ನೂರಾರು ಸೇವೆಗಳನ್ನು ಒಂದೇ ಕಡೆ ಪಡೆಯಲು ಸರಳ ಮತ್ತು ಸುಲಭವಾದ ಮೊಬೈಲ್ ಅಪ್ಲಿಕೇಶನ್ ಈ ಉಮಾಂಗ್ ಆಪ್ (Umang App) ಆಗಿದೆ.
ಭಾರತ ಸರ್ಕಾರ ಇದನ್ನು ಉಚಿತವಾಗಿ ನೀಡುತ್ತಿದ್ದು ಈ ಅಪ್ಲಿಕೇಶನ್ ಪ್ರಸ್ತುತ ವೆಬ್‌ಸೈಟ್, ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ 13 ಭಾಷೆಗಳಲ್ಲಿ ಲಭ್ಯವಿದೆ.
ಸುಮಾರು 400 ಕ್ಕೂ ಅಧಿಕ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒದಗಿಸುವ ಸೇವೆಗಳನ್ನು ಇದರಲ್ಲಿ ಪಟ್ಟಿ ಮಾಡಲಾಗಿದೆ.
ದೇಶದ ಜನಪ್ರಿಯ ಮತ್ತು ಅತಿ ಹೆಚ್ಚು ಪ್ರಯೋಜನಗಳನ್ನು ನೀಡುವ ಏಕ ಮಾತ್ರ ಅಪ್ಲಿಕೇಶನ್ ಅಂದ್ರೆ ಅದು ಉಮಾಂಗ್ ಆಪ್ (Umang App – Unified Mobile Application for New-age Governance) ಆಗಿದೆ. ಯಾಕೆಂದರೆ ಈ ಒಂದೇ ಅಪ್ಲಿಕೇಶನ್‌ನಲ್ಲಿ ನೀವು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒದಗಿಸುವ ನೂರಾರು ಸೇವೆಗಳ ಅನುಕೂಲ ಮತ್ತು ಪ್ರಯೋಜನಗಳನ್ನು ಒಂದೇ ಕಡೆ ಪಡೆಯಲು ಸರಳ ಮತ್ತು ಸುಲಭವಾದ ಮೊಬೈಲ್ ಅಪ್ಲಿಕೇಶನ್ ಈ ಉಮಾಂಗ್ ಆಪ್ (Umang App) ಆಗಿದೆ. ಭಾರತೀಯ ನಾಗರಿಕರಿಗೆ ಸುಲಭ ಅನುಭವಕ್ಕಾಗಿ ಭಾರತ ಸರ್ಕಾರ ಇದನ್ನು ಉಚಿತವಾಗಿ ನೀಡುತ್ತಿದ್ದು ಈ ಅಪ್ಲಿಕೇಶನ್ ಪ್ರಸ್ತುತ ವೆಬ್‌ಸೈಟ್, ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ 13 ಭಾಷೆಗಳಲ್ಲಿ ಲಭ್ಯವಿದೆ.
Also Read: Lok Sabha Elections: ಇನ್ನು Voter Slip ಸಿಕ್ಕಿಲ್ವ? ಈ ರೀತಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಿ!
ಉಮಾಂಗ್ ಆಪ್ (Umang App) ನೀಡುವ ಪ್ರಮುಖ ಸೇವೆಗಳು:
ಮೊದಲಾಯಿಗೆ ಈ ಅಪ್ಲಿಕೇಶನ್ ನೀಡುವ ಅತ್ಯುತ್ತಮವಾದ ಫೀಚರ್ ಮತ್ತು ಪ್ರಮುಖ ಸೇವೆಗಳ ಬಗ್ಗೆ ನೋಡುವುದಾದರೆ ಸುಮಾರು 400 ಕ್ಕೂ ಅಧಿಕ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒದಗಿಸುವ ಸೇವೆಗಳನ್ನು ಇದರಲ್ಲಿ ಪಟ್ಟಿ ಮಾಡಲಾಗಿದೆ. ಒಮ್ಮೆ ನೀವು ಇದನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ಗಳ ಮೂಲಕ ಡೌನ್ಲೋಡ್ ಮಾಡಿ ಪರಿಶೀಲಿಸಬಹುದು. ಇದರ ಸಂಬಂಧಿಸಿದ ಸೇವೆಗಳಲ್ಲಿ ಅತಿ ಹೆಚ್ಚಾಗಿ ಬಳಕೆಯಾಗುತ್ತಿರುವ ಆಧಾರ್ ಕಾರ್ಡ್, ಹಣಕಾಸು, ಸಾರಿಗೆ, ರೈಲ್ವೆ, ಶಿಕ್ಷಣ, ಕೃಷಿ, ಆರೋಗ್ಯ, ಪಿಂಚಣಿಯೊಂದಿಗೆ ವಿದ್ಯುತ್ ಬಿಲ್, ಗ್ಯಾಸ್ ಬಿಲ್, ನೀರಿನ ಬಿಲ್ ಪಾವತಿಗಳಂತಹ ಇತ್ಯಾದಿಗಳನ್ನು ಇದರ ಮೂಲಕ ಮ್ಯಾನೇಜ್ ಮಾಡಬಹುದು.
ಉಮಾಂಗ್ ಆಪ್ (Umang App) ಯಾಕೆ ಬಳಸಬೇಕು?
ಈ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗು ಬರುವುದು ಅನಿವಾರ್ಯ ಆದರೆ ಇದಕ್ಕೆ ಒಂದಿಷ್ಟು ಘನತೆ ಗೌರವದೊಂದಿಗೆ ನೋಡುವುದಾದರೆ ಇದೊಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೇವೆಗಳಿಗೆ ಪ್ರವೇಶಕ್ಕಾಗಿ ಭಾರತ ಸರ್ಕಾರದಿಂದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಡಿಜಿಟಲ್ ಇಂಡಿಯಾ ಉಪಕ್ರಮದಲ್ಲಿ ಕಾರ್ಯ ನಿರ್ವಹಿಸುತ್ತದೆ.
ಅಲ್ಲದೆ ಈಗಾಗಲೇ ಹೇಳಿರುವಂತೆ ಈ ಉಮಾಂಗ್ ಆಪ್ (Umang App) ಭಾರತದ ಸುಮಾರು 13 ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುತ್ತದೆ. ಅಲ್ಲದೆ ಈ ಅಪ್ಲಿಕೇಶನ್ ಬಳಕೆ ತುಂಬಾ ಸುಲಭ ಮತ್ತು ಸರಳವಾಗಿ ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ ಈ ಅಪ್ಲಿಕೇಶನ್ ಸುರಕ್ಷಿತ ವಹಿವಾಟುಗಳಿಗಾಗಿ OTP ಆಧಾರಿತ ದೃಢೀಕರಣ ಮತ್ತು ಎನ್‌ಕ್ರಿಪ್ಶನ್ ಅನ್ನು ಬಳಸುತ್ತದೆ.
ನಿಮ್ಮ PF ಹಣಕ್ಕಾಗಿ ಉಮಾಂಗ್ ಆಪ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
➥ಮೊದಲಿಗೆ ನಿಮ್ಮ ಮೊಬೈಲ್ ಫೋನ್‌ನಲ್ಲಿ ನೀವು ಉಮಾಂಗ್ ಆಪ್ (Umang App) ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು. ಇದನ್ನು ನೀವು Google Play Store ಅಥವಾ Apple App Store ಮೂಲಕ ಉಚಿತವಾಗಿ ಡೌನ್‌ಲೋಡ್ ಮಾಡಬಹುದಾಗಿದ್ದು ಇದರಂತೆ ಹತ್ತಾರು ನಕಲಿ ಅಪ್ಲಿಕೇಶನ್ ನಿಮಗೆ ಕಾಣಬಹುದು. ಆದ್ದರಿಂದ ಡೌನ್ಲೋಡ್ ಮಾಡುವ ಮೊದಲು ಈ ಅಪ್ಲಿಕೇಶನ್ MeitY, Government of India ಮೂಲಕ ತಯಾರಿಸಲಾಗಿರುವುದನ್ನು ಖಚಿತಪಡಿಸಿಕೊಳ್ಳಿ.
➥ಒಮ್ಮೆ ನೀವು ಆ್ಯಪ್ ಡೌನ್‌ಲೋಡ್ ಮಾಡಿದ ನಂತರ ಉಮಾಂಗ್ (Umang App) ಆ್ಯಪ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ನೀವು ನಿಮ್ಮ ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ಬಳಸಬಹುದು.
➥ಇದರ ನಂತರ ಉಮಂಗ್ ಆ್ಯಪ್‌ನಲ್ಲಿ ನೋಂದಾಯಿಸಿದ ನಂತರ ನೀವು “EPFO” ಸೇವೆಯನ್ನು ಸರ್ಚ್ ಮಾಡಿ ಅಥವಾ ಕೆಳಗೆ ಕಂಡರೆ ಅದನ್ನು ಆಯ್ಕೆ ಮಾಡಬೇಕು. ಈಗ ಆಧಾರ್ ಬಳಸಿ ಲಾಗಿನ್ ಮಾಡಿ” ಅಥವಾ “ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗಿನ್ ಮಾಡಿ” ಆಯ್ಕೆಮಾಡಿ OTP ನಮೂದಿಸಿ.
➥ಈಗ ನೇರವಾಗಿ EPFO ಸೇವೆಗೆ ಲಾಗಿನ್ ಆದ ನಂತರ “Services” ಮೆನುವಿನ ಮೇಲೆ ಕ್ಲಿಕ್ ಮಾಡಿ “PF Withdrawal” ಆಯ್ಕೆಯನ್ನು ಆರಿಸಿ ಇದರಡಿಯಲ್ಲಿ Raise Claim ಆಯ್ಕೆಮಾಡಿ ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ.
➥ಈಗ ನೀವು ನಿಮ್ಮ PF ಹಿಂಪಡೆಯುವಿಕೆಗೆ ಅಗತ್ಯವಿರುವ ಮಾಹಿತಿಯನ್ನು ನಮೂದಿಸಬೇಕು ಉದಾಹರಣೆಗೆ ಹಿಂತೆಗೆದುಕೊಳ್ಳುವ ಪ್ರಕಾರ (ಅರ್ಧ ಅಥವಾ ಪೂರ್ಣ) ಮತ್ತು
ಹಿಂತೆಗೆದುಕೊಳ್ಳುವ ಮೊತ್ತವೆಷ್ಟು? ಮತ್ತು ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿ ಸಲ್ಲಿಸುವ ಮೇಲೆ ಕ್ಲಿಕ್ ಮಾಡಿ.
➥ಇದರ ನಂತರ ಈಗ ಈ ಫಾರ್ಮ್ ತುಂಬಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ OTP ನಮೂದಿಸಿ ಮತ್ತು “ದೃಢೀಕರಿಸಿ” ಕ್ಲಿಕ್ ಮಾಡಿ ಇದರ ನಂತರ ಎಲ್ಲವು ಸರಿಯಾಗಿದ್ದರೆ ನಿಮ್ಮ ಪಿಎಫ್ ಹಣವನ್ನು 7-10 ವರ್ಕಿಂಗ್ ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile