್ನೆಲೆ ಅಪ್ಲಿಕೇಶನ್‌ಗಳನ್ನು ಆಯ್ಕೆಮಾಡಿ. ಇದರ ನಂತರ ಹಿನ್ನೆಲೆ ಅಪ್ಲಿಕೇಶನ್‌ಗಳ ಅಡಿಯಲ್ಲಿ ಹಿನ್ನೆಲೆಯಲ್ಲಿ ರನ್ ಆಗಲು ಅನುಮತಿಸಿ ಅಪ್ಲಿಕೇಶನ್‌ಗಳನ್ನು ಆಫ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
ನಿಮ್ಮ Apps ಅಪ್‌ಡೇಟ್‌ಗಾಗಿ ಆಟೋ ಅಪ್ಡೇಟ್ ಆಫ್ ಮಾಡುವುದರಿಂದ ಇಂಟರ್‌ನೆಟ್ ಸ್ಪೀಡ್ ಸುಧಾರಿಸುತ್ತದೆ. ನಿಮ್ಮ ಅವಶ್ಯಕತೆಗೆ ಅನುಗುಣಕ್ಕೆ ಮಲಗುವ ಮೊದಲು ಅವುಗಳನ್ನು ಮ್ಯಾನುಯಲ್ ಅಪ್ಡೇಟ್ ಮಾಡುವುದರಿಂದ ಈ ಸಮಸ್ಯೆಯಿಂದ ದೂರಾಗಬಹುದು. ನೀವು ಸ್ವಯಂ-ಅಪ್‌ಡೇಟ್‌ಗಳನ್ನು ಆಫ್ ಮಾಡಲು ನಿರ್ಧರಿಸಿದರೆ ನಿಮ್ಮ ಅಪ್ಲಿಕೇಶನ್‌ಗಳನ್ನು ಆಟೋಮೆಟಿಕ್ ನಿಯಮಿತವಾಗಿ ಪರಿಶೀಲಿಸುವುದು ಮತ್ತು ಅಪ್ಡೇಟ್ ಮಾಡುವುದು ಉತ್ತಮ. ನೀವು ಇದನ್ನು ಪ್ರತಿದಿನ ಅಥವಾ ವಾರಕ್ಕೊಮ್ಮೆ ಅಥವಾ ಮಾಸಿಕವಾಗಿ ಅಪ್ಡೇಟ್ ಮಾಡಿಕೊಳ್ಳಬವುದು. ಏಕೆಂದರೆ ಇದರರ್ಥ ದೋಷಪೂರಿತ ಮತ್ತು ಅಪ್ಲಿಕೇಶನ್ ದೋಷಗಳಿಂದ ತ್ವರಿತ ಪರಿಹಾರ ಪಡೆಯಬವುದು.
ಇದು ನಿಮ್ಮ ಮೊಬೈಲ್ ಇಂಟರ್ ನೆಟ್ ವೇಗವನ್ನು ನಿಖರವಾಗಿ ಹೆಚ್ಚಿಸುವುದಿಲ್ಲ ಆದರೆ ನಿಮ್ಮ ಪ್ರೆಸೆಂಟ್ ಬ್ಯಾಂಡ್‌ವಿಡ್ತ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ. ಇಂದು ಅನೇಕ ಅಪ್ಲಿಕೇಶನ್‌ಗಳು ಲೈಟ್ ವರ್ಷನ್ ನೊಂದಿಗೆ ಬರುತ್ತವೆ. ಇದು ರನ್ ಮಾಡಲು ಕಡಿಮೆ ಡೇಟಾ ಅಗತ್ಯವಿರುತ್ತದೆ. ಅದೇ ರೀತಿ ವಿಭಿನ್ನ ಬ್ರೌಸರ್‌ಗಳು ವಿಭಿನ್ನ ಡೇಟಾ ಅಗತ್ಯತೆಗಳನ್ನು ಹೊಂದಿವೆ. ಉದಾಹರಣೆಗೆ ಒಪೇರಾ ಮಿನಿ ಬಳಸುವುದರಿಂದ ನಿಮ್ಮ ಇಂಟರ್ ನೆಡ್ ಸ್ಪೀಡ್ ಚೆನ್ನಾಗಿರುತ್ತದೆ.
ನಿಮ್ಮ ಫೋನ್ ನಲ್ಲಿ ನೆಟ್‌ವರ್ಕ್ ಸೆಟ್ಟಿಂಗ್ ಅನ್ನು ರಿಸೆಟ್ ಮಾಡಿ. ಸೆಟ್ಟಿಂಗ್> ಮೊಬೈಲ್ ನೆಟ್‌ವರ್ಕ್‌ಗಳು> ನೆಟ್‌ವರ್ಕ್ ಆಪರೇಟರ್‌ಗಳಿಗೆ ಹೋಗಿ ಸೆಲೆಕ್ಟ್ ಆಟೋಮೆಟಿಕ್ ಆಯ್ಕೆ ಮಾಡಿ> ಆಫ್ ಮಾಡಿದ ನಂತರ ನೆಟ್‌ವರ್ಕ್‌ನ ಮೇಲೆ ಟ್ಯಾಪ್ ಮಾಡಿ ನಿಮ್ಮ ಫೋನ್ ರಿಸೆಟ್ ಮಾಡಿಕೊಳ್ಳಿ.