ICICI ಬಳಕೆದಾರಿಗೆ ಸಿಹಿಸುದ್ದಿ! ಇನ್ಮೇಲೆ UPI ಪಾವತಿಗಳಿಗೂ EMI ಪೇಮೆಂಟ್ ಸೌಲಭ್ಯ

ICICI ಬಳಕೆದಾರಿಗೆ ಸಿಹಿಸುದ್ದಿ! ಇನ್ಮೇಲೆ UPI ಪಾವತಿಗಳಿಗೂ EMI ಪೇಮೆಂಟ್ ಸೌಲಭ್ಯ
HIGHLIGHTS

ಬಹುತೇಕ ಎಲ್ಲೆಡೆ ಜನರು ಪಾವತಿಗಳನ್ನು ಮಾಡಲು UPI ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ.

ನೀವು UPI ಅನ್ನು ಬಳಸಿದರೆ ಮಾತ್ರ ಪ್ರಸ್ತುತ EMI ನಲ್ಲಿ ಯಾವುದೇ ವಸ್ತುಗಳನ್ನು ಖರೀದಿಸಬಹುದು.

EMI ನಲ್ಲಿ ಖರೀದಿ ಮಾಡಲು ನಾವು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸಬೇಕು.

ಇತ್ತೀಚಿನ ದಿನಗಳಲ್ಲಿ ಅತ್ಯಂತ ಸುಲಭ ಮತ್ತು ಜನಪ್ರಿಯ ಪಾವತಿ ವಿಧಾನವೆಂದರೆ ಅದು UPI. ಬಹುತೇಕ ಎಲ್ಲೆಡೆ ಜನರು ಪಾವತಿಗಳನ್ನು ಮಾಡಲು UPI ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಆದರೆ ಕೆಲವೊಂದು ಸಲ ನಾವು UPI ಪಾವತಿ ಮಾಡಲು ಬಯಸುವ ವಸ್ತುಗಳ ಬೆಲೆ ವಿಪರೀತವಾಗಿದ್ದು ಈ ಸಮಸ್ಯೆ ಅನೇಕ ಬಾರಿ ನಮಗೆ ಸಂಭವಿಸುತ್ತದೆ. ಈ ಸನ್ನಿವೇಶದಲ್ಲಿ ನಾವು ಆ ಐಟಂ ಅನ್ನು EMI ನಲ್ಲಿ ಖರೀದಿಸಬೇಕಾಗಿರುತ್ತದೆ. ಆದರೆ EMI ನಲ್ಲಿ ಖರೀದಿ ಮಾಡಲು ನಾವು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸಬೇಕು. ನೀವು UPI ಅನ್ನು ಬಳಸಿದರೆ ಮಾತ್ರ ಪ್ರಸ್ತುತ EMI ನಲ್ಲಿ ಯಾವುದೇ ವಸ್ತುಗಳನ್ನು ಖರೀದಿಸಬಹುದು. ಇದರ  ಬಗ್ಗೆ ತಿಳಿದ ICICI ಬ್ಯಾಂಕ್ EMI ಸೌಲಭ್ಯ ನೀಡುವ ಸೇವೆಯನ್ನು ಪ್ರಾರಂಭಿಸಿದೆ.

ICICI ಬ್ಯಾಂಕ್ ಈ ಸೌಲಭ್ಯವನ್ನು ಆರಂಭ

ICICI ಬಳಕೆದಾರಿಗೆ ಸಿಹಿಸುದ್ದಿ ICICI ಬ್ಯಾಂಕ್ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿದೆ. UPI ಪಾವತಿ ಮಾಡುವಾಗ ಯಾವುದೇ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ತಿಂಗಳ ಕಂತಿನ ಯೋಜನೆಯಲ್ಲಿ ವಸ್ತುಗಳನ್ನು ಖರೀದಿಸುವ ಸೌಲಭ್ಯವನ್ನು ICICI ಬ್ಯಾಂಕ್ ಇತ್ತೀಚೆಗೆ ಪ್ರಾರಂಭಿಸಿದೆ. ಬೈ ನೌ ಪೇ ಲೇಟರ್ ಆಯ್ಕೆಯನ್ನು ಆಯ್ಕೆ ಮಾಡುವ ಗ್ರಾಹಕರು ಈ ಸೌಲಭ್ಯದ ಪ್ರಯೋಜನ ಪಡೆಯಬಹುದು. ICICI ಬ್ಯಾಂಕ್ ಈ ರೀತಿಯ ಸೌಲಭ್ಯವನ್ನು ಮೊದಲ ಬಾರಿಗೆ ಹೊಂದಿದೆ. ಇದರಿಂದ ಗ್ರಾಹಕರು EMI ನಲ್ಲಿ ಯಾವುದೇ ವಸ್ತುವನ್ನು ತಕ್ಷಣವೇ ಖರೀದಿಸಬಹುದು.

ಯಾವುದೇ ವಸ್ತುವನ್ನು EMI ಕಂತುಗಳಲ್ಲಿ ಖರೀದಿಸಿ

ಇನ್ಮೇಲೆ ನೀವು UPl ಪಾವತಿಗಳಲ್ಲಿ EMI ಆಯ್ಕೆಯನ್ನು ಎಲೆಕ್ಟ್ರಾನಿಕ್ಸ್, ದಿನಸಿ, ಉಡುಪುಗಳು, ಪಾದರಕ್ಷೆಗಳು, ಟ್ರಾವೆಲ್ ಮತ್ತು ಹೋಟೆಲ್ ಬುಕಿಂಗ್ ಸೇರಿದಂತೆ ವಿವಿಧ ವಿಷಯಗಳಿಗೆ ಬಳಕೆ ಮಾಡಬಹುದು. 10,000 ರೂ ಗಿಂತ ಹೆಚ್ಚಿನ ವಹಿವಾಟು ಮೊತ್ತಕ್ಕೆ ಗ್ರಾಹಕರು 3, 6, ಅಥವಾ 9 ತಿಂಗಳುಗಳಿಗೆ ಸರಳವಾದ ತಿಂಗಳ ಪಾವತಿಗಳನ್ನು ಆಯ್ಕೆ ಮಾಡಬಹುದು. ಆನ್‌ಲೈನ್ ಖರೀದಿಗಳನ್ನು ಶೀಘ್ರದಲ್ಲೇ Paylater EMI ಸೌಲಭ್ಯದಲ್ಲಿ ನೀಡಲಾಗುವುದು.

ಈ ಸೇವೆಯ ಬಗೆಗಿನ ಹೇಳಿಕೆ

ICICI ಬ್ಯಾಂಕ್‌ನ ಡಿಜಿಟಲ್ ಚಾನೆಲ್‌ಗಳು ಮತ್ತು ಪಾಲುದಾರಿಕೆಗಳ ಮುಖ್ಯಸ್ಥ ಬಿಜಿತ್ ಭಾಸ್ಕರ್ “ಈ ದಿನಗಳಲ್ಲಿ ಹೆಚ್ಚಿನ ಪಾವತಿಗಳನ್ನು UPI ಮೂಲಕ ಮಾಡಲಾಗುತ್ತದೆ. ಅಲ್ಲದೆ ಬ್ಯಾಂಕ್‌ನ ಬೈ ನೌ ಮೂಲಕ UPI ವಹಿವಾಟುಗಳನ್ನು ಗ್ರಾಹಕರು ಹೆಚ್ಚಾಗಿ ಆರಿಸಿಕೊಳ್ಳುತ್ತಿರುವುದನ್ನು ನಾವು ಗಮನಿಸಿದ್ದೇವೆ. ಈ ಎರಡು ಟ್ರೆಂಡ್‌ಗಳನ್ನು ಸಂಯೋಜಿಸುವ ಮೂಲಕ PayLater ನಿಂದ ಮಾಡಿದ UPl ಪಾವತಿಗಳಿಗೆ ಬ್ಯಾಂಕ್ ತ್ವರಿತ EMI ಅನ್ನು ನೀಡಲು ಪ್ರಾರಂಭಿಸಿದೆ” ಎಂದು ಹೇಳಿದರು.

PayLater ನೊಂದಿಗೆ EMI ಸೌಲಭ್ಯ

PayLater ನಲ್ಲಿ EMI ಸೌಲಭ್ಯವನ್ನು ಬಳಸುವ ಮೊದಲು ಶಾಪ್ಗೆ ಭೇಟಿ ನೀಡಿ ಮತ್ತು ಖರೀದಿ ಮಾಡಲು ಐಟಂನ QR ಕೋಡ್ ಅನ್ನು ಸ್ಕ್ಯಾನ್ ಮಾಡುಬೇಕು. ನಂತರ ಯಾವುದೇ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪಾವತಿ ಮಾಡಲು iMobile Pay ಅಪ್ಲಿಕೇಶನ್ ಅನ್ನು ಬಳಸಿಕೊಳ್ಳುವ ಆಯ್ಕೆಯನ್ನು ಆರಿಸಬೇಕು. ನಿಮ್ಮ ಖರೀದಿಯು ರೂ 10,000 ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ ನೀವು PayLater EMI ಆಯ್ಕೆಯನ್ನು ಆರಿಸಬೇಕು. ನಂತರ ನೀವು 3, 6, ಅಥವಾ 9 ತಿಂಗಳ EMI ಅವಧಿಯ ನಡುವಿನ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಇದರ ನಂತರ ನಿಮ್ಮ ಪಾವತಿಯನ್ನು ದೃಢೀಕರಿಸುವ ವಹಿವಾಟನ್ನು ನೀವು ಪೂರ್ಣಗೊಳಿಸಬೇಕು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo